Breaking News

ರಾಜ್ಯ

ಲಿಂಗಾಯತ ಮೀಸಲಾತಿ; ರಕ್ತ ದಾಸೋಹದ ಮೂಲಕ ಸರ್ಕಾರದ ಗಮನಸೆಳೆಯಲು ಮುಂದಾದ ಜಯ ಮೃತ್ಯುಂಜಯ ಶ್ರೀಗಳು

ಬಾಗಲಕೋಟೆ : ಪಂಚಮಸಾಲಿ ಲಿಂಗಾಯತ ಸಮಾಜ 2ಎ ಮೀಸಲಾತಿಗೆ ಸೇರಿಸುವಂತೆ ಆಗ್ರಹಿಸಿ ಕೂಡಲಸಂಗಮ ಪಂಚಮಸಾಲಿ ಲಿಂಗಾಯತ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಮೂರನೇ ಹಂತದ ಹೋರಾಟಕ್ಕೆ ಮುಂದಾಗಿದ್ದಾರೆ. ಡಿಸೆಂಬರ್ 23 ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹುಟ್ಟು ಹಬ್ಬದ ದಿನ ಹಾಗೂ ರೈತ ದಿನಾಚರಣೆ ಹಿನ್ನೆಲೆಯಲ್ಲಿ ವಿಶಿಷ್ಟ ರೀತಿಯ ಹೋರಾಟಕ್ಕೆ ಅಣಿಯಾಗಿದ್ದಾರೆ. ಸ್ವತಃ ಸ್ವಾಮೀಜಿ ರಕ್ತ ದಾನ ಮಾಡುವ ಮೂಲಕ ರಕ್ತದಾಸೋಹಕ್ಕೆ ಚಾಲನೆ ನೀಡಿದರು. ರಕ್ತ …

Read More »

ಜೈಲು ಸೇರಿದ್ದ ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಅನಾರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ಶಿಫ್ಟ್ ಆಗಿದ್ದಾರೆ.

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಅನಾರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ಶಿಫ್ಟ್ ಆಗಿದ್ದಾರೆ. ನಟಿ ರಾಗಿಣಿ ದ್ವಿವೇದಿ ಉಸಿರಾಟದ ಸಮಸ್ಯೆ ಹಾಗೂ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಇದೀಗ ಪರಪ್ಪನ ಅಗ್ರಹಾರ ಜೈಲಿನಿಂದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಡ್ರಗ್ಸ್ ಕೇಸ್ ನಲ್ಲಿ ಬಂಧನಕ್ಕೀಡಾಗಿರುವ ನಟಿ ರಾಗಿಣಿ ಕಳೆದ ನಾಲ್ಕು ತಿಂಗಳಿನಿಂದ ಜೈಲುವಾಸ ಅನುಭವಿಸುತ್ತಿದ್ದಾರೆ. ಡ್ರಗ್ಸ್ ಕೇಸ್ ನಲ್ಲಿ ಜೈಲು …

Read More »

ನ್ಯೂಮೋನಿಯಾಗೆ ಸೆರಂ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೈಗೆಟುಕುವ ಬೆಲೆಯ ಲಸಿಕೆ ಮುಂದಿನ ವಾರದಿಂದ ಜನರಿಗೆ ದೊರೆಯುವ ಸಾಧ್ಯತೆಗಳಿವೆ.

ನವದೆಹಲಿ, ಡಿ.24- ನ್ಯೂಮೋನಿಯಾಗೆ ಸೆರಂ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೈಗೆಟುಕುವ ಬೆಲೆಯ ಲಸಿಕೆ ಮುಂದಿನ ವಾರದಿಂದ ಜನರಿಗೆ ದೊರೆಯುವ ಸಾಧ್ಯತೆಗಳಿವೆ. ಭಾರತದಲ್ಲೇ ಅಭಿವೃದ್ದಿಪಡಿಸಿರುವ ಲಸಿಕೆಯನ್ನು ಲೋಕಾರ್ಪಣೆ ಮಾಡಿದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಮುಂದಿನ ವಾರದಿಂದ ಲಸಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಘೋಷಿಸಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ವಿದೇಶಿ ನಿರ್ಮಿತ ಲಸಿಕೆಯನ್ನು ಬಳಕೆ ಮಾಡಲಾಗುತ್ತಿದೆ. ವಿದೇಶಿ ಲಸಿಕೆಗಳಿಗಿಂತ ಕಡಿಮೆ ದರದಲ್ಲಿ ಸೆರಂ ಸಂಸ್ಥೆಯ ನ್ಯೂಮೋನಿಯಾ ಲಸಿಕೆ ದೊರೆಯಲಿದೆ. ಪೂನಾ ಮೂಲದ …

Read More »

ಬೀದರ್​ನಲ್ಲಿ ಕನಿಷ್ಠ ತಾಪಮಾನ ದಾಖಲು : ಮತ್ತಷ್ಟು ಚಳಿ ದಟ್ಟವಾಗುವ ಸಾಧ್ಯತೆ

ಬೀದರ್​(ಡಿಸೆಂಬರ್​. 24 ): ಗಡಿ ಜಿಲ್ಲೆ ಬೀದರ್ ನಲ್ಲೀಗ ಮೈಕೊರೆಯುವ ಚಳಿ ಶುರುವಾಗಿದೆ. ಮಂಗಳವಾರ ರಾಜ್ಯದಲ್ಲೇ ಅತೀ ಕಡಿಮೆ ಅಂದರೆ 5.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಮುಂಜಾನೆಯ ಮಂಜಿನ ಮುಸುಕು, ತಣ್ಣನೆಯ ಗಾಳಿ ಜಿಲ್ಲೆಯ ಜನರ ಜೀವನ ಶೈಲಿಯನ್ನೇ ಈಗ ಬದಲಾಯಿಸಿದ್ದು, ದಿನವಿಡೀ ಚಳಿಯ ಅನುಭವ ಹೊಂದುವಂತಾಗಿದೆ. ಬೆಳಗ್ಗೆ 7 ಗಂಟೆಯಾದರೂ ಬೆಳಕು ಮೂಡುತ್ತಿಲ್ಲ. ಸಂಜೆ 5:30ಗಂಟೆಗೆ ಕತ್ತಲು ಆವರಿಸುತ್ತಿದೆ. ಬರುವ ದಿನಗಳಲ್ಲಿ ಕನಿಷ್ಠ ತಾಪಮಾನ ಮತ್ತಷ್ಟು ಇಳಿಯುವ …

Read More »

ನಾನು ಕಾರ್ಮಿಕರ ಪರವಾಗಿ ನಿಲ್ಲುತ್ತೇನೆ. ಅವರ ಎಲ್ಲಾ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ: ಡಿ.ಕೆ.ಸುರೇಶ್

ರಾಮನಗರ(ಡಿಸೆಂಬರ್​.24): ಟೊಯೋಟಾ ಕಿರ್ಲೋಸ್ಕರ್ ಕಂಪನಿ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ಒಕ್ಕೂಟದ ಜಗಳ ಕಳೆದ ಸುಮಾರು ದಿನಗಳಿಂದ ನಡೆಯುತ್ತಿದೆ. ಇದೇ ವಿಚಾರವಾಗಿ ಸಂಸದ ಡಿ.ಕೆ.ಸುರೇಶ್ ಆಡಳಿತ ಮಂಡಳಿಯ ಜೊತೆಗೆ ಸಂಧಾನ ಸಭೆ ನಡೆಸಿದರು. ಆದರೆ ಸಭೆಯಲ್ಲಿ ಒಮ್ಮತದ ಅಭಿಪ್ರಾಯ ಮೂಡದೇ ಸಭೆ ವಿಫಲವಾಯ್ತು. ಡಿ.ಕೆ.ಸುರೇಶ್ ಕೂಡ ಟೊಯೋಟಾ ವಿರುದ್ಧ ಕಿಡಿಕಾರಿದ್ದಾರೆ. ಕಾರ್ಮಿಕರು ಸಹ ಹೋರಾಟ ಮುಂದುವರೆಸಿದ್ದಾರೆ. ರಾಮನಗರ ಜಿಲ್ಲೆ ಬಿಡದಿ ಕೈಗಾರಿಕ ಪ್ರದೇಶದಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿ ಹಾಗೂ …

Read More »

ರಾತ್ರಿ ಮಾತ್ರ ಎಚ್ಚರವಾಗಿರೋಕೆ ಅದೇನು ಕರೋನಾನ ಇಲ್ಲ ಗೂಬೆನಾ ಎಂಬ ಅನುಮಾನ: ಹೆಚ್.ಸಿ.ಮಹದೇವಪ್ ವ್ಯಂಗ್ಯ

ಬೆಂಗಳೂರು: ರಾಜ್ಯ ಸರ್ಕಾರ ಹೊರಡಿಸಿರುವ ಕಾಟಾಚಾರದ ನೈಟ್‍ ಕರ್ಫ್ಯೂಗೆ ಮಾಜಿ ಸಚಿವ ಹೆಚ್.ಸಿ.ಮಹದೇವಪ್ ವ್ಯಂಗ್ಯವಾಡಿದ್ದಾರೆ. ರಾಜ್ಯ ಸರ್ಕಾರದ ತರ್ಕರಹಿತವಾದ ಕರ್ಫ್ಯೂ ಆದೇಶವನ್ನು ಕಂಡ ನಂತರ ರಾತ್ರಿ ಮಾತ್ರ ಎಚ್ಚರವಾಗಿರೋಕೆ ಅದೇನು ಕರೋನಾನ ಇಲ್ಲ ಗೂಬೆನಾ ಎಂಬ ಅನುಮಾನ ನನ್ನ ಕಾಡತೊಡಗಿದ್ದು ಈ ಮಾತು ಹಾಸ್ಯವಾಗಿ ಕಂಡರೂ ನನ್ನಲ್ಲಿ ದಿಗಿಲು ಹುಟ್ಟಿಸಿದೆ ಟ್ವೀಟ್ ಮೂಲಕ ಹೆಚ್.ಸಿ.ಮಹದೇವಪ್ಪ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.  9 ತಿಂಗಳ ಹಿಂದೆ ಕೊರೊನಾ ತಡೆಗಾಗಿ ಸರ್ಕಾರ ಮಾಡಿಕೊಂಡ ಯಡವಟ್ಟುಗಳು …

Read More »

ರಾಜ್ಯಾದ್ಯಂತ ಡಿ.24 ರಿಂದ ರಾತ್ರಿ ಕರ್ಫ್ಯೂ ಜಾರಿಯಲ್ಲಿರುವುದರಿಂದ ಕಟೀಲು ಯಕ್ಷಗಾನ ಮೇಳ ಕಾಲಮಿತಿ ಯಕ್ಷಗಾನವನ್ನು ಪ್ರದರ್ಶಿಸಲಿದೆ.

ಮಂಗಳೂರು: ರಾಜ್ಯಾದ್ಯಂತ ಡಿ.24 ರಿಂದ ರಾತ್ರಿ ಕರ್ಫ್ಯೂ ಜಾರಿಯಲ್ಲಿರುವುದರಿಂದ ಕಟೀಲು ಯಕ್ಷಗಾನ ಮೇಳ ಕಾಲಮಿತಿ ಯಕ್ಷಗಾನವನ್ನು ಪ್ರದರ್ಶಿಸಲಿದೆ. ಕಟೀಲು‌ ದೇವಸ್ಥಾನದ ಎಲ್ಲಾ ಆರು ಯಕ್ಷಗಾನ ಮೇಳಗಳು ಡಿಸೆಂಬರ್ ‌24ರ ಗುರುವಾರದಿಂದ ಸಂಜೆ 4 ಗಂಟೆಗೆ ಚೌಕಿ ಪೂಜೆ ನಡೆದು ಬಳಿಕ ಯಕ್ಷಗಾನ ಪ್ರಸಂಗ ಆರಂಭಿಸಲಿದೆ. ರಾತ್ರಿ 9:45 ಕ್ಕೆ ಮಂಗಳ ಹಾಡುವುದರ ಮೂಲಕ ಯಕ್ಷಗಾನ‌ ಕೊನೆಗೊಳ್ಳಲಿದೆ. ಎಲ್ಲ ಕಲಾವಿದರು ಮಧ್ಯಾಹ್ನ 2:30ಕ್ಕೆ ಚೌಕಿಯಲ್ಲಿ ಹಾಜರಿರಲು ಸೂಚಿಸಲಾಗಿದೆ. ನಾಳೆಯಿಂದ ಕರ್ಫ್ಯೂ ಮುಗಿಯುವ …

Read More »

ದಿ.25ರಂದು ಅಯ್ಯಪ್ಪ ಸ್ವಾಮಿ ಮಹಾಪೂಜೆ

ಗೋಕಾಕ: ಇಲ್ಲಿಯ ಉಪ್ಪಾರ ಗಲ್ಲಿಯಲ್ಲಿರುವ ಶ್ರೀ ರಾಮ ಸನ್ನಿಧಾನ ಉಪ್ಪಾರ ಕಲ್ಯಾಣ ಮಂಟಪದಲ್ಲಿ ದಿ.25ರಂದು ಈ ವರ್ಷವೂ ಕನ್ಯಾ ಸ್ವಾಮಿ ಪೂಜೆ ಹಾಗೂ ಶ್ರೀ ಅಯ್ಯಪ್ಪಸ್ವಾಮಿ ಮಹಾಪೂಜೆ ಸಂಜೆ 7 ಗಂಟೆಗೆ ಜರುಗಲಿದೆ. ಅಯ್ಯಪ್ಪ ಸ್ವಾಮಿ ಭಕ್ತಾಧಿಗಳು ಆಗಮಿಸಿ ಮಹಾಪ್ರಸಾದ ಸ್ವೀಕರಿಸಿ ಅಯ್ಯಪ್ಪನ ಕೃಪೆಗೆ ಪಾತ್ರರಾಗಬೇಕೆಂದು ಗುರುಸ್ವಾಮಿಗಳು ಪ್ರಕಟನೆಯಲ್ಲಿ ತಿಳಸಿದ್ದಾರೆ.

Read More »

ಡಿ.25 ರಿಂದ ಜ.10 ರವರೆಗೆ ರೈತರ ಕೃಷಿ ಜಮೀನುಗಳಿಗೆ 6.80 ಟಿಎಮ್‍ಸಿ ನೀರು ಬಿಡುಗಡೆ- ಶಾಸಕ ಹಾಗೂ ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಜಿಎಲ್‍ಬಿಸಿಗೆ 2400, ಜಿಆರ್‍ಬಿಸಿಗೆ 2000, ಸಿಬಿಸಿ ಕಾಲುವೆಗೆ 550 ಕ್ಯೂಸೆಕ್ಸ್ ನೀರು ಬಿಡುಗಡೆ

ಗೋಕಾಕ : ಹಿಡಕಲ್ ಜಲಾಶಯದಿಂದ ಡಿಸೆಂಬರ್ 25 ರಿಂದ 15 ದಿನಗಳವರೆಗೆ ರೈತರ ಕೃಷಿ ಜಮೀನುಗಳಿಗೆ ನೀರು ಹಾಯಿಸಲು 6.80 ಟಿಎಂಸಿ ನೀರು ಬಿಡುಗಡೆ ಮಾಡಲಾಗುತ್ತಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ. ಜಲಸಂಪನ್ಮೂಲ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಈ ಬಗ್ಗೆ ಅಧಿಕಾರಿಗಳಿಗೆ ಆದೇಶ ನೀಡಿದ್ದು, ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಹಿಡಕಲ್ ಜಲಾಶಯದಿಂದ ನೀರನ್ನು ಬಿಡುಗಡೆ …

Read More »

ಇಂದಿನಿಂದ 9 ದಿನ ಗಳವರೆಗೆ ರಾತ್ರಿ ಹೊತ್ತು ಎನಿರತ್ತೆ ಎನಿರಲ್ಲ….? ರಾತ್ರಿವೇಳೆ ಬಸ್ ಸಂಚಾರ ಇರುವುದಿಲ್ಲ,

ಇಂದಿನಿಂದ ಒಂಬತ್ತು ದಿನಗಳ ವರೆಗೆ ಎಲ್ಲವೂ ಬಂದ್ ರಾತ್ರಿವೇಳೆ ಬಸ್ ಸಂಚಾರ ಇರುವುದಿಲ್ಲ, ತುರ್ತು ಸೇವೆಗಳಿಗೆ ಮಾತ್ರ ಅವಕಾಶ , ಕೋವಿಡ್ 19 ಹೊಸ ರೂಪಾಂತರ ಗೊಂಡ್ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲವನ್ನೂ ರಾತ್ರಿ ಹತ್ತು ಗಂಟೆಯಿಂದ ಬಂದ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ, ಬೆಳಿಗ್ಗೆ ಆರು ಗಟೆಯಿಂದ ಯಥಾ ಪ್ರಕಾರವಾಗಿ ಎಲ್ಲ ಕಾರ್ಯ ಚಟುವಟಿಕೆ ಗಳು ಇರುತ್ತವೆ , ಇನ್ನು ಹೊಸ ವರ್ಷ ಹಾಗೂ ಕ್ರಿಸ್ಮಸ್ ಆಚರಣೆಗೂ ಕೂಡ …

Read More »