Breaking News

ರಾಜ್ಯ

ಕಲ್ಲು ಗಣಿಗಾರಿಕೆ ಮಾಫಿಯಾ ವಿರುದ್ಧ ತೊಡೆ ತಟ್ಟಿದ್ದ KAS ಅಧಿಕಾರಿ ಟ್ರಾನ್ಸ್​ಫರ್​!

ದಕ್ಷಿಣ ಕನ್ನಡ: ಭೂ ಮಾಫಿಯ ವಿರುದ್ಧ ತೊಡೆ ತಟ್ಟಿದ್ದ KAS ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ ಎಂಬ ಆರೋಪ ಈ ಹಿಂದೆ ಕೇಳಿಬಂದಿತ್ತು. ಇದೀಗ, ಅಧಿಕಾರಿಯನ್ನು ವರ್ಗಾವಣೆ ಮಾಡಿಸಲು ಯತ್ನಿಸುತ್ತಿದ್ದ ಪ್ರಭಾವಿಗಳಿಗೆ ಕೋರ್ಟ್​ನ ಆದೇಶವೊಂದು ಪರೋಕ್ಷವಾಗಿ ವರದಾನದಂತೆ ಪರಿಣಮಿಸಿದೆ ಎಂದು ಹೇಳಲಾಗಿದೆ. ಮಂಗಳೂರು ಉಪವಿಭಾಗಾಧಿಕಾರಿಯಾಗಿದ್ದ ಮದನ್ ಮೋಹನ್​ರನ್ನು ವರ್ಗಾವಣೆ ಮಾಡಲಾಗಿದೆ. ಮದನ್​ ಇತ್ತೀಚೆಗೆ ನಗರದ ಮುಡಿಪು ಬಳಿ ಕೆಂಪು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಸ್ಥಳದ ಮೇಲೆ ದಾಳಿ‌ ಮಾಡಿದ್ದರು. ಈ ದಾಳಿ ಸಾಕಷ್ಟು …

Read More »

ಶಾಂತವಾಗದ ವರುಣನ ಪ್ರತಾಪ, ಸೊಗಲ ಸೋಮೇಶ್ವರನಿಗೆ ವರುಣನ ದಿಗ್ಬಂಧನ

ಬೆಳಗಾವಿ: ವರುಣನ ರೌದ್ರಾವತಾರಕ್ಕೆ ಕರುನಾಡು ಕಂಗಾಲಾಗಿದೆ. ಕ್ಷಣ ಕ್ಷಣಕ್ಕೂ ವರುಣನ ಅವಾಂತರ ಹೆಚ್ಚಾಗ್ತಿದೆ. ಜಿಲ್ಲೆಯಲ್ಲಿ ನಿನ್ನೆ ಸುರಿದ ಭಾರಿ ಮಳೆಗೆ ಸೊಗಲ ಸೋಮೇಶ್ವರ ದೇವಸ್ಥಾನ ಮುಳುಗಿದೆ. ಭಾರಿ ಮಳೆಯಿಂದಾಗಿ ನಿನ್ನೆ ಸಂಜೆ ದೇವಸ್ಥಾನದ ಗರ್ಭಗುಡಿಗೆ ನೀರು ನುಗ್ಗಿತ್ತು. ಅಪಾರ ಪ್ರಮಾಣದ ನೀರು ನುಗ್ಗಿದ ಹಿನ್ನೆಲೆಯಲ್ಲಿ ಸೋಮೇಶ್ವರನ ಮೂರ್ತಿ ಕೂಡ ಭಾಗಶಃ ಜಲಾವೃತಗೊಂಡಿದೆ. ದೇವಸ್ಥಾನದ ಹೊರ ಭಾಗದಲ್ಲಿ ಮಳೆ ನೀರು ಝರಿಯಂತೆ ಉಕ್ಕಿ ಹರಿಯುತ್ತಿದೆ. ದೇವಸ್ಥಾನಕ್ಕೆ ನೀರು ನುಗ್ಗಿದ ದೃಶ್ಯ ಸಾಮಾಜಿಕ …

Read More »

ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ರೈಲ್ವೆ ಟಿಕೆಟ್ ಕೌಂಟರ್ ನಾಳೆಯಿಂದ ಕಾರ್ಯಾರಂಭ, ಎಲ್ಲೆಲ್ಲಿ?

ಬೆಂಗಳೂರು: ರಾಜ್ಯದ ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೇ ವಿಭಾಗವು ಹೆಚ್ಚುವರಿ ಟಿಕೆಟ್​ ಕಾಯ್ದಿರಿಸುವ ಕೇಂದ್ರಗಳನ್ನು ಕಾರ್ಯಾರಂಭಗೊಳಿಸಲಿದೆ. ಇವೆಲ್ಲಾ ಕೇಂದ್ರಗಳು ನಾಳೆಯಿಂದ ಕಾರ್ಯಾರಂಭವಾಗಲಿದೆ. ಬೆಂಗಳೂರಿನಲ್ಲಿ ಮಲ್ಲೇಶ್ವರ, ಚಿಕ್ಕಬಾಣಾವರ, ಬಾಣಸವಾಡಿ, ಬೆಂಗಳೂರು ಪೂರ್ವ, ಕಾರ್ಮೆಲರಾಂ ಮತ್ತು ವೈಟ್​ಫೀಲ್ಡ್​ ರೈಲು ನಿಲ್ದಾಣಗಳಲ್ಲಿ ಈ ಹೆಚ್ಚುವರಿ ಕೌಂಟರ್​ಗಳನ್ನು ಕಾರ್ಯಾರಂಭಗೊಳಿಸಲಾಗುವುದು. ಜೊತೆಗೆ, ಕುಪ್ಪಂ, ಪೆನುಕೊಂಡ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಗೌರಿಬಿದನೂರು ಮತ್ತು ಮದ್ದೂರು ರೈಲ್ವೇ ನಿಲ್ದಾಣಗಳಲ್ಲಿ ಸಹ ಈ ಕೇಂದ್ರಗಳನ್ನು ಕಾರ್ಯಾರಂಭಗೊಳಿಸಲಾಗುವುದು. ಅಕ್ಟೋಬರ್​ 20 ರಿಂದ ನವೆಂಬರ್ 30ರವರೆಗೆ …

Read More »

ಕಿಂಗ್ಸ್ ಇಲೆವೆನ್ ಪಂಜಾಬ್ ಬೌಲರ್​​ಗಳ ಸ್ಪಿನ್ ಮೋಡಿಗೆ ಮಂಕಾದ RCB ಬ್ಯಾಟ್ಸ್​ಮನ್

ಕೊನೇ ಓವರ್. ಕೊನೇ ಎಸೆತದವರೆಗೂ ಅಭಿಮಾನಿಗಳ ಉಸಿರನ್ನ ಬಿಗಿ ಹಿಡಿಯುವಂತೆ RCB ವಿರುದ್ಧ ರಣರೋಚಕ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಕೊನೆಗೂ ಗೆಲುವು ಸಾಧಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ RCB ಗೆ ಓಪನರ್​ಗಳಾದ ದೇವದತ್ ಪಡಿಕ್ಕಲ್ ಹಾಗೂ ಌರೋನ್ ಫಿಂಚ್, ಉತ್ತಮ ಆರಂಭ ನೀಡುವಲ್ಲಿ ವಿಫಲವಾದ್ರು. 12ಬಾಲ್​ಗಳಲ್ಲಿ 18ರನ್ ಗಳಿಸಿದ್ದ ಪಡಿಕ್ಕಲ್, ಆರ್ಷ್​ದೀಪ್ ಸಿಂಗ್ ಎಸೆತದಲ್ಲಿ ನಿಕೋಲಸ್ ಪೂರನ್​ಗೆ ಕ್ಯಾಚ್ ನೀಡಿದ್ರು. ಇನ್ನೂ ಌರೋನ್ ಆಟ 20ರನ್​ಗೆ ಅಂತ್ಯವಾಯ್ತು. …

Read More »

ಮನೀಷ್ ಶೆಟ್ಟಿ ಕೊಲೆ ಪ್ರಕರಣ: ಬಾರ್ ಮಾಲೀಕನ ಹತ್ಯೆಗೆ ನಡೆದಿತ್ತು ಭರ್ಜರಿ ಸ್ಕೆಚ್​!

ಬೆಂಗಳೂರು: ಬಾರ್ ಮಾಲೀಕ ಮನೀಷ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿಗಳ ಪತ್ತೆಗೆ 9 ವಿಶೇಷ ತಂಡಗಳ ರಚನೆ ಮಾಡಲಾಗಿದೆ. ಘಟನಾ ಸ್ಥಳದ ಮಾಹಿತಿ ಆಧರಿಸಿ ಪೊಲೀಸರಿಂದ ತನಿಖೆ ನಡೆಸಲಾಗುತ್ತಿದೆ. ಜೊತೆಗೆ, ಘಟನಾ ಸ್ಥಳದ ಸುತ್ತಲಿನ ಸಿಸಿಟಿವಿ ದೃಶ್ಯಾವಳಿಯನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ. ಸದ್ಯ, ಸಿಸಿಬಿ ಮತ್ತು ಕೇಂದ್ರ ವಿಭಾಗ ಪೊಲೀಸರಿಂದ ಹಂತಕರಿಗೆ ಶೋಧ ನಡೆಸಲಾಗುತ್ತಿದೆ. ಇತ್ತ, ಮನೀಷ್ ಶೆಟ್ಟಿ ಹತ್ಯೆಗೆ ಬಳಸಿದ್ದ ಮಾರಕಾಸ್ತ್ರ ಹಾಗೂ ಬಂದೂಕು ಪತ್ತೆಯಾಗಿದೆ. …

Read More »

ಕಾರೊಂದು ಹಳ್ಳದಲ್ಲಿ ಕೊಚ್ಚಿಹೋಗಿದ್ದು 4 ಅಥವಾ 5 ಜನರು ಕಾರಿನೊಳಗೆ ಸಿಲುಕಿರುವ ಶಂಕೆ

ಶಿರಸಿ – ಸಿದ್ದಾಪುರ ತಾಲೂಕಿನ ಹೆಗ್ಗರಣಿ ಬಳಿ ಕಾರೊಂದು ಹಳ್ಳದಲ್ಲಿ ಕೊಚ್ಚಿಹೋಗಿದ್ದು 4 ಅಥವಾ 5 ಜನರು ಕಾರಿನೊಳಗೆ ಸಿಲುಕಿರುವ ಶಂಕೆ ಇದೆ. ಕೋಡನಮನೆ ಎಂಬಲ್ಲಿ ಸೇತುವೆೆಯಿಂದ ಕೆಳಗುರುಳಿದ ಕಾರು ನೀರಿನಲ್ಲೇ ಅರ್ಧ ಕಿಲೋ ಮೀಟರ್ ದೂರ ಹೋಗಿ ಬಿದ್ದಿದೆ. ಬುಧವಾರ ರಾತ್ರಿಯೇ ಘಟನೆ ನಡೆದಿದ್ದು ಗುರುವಾರ ಮಧ್ಯಾಹ್ನದ ಹೊತ್ತಿಗೆ ಬೆಳಕಿಗೆ ಬಂದಿದೆ. ಆದರೆ ಕಾರಿನ ಬಾಗಿಲುಗಳು ಇನ್ನೂ ಮುಚ್ಚಿಯೇ ಇದ್ದು ಪೊಲೀಸರು ಸ್ಥಳಕ್ಕೆ ಬಂದ ನಂತರ ನಿಖರ ಮಾಹಿತಿ …

Read More »

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಪ್ರತಿಭೆಗಳಿಗೆ ಮಾಡಲಾದ ಅವಮಾನವಾಗಿದೆ:ಲಕ್ಷ್ಮಿ ಹೆಬ್ಬಾಳಕರ್

ಬೆಳಗಾವಿ –  ಇಲ್ಲಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಪ್ರತಿಭಾವಂತ ಗೋಲ್ಡ್ ಮೆಡಲಿಸ್ಟ್ ಗಳಿಗೆ ಗೋಲ್ಡ್ ಮೆಡಲ್ ಗಳನ್ನು ನೀಡಿ ಗೌರವಿಸದೆ ವಿದ್ಯಾರ್ಥಿಗಳನ್ನು ತಿರಸ್ಕರಿಸಿ ಅವಮಾನಿಸಿದೆ ಎಂದು ಶಾಸಕರೂ, ಕೆಪಿಸಿಸಿ ರಾಜ್ಯ ವಕ್ತಾರರೂ ಆಗಿರುವ ಲಕ್ಷ್ಮಿ ಹೆಬ್ಬಾಳಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.   ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಜರುಗಿದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಎಂಟನೇಯ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಬೆಳಗಾವಿ ನಗರದ ನಿವಾಸಿ ಸೃಷ್ಟಿ ಗ್ಯಾನಿ ಎಂಬ ವಿದ್ಯಾರ್ಥಿನಿಯು ಇದೇ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗವನ್ನು ಮಾಡಿದ್ದು, …

Read More »

ಡ್ರಗ್ಸ್ ಜಾಲಕ್ಕೆ ಸಂಬಂಸಿದಂತೆ ಕ್ರಿಕೆಟ್ ಆಟಗಾರರೊಬ್ಬರನ್ನು ಸಿಸಿಬಿ ಪೊಲೀಸರು ಸದ್ಯದಲ್ಲೇ ವಿಚಾರಣೆಗೆ ಒಳಪಡಿಸಲಿದ್ದಾರೆ.

ಬೆಂಗಳೂರು,ಅ.15- ಡ್ರಗ್ಸ್ ಜಾಲಕ್ಕೆ ಸಂಬಂಸಿದಂತೆ ಕ್ರಿಕೆಟ್ ಆಟಗಾರರೊಬ್ಬರನ್ನು ಸಿಸಿಬಿ ಪೊಲೀಸರು ಸದ್ಯದಲ್ಲೇ ವಿಚಾರಣೆಗೆ ಒಳಪಡಿಸಲಿದ್ದಾರೆ. ಈ ಆಟಗಾರ ಈಗಾಗಲೇ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟಿಯರಾದ ರಾಗಿಣಿ ಮತ್ತು ಸಂಜನಾ ಆಪ್ತ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ತನಿಖಾ ಅಧಿಕಾರಿಗಳು ಅವರನ್ನು ವಿಚಾರಣೆ ಗೊಳಪಡಿಸಲಿದ್ದಾರೆ. ಈಗಾಗಲೇ ಕೆಪಿಎಲ್ ಕ್ರಿಕೆಟ್ ತಂಡದ ಮಾಲೀಕ ಹಾಗೂ ಉದ್ಯಮಿಯೊಬ್ಬರನ್ನು ಸಿಸಿಬಿ ಪೊಲೀಸರು ವಿಚಾರಣೆಗೊಳಪಡಿಸಿ ದ್ದಾರೆ ಎಂದು ತಿಳಿದುಬಂದಿದೆ. ಅವರಿಂದ ಎರಡು ಮೊಬೈಲ್‍ಗಳನ್ನು ವಶಪಡಿಸಿಕೊಂಡಿರುವ ತನಿಖಾಕಾರಿಗಳು …

Read More »

ಕುಂಭದ್ರೋಣ ಮಳೆಯಿಂದ ಚಿಕ್ಕೋಡಿ ಉಪ ವಿಭಾಗದ ರೈತರು ಕಂಗಾಲಾಗಿದ್ದಾರೆ.

ಚಿಕ್ಕೋಡಿ: ಬೆಳೆಗಳೆಲ್ಲವೂ ಭರಪೂರ ಬಂದಿದ್ದು, ಇನ್ನೇನು ಕಟಾವು ಮಾಡಬೇಕೆಂದು ಕೆಲ ರೈತರು ಯೋಚಿಸಿದರೆ, ಕೆಲ ರೈತರು ಫಸಲಿಗೆ ಬಂದ ಬೆಳೆಗಳನ್ನು ಕಟಾವು‌ ಮಾಡಿ ರಾಶಿ ಮಾಡಲು ಮುಂದಾದ ಸಂದರ್ಭದಲ್ಲೇ ಕುಂಭದ್ರೋಣ ಮಳೆಯಿಂದ ಚಿಕ್ಕೋಡಿ ಉಪ ವಿಭಾಗದ ರೈತರು ಕಂಗಾಲಾಗಿದ್ದಾರೆ. ಕಳೆದ ಎರಡು-ಮೂರು ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು, ಮಳೆಯ ಜೊತೆಗೆ ಗಾಳಿಯೂ ಸಹಿತ ಜೋರಾಗಿ ಬೀಸುತ್ತಿರುವ ಪರಿಣಾಮ ಗೋವಿನ ಜೋಳ ಹಾಗೂ ಕಬ್ಬಿನ ಬೆಳೆ ನೆಲಸಮವಾಗಿವೆ. ಈ ಬಾರಿ ಮಳೆ …

Read More »

ಅತ್ಯಾಚಾರಿಗಳ ಜನನಾಂಗ ಕಟ್ ಮಾಡುವಂತೆಕೂಡಲ ಸಂಗಮ ಧರ್ಮಪೀಠದ ಶ್ರೀ ಬಸವ ಪ್ರಕಾಶ ಸ್ವಾಮೀಜಿ ಆಗ್ರಹ

ಧಾರವಾಡ: ಅತ್ಯಾಚಾರಿಗಳ ಜನನಾಂಗ ಕಟ್ ಮಾಡುವಂತೆ ಬಾಗಲಕೋಟೆಯ ಕೂಡಲ ಸಂಗಮ ಧರ್ಮಪೀಠದ ಶ್ರೀ ಬಸವ ಪ್ರಕಾಶ ಸ್ವಾಮೀಜಿ ಆಗ್ರಹಿಸಿದ್ದಾರೆ. ಮಾಗಡಿ ತಾಲೂಕಿನ ಅತ್ಯಾಚಾರ ಪ್ರಕರಣ ನಡೆದ ವಿಚಾರವಾಗಿ ಧಾರವಾಡದಲ್ಲಿ ಮಾತನಾಡುವ ವೇಳೆ ಅತ್ಯಾಚಾರಿಗಳ ವಿರುದ್ಧ ಕಿಡಿಕಾರಿದ ಅವರು, ಪೊಲೀಸರು ಬಂಧಿಸೋದು, ಜಾಮೀನು ಕೊಡವುದು ಆಗಬಾರದು. ಅತ್ಯಾಚಾರಿಗಳ ಜನನಾಂಗ ಕಟ್ ಮಾಡುವ ಕಾನೂನು ಬರಬೇಕು ಎಂದರು ಈ ರೀತಿ ಮಾಡಿದರೆ ಮಾತ್ರ ಭಾರತದಲ್ಲಿ ಅತ್ಯಾಚಾರ ಕಡಿಮೆ ಆಗುತ್ತವೆ ಎಂದ ಅವರು, ಹೆಣ್ಣು …

Read More »