ಯುವತಿಯ ಮತ್ತೊಂದು ಆಡಿಯೋ ಬಹಿರಂಗವಾಗಿದೆ. ಡಿ.ಕೆ. ಶಿವಕುಮಾರ್ ಹೆಸರು ಹೇಳಿದ ಸಿಡಿ ಯುವತಿಯ ಇನ್ನೊಂದು ಆಡಿಯೋ ಬಹಿರಂಗವಾಗಿದೆ. ಸಹೋದರನೊಂದಿಗೆ ಯುವತಿ ಮಾತನಾಡಿರುವ ಆಡಿಯೋ ಬಹಿರಂಗವಾಗಿದೆ. ಇವತ್ತು 1ನಿಮಿಷ 51 ಸೆಕೆಂಡ್ ಆಡಿಯೋ ಬಹಿರಂಗವಾಗಿದ್ದು, ನನಗೆ ಡಿಕೆಶಿ ಸಪೋರ್ಟ್ ಇದೆ ಎಂದು ಸಹೋದರನೊಂದಿಗೆ ಮಾತನಾಡುತ್ತಾ ಯುವತಿ ಹೇಳಿದ್ದು. ನಾನು ಗೋವಾಕ್ಕೆ ಹೋಗುತ್ತಿದ್ದೇನೆ. ನೀನು ಭಯ ಪಡಬೇಡ. ಮನೆಯವರಿಗೆ ವಿಷಯ ತಿಳಿಸಬೇಡ ಎಂದು ಹೇಳಿದ್ದಾರೆ. ಇದೇ ವೇಳೆ ಸಹೋದರ ಸಿಮ್ ಕಾರ್ಡ್ ಬದಲಿಸು …
Read More »ಕೆಪಿಸಿಸಿ ಕಚೇರಿಯಲ್ಲೇ ಸಂತ್ರಸ್ಥೆಯನ್ನು ಒತ್ತೆಯಾಗಿಟ್ಟುಕೊಂಡಿದ್ದೀರಾ? – ಬಿಜೆಪಿ
ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯನ್ನು ಒತ್ತೆಯಾಗಿಟ್ಟುಕೊಂಡು ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ರಾಜಕೀಯ ಆಟವಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಈ ಕುರಿತು ಸರಣಿ ಟ್ವೀಟ್ ಮಾಡಿದ್ದು, ಸಂತ್ರಸ್ಥೆಯನ್ನು ಒತ್ತೆಯಾಗಿಟ್ಟುಕೊಂಡು ರಾಜಕೀಯ ಆಟ ಆಡುತ್ತಿರುವ ಮಾನ್ಯ ಡಿ.ಕೆ. ಶಿವಕುಮಾರ್ ಅವರೇ, ನಿಮ್ಮದೆಂತಹ ಕುತ್ಸಿತ ಮನೋಸ್ಥಿತಿ ಇರಬಹುದು? ಕೆಪಿಸಿಸಿ ಕಚೇರಿಯಲ್ಲೇ ಸಂತ್ರಸ್ಥೆಯನ್ನು ಒತ್ತೆಯಾಗಿಟ್ಟುಕೊಂಡಿದ್ದೀರಾ? ಎಂದು ಪ್ರಶ್ನಿಸಿದೆ. ಸಂತ್ರಸ್ಥೆಯ ಕುರಿತು ಮೊಸಳೆ ಕಣ್ಣೀರು ಸುರಿಸಿದ ಕಾಂಗ್ರೆಸ್ ನಾಯಕರು ಈಗೆಲ್ಲಿದ್ದಾರೆ? ಎಂದು ಬಿಜೆಪಿ ಕಿಡಿ …
Read More »ಮಹಾನ್ ನಾಯಕ ರಾಜಕಾರಣಕ್ಕೆ ನಾಲಾಯಕ್; ಕನಕಪುರದಲ್ಲಿ ಮುಂದಿನ ಹೋರಾಟ: ರಮೇಶ್ ಜಾರಕಿಹೊಳಿ
ಬೆಂಗಳೂರು (ಮಾ. 24): ಇಂದು ಸ್ಪೋಟಕ ಮಾಹಿತಿ ಬಿಚ್ಚಿಡುತ್ತೇನೆ ಎಂದಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ನಾನು ನೀಡಬೇಕಾದ ಎಲ್ಲಾ ವಿವರಗಳನ್ನು ಸಿಡಿ ಯುವತಿಯ ಪೋಷಕರೇ ಹೇಳಿದ್ದಾರೆ. ಈ ಹಿನ್ನಲೆ ನನ್ನ ಸುದ್ದಿಗೋಷ್ಟಿಗೆ ಮಹತ್ವ ಇಲ್ಲ. ಈ ಪ್ರಕರಣದ ರೂವರಿ ಯಾರು ಎಂಬುದನ್ನು ಪೋಷಕರು ಒಪ್ಪಿಕೊಂಡಿದ್ದಾರೆ. ಅವರಿಗೆ ಧನ್ಯವಾದಗಳು. ಆ ಮಹಾನ್ ನಾಯಕ ಯಾರು ಎಂಬುದು ಅವರೇ ತಿಳಿಸಿದ್ದಾರೆ. ಆ ಮಹಾನ್ ನಾಯಕ ರಾಜಕಾರಣಕ್ಕೆ ನಾಲಾಯಕ್, ರಾಜಕೀಯದಲ್ಲಿ ಇರಬಾರದು. ಅವನಿಗೆ …
Read More »ಉಪ ಚುನಾವಣೆ ಕಣ : ಕೈ, ಕಮಲಕ್ಕೆ ಅಗ್ನಿಪರೀಕ್ಷೆ, ತೆನೆಗೆ ಅಸ್ತಿತ್ವದ ಪ್ರಶ್ನೆ
ಬೆಂಗಳೂರು: ರಾಜ್ಯದಲ್ಲಿ ಉಪ ಚುನಾವಣೆಯ ಕಣ ಸಜ್ಜಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿಗೆ ಇದು ಮತ್ತೂಂದು ಅಗ್ನಿಪರೀಕ್ಷೆಯಾದರೆ ಜೆಡಿಎಸ್‌ಗೆ ಅಸ್ತಿತ್ವ ಸಾಬೀತುಪಡಿಸುವ ಸವಾಲಿನ ಪ್ರಶ್ನೆಯಾಗಿದೆ. ಉಪ ಚುನಾವಣೆ ಫಲಿತಾಂಶದಿಂದ ದೊಡ್ಡ ಮಟ್ಟದ ರಾಜಕೀಯ ಬದಲಾವಣೆ ಆಗದು. ಆದರೆ ಸಿ.ಡಿ. ಪ್ರಕರಣ ಎಬ್ಬಿಸಿರುವ ರಾಡಿಯ ಹಿನ್ನೆಲೆಯಲ್ಲಿ ಜನರ ನಾಡಿ ಮಿಡಿತ ತಿಳಿಯಲಿದೆ. ಬೆಳಗಾವಿ ಲೋಕಸಭೆ ಹಾಗೂ ಮಸ್ಕಿ ಮತ್ತು ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ಮತ್ತು ಬಿಜೆಪಿಗೆ ಉಪ ಚುನಾವಣೆ ಪ್ರತಿಷ್ಠೆ. …
Read More »ಮಹಾನಾಯಕನ ಷಡ್ಯಂತ್ರಕ್ಕೆ ಮಾಫಿ ಇಲ್ಲ; ಡಿ.ಕೆ. ಶಿವಕುಮಾರ್ ಗೆ ಬಹಿರಂಗ ಸವಾಲು ಹಾಕಿದ ರಮೇಶ್ ಜಾರಕಿಹೊಳಿ
ಬೆಂಗಳೂರು: ಸಿಡಿ ಪ್ರಕರಣದ ಮಹಾನಾಯಕ ಎಂದೇ ಆರೋಪಿಸಲಾಗುತ್ತಿರುವ ಡಿ.ಕೆ. ಶಿವಕುಮಾರ್ ವಿರುದ್ಧ ಬಹಿರಂಗ ಸವಾಲು ಹಾಕಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಡಿಕೆಶಿ ಬೆಳಗಾವಿಗೆ ಬಂದರೆ ಸ್ವಾಗತಿಸುತ್ತೇವೆ. ಅವರನ್ನು ಮರ್ಯಾದೆಯಿಂದ ಸುರಕ್ಷಿತವಾಗಿ ನೋಡಿಕೊಳ್ಳುತ್ತೇವೆ. ಆದರೆ ಕನಕಪುರದಲ್ಲಿ ಮಾತ್ರ ಡಿಕೆಶಿ ವಿರುದ್ಧ ನೇರವಾಗಿ ಹೋರಾಡುತ್ತೇವೆ. ಕನಕಪುರದಲ್ಲಿ ಮಾತ್ರ ಅವರನ್ನು ಸೋಲಿಸದೇ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಜಾರಕೊಹೊಳಿ, ಸಿಡಿ ಪ್ರಕರಣದಲ್ಲಿ ನಾನು ನಿರಪರಾಧಿ ಎಂಬುದನ್ನು ಯುವತಿ ಪೋಷಕರೇ ಹೇಳಿದ್ದಾರೆ. …
Read More »ಬೆಳಗಾಗುವುದರೊಳಗೆ ಕೋಟ್ಯಾಧಿಪತಿಯಾದ ಅಜ್ಜಿ :ಗುಜರಿ ನಡೆಸುತ್ತಿದ್ದವರ ಮನೆ ತುಂಬಾ ಈಗ ಹಣದ ಹೊಳೆ!
ಚಂಡೀಗಢ: ಪಂಜಾಬ್ ಸ್ಟೇಸ್ ಡಿಯರ್ 100 ಮಾಸಿಕ ಲಾಟರಿ ಬೆಳಗಾಗುವುದರೊಳಗೆ ಒಂದು ಬಡ ಕುಟುಂಬವನ್ನು ಕೋಟ್ಯಾಧೀಶರನ್ನಾಗಿ ಮಾಡಿದೆ. ಹೌದು, ಬಾಗಾಪುರಾಣದ ನಿವಾಸಿ 61 ವರ್ಷದ ಆಶಾ ರಾಣಿ ಒಂದು ಕೋಟಿ ರೂಪಾಯಿಗಳನ್ನು ಲಾಟರಿ ಮೂಲಕ ಗೆದ್ದಿದ್ದಾರೆ. ಈ ತಿಂಗಳ ಲಾಟರಿ ವಿಜೇತರಲ್ಲಿ ಆಶಾ ಗೆದ್ದಿದ್ದು, ಈ ಸಂಬಂಧ ಹಣ ಪಡೆದುಕೊಳ್ಳಲು ಲಾಟರಿ ಟಿಕೆಟ್ ಮತ್ತು ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಅಧಿಕಾರಿಗಳಿಗೆ ನೀಡಿದ್ದಾರೆ. ಬಹುಮಾನವನ್ನು ಗೆದ್ದ ನಂತರ ಪ್ರತಿಕ್ರಿಯೆ ನೀಡಿರುವ ಅವರು, …
Read More »ನನ್ನ ಕಷ್ಟ-ಸುಖಕ್ಕೆ ಆಗಿರುವ ಗೆಳೆಯ ಡಿಕೆಶಿ, ಆ ಹುಡುಗಿ ಹೇಳಿದಾಕ್ಷಣ ಅಪರಾಧಿಯಲ್ಲ : ರಮೇಶ್ ಜಾರಕಿಹೊಳಿ
ಬೆಂಗಳೂರು: ಸಿಡಿ ಲೇಡಿಯ ಮತ್ತೊಂದು ಆಡಿಯೋ ಸಂಜೆ ವೇಳೆಗೆ ಫುಲ್ ವೈರಲ್ ಆಗಿದೆ. ಸಂಬಂಧಿಕರ ಜೊತೆ ಮಾತಾಡಿದ್ದಾಳೆ ಎನ್ನಲಾಗಿದೆ. ಆ ಆಡಿಯೋದಲ್ಲಿ ಚಿನ್ನಿ..ಡಿ ಕೆ ಶಿವಕುಮಾರ್ ಅವರನ್ನ ಮೀಟ್ ಮಾಡೋಕೆ ಬಂದಿದ್ದೀನಿ ಎಂದಿದ್ದಾಳೆ. ಈ ಆಡಿಯೋ ಸಂಬಂಧ ಪ್ರತಿಕ್ರಿಯೆ ನೀಡಿರುವ ರಮೇಶ್ ಜಾರಕಿಹೊಳಿ, ಡಿ ಕೆ ಶಿವಕುಮಾರ್ ಅವರ ಹೆಸರನ್ನು ಒಂದು ಸಲ ತೆಗೆದಾಕ್ಷಣ ಅಪರಾಧಿಯಾಗಲ್ಲ ಎಂದಿದ್ದಾರೆ. ಇಂದು ಸದಾಶಿವನಗರ ಬಳಿ ಮಾಧ್ಯಮದವರ ಜೊತೆ ಮಾತನಾಡಿದ ರಮೇಶ್ ಜಾರಕಿಹೊಳಿ, ನಾನೀಗ …
Read More »ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗದು: ಸತೀಶ ಜಾರಕಿಹೊಳಿ
ಬೆಳಗಾವಿ: ‘ನನ್ನ ವಿರುದ್ಧ ಯಾರೂ ಷಡ್ಯಂತ್ರ ಮಾಡಲಾಗುವುದಿಲ್ಲ. ಹೀಗಾಗಿ, ಯಮಕನಮರಡಿ ಕ್ಷೇತ್ರದ ಜನರು ಹಾಗೂ ಅಭಿಮಾನಿಗಳು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ’ ಎಂದು ಅಲ್ಲಿನ ಶಾಸಕ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಹೇಳಿದರು. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ, ತಾವು ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರದಲ್ಲಿ ಜನಾಭಿಪ್ರಾಯ ಆಲಿಸಲು ಶುಕ್ರವಾರ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು. ‘ಹಾಗೊಂದು ವೇಳೆ ಯಾರದರೂ ನನ್ನ ವಿರುದ್ಧ ಷಡ್ಯಂತ್ರ …
Read More »ಪುದುಚೇರಿಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ: ಏನೇನು ಭರವಸೆ?
ಪುದುಚೇರಿ: ಪುದುಚೇರಿ ವಿಧಾನಸಭೆಗೆ ಬಿಜೆಪಿಯ ಪ್ರಣಾಳಿಕೆ, ‘ಬೆಸ್ಟ್ (BEST) ಪುದುಚೇರಿ’ ಅನ್ನು ಶುಕ್ರವಾರ ಇಲ್ಲಿ ಬಿಡುಗಡೆ ಮಾಡಲಾಯಿತು. ಕೆ.ಜಿ. ತರಗತಿಯಿಂದ ಉನ್ನತ ಶಿಕ್ಷಣದವರೆಗೆ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ, ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ, ಜವಳಿ ಉದ್ದಿಮೆಗಳನ್ನು ಪುನರಾರಂಭಿಸುವುದು, ಜವಳಿ ಪಾರ್ಕ್ ಆರಂಭ ಸೇರಿದಂತೆ ಅನೇಕ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ. ಪುದುಚೇರಿಯನ್ನು ವ್ಯಾಪಾರ (B), ಶಿಕ್ಷಣ (E), ಅಧ್ಯಾತ್ಮ (S) ಹಾಗೂ ಪ್ರವಾಸೋದ್ಯಮ (T) ಕೇಂದ್ರವಾಗಿಸುವ ಭರವಸೆಯನ್ನು ನೀಡಲಾಗಿದೆ. …
Read More »ಸಿಡಿ ಲೇಡಿಯ ಆಡಿಯೋ ವೈರಲ್: ಡಿಕೆ ಶಿವಕುಮಾರ್ ಹೆಸರು ಪ್ರಸ್ತಾಪ!
ಬೆಂಗಳೂರು: ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಿಡಿ ರಾದ್ದಾಂತ ಪ್ರಕರಣ ಘಳಿಗೆಗೊಂದು ತಿರುವು ತೆಗೆದುಕೊಳ್ಳುತ್ತಿದೆ. ಅಶ್ಲೀಲ ವಿಡಿಯೋದಲ್ಲಿ ಇದ್ದಾಳೆ ಎನ್ನಲಾದ ಯುವತಿ ತನ್ನ ಸಹೋದರನೊಂದಿಗೆ ಮಾತನಾಡಿರುವ ಆಡಿಯೋ ಇಂದು ವೈರಲ್ ಆಗಿದ್ದು, ಆ ಆಡಿಯೋದಲ್ಲಿ ಯುವತಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೆಸರು ಪ್ರಸ್ತಾಪಿಸಿದ್ದಾಳೆ. ಆಡಿಯೋ ವೈರಲ್ ಆಗುತ್ತಿದ್ದಂತೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ರಮೇಶ್ ಜಾರಕಿಹೊಳಿ, ನಾಳೆ ಇದಕ್ಕಿಂತ ದೊಡ್ಡ ಬಾಂಬ್ ಇದೆ. ಸಂಜೆ 4-6 ರೊಳಗೆ ಬಿಡುಗಡೆಯಾಗಲಿದೆ …
Read More »
Laxmi News 24×7