ಬಾಗಲಕೋಟೆ: ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಮುಳುಗಿ ಇಬ್ಬರು ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಚಿಕನಾಳ ಗ್ರಾಮದಲ್ಲಿ ಇಂದು ನಡೆದಿದೆ. ಜಮೀನಿಗೆ ಹೋಗುತ್ತಿದ್ದಾಗ ಹಳ್ಳಕ್ಕೆ ಕಾಲು ಜಾರಿ ಬಿದ್ದ ಬಾಲಕ ಹಾಗೂ ಆತನನ್ನು ಕಾಪಾಡಲು ಹಳ್ಳಕ್ಕೆ ಇಳಿದ ಯುವಕ ಇಬ್ಬರೂ ನೀರು ಪಾಲಾಗಿದ್ದಾರೆ. ಮಂಜುನಾಥ ಬಾಲಪ್ಪ ಬಂಡಿ (13) ಹಾಗೂ ಷಣ್ಮುಖಪ್ಪ ನಿಲಪ್ಪ ತಿಪ್ಪಣ್ಣವರ (30) ಮೃತಪಟ್ಟವರು. ಮೃತಪಟ್ಟ ಯುವಕ ಚಿಕನಾಳ ಗ್ರಾಮದ ನಿವಾಸಿಯಾಗಿದ್ದು, ಬಾಲಕ ಕೊಪ್ಪಳ ಜಿಲ್ಲೆ …
Read More »ಸಚಿವ ಹೆಚ್. ಕೆ. ಪಾಟೀಲ್ ಸಿಎಂಗೆ ತನಿಖೆ ಮಾಡಿ ಅಂತ ಪತ್ರ ಬರೆಯುವುದರಲ್ಲಿ ತಪ್ಪೇನಿದೆ? ಶಿವಾನಂದ ಪಾಟೀಲ್
ಹಾವೇರಿ : ಸಚಿವ ಹೆಚ್. ಕೆ. ಪಾಟೀಲ್ ಸಿಎಂಗೆ ತನಿಖೆ ಮಾಡಿ ಅಂತ ಪತ್ರ ಬರೆಯುವುದರಲ್ಲಿ ತಪ್ಪೇನಿದೆ? ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಪ್ರಶ್ನಿಸಿದ್ದಾರೆ. ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹೂಲಿಹಳ್ಳಿಯಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿಶತ 7 ರಷ್ಟಾದರೂ ಆಗಿದೆಯಲ್ಲ. ಹೆಚ್. ಕೆ. ಪಾಟೀಲ್ ಇನ್ನಷ್ಟು ವೇಗ ಪಡೆಯಲಿ ಎಂದಿದ್ದಾರೆ. ತೃಪ್ತಿ ತಂದಿಲ್ಲ. ಆದರೆ ಅವರು ನೆನಪು ಮಾಡಿದ ನಂತರ ಮತ್ತಷ್ಟು ವೇಗ ಪಡೆಯುತ್ತೆ …
Read More »ಒಂದು ಸಾವಿರ ಪಿಎಸ್ಐ ಹುದ್ದೆ ಖಾಲಿ, ಶೀಘ್ರವೇ ನೇಮಕಾತಿ: ಸಚಿವ ಪರಮೇಶ್ವರ್
ಕೊಪ್ಪಳ: ಪಿಎಸ್ಐ ನೇಮಕಾತಿ ಹಗರಣದ ಬಳಿಕ ಐದು ವರ್ಷಗಳ ಕಾಲ ಯಾವುದೇ ಪೊಲೀಸ್ ನೇಮಕಾತಿ ಆಗಿಲ್ಲ. ಒಂದು ಸಾವಿರ ಪಿಎಸ್ಐ ಹುದ್ದೆಗಳು ಖಾಲಿ ಇವೆ. ನಮ್ಮ ಸರ್ಕಾರದಿಂದ ಶೀಘ್ರವಾಗಿ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು. ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಇಂದು (ಭಾನುವಾರ) ಭೇಟಿ ನೀಡಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ 500 ಪಿಎಸ್ಐ ಹುದ್ದೆಗಳಿಗೆ ನೇಮಕಾತಿ ನಡೆದಿದ್ದು, ಅವರೆಲ್ಲ ತರಬೇತಿ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ …
Read More »ಡಿಕೆಶಿ ಸಿಎಂ ಆಗುವ ಕನಸು ಮಾತ್ರ ಕಾಣಬೇಕು
ಮಂಡ್ಯ : ಡಿಕೆಶಿ ಏನಿದ್ರು ಸಿಎಂ ಆಗುವ ಕನಸು ಕಾಣಬೇಕು ಅಷ್ಟೇ. ಡಿಕೆಶಿಗೆ ಕಾಂಗ್ರೆಸ್‌ನಲ್ಲಿ ಯಾರು ಬಿಟ್ಟು ಕೊಡ್ತಾರೆ? ಎಂದು ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದಾರೆ. ಮಂಡ್ಯದಲ್ಲಿಂದು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಆಟೋ ಸ್ಟಾಂಡ್ ನಿರ್ಮಾಣದ ಗುದ್ದಲಿ ಪೂಜೆಯನ್ನು ಅವರು ಭಾನುವಾರ ನೆರವೇರಿಸಿದರು. ಹಲವು ವರ್ಷಗಳಿಂದ ಆಟೋ ಸ್ಟಾಂಡ್‌ಗೆ ಬೇಡಿಕೆ ಇತ್ತು. ಇಂದು ಗುದ್ದಲಿ ಪೂಜೆ ಮಾಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು. CSR ಅನುದಾನದಲ್ಲಿ ಗುದ್ದಲಿ …
Read More »ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷರಾಗಿ ಬಿ.ಎಲ್.ಶಂಕರ್ ಅವಿರೋಧ ಆಯ್ಕೆ
ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷರಾಗಿ ಬಿ.ಎಲ್.ಶಂಕರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜೊತೆಗೆ, ಇತರ 14 ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸದಸ್ಯರು ಕೂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕರ್ನಾಟಕ ಚಿತ್ರಕಲಾ ಪರಿಷತ್ತಿನ ಮೂರು ವರ್ಷಗಳ ಅವಧಿಯ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರ ಹುದ್ದೆಗಳ ಚುನಾವಣೆ 29.06.2025ರ ಭಾನುವಾರದಂದು ನಿಗದಿಯಾಗಿತ್ತು. ಆದರೆ, ಪ್ರತಿಸ್ಪರ್ಧಿಗಳು ಸ್ಪರ್ಧೆಯಿಂದ ಹಿಂದೆ ಸರಿದರು. ಹೀಗಾಗಿ, ಆಯ್ಕೆಯಾಗಬೇಕಾದ ಸ್ಥಾನಗಳಿಗೆ ಸಮಾನವಾಗಿ ಅಭ್ಯರ್ಥಿಗಳು ಉಳಿದಿರುವುದರಿಂದ 15 ಮಂದಿ ಚಿತ್ರಕಲಾ ಪರಿಷತ್ಗೆ ಅವಿರೋಧವಾಗಿ ಆಯ್ಕೆಯಾದ …
Read More »ರಾಜ್ಯದಲ್ಲಿ ನಿರಂತರ ಮಾವು ಬೆಲೆ ಕುಸಿತ:
ಬೆಂಗಳೂರು: ರಾಜ್ಯದಲ್ಲಿ ಮಾವಿನ ಬೆಲೆ ಕುಸಿತದಿರುವ ಹಿನ್ನೆಲೆಯಲ್ಲಿ ‘ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ’ಯಡಿ ನೆರವಾಗುವಂತೆ ರಾಜ್ಯ ಸರ್ಕಾರದ ಮನವಿಗೆ ಕೇಂದ್ರ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರೆಡೂ ಪ್ರತಿ ಕೆ.ಜಿ.ಗೆ ಎರಡೆರೆಡು ರೂ.ಗಳಂತೆ ಒಟ್ಟು 4 ರೂ. ವ್ಯತ್ಯಾಸ ಪಾವತಿಸಿ ಮಾರುಕಟ್ಟೆ ಚೈತನ್ಯಕ್ಕೆ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿವೆ. ಶನಿವಾರ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ವಿಡಿಯೋ ಸಂವಾದದ ಮೂಲಕ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ …
Read More »ಹೂತಿಟ್ಟ ಶವದ ಹಿಂದಿನ ಕಾರಣ ಬಯಲು
ಚಾಮರಾಜನಗರ: ಹೂತಿಟ್ಟ ಶವದಿಂದ ಮುಂಗೈ ಹೊರಬಂದ ಪ್ರಕರಣದಲ್ಲಿ ಮಹಿಳೆಯ ಗುರುತು ಪತ್ತೆಯಾಗಿದ್ದು, ಕೊಲೆಗೈದ ಪ್ರಿಯಕರ ಸಿಕ್ಕಿಬಿದ್ದಿದ್ದಾನೆ. ಕೊಳ್ಳೇಗಾಲ ತಾಲೂಕಿನ ಹಳೇ ಹಂಪಾಪುರದ ಸುವರ್ಣಾವತಿ ನದಿ ದಂಡೆಯಲ್ಲಿ ಗುರುವಾರ ರಾತ್ರಿ ಶವದ ಮುಂಗೈ ಕಾಣಿಸಿಕೊಂಡಿತ್ತು. ಮೋಳೆ ಗ್ರಾಮದ ಸೋನಾಕ್ಷಿ (29) ಎಂಬಾಕೆಯ ಶವ ಇದಾಗಿದೆ. ಈಕೆಯನ್ನು ಪ್ರಿಯಕರ ಮಾದೇಶ(35) ಕೊಲೆ ಮಾಡಿ, ಹೂತು ಹಾಕಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸೋನಾಕ್ಷಿ ತನ್ನ ಸೋದರ ಮಾವ ವಿಜಯ್ ಕುಮಾರ್ ಎಂಬವರನ್ನು ಮದುವೆಯಾಗಿದ್ದರೂ ಸಂಬಂಧದಲ್ಲಿ …
Read More »ಪಣಜಿ ಹೆದ್ದಾರಿಯಲ್ಲಿರುವ ಲೊಂಡಾ ಫಾಟಾದಿಂದ ಲೊಂಡಾ ಗ್ರಾಮಕ್ಕೆ ಹೋಗುವ ಸುಮಾರು 300 ಮೀಟರ್ ಉದ್ದದ ರಸ್ತೆ ತೀವ್ರವಾಗಿ ಹದಗೆಟ್ಟಿದೆ.
ಲೊಂಡಾ ಫಾಟಾದಿಂದ ಲೊಂಡಾ ಗ್ರಾಮದವರೆಗಿನ ರಸ್ತೆಯಲ್ಲಿ ಗುಂಡಿಗಳ ಸಾಮ್ರಾಜ್ಯ… ಶೀಘ್ರ ದುರಸ್ತಿಗಾಗಿ ಗ್ರಾಮಸ್ಥರ ಆಗ್ರಹ… ಬೆಳಗಾವಿ-ಪಣಜಿ ಹೆದ್ದಾರಿಯಲ್ಲಿರುವ ಲೊಂಡಾ ಫಾಟಾದಿಂದ ಲೊಂಡಾ ಗ್ರಾಮಕ್ಕೆ ಹೋಗುವ ಸುಮಾರು 300 ಮೀಟರ್ ಉದ್ದದ ರಸ್ತೆ ತೀವ್ರವಾಗಿ ಹದಗೆಟ್ಟಿದೆ. ಕಳೆದ ನಾಲ್ಕು ವರ್ಷಗಳಿಂದ ಈ ರಸ್ತೆ ದುರಸ್ತಿಗಾಗಿ ಕಾಯುತ್ತಿದ್ದು, ಇದರಿಂದ ಸಣ್ಣಪುಟ್ಟ ಅಪಘಾತಗಳು ನಿತ್ಯ ಸಹಜವಾಗಿದ್ದು ಶೀಘ್ರ ದುರಸ್ತಿಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ ಲೊಂಡಾ ಗ್ರಾಮವನ್ನು ಲೊಂಡಾ ಜಂಕ್ಷನ್ ಎಂದು ಕರೆಯಲಾಗುತ್ತದೆ, ಏಕೆಂದರೆ ಗೋವಾಕ್ಕೆ ಹೋಗುವ …
Read More »ರಾಜಣ್ಣ ರಾಜಕೀಯ ಮತ್ತು ಸಹಕಾರ ಎಂದರೆ ಜನಸೇವೆ ಎಂದು ಭಾವಿಸಿದ್ದಾರೆ:C.M.
ರಾಜಣ್ಣ ರಾಜಕೀಯ ಮತ್ತು ಸಹಕಾರ ಎಂದರೆ ಜನಸೇವೆ ಎಂದು ಭಾವಿಸಿದ್ದಾರೆ: ಬಡವರ ಕಷ್ಟ ಸುಖಗಳಿಗೆ ಸ್ಪಂದಿಸುವುದು ಅವರ ದೊಡ್ಡ ಗುಣ: ಮುಖ್ಯಮಂತ್ರಿ ಸಿದ್ದರಾಮಯ್ಯ ತುಮಕೂರು : ಕೆ.ಎನ್. ರಾಜಣ್ಣ ರಾಜಕೀಯ, ಸಹಕಾರ ಎಂದರೆ ಜನಸೇವೆ ಎಂದು ಭಾವಿಸಿದ್ದಾರೆ. ಸಮಾಜದಲ್ಲಿನ ಎಲ್ಲ ಬಡವರ ಬಗೆಗಿನ ಕಾಳಜಿ ಹೊಂದಿದ್ದಾರೆ. ಅವರ ಕಷ್ಟ ಸುಖಗಳಿಗೆ ಸ್ಪಂದಿಸುವುದು ಬಹಳ ದೊಡ್ಡ ಗುಣ. ಜಾತಿ, ಧರ್ಮ ಎಂಬ ಬೇಧವಿಲ್ಲದೇ ಬಡ ಮಕ್ಕಳ ಶಾಲಾ ಶಿಕ್ಷಣಕ್ಕೆ ರಾಜಣ್ಣ ನೆರವು …
Read More »ಜೂನ್ 22 ರಂದು ಸೂರ್ಯ ನಮಸ್ಕಾರ ಮ್ಯಾರಾಥಾನ್…
ಜೂನ್ 22 ರಂದು ಸೂರ್ಯ ನಮಸ್ಕಾರ ಮ್ಯಾರಾಥಾನ್… ಸನಾತನ ಸಂಸ್ಕೃತಿ ಏವಂ ಯೋಗ ಸೇವಾ ಸಂಘದಿಂದ ಬೆಳಗಾವಿಯಲ್ಲಿ ಹೊಸ ಉಪಕ್ರಮ; ಅಧ್ಯಕ್ಷ ಡಾ. ಪ್ರಶಾಂತ ಕಟಕೋಳ ವಿಶ್ವ ಯೋಗ ದಿನದ ಅಂಗವಾಗಿ ಬೆಳಗಾವಿಯ ಇತಿಹಾಸದಲ್ಲೇ ಮೊದಲ ಬಾರಿ ಬೃಹತ್ ಸನಾತನ ಸಂಸ್ಕೃತಿ ಏವಂ ಯೋಗ ಸೇವಾ ಸಂಘದ ವತಿಯಿಂದ ಜೂನ್ 22 ರಂದು ಸೂರ್ಯನಮಸ್ಕಾರ ಮ್ಯಾರಾಥಾನ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಡಾ. ಪ್ರಶಾಂತ ಕಟಕೋಳ ಅವರು ತಿಳಿಸಿದರು. …
Read More »
Laxmi News 24×7