Breaking News

ರಾಜ್ಯ

ಫೆಬ್ರವರಿ 14ಕ್ಕೆ ‘ಲವ್ ಮಾಕ್‌ಟೇಲ್ 2’ ಚಿತ್ರದ ಹಾಡು ಬಿಡುಗಡೆ

ನಟ ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ ನಾಯಕನಾಗಿ ನಟಿಸಿದ ‘ಲವ್ ಮಾಕ್‌ಟೇಲ್’ ಸಿನಿಮಾ ಸಿನಿ ಪ್ರೇಕ್ಷಕರ ಗಮನ ಸೆಳೆದಿತ್ತು. ಈ ಚಿತ್ರದ ಮೂಲಕ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಸಾಕಷ್ಟು ಜನಪ್ರಿಯತೆ ಪಡೆದರು. ಇದೀಗ ‘ಲವ್ ಮಾಕ್‌ಟೇಲ್ 2’ ಸಿನಿಮಾದ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು ಇದರ ಸಾಂಗ್ ವೊಂದನ್ನು ಫೆಬ್ರವರಿ 14ರಂದು ರಿಲೀಸ್ ಮಾಡಲಿದ್ದಾರೆ. ‘ಲವ್ ಮೊಕ್ಟೈಲ್ 2’ಚಿತ್ರದ ರೊಮ್ಯಾಂಟಿಕ್ ಹಾಡೊಂದನ್ನು ರಿಲೀಸ್ ಮಾಡುವ ಮೂಲಕ ಪ್ರೇಮಿಗಳ ದಿನದಂದು ಉಡುಗೊರೆಯಾಗಿ …

Read More »

ಲಂಚ ಪಡೆಯುವ ವೇಳೆ ಎಸಿಬಿ ಅಧಿಕಾರಿಗಳಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಅಧಿಕಾರಿ ಹಾಗೂ ಕಾನ್ಸ್ಟೇಬಲ್

ಬೆಂಗಳೂರು: ಜಮೀನುದಾರರೊಬ್ಬರ ಬಳಿ ಲಂಚಕ್ಕೆ ಬೇಡಿಕೆ ಇಟ್ಟು ಸಿಕ್ಕಿಬಿದ್ದ ರೆವಿನ್ಯೂ‌ಇನ್ಸ್ ಪೆಕ್ಟರ್ ಹಾಗೂ ಚಿಕ್ಕಜಾಲ ಹೆಡ್ ಕಾನ್ಸ್​ಟೇಬಲ್ ರಾಜು ಎಂಬುವವರನ್ನು ಎಸಿಬಿ ಅಧಿಕಾರಿಗಳು ಭರ್ಜರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಜಮೀನು ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರರು ವ್ಯಾಜ್ಯ ಪ್ರಕರಣದಲ್ಲಿ ಸಿಲುಕಿದ್ದರು. ಇದನ್ನು ಇತ್ಯರ್ಥಪಡಿಸಲು ಆರ್ ಐ ಪುಟ್ಟಹನುಮಯ್ಯ 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಜೊತೆಗೆ ಜಮೀನಿನ ವಿಚಾರಕ್ಕೆ ಸಂಬಂಧಪಟ್ಟಂತೆ ರಕ್ಷಣೆ ನೀಡಲು ಹೆಡ್ ಕಾನ್ಸ್​ಟೇಬಲ್ ರಾಜು 6 ಲಕ್ಷ ಹಣದ ಬೇಡಿಕೆ …

Read More »

ಬೆಂಗಳೂರಿನ ಸ್ಲಿಪ್ ಕಾರ್ಟ್ ಮತ್ತು ಸ್ವಿಗ್ಗಿ ಸಂಸ್ಥೆಗಳ ಮೇಲೆ ಐಟಿ ದಾಳಿ

ಬೆಂಗಳೂರು : ಇಂದು ಸ್ಲಿಪ್ ಕಾರ್ಟ್ ಮತ್ತು ಸ್ವಿಗ್ಗಿ ಸಂಸ್ಥೆಗಳ ಬೆಂಗಳೂರಿನ ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ, ಶೋಧಿಸಿದರು. ತೆರಿಗೆ ವಂಚನೆ ಆರೋಪ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ವರದಿಗಳು ಹೇಳುತ್ತಿವೆ. ಸ್ಥಳೀಯವಾಗಿ ಆಹಾರ ವಿತರಣೆ ಮಾಡುವ ಸ್ವಗ್ಗಿ ಹಾಗೂ ಅಮೆರಿಕದ ವಾಲ್‌ಮಾರ್ಟ್ ಒಡೆತನದ ಫಿಪ್‌ಕಾರ್ಟ್ ಯಲ್ಲಿ ಮೂರನೇ ವ್ಯಕ್ತಿಗಳಿಂದ ತೆರಿಗೆ ವಂಚನೆ ಆಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ …

Read More »

ಬೀಫ್ ಮಾರ್ಕೆಟ್ ನಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು ಕೂಡಲೇ ಇದರ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯ

ಬೆಳಗಾವಿ-ಬೆಳಗಾವಿ ನಗರದ ಹೃದಯ ಭಾಗದಲ್ಲಿ ಭೀಫ್ ಮಾರ್ಕೆಟ್ ಇದ್ದು ಇದನ್ನು ಕೂಡಲೇ ನಗರ ಹೊರ ವಲಯದಲ್ಲಿ ಸ್ಥಳಾಂತರ ಮಾಡಬೇಕೆಂದು ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯೆ ಡಾ.ಸೋನಾಲಿ ಸರ್ನೋಬತ್ ಒತ್ತಾಯಿಸಿದ್ದಾರೆ. ಇಂದು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರನ್ನು ಭೇಟಿಯಾದ ಡಾ.ಸೋನಾಲಿ ನಗರದ ಮದ್ಯಭಾಗದಲ್ಲಿ ಬೀಫ್ ಮಾರ್ಕೆಟ್ ಇರುವದರಿಂದ ಸಾರ್ವಜನಿಕರಿಗೆ ಇದರ ದುರ್ವಾಸನೆ ಸಹಿಸಲು ಆಗುತ್ತಿಲ್ಲ,ಬಸ್ ನಿಲ್ಧಾಣದ ಹತ್ತಿರದಲ್ಲೇ ಬೀಫ್ ಮಾರ್ಕೆಟ್ ಇರುವದರಿಂದ ಸಾರ್ವಜನಿಕರಿಗೆ ತೊಂದರೆ …

Read More »

BREAKING : ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲು

ಮಡಿಕೇರಿ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೊಡವರು ಗೋ ಮಾಂಸ ತಿನ್ನುತ್ತಾರೆ ಎಂಬುದಾಗಿ ಇತ್ತೀಚಿಗೆ ಹೇಳಿಕೆ ನೀಡಿದ್ದರು. ಇದರಿಂದಾಗಿ ಕೊಡವರ ಭಾವನೆಗೆ ಧಕ್ಕೆಯಾಗಿದೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ವ್ಯಕ್ತಿಯೊಬ್ಬರು ದೂರು ನೀಡಿದ ಹಿನ್ನಲೆಯಲ್ಲಿ, ಅವರ ವಿರುದ್ಧ ಇದೀಗ ಎಫ್ ಐ ಆರ್ ದಾಖಲಾಗಿದೆ. ಕೊಡವರು ಗೋಮಾಂಸ ತಿನ್ನುತ್ತಾರೆಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯಿಂದಾಗಿ ಕೊಡವರ ಭಾವನಗೆ ಧಕ್ಕೆಯಾಗಿದೆ ಎಂಬುದಾಗಿ …

Read More »

ಖ್ಯಾತ ಕಮಿಡಿಯನ್, ನಟ ಕಪಿಲ್ ಶರ್ಮಾ ಗೆ ಮುಂಬೈನ ಕ್ರೈಂ ಬ್ರ್ಯಾಂಚ್ ಪೊಲೀಸರು ಸಮನ್ಸ

ಖ್ಯಾತ ಕಮಿಡಿಯನ್, ನಟ ಕಪಿಲ್ ಶರ್ಮಾ ಗೆ ಮುಂಬೈನ ಕ್ರೈಂ ಬ್ರ್ಯಾಂಚ್ ಪೊಲೀಸರು ಸಮನ್ಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಕಮಿಡಿಯನ್ ಕಪಿಲ್ ಶರ್ಮಾ, ಕಾರ್ ಡಿಸೈನರ್ ಒಬ್ಬರ ಮೇಲೆ ವಂಚನೆ ಪ್ರಕರಣ ದಾಖಲಿಸಿದ್ದರು. ಇದೇ ಪ್ರಕರಣ ಸಂಬಂಧ ಕಪಿಲ್ ಶರ್ಮಾ ಅವರನ್ನು ವಿಚಾರಣೆಗೆ ಕರೆದಿದ್ದಾರೆ ಪೊಲೀಸರು. ಕಾರು ಡಿಸೈನ್‌ ಸಂಸ್ಥೆ ಡಿಸಿ ಡಿಸೈನ್ ಸ್ಟುಡಿಯೋ ಮಾಲೀಕ ದಿಲಿಪ್ ಛಬ್ರಿಯಾ ವಿರುದ್ಧ ಪ್ರಕರಣ ದಾಖಲಿಸಿದ್ದರು ಕಪಿಲ್ …

Read More »

ಮನೆ ಕಟ್ಟೋರಿಗೆ ಶುಭಸುದ್ದಿ : ಕಡಿಮೆಯಾಗಲಿದೆ ಜಲ್ಲಿಕಲ್ಲು, ಎಂಸ್ಯಾಂಡ್ ಮರಳು ಬೆಲೆ

ಬೆಂಗಳೂರು : ರಾಜ್ಯ ಹೈಕೋರ್ಟ್ ಜಲ್ಲಿಕಲ್ಲು, ಎಂಸ್ಯಾಂಡ್‌ಗೆ ವಿಧಿಸಲಾಗುತ್ತಿದ್ದಂತ ಅಂತಾರಾಜ್ಯ ತೆರಿಗೆ ರದ್ದುಪಡಿಸಿದೆ. ಹೀಗಾಗಿ ರಾಜ್ಯದಲ್ಲಿ ಜಲ್ಲಿ ಕಲ್ಲು, ಎಂಸ್ಯಾಂಡ್ ಮರಳಿನ ದರದಲ್ಲಿ ಮತ್ತಷ್ಟು ಕಡಿಮೆ ಆಗುವ ಸಾಧ್ಯತೆ ಇದೆ. ಈ ಮೂಲಕ ಮನೆ ಕಟ್ಟೋರಿಗೆ ಗುಡ್ ನ್ಯೂಸ್ ದೊರೆತಂದೆ ಆಗಿದೆ. ಕರ್ನಾಟಕ ಹೈಕೋರ್ಟ್, ಜಲ್ಲಿಕಲ್ಲು, ಎಂಸ್ಯಾಂಡ್‌ಗೆ ಅಂತಾರಾಜ್ಯ ತೆರಿಗೆ ರದ್ದುಪಡಿಸಬೇಕೆಂದು ಆದೇಶ ನೀಡಿದೆ. ರಾಜ್ಯಸರ್ಕಾರದ ತಿದ್ದುಪಡಿಯನ್ನು ರದ್ದುಪಡಿಸಿರುವ ಉಚ್ಛನ್ಯಾಯಾಲಯ ಸರ್ಕಾರಕ್ಕೆ ತೆರಿಗೆ ವಿಧಿಸುವ ಅಧಿಕಾರವಿಲ್ಲವೆಂದು ತೀರ್ಪು ನೀಡಿದೆ. 2020ರ …

Read More »

ಯುವರಾಜ್ ವಂಚನೆ ಪ್ರಕರಣ; ವಿಚಾರಣೆಗೆ ಹಾಜರಾಗುವಂತೆ ನಟಿ ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ನೋಟಿಸ್

ಬೆಂಗಳೂರು; ರಾಜಕೀಯ ನಾಯಕರ ಹೆಸರು ಹೇಳಿಕೊಂಡು ಪ್ರಭಾವಿಗಳಿಗೂ ಕೋಟ್ಯಂತರ ರೂ. ವಂಚನೆ ಮಾಡಿದ್ದ ಆರೋಪದಲ್ಲಿ ಮೇಲೆ ಯುವರಾಜ್ ಎಂಬಾತನನ್ನು ಸಿಸಿಬಿ ಬಂಧಿಸಿದೆ. ಸಿಸಿಬಿ ವಶದಲ್ಲಿರುವ ಯುವರಾಜ್ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಯುತ್ತಿದೆ. ಈ ಪ್ರಕರಣದಲ್ಲಿ ಸ್ಯಾಂಡಲ್​ವುಡ್​ನ ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ಹಾಗೂ ಅವರ ಸಹೋದರ ರವಿರಾಜ್​ ಅವರ ಹೆಸರು ಕೇಳಿ ಬಂದಿದೆ.  ಈ ಹಿಂದೆ ಸಿಸಿಬಿ ಪೊಲೀಸರು ನಟಿ ರಾಧಿಕಾ ಅವರ ಸಹೋದರ ರವಿರಾಜ್​ ಅವರನ್ನು …

Read More »

ಬ್ಯಾಂಕ್ ಲೂಟಿ ಮಾಡಿದ ದರೋಡೆಕೋರನೊಬ್ಬ ಕೇವಲ ಫಿಂಗರ್ ಪ್ರಿಂಟ್ ಸುಳಿವಿನ ಮೇಲೆ ಸಿಕ್ಕಿಬಿದ್ದಿದ್ದಾನೆ.

ಬೆಳಗಾವಿ- ಬ್ಯಾಂಕ್ ಲೂಟಿ ಮಾಡಿದ ದರೋಡೆಕೋರನೊಬ್ಬ ಕೇವಲ ಫಿಂಗರ್ ಪ್ರಿಂಟ್ ಸುಳಿವಿನ ಮೇಲೆ ಸಿಕ್ಕಿಬಿದ್ದಿದ್ದಾನೆ. ಈತ ಆರುವರೆ ಲಕ್ಷ ರೂ.ಕಿಮ್ಮತ್ತಿನ,ಹೈಟೇಕ್ ಹಾರ್ಲೇ ಡೆವಿಡ್ ಸನ್ಸ್ ಕಂಪನಿಯ ಬೈಕ್ ಹತ್ತಿ ಓಡಾಡುತ್ತಿದ್ದ ಬೆಳಗಾವಿಯ ಮಹಾಂತೇಶ ನಗರದಲ್ಲಿರುವ ಕಿತ್ತೂರು ಚನ್ನಮ್ಮಾ ಕೋ ಆಪರೇಟೀವ್ ಅರ್ಭನ್ ಬ್ಯಾಂಕನ್ನು ಲೂಟಿ ಮಾಡಿದ್ದ,ಕೇವಲ ಫಿಂಗರ್ ಪ್ರೀಂಟ್ ಆಧಾರದ ಮೇಲೆ ಬೆಳಗಾವಿಯ ಮಾಳಮಾರುತಿ ಠಾಣೆಯ ಪೋಲೀಸರು ಯಶಸ್ವಿಯಾಗಿದ್ದಾರೆಮುಜಫರ್ ಮಹ್ಮದ ಶೇಖ ಈತ ಮೂಲತಹ ದಾಂಡೆಲಿ,ಬೆಳಗಾವಿಯ ಸುಭಾಷ ನಗರ ಹಾಲಿ …

Read More »

ಬೆಳಗಾವಿ ಕೋಟೆ ಕೆರೆಯಲ್ಲಿ ಅಪರಿಚಿತ ಶವ ಪತ್ತೆ

ಬೆಳಗಾವಿ : ಇಲ್ಲಿನ ಕೋಟೆ ಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಇಂದು ಮಧ್ಯಾಹ್ನ ಪತ್ತೆಯಾಗಿದ್ದು, ಅಲ್ಲಿಗೆ ಬರುವ ವಾಯು ವಿಹಾರಿಗಳಿಗೆ ಆತಂಕ ಮನೆ ಮಾಡಿದೆ.   ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಾರ್ಕೇಟ್ ಠಾಣೆ ಪೊಲೀಸರು ಭೇಟಿ ನೀಡಿ, ಶವವನ್ನು ಕೆರೆಯಿಂದ ಹೊರಗೆ ತೆಗೆಯಲಾಗಿದೆ. ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ತನಿಖೆಯ ಬಳಿಕವೇ ಸತ್ಯ ತಿಳಿಯಬೇಕಾಗಿದೆ. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More »