Breaking News

ರಾಜ್ಯ

ಹೊತ್ತಿ ಉರಿದ ಕ್ಯಾಂಟರ್: ಚಾಲಕ ಸಜೀವ ದಹನ

ಹಾಸನ: ರಸ್ತೆ ಬದಿ ನಿಲ್ಲಿಸಿದ್ದ ಕ್ಯಾಂಟರ್ ವಾಹನ ಹೊತ್ತಿ ಉರಿದ ಪರಿಣಾಮ ಚಾಲಕ ಸಜೀವ ದಹನವಾದ ಘಟನೆ ಹಾಸನ ನಗರದ ಹೊರವಲಯದ ಬಿಟ್ಟಗೌಡನಹಳ್ಳಿಯ ಬೈಪಾಸ್ ರಸ್ತೆಯ ಬಳಿ ನಡೆದಿದೆ. ತಮಿಳುನಾಡು ಮೂಲದ ಜಮೀರ್(40) ವಾಹನದಲ್ಲಿಯೇ ಸಜೀವ ದಹನಗೊಂಡ ಚಾಲಕ. ಈತ ತಮಿಳುನಾಡಿನಿಂದ ತಂದ ಸರಕನ್ನು ನಿಗದಿತ ಸ್ಥಳಕ್ಕೆ ತಲುಪಿಸಿ ನಂತರ ಬಿಟ್ಟಗೌಡನಹಳ್ಳಿ ವೃತ್ತದ ಬೈಪಾಸ್ ರಸ್ತೆ ಬದಿ ನಿಲ್ಲಿಸಿ ವಾಹನದಲ್ಲಿಯೇ ಮಲಗಿದ್ದಾನೆ. ಬೆಳಗಿನ ಜಾವದಲ್ಲಿ ಚಾಲಕನ ಸೀಟು ಬಳಿ ಬೆಂಕಿ …

Read More »

Covid-19 Karnataka Updates: ಸತತ ನಾಲ್ಕನೇ ದಿನ ಸಾವಿರ ದಾಟಿದ ಹೊಸ ಪ್ರಕರಣ Covid-19 Karnataka Updates: ಸತತ ನಾಲ್ಕನೇ ದಿನ ಸಾವಿರ ದಾಟಿದ ಹೊಸ ಪ್ರಕರಣ

ಬೆಂಗಳೂರು: ರಾಜ್ಯದಲ್ಲಿ ಸತತ ನಾಲ್ಕನೇ ದಿನ ಹೊಸ ಪ್ರಕರಣಗಳ ಸಂಖ್ಯೆ ಸಾವಿರದ ಗಡಿ ದಾಟಿದೆ. ಶುಕ್ರವಾರ 1,587 ಪ್ರಕರಣಗಳು ದೃಢಪಟ್ಟಿವೆ. ಮೂರುವರೆ ತಿಂಗಳಲ್ಲಿ 24 ಗಂಟೆಗಳ ಅವಧಿಯಲ್ಲಿ ವರದಿಯಾದ ಗರಿಷ್ಠ ಪ್ರಕರಣಗಳು ಇವಾಗಿವೆ. ಈವರೆಗೆ ಸೋಂಕಿತರಾದವರ ಸಂಖ್ಯೆ 9.66 ಲಕ್ಷ ದಾಟಿದೆ. ಹೊಸ ಪ್ರಕರಣಗಳು ಏರುಗತಿ ಪಡೆದ ಕಾರಣ ಸಕ್ರಿಯ ಪ್ರಕರಣಗಳು ಮತ್ತಷ್ಟು ಹೆಚ್ಚಳವಾಗಿದ್ದು, 12,067 ಮಂದಿ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರಲ್ಲಿ 131 ಮಂದಿ ತೀವ್ರ …

Read More »

ಕೋವಿಡ್ ಪ್ರಕರಣ ಹೆಚ್ಚಳ: ಲಾಕ್ ಡೌನ್ ಒಂದು ಆಯ್ಕೆ: ಉದ್ಧವ್ ಠಾಕ್ರೆ

ನವದೆಹಲಿ: ಒಂದೇ ಸಮನೆ ಹೆಚ್ಚಳವಾಗುತ್ತಿರುವ ಕೋವಿಡ್ 19 ಸೋಂಕು ತಡೆಯಲು ಲಾಕ್ ಡೌನ್ ಒಂದು ಆಯ್ಕೆಯಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶುಕ್ರವಾರ(ಮಾರ್ಚ್ 19) ತಿಳಿಸಿದ್ದಾರೆ. ಸುದ್ದಿಗಾರರ ಜತೆ ನಡೆಸಿದ ಸಂವಹನದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಜನರು ಕೋವಿಡ್ 19 ಮಾರ್ಗಸೂಚಿಯನ್ನು ಪಾಲಿಸುತ್ತಾರೆ ಎಂಬ ನಂಬಿಕೆ ಇದೆ. ಆದರೂ ಲಾಕ್ ಡೌನ್ ಒಂದು ಆಯ್ಕೆಯಾಗಿದೆ ಎಂದು ಹೇಳಿದರು. ಪರಿಸ್ಥಿತಿ ಕೈಮೀರುವ ಹಂತದಲ್ಲಿ ಲಾಕ್ ಡೌನ್ ನಮ್ಮ ಆಯ್ಕೆಯಾಗಿದೆ. ಆದರೆ ರಾಜ್ಯದ …

Read More »

ಪರೀಕ್ಷಾ ಪೇ ಚರ್ಚಾ’ಗೆ ಆಯ್ಕೆ: ಆರ್ಡಿ ಶಾಲೆಯ ಅನುಷಾಗೆ ಅಭಿನಂದನೆ ಸಲ್ಲಿಸಿದ ಸುರೇಶ್ ಕುಮಾರ್

ಕುಂದಾಪುರ: ಪ್ರಧಾನಿ ನರೇಂದ್ರ ಮೋದಿ ನಡೆಸಿಕೊಡುವ ‘ಪರೀಕ್ಷಾ ಪೇ ಚರ್ಚಾ’ ಸಂವಾದ ಕಾರ್ಯಕ್ರಮಕ್ಕೆ ಆಯ್ಕೆಯಾದ ಉಡುಪಿ ಜಿಲ್ಲೆಯ ಆರ್ಡಿಯ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಅನುಷಾಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಕರೆ ಮಾಡಿ ಅಭಿನಂದನೆ ಸಲ್ಲಿಸಿದರು. ಅನುಷಾಗೆ ಕರೆ ಮಾಡಿದ ಸಚಿವರು, ಪ್ರಧಾನಿಯವರ ಜೊತೆ ಮಾತನಾಡಲು ನೀನು ಆಯ್ಕೆಯಾಗಿರುವುದು ನಮಗೆ ಖುಷಿಯಾಗಿದೆ. ನೀನು ಶಾಲೆಗೆ ಮತ್ತು ರಾಜ್ಯಕ್ಕೆ ಹೆಮ್ಮೆ ತರಬೇಕು ಎಂದು ಹೇಳಿದರು. …

Read More »

ಗುಜರಾತ್‌ನಲ್ಲಿ ಮತ್ತೆ ಲಾಕ್‍ಡೌನ್‍ ಘೋಷಣೆ..!?

ಅಹಮದಾಬಾದ್, ಮಾ.19-ಕೊರೊನಾ ಮಹಾಮಾರಿ ತೀವ್ರಗತಿಯಲ್ಲಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ನೈಟ್‍ಕಫ್ರ್ಯೂ ಜಾರಿಗೊಳಿಸಿದ್ದರೂ ಮತ್ತಷ್ಟು ತುರ್ತುಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಗುಜರಾತ್ ಸರ್ಕಾರ ಸಾರ್ವಜನಿಕ ಬಸ್ ಸಂಚಾರ, ಶಾಲಾ-ಕಾಲೇಜುಗಳು, ಉದ್ಯಾನವನ ಹಾಗೂ ಜಿಮ್‍ಗಳನ್ನು ಬಂದ್ ಮಾಡಲು ಆದೇಶಿಸಿದೆ.ಅಹಮದಾಬಾದ್ ಮತ್ತು ಸೂರತ್‍ನಲ್ಲಿ ರಾತ್ರಿ ಕಫ್ರ್ಯೂ 9 ಗಂಟೆಯಿಂದ ಬೆಳಗ್ಗೆ 6ರ ವರೆಗೆ ಇರಲಿದ್ದು, ಎಲ್ಲ ರೀತಿಯ ವಾಹನ ಸಂಚಾರ ಹಾಗೂ ಜನರ ಓಡಾಟವನ್ನು ನಿಷೇಧಿಸಲಾಗಿದೆ. ಮುಂದಿನ ಏಪ್ರಿಲ್ 10ರ ವರೆಗೆ ಎಲ್ಲ ಶಾಲಾ-ಕಾಲೇಜುಗಳಲ್ಲಿ ನಡೆಯಬೇಕಿದ್ದ …

Read More »

ಹರಿದ ಜೀನ್ಸ್’ ಸಿಎಂ ತಿರತ್ ಹೇಳಿಕೆಗೆ ಬಿಗ್‍ಬಿ ಮೊಮ್ಮಗಳ ಖಡಕ್ ತಿರುಗೇಟು

ಮುಂಬೈ : ಹರಿದ ಜೀನ್ಸ್ ಪ್ಯಾಂಟ್ ಧರಿಸಬೇಡಿ ಎಂದಿದ್ದ ಉತ್ತರಾಖಂಡ್​ ಮುಖ್ಯಮಂತ್ರಿ ತಿರತ್​ ಸಿಂಗ್​ ರಾವತ್​ ಅವರಿಗೆ ಬಾಲಿವುಡ್ ಹಿರಿಯ ನಟ ಅಮಿತಾಭ್​ ಬಚ್ಚನ್​ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರು ತಿರುಗೇಟು ನೀಡಿದ್ದಾರೆ. ಇತ್ತೀಚೆಗೆ ಉತ್ತರಾಖಂಡ್ ಸಿಎಂ ತಿರತ್​ ಸಿಂಗ್​ ರಾವತ್​ ಅವರು ‘ಯುವತಿಯರು ಶ್ರೀಮಂತರ ಮಕ್ಕಳಂತೆ ಕಾಣಲು ಹರಿದ ಜೀನ್ಸ್​ ಧರಿಸಿ ಮೊಣಕಾಲು ತೋರಿಸುತ್ತಾರೆ. ಇದು ಭಾರತೀಯ ಸಂಸ್ಕೃತಿಗೆ ವಿರುದ್ಧವಾದದ್ದು. ಪಾಶ್ಚಾತ್ಯರು ನಮ್ಮ ಸಂಸ್ಕೃತಿ, ಆಚಾರ …

Read More »

ದಾರಿತಪ್ಪಿದ ತಾಯಿ-ಮಗಳು: ದೈಹಿಕ ಶಿಕ್ಷಕನೊಂದಿಗೆ ಅಕ್ರಮ ಸಂಬಂಧ – ಪ್ರಿಯಕರನೊಂದಿಗೆ ಸೇರಿ ಘೋರಕೃತ್ಯ

ದಾವಣಗೆರೆ: ದೈಹಿಕ ಶಿಕ್ಷಕನೊಬ್ಬನ ಜೊತೆಗೆ ಅಕ್ರಮ ಸಂಬಂಧ ಬೆಳೆಸಿದ ತಾಯಿ-ಮಗಳು ಬುದ್ಧಿವಾದ ಹೇಳಿದ ತಂದೆಯನ್ನು ಕೊಲೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 70 ವರ್ಷದ ಮಂಜಪ್ಪ ಕೊಲೆಯಾದ ವ್ಯಕ್ತಿ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕುಳಗಟ್ಟೆ ಗ್ರಾಮದ ಮಂಜಪ್ಪ ಅವರ ಪುತ್ರಿ ಉಷಾ ಗಂಡನ ತೊರೆದು ಮಗಳು ಸಿಂಧು ಜೊತೆಗೆ ತಂದೆಯ ಮನೆಯಲ್ಲಿ ವಾಸವಾಗಿದ್ದಳು. ಈ ನಡುವೆ ಉಷಾ ಅದೇ ಊರಿನ ದೈಹಿಕ ಶಿಕ್ಷಕನಾಗಿರುವ ಇಬ್ಬರು ಮಕ್ಕಳ ತಂದೆಯೊಂದಿಗೆ …

Read More »

ಸ್ವಂತ ಮನೆ ಹೊಂದುವ ಕನಸು ಕಂಡವರಿಗೆ ಭರ್ಜರಿ ಸಿಹಿ ಸುದ್ದಿ: 3.5 ಲಕ್ಷ ಸಬ್ಸಿಡಿ, ಸುಲಭ ದರದಲ್ಲಿ ಸಾಲ

ಬೆಂಗಳೂರು: ರಾಜ್ಯದಲ್ಲಿ 3.24 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ಬಡವರಿಗೆ ವಸತಿಗೆ ಶೇಕಡ 6 ರಷ್ಟು ಬಡ್ಡಿದರದಲ್ಲಿ ಸಾಲ ನೀಡಲಾಗುವುದು. ಇದನ್ನು ಶೇಕಡ 5 ಕ್ಕೆ ಇಳಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು. ಕರ್ನಾಟಕ ಗೃಹಮಂಡಳಿ ಮತ್ತು ರಾಜೀವ್ ಗಾಂಧಿ ಗೃಹ ನಿರ್ಮಾಣ ಮಂಡಳಿ ರಾಜ್ಯದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳಿಗೆ ವಸತಿ ಕಲ್ಪಿಸಲಾಗುವುದು. ಬ್ಯಾಂಕ್ ಮೂಲಕ ಶೇ. 6 ಬಡ್ಡಿದರದಲ್ಲಿ 2.25 …

Read More »

ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಇನ್ಮುಂದೆ ವಾಹನಗಳ ಆರ್​ಸಿ ರಿನ್ಯೂ ಮಾಡಲು ಕಟ್ಟಬೇಕು 8 ಪಟ್ಟು ಹೆಚ್ಚು ಹಣ..!

ಕೇಂದ್ರ ಸಾರಿಗೆ ಸಚಿವಾಲಯ ಒಂದು ಡ್ರಾಫ್ಟ್​ ನೋಟಿಫಿಕೇಶನ್​ ಜಾರಿ ಮಾಡಿದೆ. ಇದರನ್ವಯ ಹಳೆಯ ವಾಹನಗಳ ಸಂಬಂಧ ಕೆಲ ಶುಲ್ಕಗಳನ್ನ ಹೆಚ್ಚಿಸಿದೆ. ಕೇಂದ್ರ ಸರ್ಕಾರದ ವಾಹನ ಸ್ಕ್ರಾಪೇಜ್​ ಪಾಲಿಸಿಯಡಿಯಲ್ಲಿ ಈ ಮಹತ್ವದ ಹೆಜ್ಜೆಯನ್ನ ಕೈಗೊಳ್ಳಲು ಸಚಿವಾಲಯ ಪ್ಲಾನ್​ ಮಾಡಿದೆ. ಇದರ ಅಡಿಯಲ್ಲಿ ನಿಮ್ಮ ಬಳಿ 15 ವರ್ಷಕ್ಕೂ ಹಳೆಯ ಗಾಡಿ ಇದೆ ಅಂದಾದರೆ ಅದರ ರಿಜಿಸ್ಟ್ರೇಷನ್​ ಸರ್ಟಿಫಿಕೇಟ್​​ ಅಥವಾ ಆರ್​ಸಿ ರಿನ್ಯೂ ಮಾಡಲು ನೀವು 5 ಸಾವಿರ ರೂಪಾಯಿವರೆಗೆ ಪಾವತಿ ಮಾಡಬೇಕಾಗಿ …

Read More »

ಹಳೆ ವಾಹನಗಳು ಗುಜರಿಗೆ! ನೂತನ ಗುಜರಿ ನೀತಿ ಪ್ರಕಟಿಸಿದ ಸಚಿವ ನಿತಿನ್‌ ಗಡ್ಕರಿ

ಹೊಸದಿಲ್ಲಿ : ಹದಿನೈದು ವರ್ಷ ಹಳೆಯ ವಾಣಿಜ್ಯ ಮತ್ತು 20 ವರ್ಷ ಹಳೆಯ ವೈಯಕ್ತಿಕ ಬಳಕೆಯ ವಾಹನಗಳನ್ನು ಗುಜರಿಗೆ ಹಾಕಿದರೆ ಹೊಸ ವಾಹನ ಖರೀದಿ ವೇಳೆ ಶೇ. 5ರಷ್ಟು ರಿಯಾಯಿತಿ ಸಿಗಲಿದೆ. ಇದು ಕೇಂದ್ರ ಸರಕಾರದ ಹೊಸ ಗುಜರಿ ನೀತಿಯ ಪ್ರಮುಖ ಅಂಶ. ಗುರುವಾರ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಹೊಸ ಗುಜರಿ ನೀತಿ ಪ್ರಕಟಿಸಿದ್ದಾರೆ. ಗುಜರಿ ನೀತಿಯಂತೆ, 20 ವರ್ಷ ಪೂರೈಸಿದ ವೈಯಕ್ತಿಕ ಬಳಕೆಯ ವಾಹನಗಳು …

Read More »