Breaking News

ರಾಜ್ಯ

ನಾಡಿನ ಒಳಿತಿಗಾಗಿ ಈ ಪುಣ್ಯಕಾರ್ಯವನ್ನು ಹಮ್ಮಿಕೊಂಡಿದ್ದ ಜೊಲ್ಲೆ

ಯಕ್ಸಂಬಾ ಇಂದು 9ನೇ ಪ್ರೇರಣಾ ಉತ್ಸವದ ಅಂಗವಾಗಿ, ಶ್ರೀ ಜ್ಯೋತಿಬಾ ಮಂದಿರದವರೆಗೆ ನಡೆದ ಭಕ್ತಿ ಸಮರ್ಪಣೆಯ ಸಾಮೂಹಿಕ ಗುಗ್ಗುಳೋತ್ಸವಕ್ಕೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಹಾಗೂ ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷರಾದ ಕು. ಜ್ಯೋತಿಪ್ರಸಾದ ಜೊಲ್ಲೆ ಮತ್ತು ಬಸವಜ್ಯೋತಿ …

Read More »

ಬ್ರಿಟನ್‍ನ ರೂಪಾಂತರಗೊಂಡ ಸೋಂಕು ರಾಜ್ಯದಲ್ಲಿ ಕಾಣಿಸಿಕೊಂಡಿದ್ದರೂ ಮತ್ತೆ ಲಾಕ್‍ಡೌನ್ ಅಥವಾ ಸೀಲ್‍ಡೌನ್?

ಬೆಂಗಳೂರು,ಡಿ.29- ಬ್ರಿಟನ್‍ನ ರೂಪಾಂತರಗೊಂಡ ಸೋಂಕು ರಾಜ್ಯದಲ್ಲಿ ಕಾಣಿಸಿಕೊಂಡಿದ್ದರೂ ಮತ್ತೆ ಲಾಕ್‍ಡೌನ್ ಅಥವಾ ಸೀಲ್‍ಡೌನ್ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.  ಜನವರಿ ತಿಂಗಳಿಗೆ ಕೋವಿಡ್-19ಕ್ಕೆ ಲಸಿಕೆ ಲಭ್ಯವಾಗುವುದರಿಂದ ಜನರು ಆತಂಕಪಡುವ ಅಗತ್ಯವಿಲ್ಲ. ಇದು 2ನೇ ರೂಪಾಂತರಗೊಂಡ ಸೋಂಕು ಆಗಿರುವುದರಿಂದ ಅಷ್ಟೊಂದು ಪರಿಣಾಮ ಬೀರುವುದಿಲ್ಲ. ಹೀಗಾಗಿ ರಾಜ್ಯದಲ್ಲಿ ಪುನಃ ಲಾಕ್‍ಡೌನ್ ಅಥವಾ ಸೀಲ್‍ಡೌನ್ ಮಾಡುವುದಿಲ್ಲ ಎಂದು ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ …

Read More »

ಬಾಯಿಹುಣ್ಣಿಗೆ ಸೇವಿಸುವ ಔಷಧವೆಂದು ಕ್ರಿಮಿನಾಷಕ ಸೇವಿಸಿ ಗ್ರಾಮ ಪಂಚಾಯಿತಿ ಅಭ್ಯರ್ಥಿ ಮೃತ

ಮಂಗಳೂರು: ಔಷಧವೆಂದು ಭಾವಿಸಿ ಕ್ರಿಮಿನಾಷಕ ಸೇವಿಸಿ ಗ್ರಾಮ ಪಂಚಾಯಿತಿ ಅಭ್ಯರ್ಥಿಯೊಬ್ಬರು ಮೃತಪಟ್ಟಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಬಂಟ್ವಾಳದ ಕಾವಳಮುಡೂರಿನ ಅರ್ಗತ್ಯಾರು ನಿವಾಸಿ ಜಯಂತ ಪ್ರಭು ಮೃತ ದುರ್ದೈವಿ. ಬಾಯಿಹುಣ್ಣಿಗೆ ಸೇವಿಸುವ ಔಷಧವೆಂದು ತಿಳಿದು ಕ್ರಿಮಿನಾಶಕ ಸೇವಿಸಿ ಜಯಂತ ತೀವ್ರ ಅಸ್ವಸ್ಥರಾಗಿದ್ದರು. ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇದೀಗ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Read More »

ಕೊರೆಯುವ ಚಳಿಯಲ್ಲೂ ರಾತ್ರಿಯಿಡೀ ಕನ್ನಡ ಧ್ವಜ ಕಾವಲು ಮಾಡಿದ ಕನ್ನಡ ಪರ ಹೋರಾಟಗಾರರು

  ಬೆಳಗಾವಿ: ಮಹಾನಗರ ಪಾಲಿಕೆ ಪ್ರವೇಶ ದ್ವಾರ ಮುಂದೆ ಸೋಮವಾರ ಬೆಳಿಗ್ಗೆ ಸುಮಾರು11 ಗಂಟೆಗೆ ಕನ್ನಡ ಹೋರಾಟಗಾರ ಶ್ರೀನಿವಾಸ ತಾಳೂಕರ ನೇತೃತ್ವದಲ್ಲಿ ಧ್ವಜ ಸ್ತಂಭದ ಸಮೇತ ಕನ್ನಡ ಧ್ವಜ ಹಾರಿಸಿ ಕನ್ನಡ ಮಾತೆಗೆ ಜಯ ಘೋಷಣೆ ಕೂಗಿದರು. ಇನ್ನೊಂದು ಕಡೆ ಅದನ್ನು ತೆರವುಗೊಳಿಸುವಂತೆ ಪೊಲೀಸ್ ಅಧಿಕಾರಿಗಳ ಒತ್ತಡ ಹೇರಿದರು ಅದಕ್ಕೆ ಬಗ್ಗದ ಕನ್ನಡ ಪರ ಹೋರಾಟಗಾರರು ಅದನ್ನು ತೆರವುಗೊಳಿಸದಂತೆ ಇಡೀ ರಾತ್ರಿಯಲ್ಲ ಕೊರೆಯುವ ಚಳಿಯಲ್ಲೂ ಅದರ ಕಾವಲು ಮಾಡುವುದರ ಜೊತೆಗೆ …

Read More »

ಕನ್ನಡ ಧ್ವಜ ತೆರವಿಗೆ ಆಗ್ರಹಿಸಿ ಎಂಇಎಸ್ ಯುವ ಮೋರ್ಚಾ ಪ್ರತಿಭಟನೆ, ಪೊಲೀಸರೊಂದಿಗೆ ಜಟಾಪಟಿ

  ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜ ಹಾರಿಸಿರುವ ಕನ್ನಡಪರ ಸಂಘಟನೆಗಳ ಹೋರಾಟಗಾರರು, ಧ್ವಜವನ್ನು ತೆರವುಗೊಳಿಸದೇ ಅಲ್ಲಿಯೇ ಮುಂದುವರಿಸಬೇಕು ಎಂದು ಧರಣಿ ಮುಂದುವರಿಸಿದ್ದಾರೆ.. ಆದರೆ ಇನ್ನೊಂದೆಡೆ ಎಂಇಎಸ್ ಯುವ ಸಂಘಟನೆಯವರು ಧ್ವಜ ತೆರವುಗೊಳಿಸಬೇಕು ಎಂದು ನಗರ ಪೊಲೀಸ್ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ. ಧ್ವಜ ತೆರವುಗೊಳಿಸಿ ಇಲ್ಲವೇ ಪರಿಣಾಮ ಎದುರಿಸಿ ಎಂದು ಸವಾಲು ಎಸೆದಿದ್ದಾರೆ. ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಪರ ಸಂಘಟನೆಗಳ …

Read More »

ಧರ್ಮೇಗೌಡರ ಹಠಾತ್ ನಿಧನ ; ಸಂತಾಪ ಸೂಚಿಸಿದ ಸಚಿವ ರಮೇಶ್ ಜಾರಕಿಹೊಳಿ‌

ಬೆಂಗಳೂರು : ವಿಧಾನಪರಿಷತ್ತಿನ ಉಪ ಸಭಾಪತಿಯಾಗಿದ್ದ ಎಸ್. ಎಲ್ ಧರ್ಮೇಗೌಡ ರ ಹಠಾತ್ ನಿಧನಕ್ಕೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಜ್ಜನ ವ್ಯಕ್ತಿಯಾಗಿದ್ದ ಧರ್ಮೇಗೌಡರು ಬೀರೂರು ಕ್ಷೇತ್ರದ ಶಾಸಕರಾಗಿಯೂ ಈ ಹಿಂದೆ ಕಾರ್ಯನಿರ್ವಹಿಸಿದ್ದರು. ಸಹಕಾರಿ ರಂಗದ ಹಿರಿಯ ಧುರೀಣರಾಗಿದ್ದರು. ಇತ್ತೀಚಿಗೆ ವಿಧಾನ ಪರಿಷತ್ ಗೆ ಆಯ್ಕೆಯಾಗಿ ಉಪ ಸಭಾಪತಿಗಳಾಗಿ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಸೂಕ್ಷ್ಮ ಮನಸ್ಸಿನ ರಾಜಕಾರಿಣಿಯನ್ನು ಕಳೆದುಕೊಂಡ ನಾಡು ಬಡವಾಗಿದೆ ಎಂದು ಸಂತಾಪ …

Read More »

ಶಾಂಕಿಗ್ ನ್ಯೂಸ್‌ : ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ವಿಧಾ‌ನಪರಿಷತ್ ಉಪಸಭಾಪತಿ !

ಚಿಕ್ಕಮಗಳೂರು : ಜೆಡಿಎಸ್ ದಿಂದ ವಿಧಾ‌ನ ಪರಿಷತ್ ಉಪಸಭಾಪತಿಯಾಗಿದ್ದ ಎಸ್.ಎಲ್.ಧರ್ಮೇಗೌಡ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಡೂರು ತಾಲ್ಲೂಕಿನ ಗುಣಸಾಗರದ ಸಮೀಪ ಸೋಮವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮಂಗಳವಾರ ಬೆಳಿಗ್ಗೆ ವರದಿಯಾಗಿದ್ದು, ನಾಡಿನ ಜನತೆಯನ್ನು ಬೆಚ್ಚಿ ಬಿಳುವಂತೆ ಮಾಡಿದೆ. ಈಚೆಗೆ ವಿಧಾನ ಪರಿಷತ್ ನಲ್ಲಿ ಸಭಾಪತಿ ಸ್ಥಾನದಲ್ಲಿ ಕುಳಿತ ವೇಳೆ ಕಾಂಗ್ರೆಸ್ ನಾಯಕರು ಎಳೆದುಕೊಂಡು ಹೊರ ನಡೆದಿದ್ದರು. ಅಲ್ಲಿ ನಡೆದ ಗಲಾಟೆಯಿಂದ ನೊಂದು ಆತ್ಯಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತಿದ್ದರು ಖಚಿತ …

Read More »

ಡಿ. 31ರೊಳಗೆ ಐಟಿಆರ್ ಫೈಲಿಂಗ್ ಮಾಡದಿದ್ದಲ್ಲಿ 10,000 ರೂ. ದಂಡ

ಈ ವರ್ಷ ಡಿಸೆಂಬರ್ 31ನೇ ತಾರೀಕು ಆದಾಯ ತೆರಿಗೆಯ ಐಟಿಆರ್ ಫೈಲಿಂಗ್ ಗಡುವು ಮುಕ್ತಾಯ ಆಗುತ್ತದೆ. ಒಂದು ವೇಳೆ ಅಷ್ಟರೊಳಗೆ ಫೈಲಿಂಗ್ ಆಗಲಿಲ್ಲ ಅಂದರೆ ಏನಾಗುತ್ತದೆ ಗೊತ್ತಾ? ಕಳೆದ ವರ್ಷಕ್ಕೂ ಈ ಸಲಕ್ಕೂ ವ್ಯತ್ಯಾಸ ಇದೆ. ಕಳೆದ ವರ್ಷದಲ್ಲಿ ಏನಾದರೂ ಗಡುವು ಮುಗಿದ ಕೆಲ ತಿಂಗಳ ನಂತರ ಫೈಲಿಂಗ್ ಮಾಡಿದರೂ ಅದಕ್ಕೆ ದಂಡ ಅಂತ 5000 ರುಪಾಯಿ ಹಾಕಲಾಗುತ್ತಿತ್ತು. ಈ ವರ್ಷ ಆ ಮೊತ್ತ 10,000 ರುಪಾಯಿ ಆಗಿದೆ. ಅಂದ …

Read More »

ಬೆಂಗಳೂರಿನ ಮೂವರಿಗೆ ರೂಪಾಂತರ ಸೋಂಕು ದೃಢ: ಸಚಿವ ಡಾ.ಸುಧಾಕರ್ ಜ. 1 ರಿಂದ ಶಾಲಾ ಆರಂಭಕ್ಕೆ ತೊಂದರೆ ಇಲ್ಲ!!

ಬೆಂಗಳೂರು: ಇಂಗ್ಲೆಂಡ್​ನಲ್ಲಿ ಪತ್ತೆಯಾದ ಮ್ಯೂಟಂಟ್​ ಕೊರೊನಾ ವೈರಸ್​ ಭಾರತಕ್ಕೂ ಕಾಲಿಟ್ಟಿದ್ದು, 6 ಮಂದಿಯಲ್ಲಿ ರೂಪಾಂತರ ಸೋಂಕು ಕಾಣಿಸಿಕೊಂಡಿದೆ. ಈ ಪೈಕಿ ಬೆಂಗಳೂರಿನಲ್ಲಿ ಮೂವರಿಗೆ ವೈರಸ್ ತಗುಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ತಿಳಿಸಿದೆ. ಈ ಸಂಬಂಧ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 10 ಲ್ಯಾಬ್ ಇದೆ. ಇಂಗ್ಲೆಂಡ್​ನಿಂದ ಬಂದ 1614 ಜನರ ಪೈಕಿ 26 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಜೆನೆಟಿಕ್ ಸೀಕ್ವೆನ್ಸಿಂಗ್ ಆದ …

Read More »

ಔಷಧಿ ಬದಲು ಕ್ರಿಮಿನಾಶಕ ಕುಡಿದು ಗ್ರಾ.ಪಂ ಅಭ್ಯರ್ಥಿ ಸಾವು..!

ಆತ ಗ್ರಾಮ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸಿ ಗೆಲುವಿನ ನಿರೀಕ್ಷೆಯಲ್ಲಿದ್ದರು. ಆದರೆ ವಿಧಿಯ ಬರಹವೇ ಬೇರೆಯಾಗಿತ್ತು. ಇನ್ನೇನು ಗೆದ್ದೇ ಗೆಲ್ಲುತ್ತೇನೆ ಎಂದುಕೊಂಡಿದ್ದ ಆತ ಸಾವಿಗೀಡಾಗಿದ್ದಾರೆ. ಈ ಘಟನೆ ನಡೆದಿರೋದು ಬಂಟ್ವಾಳ ತಾಲೂಕಿನ ಕಾವಳಮುಡೂರು ಗ್ರಾಮದಲ್ಲಿ ಈ ಗ್ರಾಮದ ಅರ್ಗತ್ಯಾರು ನಿವಾಸಿ ಜಯಂತ ಪ್ರಭು ಮೃತ ದುರ್ದೈವಿ. ಹೌದು, ಬಾಯಿ ಹುಣ್ಣಾಗಿದೆ ಎಂದು ಅದಕ್ಕೆ ಸಂಬಂಧಪಟ್ಟ ಔಷಧಿ ಬದಲು ಖಾಲಿ ಬಾಟಲಿಯಲ್ಲಿ ತುಂಬಿಟ್ಟಿದ್ದ ಕ್ರಿಮಿನಾಶಕ ಕುಡಿದು ಸಾವನ್ನಪ್ಪಿದ್ದಾರೆ. ಆ ಕ್ರಿಮಿನಾಶಕವನ್ನು ಅಲ್ಪ ಪ್ರಮಾಣದಲ್ಲಿ …

Read More »