Breaking News

ರಾಜ್ಯ

ಜಾರಕಿಹೊಳಿ ಕುಟುಂಬಕ್ಕೆ ಜನಸಂಘದ ನಂಟು; ಸಹೋದರರ ನಡುವೆ ಟಾಕ್ ವಾರ್

ಬೆಳಗಾವಿ(ಜ. 15): ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಬಿಜೆಪಿಯಲ್ಲಿ ಅನೇಕ ಶಾಸಕರು ಅಸಮಾಧಾನ, ಆಕ್ರೋಶ ಹಾಗೂ ಸಿಟ್ಟನ್ನು ಹೊರ ಹಾಕುತ್ತಿದ್ದಾರೆ. ಆದರೇ ಜಾರಕಿಹೊಳಿ ಸಹೋದರರು ಮಾತ್ರ ಕುಟುಂಬಕ್ಕೆ ಜನಸಂಘದ ನಂಟಿನ ವಿಚಾರವಾಗಿ ವಾಗ್ವಾದ ನಡೆಸುತ್ತಿದ್ದಾರೆ. ಸಚಿವ ರಮೇಶ ಜಾರಹೊಳಿ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನಡುವೆ ಪರಸ್ಪರ ಆರೋಪ, ಪ್ರತ್ಯಾರೋಪ ನಡೆಯುತ್ತಿವೆ.  ನಾವಗೆ ಗ್ರಾಮದಲ್ಲಿ ಇತ್ತೀಚಿಗೆ ನಡೆದ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದ ಸಚಿವ ರಮೇಶ ಜಾರಕಿಹೊಳಿ, ನಾನು ಓರಿಜನಲ್ …

Read More »

ಕಮಲ್ ಹಾಸನ್ ಎಂ.ಎನ್.ಎಂ. ಪಕ್ಷಕ್ಕೆ ಟಾರ್ಚ್ ಲೈಟ್ ಚಿಹ್ನೆ ನೀಡಿದ ಚುನಾವಣಾ ಆಯೋಗ

ಚೆನ್ನೈ: ರಾಜಕಾರಣಿಯಾಗಿ ಬದಲಾದ ನಟ ಕಮಲ್ ಹಾಸನ್ ಸ್ಥಾಪಿಸಿದ ರಾಜಕೀಯ ಪಕ್ಷ ಮಕ್ಕಳ್ ನೀಧಿ ಮಯ್ಯಂಗೆ ಭಾರತ ಚುನಾವಣಾ ಆಯೋಗ ಟಾರ್ಚ್ ಲೈಟ್ ಚಿಹ್ನೆಯನ್ನು ನೀಡಿದೆ. ಕಮಲ್ ಹಾಸನ್ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಿ, ಎಲ್ಲಾ 234 ಕ್ಷೇತ್ರಗಳಲ್ಲಿ ಟಾರ್ಚ್ ಲೈಟ್ ಚಿಹ್ನೆಯನ್ನು ತಮ್ಮ ಪಕ್ಷಕ್ಕೆ ನೀಡಲಾಗಿದೆ ಎಂದು ಘೋಷಿಸಿದ್ದಾರೆ. “ಎಂಎನ್‌ಎಂ ಪಕ್ಷಕ್ಕೆ ಟಾರ್ಚ್ ಲೈಟ್ ಚಿಹ್ನೆಯನ್ನು ನೀಡಲಾಗಿದೆ ಎಂದು ತಿಳಿಸಲು ನನಗೆ ಸಂತೋಷವಾಗಿದೆ” ಎಂದು ಅವರು …

Read More »

ಖಾಸಗಿ ಶಾಲೆಗಳ ಫೀ ಕಿರಿಕಿರಿ

ಬೆಂಗಳೂರು : ಖಾಸಗಿ ಶಾಲೆಗಳಲ್ಲಿ‌ ಶುಲ್ಕ ವಿಚಾರ ಕುರಿತು ಸರ್ಕಾರ ಸಭೆ ನಡೆಸಿದ್ದು, ಶುಲ್ಕ ಎಷ್ಟೇ ಇರಲಿ ಶೇ.25 ರಷ್ಟು ಕಡಿತ ಮಾಡಿಕೊಳ್ಳಲು ಸಲಹೆ ನೀಡಿದೆ. ಖಾಸಗಿ ಶಾಲೆಗಳಲ್ಲಿ‌ ಶುಲ್ಕ ವಿಚಾರ ಕುರಿತು ಇಂದು  ಬೆಂಗಳೂರಿನ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಸಭೆ ನಡೆದಿದ್ದು, ಈ ಬಗ್ಗೆ ಸುದೀರ್ಘ ಚರ್ಚೆಗಳು ನಡೆದಿವೆ. ಶುಲ್ಕ ಕಟ್ಟದಿದ್ದರೆ ಆನ್‌ಲೈನ್‌ ಕ್ಲಾಸ್‌ ಬಂದ್: ರಾಜ್ಯ ಸರ್ಕಾರದ ಆದೇಶಕ್ಕೆ ಸಡ್ಡು! ಶುಲ್ಕ ಎಷ್ಟೇ ಇರಲಿ ಶೇ.25 ರಷ್ಟು …

Read More »

ಮುಕ್ಕಲ್ ಗೊಂದೆ ಜನರಲ್: 28ಗ್ರಾಪಂ ಗಳಲ್ಲಿ 14 ಮಹಿಳಾ ಅಧ್ಯಕ್ಷರೇ ಆಗೋದು..!

ಧಾರವಾಡ: ಜಿಲ್ಲೆಯ ಕಲಘಟಗಿ ತಾಲೂಕಿನ 28 ಗ್ರಾಮ ಪಂಚಾಯತಿಗಳ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಪ್ರಕ್ರಿಯೆ ಪಟ್ಟಣದ ಗುಡ್ ನ್ಯೂಸ್ ಕಾಲೇಜಿನಲ್ಲಿ ನಡೆಯಿತು. ತಾಲೂಕಿನ 28 ಗ್ರಾಮ ಪಂಚಾಯತಿಗಳಿಗೂ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಮೀಸಲಾತಿ ಆಯ್ಕೆಯಲ್ಲಿ ಮಿಶ್ರಿಕೋಟಿ ಗ್ರಾಮ ಪಂಚಾಯತಿ ಅಧ್ಯಕ್ಷಗಿರಿಗೆ ಮಹಿಳಾ ಎಸ್ಸಿ, ಉಪಾಧ್ಯಕ್ಷ ಸ್ಥಾನಕ್ಕಾಗಿ ಮಹಿಳಾ ಕೆಟಗೇರಿ ‘ಎ’ ಮೀಸಲಾತಿ ದೊರಕಿದೆ. ಇನ್ನೂ ಮುಂದೆ ಮಿಶ್ರಿಕೋಟಿಯಲ್ಲಿ ಮಹಿಳಾ ಮೆಂಬರಗಳು ಅಧಿಕಾರ ನಡೆಸಲಿದ್ದಾರೆ. ಗಂಜಿಗಟ್ಟಿ ಗ್ರಾಮ ಪಂಚಾಯತಿಯಲ್ಲೂ ಮಹಿಳಾ ಸದಸ್ಯರೇ …

Read More »

ಸಚಿವರಾದ ಶ್ರೀ ರಮೇಶ ಜಾರಕಿಹೊಳಿ ಅವರಿಂದ ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ

  ರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ಇದರ ವತಿಯಿಂದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಪ್ರಭು ಶ್ರೀ ರಾಮಚಂದ್ರನ ಭವ್ಯ ಮಂದಿರ.ನಿಧಿ ಸಮರ್ಪಣಾ ಅಭಿಯಾನವನ್ನು ಗೋಕಾಕ ನಗರದ ವಾರ್ಡಗಳಿಗೆ ಇಂದು ಅಧಿಕೃತವಾಗಿ ಸಚಿವರಾದ ಶ್ರೀ ರಮೇಶ ಜಾರಕಿಹೊಳಿಯವರು ಗೋಕಾಕ ಜಾತ್ರಾ ಕಮಿಟಿ ವತಿಯಿಂದ 1ಲಕ್ಷರೂ ದೇಣಿಗೆ ನೀಡಿ ಅಭಿಯಾನಕ್ಕೆ ಚಾಲನೆ ನೀಡಿದರು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶೂನ್ಯ ಸಂಪಾದ ಮಠದ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಮಾನ್ಯ ವಿಭಾಗ ಸಂಘ ಚಾಲಕರಾದ …

Read More »

ನಾಳೆಯಿಂದ ಕೋವಿಡ್ ಲಸಿಕೆ ಹಂಚಿಕೆ: ಗೋಕಾಕನಲ್ಲಿ 45 ಕೇಂದ್ರ ಆರಂಭ

ಗೋಕಾಕ: ನಾಳೆಯಿಂದ ತಾಲೂಕಿನಾದ್ಯಂತ ಕೋವಿಡ್ ಲಸಿಕಾ ಕೇಂದ್ರ ಆರಂಭವಾಗಲಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ರವೀಂದ್ರ ಅಂಟಿನ ಹೇಳಿದರು. ನಗರದಲ್ಲಿ ಇಂದು ತಾಲೂಕು ಮುಖ್ಯವೈದ್ಯಾಧಿಕಾರಿಗಳಾದ ಡಾ. ರವೀಂದ್ರ ಅಂಟಿನ, ಡಾ. ಮುತ್ತಪ್ಪ ಕೊಬ್ಬದ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ತಾಲೂಕಿನಾದ್ಯಂತ ಸುಮಾರು 45 ಕಡೆ ಕೋವಿಡ್ ಲಸಿಕಾ ಕೇಂದ್ರ ಆರಂಭಿಸಲಾಗಿದೆ. ವೈದ್ಯರು, ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಸಿಬ್ಬಂದಿ ಬಳಕೆ ಮಾಡಿಕೊಂಡು ಪ್ರತಿಯೊಬ್ಬರಿಗೂ ಲಸಿಕೆ ವಿತರಿಸುವ ಕೆಲಸ ಮಾಡಲಾಗುತ್ತದೆ …

Read More »

ಶೂಟಿಂಗ್ ವೇಳೆ ಬಾವಿಗೆ ಬಿದ್ದ ನಮಿತಾ :ಪೋಟೊ ವೈರಲ್

ದಕ್ಷಿಣ ಭಾರತದ ಅನೇಕ ಚಿತ್ರಗಳಲ್ಲಿ ನಟಿಸಿದ್ದ ನಟಿ ನಮಿತಾ ಚಿತ್ರರಂಗದಿಂದ ಸ್ವಲ ದಿನಗಳ ಕಾಲ ದೂರವುಳಿದಿದ್ದರು. ಇದೀಗ ಬೌ ಬೌ ಎಂಬ ಚಿತ್ರದಲ್ಲಿ ನಟಿಸುತ್ತಿರುವ ನಮಿತಾ ಶೂಟಿಂಗ್ ವೇಳೆ ಬಾವಿಗೆ ಬಿದ್ದಿದ್ದು, ಈ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಂದಹಾಗೆ ನಮಿತ ನಿಜವಾಗಿಯೂ ಬಾವಿಗೆ ಬಿದ್ದಿರಲಿಲ್ಲ. ಇದು ಬೌ ಬೌ ಚಿತ್ರದ ಒಂದು ದೃಶ್ಯವಷ್ಟೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ನಟಿ ನಮಿತಾ ಬಾವಿಗೆ ಬಿದ್ದಿದ್ದಾರೆ ಎಂದು ವೈರಲ್ …

Read More »

ಅಮಿತ್ ಷಾ ಕಾರ್ಯಕ್ರಮಕ್ಕೆ ಲೇಡಿ ಸಿಂಗಂ ಸೀಮಾ ಲಾಟ್ಕರ್ ಭದ್ರತೆ..ಡಿಜಿಪಿ ಆದೇಶ

ಇದೇ ಜನವರಿ 16 ಮತ್ತು 17ರಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಬೆಳಗಾವಿಗೆ ಆಗಮಿಸುತ್ತಿರುವ ಹಿನ್ನೆಲೆ ಅಸಿಸ್ಟಂಟ್ ಇನ್ಸಪೆಕ್ಟರ್ ಜನರಲ್ ಪೊಲೀಸ್ ಸೀಮಾ ಲಾಟ್ಕರ್‍ರನ್ನು ಬಂದೋಬಸ್ತ್ ಕರ್ತವ್ಯಕ್ಕಾಗಿ ಹೆಚ್ಚುವರಿ ಅಧಿಕಾರಿಯಾಗಿ ನೇಮಕ ಮಾಡಿ ಡಿಜಿಪಿ ಅವರು ಆದೇಶ ಹೊರಡಿಸಿದ್ದಾರೆ. ಹೌದು ಅಸಿಸ್ಟಂಟ್ ಇನ್ಸಪೆಕ್ಟರ್ ಜನರಲ್ ಪೊಲೀಸ್ ಸೀಮಾ ಲಾಟ್ಕರ್‍ರನ್ನು ಹೆಚ್ಚುವರಿ ಬಂದೋಬಸ್ತ್ ಕರ್ತವ್ಯ ಅಧಿಕಾರಿಯಾಗಿ ಡಿಜಿಪಿ ಪ್ರವೀಣ ಸೂದ್ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಬೆಳಗಾವಿ ಡಿಸಿಪಿಯಾಗಿ …

Read More »

ಧಾರವಾಡದ ಬಳಿ ಭೀಕರ ರಸ್ತೆ ಅಪಘಾತ ಐವರ ದುರ್ಮರಣ: ಹಲವರಿಗೆ ಗಾಯ

ಧಾರವಾಡ: ತಾಲೂಕಿನ ಇಟಿಗಟ್ಟಿ ಬಳಿ ಭೀಕರ ರಸ್ತೆ ಅಪಘಾತ ನಡೆದಿದ್ದು, ಐವರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಟೆಂಪೋ ಹಾಗೂ ಲಾರಿಯ ನಡುವೆ ಅಪಘಾತ ನಡೆದಿದ್ದು, ತೀವ್ರವಾಗಿ ಗಾಯಗೊಂಡಿರುವವರನ್ನ ಧಾರವಾಡ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗುತ್ತಿದೆ. ವಾಹನದಲ್ಲಿ ಇನ್ನೂ ಶವಗಳು ಸಿಲುಕಿಕೊಂಡಿದ್ದು, ಅವುಗಳನ್ನ ತೆಗೆಯಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಬೆಳಗಿನ ಜಾವ ಮೂರು ಗಂಟೆಗೆ ದಾವಣಗೆರೆಯಿಂದ ಹೊರಟಿದ್ದ ಟೆಂಪೋ ಧಾರವಾಡದ ಸಮೀಪ ಬಂದಾಗ ಈ …

Read More »

ಕೃಷಿಕಾಯ್ದೆಯ ಸಮಿತಿಯಿಂದ ಹೊರಬಂದ ಭೂಪಿಂದರ್ ಸಿಂಗ್ ಮಾನ್

ನವದೆಹಲಿ: ಕೃಷಿ ಕಾಯ್ದೆಯ ಹಿನ್ನೆಲೆಯಲ್ಲಿ ಉಂಟಾಗಿರುವ ರೈತರ ಹಾಗೂ ಕೇಂದ್ರದ ನಡುವಿನ ಬಿಕ್ಕಟ್ಟನ್ನು ಬಗೆಹರಿಸಲು ಸುಪ್ರೀಂ ಕೋರ್ಟ್ ನೇಮಕ ಮಾಡಿದ್ದ ನಾಲ್ಕು ಜನರ ಕಮಿಟಿಯಿಂದ ಹೊರಬರುವುದಾಗಿ ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ಭೂಪಿಂದರ್ ಸಿಂಗ್ ಮಾನ್ ತಿಳಿಸಿದ್ದಾರೆ. ಈ ಸಮಿತಿಯಲ್ಲಿನ ಸದಸ್ಯರು ಈ ಹಿಂದೆ ಕೇಂದ್ರದ ಕೃಷಿ ಕಾಯ್ದೆಯನ್ನು ಸ್ವಾಗತಿಸಿದ್ದರು ಎಂದು ರೈತ ಸಂಘಟನೆಗಳು ಹಾಗೂ ವಿರೋಧಪಕ್ಷಗಳು ಆರೋಪಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.   …

Read More »