Breaking News

ರಾಜ್ಯ

ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆಂದು ಕಾರು ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಮಹಿಳೆ

ಕೊಪ್ಪಳ: ಅಂಬೇಡ್ಕರ್​ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಾರಿನ ಚಾಲಕನಿಗೆ ಮಹಿಳೆಯೊಬ್ಬರು ಚಪ್ಪಲಿಯಿಂದ ಥಳಿಸಿದ್ದಾರೆ. ಚಾಲಕ ಅವಾಚ್ಯ ಶಬ್ದ ಉಪಯೋಗಿಸಿದ ಎಂದು ಆರೋಪಿಸಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡಿದ ಮಹಿಳೆ ಸುಜಾತಾ ಗೋರ್ಲೆಕೊಪ್ಪ ಕೊಪ್ಪಳದ ಕುಕನೂರು ಪಟ್ಟಣ ನಿವಾಸಿ. ಕಾರು ಚಾಲಕ ವಿಜಯ್​ ನನ್ನನ್ನು ನಿಂದಿಸಿದ್ದಾನೆಂದು ಆರೋಪಿಸಿ, ಕೊಪ್ಪಳ ಜಿಲ್ಲಾಡಳಿತದ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿಯಲ್ಲೇ ಚಪ್ಪಲಿಯಿಂದ ಹೊಡೆದಿದ್ದಾರೆ. ಈ ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Read More »

15 ವರ್ಷಕ್ಕಿಂತ ಹಳೆಯ ಸರ್ಕಾರಿ ವಾಹನಗಳ ನೋಂದಣಿ ನವೀಕರಣವು ಏಪ್ರಿಲ್‌ 1ರ ಬಳಿಕ ಸಾಧ್ಯವಾಗುವುದಿಲ್ಲ…?

ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನೀಡಿರುವ ಪ್ರಸ್ತಾವನೆಯು ಅಂತಿಮಗೊಂಡರೆ, 15 ವರ್ಷಕ್ಕಿಂತ ಹಳೆಯ ಸರ್ಕಾರಿ ವಾಹನಗಳ ನೋಂದಣಿ ನವೀಕರಣವು ಏಪ್ರಿಲ್‌ 1ರ ಬಳಿಕ ಸಾಧ್ಯವಾಗುವುದಿಲ್ಲ. ಸರ್ಕಾರದ ಎಲ್ಲಾ ವಾಹನಗಳಿಗೆ; ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು, ಕೇಂದ್ರೋದ್ಯಮಗಳು, ಮಹಾನಗರ ಪಾಲಿಕೆ ಮತ್ತು ಸ್ವಾಯತ್ತ ಸಂಸ್ಥೆಗಳ ಎಲ್ಲಾ ವಾಹನಗಳಿಗೂ ಇದು ಅನ್ವಯವಾಗಲಿದೆ. ಈ ಕುರಿತು ಸಚಿವಾಲಯವು ಶನಿವಾರ ಟ್ವೀಟ್ ಮಾಡಿದೆ. ಕರಡು ನಿಯಮಗಳ ಕುರಿತು ಪ್ರತಿಕ್ರಿಯೆ, ಸಲಹೆ, …

Read More »

ಲೋಕಸಭಾ ಉಪಚುನಾವಣೆ ಹಿನ್ನೆಲೆ ಎಂ.ಜಿ.ಹಿರೇಮಠ ಅವರನ್ನು ವರ್ಗಾವಣೆ ಮಾಡಲಾಗಿದೆ.

ಬೆಂಗಳೂರು – ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರನ್ನು ವರ್ಗಾವಣೆ ಮಾಡಲಾಗಿದೆ. ಡಾ.ಕೆ.ಹರೀಶ್ ಕುಮಾರ ಬೆಳಗಾವಿಯ ನೂತನ ಜಿಲ್ಲಾಧಿಕಾರಿಗಳಾಗಿದ್ದಾರೆ. ಹರೀಶ್ ಕುಮಾರ ಬೆಂಗಳೂರಿನ ಉದ್ಯೋಗ ಮತ್ತು ತರಬೇತಿ ಆಯುಕ್ತರಾಗಿ ಕೆಲಸ ಮಾಡುತ್ತಿದ್ದರು. ಈ ಹಿಂದೆ ಅವರು ಕಾರವಾರ ಜಿಲ್ಲಾಧಿಕಾರಿಗಳಾಗಿಯೂ ಕೆಲಸಮಾಡಿದ್ದಾರೆ     ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ. ಎಂ.ಜಿ.ಹಿರೇಮಠ ಬೆಳಗಾವಿ ಜಿಲ್ಲೆಯವರಾಗಿರುವುದರಿಂದ ಅವರನ್ನು ಚುನಾವಣೆ ಸಂದರ್ಭದಲ್ಲಿ ವರ್ಗಾಯಿಸಲಾಗಿದೆ.

Read More »

ಬಾಂಬೆ ತಂಡ’ದ ಕ್ಷೇತ್ರಗಳು ಭೂಲೋಕದ ಸ್ವರ್ಗಗಳಾಗಿವೆಯೇ ಯಡಿಯೂರಪ್ಪನವರೇ? ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯ

ಬೆಂಗಳೂರು : ಮಸ್ಕಿಯಲ್ಲಿ ಶಾಸಕರಾಗಿರುವ ಮಹಾತ್ಯಾಗದಿಂದ ಬಿಎಸ್‌ವೈ ಅವರಿಗೆ ಅಧಿಕಾರ ಸಿಕ್ಕು 2 ವರ್ಷಗಳಾಗುತ್ತಾ ಬಂದಿವೆ. ಈ ವರೆಗೆ ಯಾಕಾಗಿರಲಿಲ್ಲ ಮಸ್ಕಿಯ ಅಭಿವೃದ್ಧಿ? ಪ್ರಗತಿಗೆ ಉಪಚುನಾವಣೆ ಮುಹೂರ್ತವಾಗಿತ್ತೇ? ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಟ್ವೀಟರ್ ನಲ್ಲಿ ವಾಗ್ದಾಳಿ ನಡೆಸಿರುವ ಕುಮಾರಸ್ವಾಮಿ, ಮಸ್ಕಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡುವುದಾಗಿ ಸಿಎಂ ಬಿ.ಎಸ್. ಯಡಿಯೂರಪ್ಪ ಇತ್ತೀಚೆಗೆ ಪ್ರಚಾರ ಸಭೆಯಲ್ಲಿ ಹೇಳಿರುವುದು ಗಮನಕ್ಕೆ ಬಂತು. ಬಿಎಸ್‌ವೈ …

Read More »

ದುಬೈನಿಂದ ಬಂದ ಪ್ರಯಾಣಿಕನ ವಿಗ್‍ನಲ್ಲಿತ್ತು 5.55 ಕೆಜಿ ಚಿನ್ನ..!

ಚೆನ್ನೈ,ಮಾ.22- ಚಿನ್ನ ಕಳ್ಳಸಾಗಾಣೆಯ ಒಂದು ದೊಡ್ಡ ಜಾಲ ಭಾರತದಲ್ಲಿ ನಡೆಯುತ್ತಿದೆ ಎಂಬುದಕ್ಕೆ ಪದೇ ಪದೇ ಹಲವು ನಿದರ್ಶನಗಳು ಸಿಗುತ್ತವೆ. ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈನಿಂದ ಕಳ್ಳ ಮಾರ್ಗದಲ್ಲಿ ತರಲು ಯತ್ನಿಸಿದ್ದ, ಸುಮಾರು 5.55 ಕೆಜಿ ಚಿನ್ನ ಹಾಗೂ ವಿದೇಶಿ ಕರೆನ್ಸಿಗಳನ್ನು ವಾಯುಯಾನ ಕಸ್ಟಮ್ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.ಈ ಸಂಬಂಧ ಆರು ಮಂದಿಯನ್ನು ಬಂಸಲಾಗಿದ್ದು, ವಿಚಿತ್ರವೆಂದರೆ ತಮ್ಮ ಬೋಳು ತಲೆಯನ್ನು ಮುಚ್ಚಿಕೊಳ್ಳಲು ವಿಗ್‍ನಲ್ಲಿ , ಕಾಲಚೀಲದಲ್ಲಿ, ಒಳಉಡುಪಿನಲ್ಲಿ ಈ ಚಿನ್ನ ಪತ್ತೆಯಾಗಿದ್ದರೆ …

Read More »

ವಿಧಾನ ಪರಿಷತ್ ನಲ್ಲಿ ಮುಂದುವರಿದ ಗದ್ದಲ: ಸದನದ ಸಮಿತಿ ರಚಿಸಲು ಪ್ರತಿಪಕ್ಷ ಪಟ್ಟು

ವಿಧಾನ ಪರಿಷತ್: ರಾಜ್ಯದ ನರ್ಸಿಂಗ್ ಮತ್ತು ಅರೆ ವೈದ್ಯಕೀಯ ಕಾಲೇಜುಗಳ ಆರಂಭಕ್ಕೆ ಅನುಮತಿ ನೀಡಿರುವುದರಲ್ಲಿ ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿದ ತನಿಖೆಗೆ ಸದನ ಸಮಿತಿ ರಚಿಸುವಂತೆ ಆಗ್ರಹಿಸಿ ವಿಧಾನ ಪರಿಷತ್ ನಲ್ಲಿ ಜೆಡಿಎಸ್ ಧರಣಿ ಮುಂದುವರಿಸಿದೆ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿಯಿಂದ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರೂ ಜೆಡಿಎಸ್ ಸದಸ್ಯರು ಒಪ್ಪಲಿಲ್ಲ. ಸದನ ಸಮಿತಿ ರಚಿಸಲೇ ಬೇಕು ಎಂದು ಪಟ್ಟು ಹಿಡಿದರು. ಈ ವೇಳೆ …

Read More »

ಮಾರ್ಚ್ 22, 2020 : ಸರಿ ಒಂದು ವರ್ಷದ ಹಿಂದೆ ಈ ದಿನ ಏನಾಯಿತು ನೆನಪಿದೆಯೇ? ಇಲ್ಲಿದೆ ವೈರಲ್ ವಿಡೀಯೋ

ನವದೆಹಲಿ : ಮಾರ್ಚ್ 22, 2020 ರ ದಿನವನ್ನು ಯಾರು ಮರೆಯಲು ಸಾಧ್ಯವಿಲ್ಲ? ಪ್ರಧಾನಿ ನರೇಂದ್ರ ಮೋದಿ ಅವರ ಮನವಿ ಮೇರೆಗೆ ಭಾರತದ ಜನತೆ ಮನೆಗಳಲ್ಲಿ ಬಂಧಿಯಾಗಿ, ನಂತರ ಸಂಜೆ ಕೊರೋನಾ ಯೋಧರಿಗೆ ಗೌರವವನ್ನು ವ್ಯಕ್ತಪಡಿಸಲು ಐದು ನಿಮಿಷಗಳ ಕಾಲ ಚಪ್ಪಾಳೆ ತಟ್ಟಿದರು. 2020ರ ಮಾರ್ಚ್ 22ರ ದಿನವನ್ನು ಜನತಾ ಕರ್ಫ್ಯೂ ಎಂದು ಕರೆಯಲಾಗುತ್ತದೆ. ಇಂದು, ಸಾರ್ವಜನಿಕ ಕರ್ಫ್ಯೂ ಆಗಿ ಒಂದು ವರ್ಷ ಕಳೆದಿದೆ. ಅನೇಕ ಮೋಜಿನ ನೆನಪುಗಳು ಜನರ …

Read More »

ದೆಹಲಿ ರೈತ ಸ್ಮಾರಕಕ್ಕೆ ಕರ್ನಾಟಕದ ಮಣ್ಣು!

ಬಳ್ಳಾರಿ: ದೆಹಲಿಯ ಮೂರು ಗಡಿಗಳಲ್ಲಿ ಏಪ್ರಿಲ್‌ನಲ್ಲಿ ನಿರ್ಮಾಣವಾಗಲಿರುವ ರೈತ ಸ್ಮಾರಕಗಳಿಗೆ ಕರ್ನಾಟಕದ ರೈತ ಹೋರಾಟಗಳ ನೆನಪಿನ ಮಣ್ಣು ಕೂಡ ಸೇರ್ಪಡೆಯಾಗಲಿದೆ. ರೈತರ ಮುಷ್ಕರವನ್ನು ಬೆಂಬಲಿಸಿ ಮಾ.5ರಿಂದ ಬಸವ ಕಲ್ಯಾಣದಿಂದ ಆರಂಭವಾಗಿರುವ ರೈತರ ಪಾದಯಾತ್ರೆಯು ಬಳ್ಳಾರಿಯಲ್ಲಿ 23ರಂದು ಸಮಾರೋಪಗೊಳ್ಳಲಿದ್ದು, ಮಾರ್ಗ ಮಧ್ಯದ 26 ಗ್ರಾಮಗಳ ಹೊಲಗಳಲ್ಲಿ ಮಣ್ಣನ್ನು ಸಂಗ್ರಹಿಸಲಾಗಿದೆ. ರೈತ ಸಂಘ, ಚಾಗನೂರು-ಸಿರಿವಾರ ಭೂ ಸಂರಕ್ಷಣಾ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆದಿರುವ ಪಾದಯಾತ್ರೆಯಲ್ಲಿ ಲೇಖಕ ಸ.ರಘುನಾಥ ಪ್ರತಿ ಗ್ರಾಮದಿಂದಲೂ ಒಂದು ಹಿಡಿ …

Read More »

ಕೇಂದ್ರ ಸರಕಾರ ದೇಶದ ಕೆಲವು ಉನ್ನತ ಉದ್ಯಮಿಗಳಿಗೆ ಲಾಭ ಮಾಡುವ ಉದ್ದೇಶದಿಂದ ರೈತರ ಆದಾಯ ಹಾಗೂ ಭವಿಷ್ಯ ಕಸಿಯಲು ಬಯಸಿದೆ

ರಾಯಪುರ, ಮಾ. 17: ನೂತನ ಮೂರು ಕೃಷಿ ಕಾಯ್ದೆಗಳ ವಿರುದ್ಧ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ರವಿವಾರ ತನ್ನ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರ ಸರಕಾರ ದೇಶದ ಕೆಲವು ಉನ್ನತ ಉದ್ಯಮಿಗಳಿಗೆ ಲಾಭ ಮಾಡುವ ಉದ್ದೇಶದಿಂದ ರೈತರ ಆದಾಯ ಹಾಗೂ ಭವಿಷ್ಯ ಕಸಿಯಲು ಬಯಸಿದೆ ಎಂದು ಹೇಳಿದ್ದಾರೆ. ರಾಜ್ಯ ಸರಕಾರದ ಎರಡು ಯೋಜನೆಗಳ ಅಡಿಯಲ್ಲಿ ಜಾನುವಾರು ಸಾಕುವವರು ಹಾಗೂ ರೈತರಿಗೆ ನಗದು ವಿತರಿಸಲು ಚತ್ತೀಸ್ಗಢದ …

Read More »

ಕೊರೊನಾ ಎರಡನೇ ಅಲೆ ಎದುರಿಸಲು ಹೊಸ ರೂಲ್ಸ್:ಸಚಿವ ಡಾ. ಸುಧಾಕರ್ ಘೋಷಣೆ

ಕೊರೊನಾ ಎರಡನೇ ಅಲೆ ಈಗಾಗಲೇ ಆರಂಭಗೊಂಡಿದ್ದು, ಈ ನಿಟ್ಟಿನಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿರುವ ವೈದ್ಯರು, ಸಿಬ್ಬಂದಿಗಳ ಸೇವಾವಧಿ ವಿಸ್ತರಣೆ ಮಾಡಿ ಎಂದು ವೈದ್ಯಕೀಯ ಸಚಿವ ಡಾ. ಸುಧಾಕರ್ ಆದೇಶ ಹೊರಡಿಸಿದ್ದಾರೆ. ಆ ಮೂಲಕ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ನೇಮಕವಾಗಿದ್ದ ಗುತ್ತಿಗೆ, ಹೊರಗುತ್ತಿಗೆ ಸಿಬ್ಬಂದಿಗಳ 6 ತಿಂಗಳ ಸೇವಾವಧಿ ವಿಸ್ತರಿಸಿದ್ದಾರೆ.ಕೊರೊನಾ ನಿಯಂತ್ರಣಾ ಕಾರ್ಯಕ್ಕಾಗಿ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಗುತ್ತಿಗೆ/ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿರುವ ವೈದ್ಯರು …

Read More »