Breaking News

ರಾಜ್ಯ

ಗ್ರಾಪಂಗೆ ಆಯ್ಕೆಯಾದ ನೂತನ ಸದಸ್ಯರಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಗೆ ಸನ್ಮಾನ

ಬಾಗಲಕೋಟೆ : ಜಿಲ್ಲೆಯ ಬಿಳಗಿ ಮತಕ್ಷೇತ್ರದ ಅರಕೇರಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 15ರ ಪೈಕಿ 13 ಸ್ಥಾನಗಳ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ನೂತನ ಗ್ರಾಪಂ ಸದಸ್ಯರು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರಿಗೆ ಮಂಗಳವಾರ ಸನ್ಮಾನಿಸಿದರು.   ಮುದಕಪ್ಪ ಮಲ್ಲಾರ, ಸದಪ್ಪ ಆಗೋಜಿ, ಲಕ್ಷ್ಮಣ ದನಾಕಾರ, ಯಲ್ಲಪ್ಪ ಶಿಡ್ಲೆನ್ನವರ, ಸುಭಾಷ ಗಸ್ತಿ, ಲಕ್ಷ್ಮಣ ಮಾಲಗಿ, ಸಿಂಧೂರ ಆನೆಗುಂದಿ ನೂತನ ಸದಸ್ಯರು ಸನ್ಮಾನ ಮಾಡಿದರು.   ಗ್ರಾಮ …

Read More »

ನಗರದ ಹೊರವಲಯದ ಸುರತ್ಕಲ್ ನ ಟೋಲ್ ಸಿಬ್ಬಂದಿ ಮೇಲೆ ಏಳು ಮಂದಿ ಕಾರು ಸವಾರರು ಹಲ್ಲೆ ನಡೆಸಿದ್ದಾರೆ.

ಮಂಗಳೂರು: ನಗರದ ಹೊರವಲಯದ ಸುರತ್ಕಲ್ ನ ಟೋಲ್ ಸಿಬ್ಬಂದಿ ಮೇಲೆ ಏಳು ಮಂದಿ ಕಾರು ಸವಾರರು ಹಲ್ಲೆ ನಡೆಸಿದ್ದಾರೆ. ಭಟ್ಕಳ ನೋಂದಣಿ ನಂಬರ್ ಕಾರು ಸುರತ್ಕಲ್ ಟೋಲ್ ನಲ್ಲಿ ಹಣ ಪಾವತಿಸಲು ನಿರಾಕರಿಸಿದ್ದರು. ಈ ವೇಳೆ ಟೋಲ್ ಸಿಬ್ಬಂದಿ ಹಣ ಪಾವತಿಸಲು ತಿಳಿಸಿದ್ದಾರೆ. ಹಣ ಪಾವತಿ ಮಾಡೋದಿಲ್ಲ ಎಂದು ತಗಾದೆ ತೆಗೆದು ಟೋಲ್ ಸಿಬ್ಬಂದಿಗೆ ಏಳು ಮಂದಿ ಸೇರಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ಹಲ್ಲೆಯಿಂದಾಗಿ ಟೋಲ್ ಸಿಬ್ಬಂದಿಯ ಕೈ ಮುರಿತಕ್ಕೊಳಗಾಗಿದ್ದು, ಬಳಿಕ …

Read More »

ಆಕ್ರೋಶಗೊಂಡ ಸಿದ್ದರಾಮಯ್ಯ, ಆಯ್ತು ನೀ ನಡಿ ಎಂದು ಮೈಕ್ ಮುಂದೆ ನಿಂತಿದ್ದ ಜಾಬಣ್ಣವರ ಅವರನ್ನು ನೂಕಿ, ವೇದಿಕೆಯಿಂದ ಕೆಳಗೆ ಕಳುಹಿಸಿದರು.

ಬಾಗಲಕೋಟೆ : ಪ್ರಸ್ತುತ ಗ್ರಾ.ಪಂ. ಚುನಾವಣೆಯಲ್ಲಿ ಗೆದ್ದ ತಮ್ಮ ಪಕ್ಷದ ಬೆಂಬಲಿತ ನೂತನ ಸದಸ್ಯರ ಸನ್ಮಾನ ಕಾರ್ಯಕ್ರಮದ ವೇಳೆ ನೂತನ ಸದಸ್ಯರೊಬ್ಬರು ತಮ್ಮೂರಿನ ಸಮಸ್ಯೆ ಹೇಳಿಕೊಳ್ಳುವ ವೇಳೆ, ಬಾದಾಮಿಯ ಶಾಸಕರೂ ಆಗಿರುವ ವಿಧಾನಸಭೆಯವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ನೂತನ ಸದಸ್ಯನನ್ನು ವೇದಿಕೆಯಿಂದ ನೂಕಿ ಕೆಳಗೆ ಕಳುಹಿಸಿದ ಪ್ರಸಂಗ ಬಾದಾಮಿ ಪಟ್ಟಣದಲ್ಲಿ ಸೋಮವಾರ ನಡೆಯಿತು. ಬಾದಾಮಿಯ ಶಾಸಕರ ಗೃಹ ಕಚೇರಿ ಆವರಣದಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರಿಗೆ ಅಭಿನಂದನೆ ಕಾರ್ಯಕ್ರಮವನ್ನು ಸಿದ್ದರಾಮಯ್ಯ …

Read More »

7ನೇ ಬಾರಿ ಕೇಂದ್ರ – ರೈತರ ಜೊತೆಗಿನ ಸಭೆ ವಿಫಲ

ನವದೆಹಲಿ : ಕೇಂದ್ರ ಸರ್ಕಾರದ ಮೂರು ರೈತ ವಿರೋಧಿ ಮಸೂಧೆ ವಿರೋಧಿಸಿ ನಡೆಯುತ್ತಿರುವಂತ ಪ್ರತಿಭಟನಾ ನಿರತ ರೈತರೊಂದಿಗೆ, ಕೇಂದ್ರ ಸರ್ಕಾರ ಇಂದು 7ನೇ ಬಾರಿ ನಡೆಸಿದಂತ ಸಭೆ ನಡೆಸಿತು. ಇಂತಹ ಸಭೆಯಲ್ಲಿ ರೈತ ಮಸೂಧೆಗಳ ಮಾರ್ಪಾಡಿಗೆ ಒಪ್ಪಿದಂತ ಕೇಂದ್ರ ಸರ್ಕಾರ, ಮಸೂದೆಗಳನ್ನೇ ರದ್ದು ಪಡಿಸಲು ಒಪ್ಪದ ಹಿನ್ನಲೆಯಲ್ಲಿ, ಇಂದು ನಡೆದ ಸಭೆ ಕೂಡ ವಿಫಲವಾಗಿದೆ. ಇಂದು ಕೇಂದ್ರ – ರೈತರ ಮುಖಂಡರ ಏಳನೇ ಸುತ್ತಿನ ಮಾತುಕತೆಯಲ್ಲಿ ಈ ಮೂರು ಕೃಷಿ …

Read More »

2020ನೇ ಸಾಲಿನ ‘ಜಾನಪದ ಅಕಾಡೆಮಿ’ ಬೆಳಗಾವಿ ಜಿಲ್ಲೆ ಮುತ್ತಪ್ಪ ಅಲ್ಲಪ್ಪ ಸವದಿ-ತತ್ವಪದ ಪ್ರಶಸ್ತಿಗೆ ಆಯ್ಕೆ

ಚಾಮರಾಜನಗರ : ಕರ್ನಾಟಕ ಜಾನಪದ ಅಕಾಡೆಮಿಯು 2020ನೇ ಸಾಲಿನ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದು 30 ಜಿಲ್ಲೆಗಳ ತಲಾ ಒಬ್ಬ ಜಾನಪದ ಕಲಾವಿದರು ಹಾಗೂ ಇಬ್ಬರನ್ನು ತಜ್ಞ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಮಾತಾ ಬಿ. ಮಂಜಮ್ಮ ಜೋಗತಿ ಅವರು ಸುದ್ದಿಗೋಷ್ಠಿ ನಡೆಸಿ ಕರ್ನಾಟಕ ಅಕಾಡೆಮಿಯ 2020ನೇ ಸಾಲಿನ ವಾರ್ಷಿಕ ಪ್ರಶಸ್ತಿಗಾಗಿ ರಾಜ್ಯದ 30 ಜಿಲ್ಲೆಗಳ 30 ಹಿರಿಯ ಜಾನಪದ ಕಲಾವಿದರು …

Read More »

ಗೋಕಾಕ ಮತ್ತು ಚಿಕ್ಕೋಡಿ ಎರಡು ಪ್ರತ್ಯೇಕ ಜಿಲ್ಲೆಯನ್ನ ಘೋಷಣೆ ಮಾಡಲೇ ಬೇಕು:ಸತೀಶ್ ಜಾರಕಿಹೊಳಿ

ಬೆಳಗಾವಿ- ಚಿಕ್ಕೋಡಿ ಮತ್ತು ಗೋಕಾಕ ಎರಡನ್ನೂ ಪ್ರತ್ಯೇಕವಾಗಿ ಜಿಲ್ಲೆ ಎಂದು ಘೋಷಣೆ ಮಾಡಲೇಬೇಕು ಅದು ಸರಕಾರದ ಜವಾಬ್ದಾರಿಯಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ ಇಂದು ಬೆಳಗಾವಿ ನಗರದ ಕಾಂಗ್ರೆಸ್ ಭವನದಲ್ಲಿ ಮಾತನಾಡಿದ ಅವರು ಐದಾರು ತಿಂಗಳಿನಲ್ಲಿ ಗೋಕಾಕನ್ನ ಜಿಲ್ಲೆಯನ್ನಾಗಿ ಘೋಷಣೆ ಮಾಡುತ್ತೆವೆ ಎಂಬ ಸಚಿವ ರಮೇಶ ಜಾರಕಿಹೊಳಿ ಅವರ ಮಾತಿಗೆ ಪ್ರತಿಕ್ರಿಯಿಸಿದ ಗೋಕಾಕ ಮತ್ತು ಚಿಕ್ಕೋಡಿ ಎರಡು ಪ್ರತ್ಯೇಕ ಜಿಲ್ಲೆಯನ್ನಾಡಿ ಘೋಷಣೆ ಮಾಡಲೇ ಬೇಕು ಮೊದಲಿನಿಂದಲೂ ಅವುಗಳನ್ನು …

Read More »

ಗೋಕಾಕ ಪ್ರತ್ಯೇಕ ಜಿಲ್ಲೆ ರಚನೆ ಮಾಡೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಗೋಕಾಕ ಪ್ರತ್ಯೇಕ ಜಿಲ್ಲೆ ರಚನೆ ಮಾಡೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಗೋಕಾಕ ನಿವಾಸದಲ್ಲಿ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದಾಗ ಸಚಿವರು ಈ ವಿಚಾರ ತಿಳಿಸಿದರು. ಗೋಕಾಕ ಮತ್ತು ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ವಿಚಾರವಾಗಿ ಗೋಕಾಕನ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಸಚಿವ ರಮೇಶ ಜಾರಕಿಹೊಳಿ ಭೇಟಿಯಾಗಿದ್ದಾರೆ. ಭೇಟಿ ನಂತರ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೋಳಿ ಹೇಳಿಕೆ ನೀಡಿ,ಸಿದ್ಧರಾಮಯ್ಯ ಸಿಎಂ ಆಗಿದ್ದ …

Read More »

ಮೂಡಲಗಿದಲ್ಲಿ ಗೆದ್ದ- ಸೋತ ಅಭ್ಯರ್ಥಿಗಳ ನಡುವೆ ಹೊಡೆದಾಟ !

ಗೋಕಾಕ  : ಗ್ರಾಮ ಪಂಚಾಯಿತಿ ಚುನಾವಣೆ ಮುಗಿದು ನಂತರವೂ ಚುನಾವಣೆ ಎಫೆಕ್ಟ್ ಇನ್ನೂ ನಿಂತಿಲ್ಲ ಹೌದು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ತುಕ್ಕಾನಕಟ್ಟಿ ಗ್ರಾಮದಲ್ಲಿ ಎರಡು ಪ್ಯಾನಲ್ನ್ ಮಹಿಳೆಯರು ನಡುವೆ ಬೆಳ್ಳಂಬೆಳಗ್ಗೆ ಮಾರಾಮಾರಿ ನಡೆದಿದೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿಯಿಂದ ಕುಡಿಯುವ ನೀರು ಸರಬರಾಜು ಸ್ಥಗಿತಗೊಳಿಸಲಾಗಿದೆ ಎಂದು ಆರೋಪಿಸಿ ಮಹಿಳೆಯರು ಒಬ್ಬರನ್ನೊಬ್ಬರು ಎಳೆದಾಡಿಕೊಂಡು ದೊಣ್ಣೆಯಿಂದ ಹೊಡಿದಾಟ ನಡೆಸಿದ್ದಾರೆ ಇದೆ ಸಮಯದಲ್ಲಿ ಇಬ್ಬರ ಕುಟುಂಬಸ್ಥರು ಸಹ ಪರಸ್ಪರ ಎಳೆದಾಡಿಕೊಂಡು ಹಲ್ಲೆ …

Read More »

ಲಿಫ್ಟ್‍ನಲ್ಲಿ ಜಗದೀಶ್ ಶೆಟ್ಟರ್ ಅವರನ್ನು ಬಿಡದ ರಕ್ಷಣಾ ಸಿಬ್ಬಂದಿ

ಶಿವಮೊಗ್ಗ, – ಲಿಫ್ಟ್‍ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹೋಗುವಾಗ ಅವರೊಂದಿಗೆ ಸಚಿವ ಜಗದೀಶ್ ಶೆಟ್ಟರ್ ಹೋಗಲು ಗನ್‍ಮ್ಯಾನ್‍ಗಳು ಅವಕಾಶ ನೀಡದ ಪ್ರಸಂಗ ನಡೆಯಿತು. ನಗರದ ಖಾಸಗಿ ಹೊಟೇಲ್‍ನಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲು ಸಿಎಂ ಹೊರಟರು. ಆಗ ಅವರು ಹತ್ತಿದ ಲಿಫ್ಟ್‍ನಲ್ಲೇ ಜಗದೀಶ್ ಶೆಟ್ಟರ್ ಹತ್ತಲು ಹೋದಾಗ ಅವರನ್ನು ಗನ್‍ಮ್ಯಾನ್‍ಗಳು ತಡೆದರು. ಆದರೆ, ಸಿಎಂ ಜತೆ ಲಿಫ್ಟ್ ಒಳಗೆ ಶಿವಮೊಗ್ಗ ಸಂಸದ ಹಾಗೂ ಬಿಎಸ್‍ವೈ ಪುತ್ರ ಬಿ.ವೈ.ರಾಘವೇಂದ್ರ ಬಂದರು. ರಿಲ್ಯಾಕ್ಸ್ …

Read More »

500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಹಿರಿಯ ನಟ ಶನಿ ಮಹದೇವಪ್ಪ ಇನ್ನಿಲ್ಲ..!

ಬೆಂಗಳೂರು : 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಶನಿ ಮಹದೇವಪ್ಪ (90) ಇಂದು ನಿಧನರಾಗಿದ್ದಾರೆ. ಕೊರೊನಾ ಸೋಂಕಿಗೆ ತುತ್ತಾಗಿದ್ದ ಶನಿ ಮಹದೇವಪ್ಪ ನಗರದ ಕೆ.ಸಿ.ಜನರಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರು. ಆದರೆ , ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ. ಕವಿರತ್ನ ಕಾಳಿದಾಸ, ಭಕ್ತ ಕುಂಬಾರ, ಶ್ರೀನಿವಾಸ ಕಲ್ಯಾಣ ಸೇರಿದಂತೆ ಡಾ.ರಾಜ್ ಕುಮಾರ್ ಜೊತೆ 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದರು. ಒಟ್ಟಾರೆ ತಮ್ಮ …

Read More »