Breaking News

ರಾಜ್ಯ

ಕರ್ತವ್ಯದ ಸಮಯದಲ್ಲಿ ಕ್ರಿಮಿನಲ್ ಜತೆಗೆ ಸಿಸಿಬಿ ಪೊಲೀಸರ ಎಣ್ಣೆ ಪಾರ್ಟಿ

ಮಂಗಳೂರು : ಕರ್ತವ್ಯದ ವೇಳೆಯಲ್ಲಿ ಬಾರಿನಲ್ಲಿ ಕ್ರಿಮಿನಲ್ ಹಿನ್ನಲೆ ಹೊಂದಿರುವ ವ್ಯಕ್ತಿಯೊಬ್ಬನೊಂದಿಗೆ ಮಂಗಳೂರು ಸಿಸಿಬಿ ಪೊಲೀಸರು ಎಣ್ಣೆ ಪಾರ್ಟಿ ಮಾಡಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪುಲ್ ವೈರಲ್ ಆಗಿದೆ. ಮಂಗಳೂರು ಸಿಸಿಬಿ ವಿಭಾಗದ ಎಂಟು ಮಂದಿ ಪೊಲೀಸರು ಮಂಗಳೂರು ಹೊರವಲಯದ ಕುತ್ತಾರು ಬಳಿಯ ಬಾರ್ ನಲ್ಲಿ ಎಣ್ಣೆ ಪಾರ್ಟಿ ಮಾಡಿದ್ದರು ಎನ್ನಲಾಗಿದೆ. ಬಾರ್ ಹೊರಗೆ ಸರಕಾರಿ ಟಿ.ಟಿ ವಾಹನ ನಿಲ್ಲಿಸಿ ಪಾರ್ಟಿ ನಡೆಸುತ್ತಿದ್ದರು ಎನ್ನಲಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ …

Read More »

ಗಾಂಧಿಯನ್ನು ಕೊಂದವರ ಪ್ರತಿಮೆ ಮಾಡಿ ಪೂಜಿಸುವ ಕೆಲಸ,ಇದಕ್ಕಿಂತ ದೇಶದ್ರೋಹ ಮತ್ತೊಂದಿಲ್ಲ: ಸಿದ್ದರಾಮಯ್ಯ

ಬೆಂಗಳೂರು: ಯಾವುದಕ್ಕಾಗಿ ಗಾಂಧೀಜಿ ಹೋರಾಟ ಮಾಡಿದ್ರು ಅದು ಈಗ ದೇಶದಲ್ಲಿ ನೆಲೆಸುತ್ತಿಲ್ಲ ಅಂತಾ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಇಂದು ರೈತ ಸಂಘಟನೆಗಳು ಆಚರಿಸುತ್ತಿರುವ ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗಾಂಧೀಜಿ ದೇಶದಲ್ಲಿ ಶಾಂತಿ ನೆಲೆಸಬೇಕು, ಎಲ್ಲರೂ ನೆಮ್ಮದಿಯಿಂದ ಬಾಳಬೇಕು, ಸೌಹಾರ್ದತೆ ನೆಲೆಸಬೇಕು ಎಂದುಕೊಂಡವರು. ಸ್ವಾತಂತ್ರ್ಯಕ್ಕಾಗಿ ಎಷ್ಟು ಹೋರಾಡಿದ್ರೋ ಅದಕ್ಕಿಂತಲೂ ಹೆಚ್ಚು ಶಾಂತಿ ಸೌಹಾರ್ದತೆಗಾಗಿ ಹೋರಾಡಿದವರು. ಗಾಂಧೀಜಿ ಜೊತೆಗೆ ಬಹಳಷ್ಟು ಜನ ಹೋರಾಟ ಮಾಡಿದ್ದಾರೆ, ಅವರನ್ನೂ ನಾವು ಸ್ಮರಿಸಬೇಕು …

Read More »

ಕುದುರೆ ರೇಸ್ ಜೂಜಾಟದಲ್ಲಿ ತೊಡಗಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಕುದುರೆ ರೇಸ್ ಜೂಜಾಟದಲ್ಲಿ ತೊಡಗಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಎಸ್. ಮಿಥುನ್ (33), ವಿ ರಘು (47), ಶಿವರಾಜು ಕೆ (30) ಬಂಧಿತ ಆರೋಪಿಗಳು. ಬಂಧಿತರಿಂದ 5. 5 ಲಕ್ಷ ರೂ. ಸೇರಿ 5 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ. ಆರೋಪಿಗಳು, ಲೈಸೆನ್ಸ್ ಇಲ್ಲದೆ ಸಾರ್ವಜನಿಕರಿಂದ ಹಣ ಕಟ್ಟಿಸಿಕೊಂಡು ಜೂಜಾಟ ನಡೆಸಿದ್ದರು. ಪೋಲೀಸರು ಖಚಿತ ಮಾಹಿತಿ …

Read More »

ಮಹಾ ಸಿಎಂ ಹೇಳಿಕೆ ಖಂಡಿಸಿ ಕನ್ನಡ ಪರ ಸಂಘಟನೆಗಳ ಭುಗಿಲೆದ್ದ ಆಕ್ರೋಶ: 1 ಲಕ್ಷ ಕನ್ನಡಿಗರೊಂದಿಗೆ ಮಹಾರಾಷ್ಟ್ರ ಗಡಿಗೆ ನುಗ್ಗಲು ಸಜ್ಜು

ಬೆಂಗಳೂರು: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆ ಖಂಡಿಸಿ ಕನ್ನಡ ಚಳುವಳಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಬಳಿ ಬೃಹತ್ ಪ್ರತಿಭಟನೆ ನಡೆಸಿದ್ದು, ರೈಲ್ವೆ ಚಳುವಳಿ ಆರಂಭಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು, ಬೆಳಗಾವಿ ನಮ್ಮದು, ರಾಜ್ಯದ ಒಂದಿಂಚು ಜಾಗವನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಎಂಇಎಸ್ ನಿಷೇಧ ಮಾಡಬೇಕು. …

Read More »

“ಕರ್ನಾಟಕಕ್ಕೆ ಮಹಾದಾಯಿ ನದಿಯ 1 ಹನಿ ನೀರನ್ನೂ ಕೊಡಲ್ಲ”

ಪಣಜಿ,ಜ.30- ನನ್ನ ಪಕ್ಷದವರೇ ಇರಲಿ ಅಥವಾ ಬೇರೆ ಯಾರೇ ಇರಲಿ ರಾಜ್ಯದ ಹಿತ ಕಡೆಗಣಿಸಿ ಮಹಾದಾಯಿ ನದಿಯಿಂದ ಒಂದೂ ಹನಿಯನ್ನೂ ಕರ್ನಾಟಕಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎನ್ನುವ ಮೂಲಕ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತೆ ಕ್ಯಾತೆ ತೆಗೆದಿದ್ದಾರೆ. ವಿರೋಧ ಪಕ್ಷಗಳು ವಿಧಾನಸಭೆಯಲ್ಲಿ ಮಂಡಿಸಿದ್ದ ನಿಲುವಳಿ ಸೂಚನೆ ಮೇಲೆ ಉತ್ತರಿಸಿರುವ ಪ್ರಮೋದ್ ಸಾವಂತ್, ಮಹದಾಯಿಯಿಂದ ನೀರು ಹರಿಸುವಂತೆ ನನ್ನ ಪಕ್ಷವೇ ನನ್ನ ಮೇಲೆ ಒತ್ತಡ ಹಾಕಿದರೂ ನಾನು ಭಾಗುವುದಿಲ್ಲ ಎಂದು …

Read More »

5 ಸಾವಿರ ಡೋಸ್‌ ಲಸಿಕೆ ವೇಸ್ಟ್‌!

ನವದೆಹಲಿ: ದೇಶದಲ್ಲಿ ಕೊರೊನಾ ಲಸಿಕೆ ವಿತರಣೆ ಅಭಿಯಾನ ಆರಂಭವಾ ದಾಗಿನಿಂದ ಈವರೆಗೆ ಅಂದರೆ ಜ.16ರಿಂದ 29ರವರೆಗೆ 5 ರಾಜ್ಯಗಳಲ್ಲಿ ಸುಮಾರು 5 ಸಾವಿರ ಡೋಸ್ ಗಳಷ್ಟು ಲಸಿಕೆ ವ್ಯರ್ಥವಾಗಿ ಹೋಗಿದೆ. ಈ ಪೈಕಿ ತ್ರಿಪುರಾ ಮೊದಲ ಸ್ಥಾನದಲ್ಲಿದ್ದು ಇಲ್ಲಿ ಶೇ.11ರಷ್ಟು ಲಸಿಕೆ ವೇಸ್ಟ್‌ ಆಗಿದೆ ಎಂದು ಹಿಂದುಸ್ತಾನ್‌ ಟೈಮ್ಸ್‌ನ ವರದಿ ತಿಳಿಸಿದೆ. ಲಸಿಕೆಯ ಒಂದು ಸೀಸೆ ತೆರೆದರೆ, ಅದನ್ನು 4 ಗಂಟೆಗಳ ಒಳಗಾಗಿ ಬಳಸಬೇಕು. ತದ ನಂತರ ಬಳಸುವಂತಿಲ್ಲ. ಆದರೆ, ಲಸಿಕೆ …

Read More »

ನೂತನ ಕೃಷಿ ಕಾಯ್ದೆ; ಹೋರಾಟದಿಂದ ಹಿಂದೆ ಸರಿದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ

ಪುಣೆ: ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ನೂತನ ಕೃಷಿ ಕಾಯ್ದೆ ವಿರುದ್ಧ ಶನಿವಾರ(ಜನವರಿ 30)ದಿಂದ ಧರಣಿ ನಡೆಸಲು ಮುಂದಾಗಿದ್ದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ದಿಢೀರ್ ಯೂಟರ್ನ್ ಹೊಡೆದಿದ್ದು, ಧರಣಿಯಿಂದ ಹಿಂದೆ ಸರಿದಿರುವುದಾಗಿ ತಿಳಿಸಿದ್ದಾರೆ.   ಬಿಜೆಪಿ ಹಿರಿಯ ಮುಖಂಡ, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಮ್ಮುಖದಲ್ಲಿ ತಮ್ಮ ನಿರ್ಧಾರವನ್ನು ಘೋಷಿಸಿದ್ದಾರೆ.ನಾನು ತುಂಬಾ ದೀರ್ಘಕಾಲದಿಂದ ಹಲವಾರು ಸಮಸ್ಯೆಗಳ ಬಗ್ಗೆ ಚಳವಳಿ …

Read More »

ಗೋಕಾಕದಲ್ಲಿ ಸರಕಾರಿ ವೈದ್ಯರಿಂದ ಪಲ್ಸ್ ಪೋಲಿಯೋ ಜಾಥಾ ಕಾರ್ಯಕ್ರಮ

ಗೋಕಾಕದಲ್ಲಿ ಗೋಕಾಕ ತಾಲೂಕಾ ಪ್ರಾಥಮಿಕ ಆರೋಗ್ಯ ಕೆಂದ್ರದ ವೈದ್ಯರು ಮತ್ತು ಆಶಾ ಕಾರ್ಯಕರ್ತೆಯರ ನೇತೃತ್ವದಲ್ಲಿ ಪಲ್ಸ್ ಪೋಲಿಯೋ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಗೋಕಾಕ ನಗರಸಭೆಯ ಆಯುಕ್ತರಾದ ಶಿವಾನಂದ ಹೀರೆಮಠ ಇವರು ರಿಬ್ಬನ್ ಕಟ್ ಮಾಡಿ ನಗರಸಭೆಯ ಉಪಾದಕ್ಷ ಬಸವರಾಜ ಆರೆನ್ನವರ ಇವರು ಬ್ಯಾಂಡ ಬಾರಿಸುವ ಮೂಲಕ‌ ಪಲ್ಸ್ ಪೋಲಿಯೋ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತರು ನಾಳೆ ದಿನ ಜನೆವರಿ 31 ರವಿವಾರದಂದು ಸ್ಥಳಿಯ ಪ್ರಾಥಮಿಕ …

Read More »

ರಾಮಮಂದಿರದ ತಾಂತ್ರಿಕ ಉಸ್ತುವಾರಿಯಾಗಿ ಕನ್ನಡಿಗ ಎಂಜಿನಿಯರ್

ಬೆಂಗಳೂರು – ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಭವ್ಯ ಶ್ರೀ ರಾಮಚಂದ್ರನ ದೇವಾಲಯದ ತಾಂತ್ರಿಕ ಉಸ್ತುವಾರಿಯಾಗಿ  ದೇಶದ ಹಿರಿಯ ಜಿಯೋ ಟೆಕ್ನಿಕಲ್ ಎಂಜಿನಿಯರ್, ಕನ್ನಡಿಗ ಪ್ರೊ. ಟಿ.ಜಿ. ಸೀತಾರಾಮ್ ನೇಮಕವಾಗಿದ್ದಾರೆ. ಗುವಾಹಟಿ ಐಐಟಿ ನಿರ್ದೇಶಕರಾಗಿರುವ ಚಿತ್ರದುರ್ಗ ಮೂಲದ ಪ್ರೊ. ಟಿ.ಜಿ. ಸೀತಾರಾಮ್, ಜಿಯೋ ಟೆಕ್ನಿಕಲ್ ಎಂಜಿನಿಯರಿಂಗ್ ನಲ್ಲಿ ನುರಿತ ತಜ್ಞರಾಗಿದ್ದು, ಇವರ ತಂಡದ ಸಲಹೆಯಂತೆಯೇ ಶ್ರೀ ರಾಮ ಮಂದಿರದ ತಳಪಾಯದ ಕೆಲಸ ನಡೆಯುತ್ತದೆ. ಇವರ ಮಾರ್ಗದರ್ಶನದಲ್ಲಿ ಭವ್ಯವಾದ, ಯಾವುದೇ ಕಂಪನಗಳಿಗೆ ಅಲುಗಾಡದ ಹಾಗೆ …

Read More »

ಬಸವರಾಜ ಬೊಮ್ಮಾಯಿ ಗಡಿ ಉಸ್ತುವಾರಿ ಸಚಿವರಾಗಲಿ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಪತ್ರೆ

ಬೆಳಗಾವಿ – ಗಡಿ ಉಸ್ತುವಾರಿ ಸಚಿವರನ್ನಾಗಿ ಬಸವರಾಜ ಬೊಮ್ಮಾಯಿ ಅವರನ್ನು ನೇಮಕ ಮಾಡಬೇಕು ಎಂದು ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದೆ. ಜೊತೆಗೆ, ಮಹಾರಾಷ್ಟ್ರದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದೆ. ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಈ ಪತ್ರ ಬರೆದಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಣ ಗಡಿ ವಿವಾದ ಪ್ರಕರಣವನ್ನು ಮಹಾರಾಷ್ಟ್ರ ಸರಕಾರ ಪದೇ ಪದೇ ಕೆಣಕುತ್ತಿದೆ. ಅಲ್ಲಿಯ ಮುಖ್ಯಮಂತ್ರಿಗಳು ಸಾಧ್ಯವಿರುವ ಎಲ್ಲ …

Read More »