Breaking News

ರಾಜ್ಯ

ಬೆಳಗಾವಿಯ ಮುಂದಿನ ಪಾಲಿಕೆ ಮೇಯರ್ ಬಿಜೆಪಿಯವರಾಗಿರ್ತಾರೆ: ಸಚಿವ ಭೈರತಿ ಬಸವರಾಜ್

ಬೆಳಗಾವಿ: ಮುಂದಿನ ದಿನಗಳಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮಾಡುತ್ತೇನೆ ಎಂದು ನಗರಾಭಿವೃದ್ದಿ ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ. ನಗರದಲ್ಲಿ ಇಂದು ಸ್ಮಾರ್ಟ್ ಸಿಟಿ ಕಾಮಗಾರಿಗಳ ಪರಿಶೀಲನೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬರುತ್ತೇವೆ ಎಂದರು. ಸಂಕ್ರಾತಿ ಬಳಿಕ ಸಂಪುಟ ವಿಸ್ತರಣೆ ಮಾಡುವುದಾಗಿ ಸಿಎಂ ಹೇಳಿದ್ದಾರೆ. ಸಂಪುಟ ವಿಸ್ತರಣೆ ಸಿಎಂ ಯಡಿಯೂರಪ್ಪ ಅವರ ವಿವೇಚನೆಗೆ ಬಿಟ್ಟದ್ದು, ಈ ಬಗ್ಗೆ …

Read More »

ಸಿದ್ದು, ಡಿಕೆಶಿ ಅಷ್ಟೇ ಅಲ್ಲ, ಕಾಂಗ್ರೆಸ್ ನಲ್ಲಿ ಹಲವು ಸಿಎಂ ಅಭ್ಯರ್ಥಿಗಳಿದ್ದಾರೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ 2023 ಕ್ಕೆ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ಬರಲಿದೆ!!

ಹುಬ್ಬಳ್ಳಿ: 2023 ಕ್ಕೆ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಅವಿರತವಾಗಿ ಶ್ರಮವಹಿಸುತ್ತಿರುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರದ ವೈಫಲ್ಯ, ಭ್ರಷ್ಟಾಚಾರ, ದುರಾಡಳಿತ ಹೀಗೆ ಸಾಕಷ್ಟು ವಿಷಯಗಳಿವೆ. ಅವುಗಳನ್ನು ಬಗ್ಗೆ ಜನರ ಗಮನೆ ಸೆಳೆಯುತ್ತೇವೆ. ಯಳಮಟ್ಟದಿಂದ ಪಕ್ಷ ಸಂಘಟನೆ ಮಾಡಿ ಮತ್ತೆ ಅಧಿಕಾರದ ಗದ್ದುಗೆ ಏರುತ್ತೇವೆ ಎಂದು ಹೇಳಿದರು. ಕಾಂಗ್ರೆಸ್ ಮುಂದಿನ ಸಿಎಂ ಅಭ್ಯರ್ಥಿ ಚರ್ಚೆ ಸದ್ಯ ಅಪ್ರಸ್ತುವಾಗಿದೆ …

Read More »

ಚಾಮರಾಜ ನಗರ M.B.B.S.ಕಾಲೇಜಿನಲ್ಲಿ ಚಿರತೆ

ಚಾಮರಾಜನಗರ: ಕರ್ನಾಟಕದ ಚಾಮರಾಜನಗರ ಜಿಲ್ಲೆಯ ವೈದ್ಯಕೀಯ ಕಾಲೇಜಿನ ಹಾಸ್ಟೇಲ್‍ನಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಚಿರತೆ ಕಾಲೇಜಿನ ಕ್ಯಾಂಪಸ್‍ನಲ್ಲಿ ನಡೆದಾಡುತ್ತಿರು ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಮುಖ್ಯ ದ್ವಾರದ ಮೂಲಕ ಹಾಸ್ಟೆಲ್ ಗೆ ಚಿರತೆ ಪ್ರವೇಶ ಪಡೆದಿದೆ. ಹಾಸ್ಟೆಲ್ ಸಿಸಿಟಿವಿ ಕ್ಯಾಮೆರಾದಲ್ಲಿ ಚಿರತೆಯ ಓಡಾಟದ ದೃಶ್ಯ ಸೆರೆಯಾಗಿದೆ. ಹಾಸ್ಟೆಲ್ ಒಳನುಗ್ಗಿದ ಚಿರತೆ ಸಿಬ್ಬಂದಿಯ ಶಬ್ದ ಕೇಳಿ ಮತ್ತೆ ಹೊರಹೋಗಿದೆ. ಇದರಿಂದ ಹಾಸ್ಟೆಲ್ ವಿದ್ಯಾರ್ಥಿಗಳು, …

Read More »

ಗೋಕಾಕ ಅಭಿವೃದ್ದಿಗೆ 100 ಕೋಟಿ ಪ್ರಸ್ತಾವಣೆ, ಶೀಘ್ರ ಅನುದಾನ ಸಿಗುವ ನಿರೀಕ್ಷೆಯಿದೆ : ಸಚಿವ ರಮೇಶ ಜಾರಕಿಹೊಳಿ

ಗೋಕಾಕ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಿ.ಸಿ. ರಸ್ತೆ, ಚರಂಡಿ, ಪ್ರೀಕಾಸ್ಟ್ ಪೇವರ್ಸ್ ರಸ್ತೆ, ತೆರದ ಭಾಂವಿ, ಸಮುದಾಯ ಭವನ ಹಾಗೂ ಪಿಕ್-ಅಪ್ ನಿರ್ಮಾಣ ಕಾಮಗಾರಿಗಳನ್ನು ಆರಂಭಿಸಲಾಗಿದೆ ಎಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೆಶ ಜಾರಕಿಹೊಳಿ ಮಾಹಿತಿ ನೀಡಿದ್ದಾರೆ. 2019-20ನೇ ಸಾಲಿನ ವಿಶೇಷ ಘಟಕ (ಎಸ್‍ಸಿಪಿ) ಹಾಗೂ ಗಿರಿಜನ ಉಪಯೋಜನೆ (ಟಿಎಸ್‍ಪಿ) ಯೋಜನೆಗಳ ಅಡಿ 30 ಕೋಟಿ ರೂ. ಮತ್ತು ಅದೇ ಅವಧಿಯ ಉಳಿಕೆ ಅನುದಾನದಲ್ಲಿ 31.05 ಕೋಟಿ …

Read More »

ಹುಬ್ಬಳ್ಳಿಯ BRTS ಬಸ್ ಸಂಚಾರ ಮಾಡುವ ರಸ್ತೆಯಲ್ಲಿ ಖಾಸಗಿ ವಾಹನಗಳಿಗೆ ನಿಷೇದವಿದ್ದರೂ ಕೂಡಾ ಬೈಕ್ ಸವಾರನೊಬ್ಬ ಸಂಚಾರ ಮಾಡಲು ಹೋಗಿ ಅಪಘಾತವಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ

ಹುಬ್ಬಳ್ಳಿಯ BRTS ಬಸ್ ಸಂಚಾರ ಮಾಡುವ ರಸ್ತೆಯಲ್ಲಿ ಖಾಸಗಿ ವಾಹನಗಳಿಗೆ ನಿಷೇದವಿದ್ದರೂ ಕೂಡಾ ಬೈಕ್ ಸವಾರನೊಬ್ಬ ಸಂಚಾರ ಮಾಡಲು ಹೋಗಿ ಅಪಘಾತವಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.. ಹುಬ್ಬಳ್ಳಿಯ ವೈಷ್ಣವಿ ಕಾಲೇಜು ಬಳಿಯಲ್ಲಿ ಈ ಒಂದು ಘಟನೆ ನಡೆದಿದ್ದು,ಬೈಕ್ ಸವಾರನ ಅತಿಯಾದ ವೇಗವೇ ಈ ಅಪಘಾತಕ್ಕೆ ಕಾರಣವಾಗಿದೆ..ಅಷ್ಟೇ ಅಲ್ಲದೇ ಈ ರಸ್ತೆಯಲ್ಲಿ ಖಾಸಗಿ ವಾಹನಗಳ ಸಂಚಾರ ನಿಷೇಧಿಸಿದ್ದರು ಕೂಡಾ ಇದರ ಮೇಲೆ ಸಂಚಾರ ಮಾಡಿದ್ದಾನೆ.. ಚಿಗರಿ ಬಸ್ ಹಾಗೂ ಬೈಕ್ …

Read More »

ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾರೆಂದು, ಯುವಕರ ಗುಂಪೊಂದು ಕ್ಯಾಂಟೀನ್‍ಗೆ ನುಗ್ಗಿ ದಾಂಧಲೆ

ಮಡಿಕೇರಿ: ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾರೆಂದು, ಯುವಕರ ಗುಂಪೊಂದು ಕ್ಯಾಂಟೀನ್‍ಗೆ ನುಗ್ಗಿ ದಾಂಧಲೆ ಮಾಡಿರುವ ಘಟನೆ ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಬೈಲುಕುಪ್ಪೆಯಲ್ಲಿ ನಡೆದಿದೆ.ಗ್ರಾಮ ಪಂಚಾಯ್ತಿ ಚುನಾವಣೆ ಮುಗಿದರೂ ವೈಷಮ್ಯ ಮುಂದುವರಿದಿದೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದಿದ್ದಾರೆ. ಹೀಗಾಗಿ 12 ಯುವಕರು ಸೇರಿ ಕ್ಯಾಂಟೀನ್‍ಗೆ ನುಗ್ಗಿ ದಾಂಧಲೆ ಮಾಡಿದ್ದಾರೆ. ಕ್ಯಾಂಟೀನ್ ಮಾಲೀಕ ಅಸ್ಕರ್ ಅಲಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಜನವರಿ 3 ರಂದು ಕೊಡಗು ಜಿಲ್ಲೆ …

Read More »

ಬಿಗ್ ಬಾಸ್-8 ಸೀಸನ್ ಯಾವಾಗ ಪ್ರಾರಂಭ ಗೊತ್ತಾ..?

ಸಿನಿಮಾ ಡೆಸ್ಕ್ : ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಯಶಸ್ವಿಯಾಗಿ 7 ಸೀಸನ್ ಗಳನ್ನು ಮುಗಿಸಿ ಇದೀಗ 8 ನೇ ಸೀಸನ್ ಮೂಲಕ ಮತ್ತೆ ಕಿರುತೆರೆ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದೆ. ಬಿಗ್ ಬಾಸ್ ನ ಮೊದಲ ಸೀಸನ್ ನಿಂದಲೂ ನಿರೂಪಣೆ ಜವಾಬ್ದಾರಿ ಹೊತ್ತ ಕಿಚ್ಚ ಸುದೀಪ್ ಯಶಸ್ವಿಯಾಗಿ ಏಳು ಸೀಸನ್ ಪೂರೈಸಿದ್ದಾರೆ. ಇದೀಗ ಮತ್ತೆ ಸೀಸನ್ 8 ನ್ನು ಹೋಸ್ಟ್ ಮಾಡಲು ಕಿಚ್ಚ ಬರುತ್ತಿದ್ದಾರೆ. ಇನ್ನೂ, …

Read More »

ಜಾಡಿಸಿ ಒದ್ರೆ ಎಲ್ಲೋ ಹೋಗಿ ಬಿದ್ದಿರ್ತಿಯಾ’ : ಜಿ.ಪಂ ಎಇಇ ವಿರುದ್ಧ ಸಚಿವ ಮಾಧುಸ್ವಾಮಿ ಗರಂ

ತುಮಕೂರು : ಜಾಡಿಸಿ ಒದ್ರೆ ಎಲ್ಲೋ ಹೋಗಿ ಎಲ್ಲೋ ಬಿದ್ದಿರ್ತಿಯಾ ಎಂದು ಜಿಲ್ಲಾ ಪಂಚಾಯಿತಿ ಎಇಇ ವಿರುದ್ಧ ಸಚಿವ ಮಾಧುಸ್ವಾಮಿ ನಾಲಗೆ ಹರಿಬಿಟ್ಟಿರುವ ಘಟನೆ ನಡೆದಿದೆ. ತುಮಕೂರು ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಎಇಇ ರಂಗಸ್ವಾಮಿ ಜೊತೆ ಮಾತನಾಡುವಾಗ ಸಚಿವ ಜೆ.ಸಿ. ಮಾಧುಸ್ವಾಮಿ ಗರಂ ಆಗಿರುವ ಘಟನೆ ನಡೆದಿದ್ದು, ಸಭೆಯಲ್ಲಿ ಸಿಇಇ ವಿರುದ್ಧ ದರ್ಪದ ಮಾತುಗಳನ್ನಾಡಿದ್ದಾರೆ. ರಾಸ್ಕಲ್ ಕತ್ತೆ ಕಾಯೋಕೆ ಹೋಗು, ಜಾಡಿಸಿ ಒದ್ರೆ ಎಲ್ಲೋ …

Read More »

ಕೊರೋನಾ ದೃಢ ಗೋಕಾಕದಲ್ಲಿ ಎರಡು ಶಾಲೆಗಳು ಬಂದ್

  ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಮೂರು ಜನ ಶಿಕ್ಷಕರಿಗೆ ಕೊರಾನಾ ದೃಡವಾದ ಹಿನ್ನೆಲೆಯಲ್ಲಿ ಗೋಕಾಕ ತಾಲೂಕಿನ ಅದರಲ್ಲಿ ಶಾಲೆಗಳಾದ ಕನಸಗೇರಿ ಪ್ರಾಥಮಿಕ ಶಿಕ್ಷಕ ಹಾಗೂ ಹೀರೆನಂದಿ ಪ್ರೌಡಶಾಲೆಯ ಒರ್ವ ಶಿಕ್ಷಕನಿಗೆ ಕೊರಾನಾ ಪೊಸಿಟೀವ್ ದೃಡವಾದ ಹಿನ್ನೆಲೆ ಇಬ್ಬರು ಶಿಕ್ಷಕರು ಸೆಲ್ಪ್ ಹೋಮ್ ಕ್ವಾರೈಂಟೈನ್ ಆಗಿದ್ದು, ಈ ಗ್ರಾಮದ ಎರಡು ಶಾಲೆಗಳನ್ನು ಮೂರು ದಿನ ಬಂದ್ ಮಾಡಿ ಪ್ರಾರಂಭ ಮಾಡುವದಕ್ಕಿಂತ ಮುಂಚೆ ಸ್ಥಳಿಯ ಗ್ರಾಮ ಪಂಚಾಯತಿಯವರಿಂದ ಆ ಶಾಲೆಗಳಿಗೆ ಸಾನಿಟೈಜರ ಮಾಡಿಸಿ …

Read More »

ನಿಂತಿದ್ದ ಲಾರಿಗೆ ಒಮನಿ ಡಿಕ್ಕಿ ಕರೆ ಮಾಡಿ ಸುಮಾರು ಗಂಟೆಗಳ ಆದ್ರೂ ಸ್ಪಂದಿಸದ ಆಂಬ್ಯುಲೆನ್ಸ್ ಮೂವರು ಸಾವಿಗೀಡಾಗಿರುವ ದುರ್ಘಟನೆ

ಚಿತ್ರದುರ್ಗ: ನಿಂತಿದ್ದ ಲಾರಿಗೆ ಓಮ್ನಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವಿಗೀಡಾಗಿರುವ ದುರ್ಘಟನೆ ಚಿತ್ರದುರ್ಗ ತಾಲೂಕಿನ ಕ್ಯಾದಿಗ್ಗೆರೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ. ದಾವಣಗೆರೆಯಿಂದ ಬೆಂಗಳೂರಿಗೆ ಹೊರಟಿದ್ದ ಓಮ್ನಿ ಚಿತ್ರದುರ್ಗ ತಾಲೂಕಿನ ಕ್ಯಾದಿಗ್ಗೆರೆ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ರೇಣುಕಮ್ಮಾ (55) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಶಂಕರ್ ಪುಟ್ಟಿಲಿಂಗಯ್ಯ(39) ಹಾಗೂ ಶಿವರಾಜ್(55) ಸಾವನ್ನಪ್ಪಿದ್ದಾರೆ. ಒಟ್ಟು ಮೂವರು ಮೃತಪಟ್ಟಿದ್ದಾರೆ. ಈ ವೇಳೆ …

Read More »