Breaking News

ರಾಜ್ಯ

ಹುಟ್ಟೂರಿನಲ್ಲಿ ನೆರವೇರಿದ ನಿರ್ಮಾಪಕ ರಾಮು ಅಂತ್ಯ ಸಂಸ್ಕಾರ

ತುಮಕೂರು: ಕೋವಿಡ್‌ನಿಂದ ಮೃತಪಟ್ಟ ನಿರ್ಮಾಪಕ ಹಾಗೂ ನಟಿ ಮಾಲಾಶ್ರೀ ಪತಿ ರಾಮು ಅಂತ್ಯಕ್ರಿಯೆ ಕುಣಿಗಲ್ ತಾಲ್ಲೂಕಿನ ಕೊಡಗಿಹಳ್ಳಿ ಗ್ರಾಮದಲ್ಲಿರುವ ತೋಟದಲ್ಲಿ ಮಂಗಳವಾರ ಮಧ್ಯಾಹ್ನ ನೆರವೇರಿತು. ಕೋವಿಡ್ ನಿಯಮದಂತೆ ಅಂತ್ಯ ಸಂಸ್ಕಾರ ಮಾಡಲಾಯಿತು.ರಾಮು ಪಾರ್ಥೀವ ಶರೀರಕ್ಕೆ ಮಾಲಾಶ್ರೀ ಅಂತಿಮ ನಮನ ಸಲ್ಲಿಸಿದರು. ಪುತ್ರ ಆರ್ಯನ್ ಅಂತ್ಯ ಸಂಸ್ಕಾರದ ವಿಧಿಗಳನ್ನು ನೆರವೇರಿಸಿ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಪುತ್ರಿ ಅನನ್ಯ ಇದ್ದರು. ಕೋವಿಡ್‌ನಿಂದ ಬಳಲುತ್ತಿದ್ದ ಚಿತ್ರ ನಿರ್ಮಾಪಕ, ನಟಿ ಮಾಲಾಶ್ರೀ ಅವರ ಪತಿ …

Read More »

ಅಥಣಿ ಹೆಸ್ಕಾಂನಲ್ಲಿ ಭಾರಿ ಭ್ರಷ್ಟಾಚಾರ!

ಅಥಣಿ: ಪಟ್ಟಣ ಮತ್ತು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಹಾಗೂ ನಿರ್ಮಾಣಗೊಂಡ ನೂತನ ಬಡಾವಣೆಗಳಿಗೆ ವಿದ್ಯುತ್‌ ಸಂಪರ್ಕ ನೀಡುವಾಗ ಸಾಕಷ್ಟು ಅವ್ಯವಹಾರ ನಡೆದ ಬಗ್ಗೆ ಸಾರ್ವಜನಿಕರಿಂದ ಚಿಕ್ಕೋಡಿಯ ಹೆಸ್ಕಾಂ ಜಾಗೃತದಳ ಪೊಲೀಸ್‌ ಠಾಣೆಗೆ ದೂರು ಹೋಗಿದ್ದವು. ಆ ದೂರುಗಳನ್ನಾಧರಿಸಿ ಹೆಸ್ಕಾಂ ಜಾಗೃತದಳ ಪರಿಶೀಲನೆ ನಡೆಸಿ, ಮೇಲ್ನೋಟಕ್ಕೆ ಅವ್ಯವಹಾರ ಕಂಡು ಬಂದಿದ್ದರಿಂದ ಕೆಲವು ಅಂಶಗಳ ಮಾಹಿತಿ ಕೋರಿ ನೋಟಿಸ್‌ ನೀಡಿದೆ. ಯಾವುದೇ ಪೂರ್ವಾನುಮತಿ ಇಲ್ಲದೆ ನೇರವಾಗಿ ಬಡಾವಣೆಗಳಿಗೆ ವಿದ್ಯುತ್‌ ಸಂಪರ್ಕ …

Read More »

14 ದಿನ ಲಾಕ್ ಡೌನ್ ಹಿನ್ನೆಲೆ..ಗೋಕಾಕನಲ್ಲಿ‌ ಮಧ್ಯಾಹ್ನವೇ ಅಂಗಡಿ-ಮುಂಗಟ್ಟು ಬಂದ್

ಸರಕಾರದ ಕೊರಾನಾ ಹೊಸ ಮಾರ್ಗಸೂಚಿ ಬೆನ್ನಲ್ಲೆ ಗೋಕಾಕದಲ್ಲಿ ಅಂಗಡಿ ಮುಗ್ಗಟುಗಳನ್ನು ಬಂದ್ ಮಾಡಿಸಲು ಮುಂದಾದ ಪೋಲಿಸ್ ಮತ್ತು ನಗರಸಭೆ ಅಧಿಕಾರಿಗಳು. ಹೌದು ಕೊರಾನಾ2ಅಲೆಯು ತನ್ನ ಅಟ್ಟಹಾಸವನ್ನು ದಿನದಿನಕ್ಕೂ ಸಾವು ಪಡೆಯಯತ್ತಿರುವುದು ಒಂದು ಕಡೆಯಾದರೆ ಇನ್ನೊಂದು ಕಡೆ ಸಾರ್ವಜನಿಕರು ಕೊರಾನಾ ಬಗ್ಗೆ ನಿರ್ಲಕ್ಷ ವಹಿಸುತ್ತಿರುವುದು ಇನ್ನೊಂದು ಕಡೆ, ಹೇಗಾದರೂ ಮಾಡಿ ಕೊರಾನಾದಿಂದ ಸರಕಾರ ಸಾರ್ವಜನಿಕರನ್ನು ರಕ್ಷಿಸಲು ಹೊಸ ಮಾರ್ಗಸೂಚಿ ಸಂಜೆಯಿಂದ ಅನ್ವಯವಾಗಲೆಂದು ಬಿಡುಗಡೆ ಮಾಡಿತ್ತು, ಆದರೆ ಗೋಕಾಕ ನಗರದಲ್ಲಿ ಇವತ್ತು ಸಂಜೆ …

Read More »

ʼಲಾಕ್‌ ಡೌನ್ʼ ಭೀತಿಯಿಂದ ಬೆಂಗಳೂರು ತೊರೆಯುತ್ತಿರುವ ಜನ

ರಾಜ್ಯದಲ್ಲಿ ಕೊರೊನಾ ವೈರಸ್​ ತಾಂಡವವಾಡ್ತಿದೆ. ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಡೆಡ್ಲಿ ವೈರಸ್​ ಕಾಟ ಮಿತಿಮೀರಿದೆ. ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಲಾಕ್​ಡೌನ್​ ಹೇರಿದ್ದು ರಾಜ್ಯ ರಾಜಧಾನಿಯ ಬಹುತೇಕ ಮಂದಿ ಕಳೆದ ವರ್ಷದಂತೆಯೇ ಈ ವರ್ಷವೂ ಸಹ ತವರೂರಿಗೆ ವಾಪಸ್ಸಾಗ್ತಾ ಇದ್ದಾರೆ. ಕೊರೊನಾ ಬಂದರೆ ವೈದ್ಯಕೀಯ ಸೌಲಭ್ಯ ಸಿಗದೇ ಹೋದರೆ ಎನ್ನುವ ಭಯ, ಲಾಕ್​ಡೌನ್​ನಿಂದಾಗಿ ಹೊಟ್ಟೆಪಾಡು ಹೇಗೆ ಎಂಬ ಆತಂಕ ಈ ಎಲ್ಲಾ ಕಾರಣಗಳಿಂದಾಗಿ ಬೆಂಗಳೂರಿನ ಬಹುತೇಕ ಮಂದಿ ಊರು ಖಾಲಿ …

Read More »

ವರದಕ್ಷಿಣೆ ಕಿರುಕುಳಕ್ಕೆ ಮೂರು ತಿಂಗಳ ಗರ್ಭಿಣಿ ಬಲಿ

ಚಿಕ್ಕಬಳ್ಳಾಪುರ: ಮೂರು ತಿಂಗಳ ಗರ್ಭಿಣಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಕಾಶಾಪುರ ಗ್ರಾಮದಲ್ಲಿ ನಡೆದಿದೆ. ಪವಿತ್ರ (22) ಮೃತ ಮಹಿಳೆ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ದುಗ್ಗಿನಾಯ್ಕನಪಲ್ಲಿ ನಿವಾಸಿ ಪವಿತ್ರಾಳನ್ನ ಇದೇ ಬಾಗೇಪಲ್ಲಿ ತಾಲೂಕಿನ ಕಾಶಪುರ ಗ್ರಾಮದ ಮಧು ಕಳೆದ 5 ತಿಂಗಳ ಹಿಂದೆ ಮದುವೆ ಮಾಡಿಕೊಂಡಿದ್ದ. ಮದುವೆಯಾದ ನಂತರ ಪವಿತ್ರಳ ಗಂಡ ಮಧು ಹಾಗೂ ಆಕೆಯ ಅತ್ತೆ ವರದಕ್ಷಿಣೆಗಾಗಿ ಪ್ರತಿದಿನ ಒಂದಿಲ್ಲೊಂದು ರೀತಿಯಲ್ಲಿ ಹಿಯಾಳಿಸಿ …

Read More »

ಚಿತ್ರರಂಗಗಳ ಮೇಲೆ ಪರಿಣಾಮ ಬೀರುತ್ತಿರುವ ಲಾಕ್ ಡೌನ್ ಘೋಷಣೆ

ಬೆಂಗಳೂರು : ರಾಜ್ಯದಲ್ಲಿ ಲಾಕ್ ಡೌನ್ ಗೋಷಿಸಿರುವ ಹಿನ್ನಲೆಯಲ್ಲಿ ಅನೇಕ ವಿಭಾಗಗಳಿಗೆ ತೊಂದರೆ ಆಗಿದ್ದು, ಸಿನೆಮಾ ಚಿತ್ರೀಕರಣದ ಮೇಲೆ ಸರ್ಕಾರ ನಿರ್ಬಂಧ ವಿಧಿಸಿದೆ ಎಂದು ವರದಿಯಾಗಿದೆ . ಇದರಿಂದ ಸಹಜವಾಗಿಯೇ ಧಾರವಾಹಿ ಮತ್ತು ಸಿನೆಮಾ ಚಿತ್ರೀಕರಣ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ . ರಾಜ್ಯದಲ್ಲಿ ಕಠಿಣ ಕಾನೂನು ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಕೆಲವೆ ಕೆಲವು ಚಟುವಟಿಕೆಗಳಿಗೆ ಮಾತ್ರ ಸರ್ಕಾರ ಅನುಮತಿ ನೀಡಿದೆ . ಇದರಲ್ಲಿ ಸಿನೆಮಾ ಶೂಟಿಂಗ್ ಸೇರಿಲ್ಲ . ಇದರಿಂದ ಸಹಜವಾಗಿಯೇ …

Read More »

ಸಿಗದ ಆಯಂಬುಲೆನ್ಸ್: ತಾಯಿ ಶವ ಬೈಕ್ ಮೇಲೆ ಸಾಗಿಸಿದ ಮಗ

ಆಂಧ್ರ ಪ್ರದೇಶ : ಕೋವಿಡ್ ಎರಡನೇ ಅಲೆ ಮತ್ತೊಂದು ಬಾರಿ ಕರುಣಾಜನಕ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ. ದೇಶದಲ್ಲಿ ಮಹಾಮಾರಿ ಸೋಂಕು ರಣಕೇಕೆ ಹಾಕುತ್ತಿದ್ದರೆ, ಬಡಜನರು ಅಸಹಾಯಕತೆಯ ನೋಟ ಬೀರುತ್ತ ಜೀವನ ಸಾಗಿಸುತ್ತಿದ್ದಾರೆ. ಇದೀಗ ಆಂಧ್ರ ಪ್ರದೇಶದಲ್ಲಿ ಆಯಂಬುಲೆನ್ಸ್ ಸಿಗದಿದ್ದರಿಂದ ಕೋವಿಡ್ ರೋಗಿಯ ಶವವನ್ನು ಬೈಕ್‍ ಮೇಲೆ ಸಾಗಿಸಿರುವ ಮನಕಲಕುವಂತಹ ಘಟನೆ ನಡೆದಿದೆ. ಆಂಧ್ರದ ಶ್ರೀಕಾಕುಲಂ ಜಿಲ್ಲೆಯ ಮಂದಾಸ್ ಮಂಡಲ್ ಎಂಬ ಗ್ರಾಮ ಈ ಘಟನೆಗೆ ಸಾಕ್ಷಿಯಾಗಿದೆ. ಈ ಗ್ರಾಮದ 50 ವರ್ಷದ …

Read More »

ಬೆಡ್ ಗಾಗಿ ರಾತ್ರಿ ಇಡೀ ಪರದಾಡಿದ ಕೋವಿಡ್ ಸೋಂಕಿತ, ಕುಳಿತ ಚೇರ್ ನಲ್ಲೇ ಸಾವು

ಬೆಂಗಳೂರು : ನಗರದಲ್ಲಿ ಕೊರೋನಾ ಸೋಂಕಿತರಿಗೆ ಬೆಡ್ ಸಿಗದ ಪರಿಸ್ಥಿತಿ ಮುಂದುವರೆದಿದೆ. ಕೊರೋನಾ ಸೋಂಕಿತ ತಂದೆಗೆ ಚಿಕಿತ್ಸೆ ಕೊಡಿಸೋದಕ್ಕಾಗಿ ರಾತ್ರಿಯಿಡೀ ಪರದಾಡಿದ್ರೂ, ಬೆಡ್ ಸಿಗದೇ ಬೆಳಗಾಗೋ ವೇಳೆಗೆ ಸಾವನ್ನಪ್ಪಿರುವಂತ ಧಾರುಣ ಘಟನೆ ನಡೆದಿದೆ. ಯಲಹಂಕದ 62 ವರ್ಷದ ವ್ಯಕ್ತಿಗೆ ಕೊರೋನಾ ತಗುಲಿತ್ತು. ಇಂತಹ ತಂದೆಗೆ ಚಿಕಿತ್ಸೆಗಾಗಿ ಐಸಿಯು ಬೆಡ್ ಅವಶ್ಯಕತೆ ಇತ್ತು. ರಾತ್ರಿಯಿಡೀ ಪರದಾಡಿದ್ರೂ ಚಿಕಿತ್ಸೆಗಾಗಿ ಬೆಡ್ ಸಿಕ್ಕಿಲ್ಲ. ಯಲಹಂಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಚೇರಿನಲ್ಲೇ ಕುಳಿತು, ಆಕ್ಸಿಜನ್ ಹಾಕಿಸಿಕೊಂಡು ನರಳಾಡುತ್ತಿದ್ದಂತ …

Read More »

ಪಂಜಾಬ್‌ ವಿರುದ್ಧ 5 ವಿಕೆಟ್‌ಗಳಿಂದ ಗೆದ್ದ ಕೆಕೆಆರ್..!

ಅಹಮದಾಬಾದ್​: ಉತ್ತಮ ಬೌಲಿಂಗ್ ಪ್ರದರ್ಶನ, ರಾಹುಲ್ ತ್ರಿಪಾಠಿ ಹಾಗೂ ನಾಯಕ ಇಯಾನ್ ಮೋರ್ಗಾನ್ ಅಬ್ಬರದ ಬ್ಯಾಟಿಂಗ್‌ನಿಂದ ಪಂಜಾಬ್ ಕಿಂಗ್ಸ್‌ಅ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 5 ವಿಕೆಟ್‌ಗಳಿಂದ ಗೆಲುವು ದಾಖಲಿಸಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಟೂರ್ನಿಯ 21ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 124 ರನ್‌ಗಳ ಗುರಿ ನೀಡಿತ್ತು. ಈ ಸಾಧಾರಣ ಟಾರ್ಗೆಟ್ ಗುರಿ ಬೆನ್ನಟ್ಟಿದ ಕೆಕೆಆರ್ 20 ಎಸೆತಗಳು ಬಾಕಿ ಇರುವಂತೆ 5 …

Read More »

ಬಾಗಲಕೋಟೆ: ಕಾರಾಗೃಹಕ್ಕೂ ಒಕ್ಕರಿಸಿದ ಕೋವಿಡ್; ಓರ್ವ ಸಿಬಂದಿ ಸೇರಿ 39 ಕೈದಿಗಳಿಗೆ ಸೋಂಕು

ಬಾಗಲಕೋಟೆ : ನಗರದ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಕೊರೊನಾ ದಾಳಿ ಇಟ್ಟಿದ್ದು, ಓರ್ವ ಸಿಬ್ಬಂದಿ ಸೇರಿ 40 ಜನರಿಗೆ ದೃಢಪಟ್ಟಿದೆ. ಜೈಲಿನಲ್ಲಿದ್ದ 39 ವಿಚಾರಣಾಧೀನ ಖೈದಿಗಳಿಗೆ ಹಾಗೂ ಓರ್ವ ಜೈಲಿನ ಸಿಬ್ಬಂದಿಗೂ ಕೊರೊನಾ ತಗುಲಿದೆ. ಎಪ್ರಿಲ್ 24 ರಂದು ಓರ್ವ ಖೈದಿಗೆ ಕೋವಿಡ್ ದೃಢವಾಗಿತ್ತು. ಆ ಹಿನ್ನೆಲೆ ಖೈದಿಗಳು ,ಸಿಬ್ಬಂದಿ ಸೇರಿದಂತೆ 200 ಜನರ ಟೆಸ್ಟ್ ಮಾಡಲಾಗಿತ್ತು. ಕೋವಿಡ್ ಹೇಗೆ ಬಂತು ಯಾವ ಮೂಲದಿಂದ ಬಂತು ಎಂದು ಆರೋಗ್ಯ ಇಲಾಖೆ …

Read More »