ಬೆಂಗಳೂರು, ಮೇ 5: ಕೊರೊನಾ ಸೋಂಕಿತ ಮಹಿಳೆಗೆ ಖಾಸಗಿ ಆಸ್ಪತ್ರೆಯಲ್ಲಿ ಐಸಿಯು ಬೆಡ್ ಕೊಡಿಸಿ 1.20 ಲಕ್ಷ ರೂ. ಹಣ ಪೀಕಿದ್ದ ಮೂವರು ದಂಧೆಕೋರರನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಎಂ.ಎಸ್. ರಾಮಯ್ಯ ಆಸ್ಪತ್ರೆಯ ಅರೋಗ್ಯ ಮಿತ್ರ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಚೇತನ್ ಸೇರಿದಂತೆ ಮೂವರು ಬಂಧನಕ್ಕೆ ಒಳಗಾಗಿದ್ದಾರೆ. ನೆಲಮಂಗಲದ ಲಕ್ಷ್ಮಿದೇವಮ್ಮ ಎಂಬುವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಕೂಡಲೇ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಯಶವಂತಪುರದ ಪೀಪಲ್ …
Read More »ವಿಜಯಪುರ : ಸಿಡಿಲು ಬಡಿದು ಮೂವರು ಸ್ಥಳದಲ್ಲೇ ಸಾವು, ಇಬ್ಬರಿಗೆ ಗಾಯ
ವಿಜಯಪುರ: ರಾಜ್ಯಾದ್ಯಂತ ಹಲವೆಡೆ ಬುಧವಾರ ಸಂಜೆ ಗುಡುಗು, ಸಿಡಿಲಿನೊಂದಿಗೆ ಭಾರಿ ಮಳೆಯಾಗಿದ್ದು, ವಿಜಯಪುರದಲ್ಲಿ ಸಿಡಿಲು ಬಡಿದು ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಜೊತೆಗೆ ನಾಲ್ಕು ಆಡುಗಳು ಸಿಡಿಲಿನಿಂದ ಸಾವನಪ್ಪಿವೆ. ಅಶೋಕರಾಮ ಕಾರಜೋಳ(48), ಬಾಷಾಸಾಬ್ ಕರಜಗಿ(40) ಮತ್ತು ಜಾವಿದ್ ಹಾಜಿಸಾಬ್ ಜಾಲಗೇರಿ(33) ಸಾವಿಗೀಡಾಗಿದ್ದಾರೆ. ಸಬೀನಾ ಮತ್ತು ಇನ್ನೊಬ್ಬ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊಲದಿಂದ ಬರುವ ವೇಳೆ ಗಾಳಿ, ಮಳೆ ಆರಂಭವಾದ ಹಿನ್ನೆಲೆಯಲ್ಲಿ ರಕ್ಷಣೆಗಾಗಿ ಟಕ್ಕೆ ದರ್ಗಾ …
Read More »ದೂರವಾಣಿ ಮೂಲಕ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಟಾಸ್ಕ್‍ಪೋರ್ಸ್ ಸಭೆ ನಡೆಸಿದ ಬಾಲಚಂದ್ರ ಜಾರಕಿಹೊಳಿ.
ಗೋಕಾಕ: ಕೊವಿಡ್ ಸೋಂಕಿತರ ಅನುಕೂಲಕ್ಕಾಗಿ ಗೋಕಾಕ ತಾಲೂಕಿಗೆ ಆಕ್ಸಿಜನ್ ಪ್ಲಾಂಟ್ ಮಂಜೂರಾಗಿದ್ದು, ಇದರಿಂದ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಸೋಂಕಿತರಿಗೆ ತ್ವರಿತಗತಿಯಲ್ಲಿ ಸೌಲಭ್ಯ ಸಿಗಲಿದೆ ಎಂದು ಕಹಾಮ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ಇಲ್ಲಿಯ ಎನ್.ಎಸ್.ಎಫ್. ಅತಿಥಿ ಗೃಹದ ಆವರಣದಲ್ಲಿ ಕೋವಿಡ್ ಸಂಬಂಧ ಗೋಕಾಕ್ ಮತ್ತು ಮೂಡಲಗಿ ತಾಲೂಕುಗಳ ಟಾಸ್ಕ್‍ಫೆÇೀರ್ಸ್ ಸಭೆಯನ್ನು ದೂರವಾಣಿ ಮೂಲಕ ನಡೆಸಿದ ಅವರು, ಕೊರೋನಾ ನಿಯಂತ್ರಣಕ್ಕೆ ಎಲ್ಲರೂ ಶ್ರಮಿಸಬೇಕು. ಕೊರೋನಾ …
Read More »ಕೊರೊನಾ ಸೋಂಕಿಗೆ ಇಬ್ಬರು ಪೊಲೀಸರು ಬಲಿ; ಜಿಲ್ಲೆಯಾದ್ಯಂತ 25 ಸಿಬ್ಬಂದಿಗಳಿಗೆ ಕೊವಿಡ್ ಧೃಡ
ಚಿಕ್ಕಬಳ್ಳಾಪುರ: ದೇಶದಾದ್ಯಂತ ಕೊರೊನಾ ಎರಡನೇ ಅಲೆ ಅತಿ ವೇಗವಾಗಿ ಪ್ರಸರಣವಾಗುತ್ತಿದ್ದು, ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದೆ. ಇನ್ನು ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯೂ ಕೂಡ ಏರಿಕೆಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. ಆದರೆ ಸದ್ಯ ಜನ ಸಾಮಾನ್ಯರ ಮಧ್ಯದಲ್ಲಿ ನಿಂತು ಕೊರೊನಾ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಕೊರೊನಾ ಸಂಕಷ್ಟ ಎದುರಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈಗಾಗಲೇ ಇಬ್ಬರು ಪೊಲೀಸರು ಕೊರೊನಾ ಸೋಂಕಿಗೆ ಮೃತಪಟ್ಟಿದ್ದು, ಜಿಲ್ಲೆಯಲ್ಲಿ 25ಕ್ಕೂ ಹೆಚ್ಚು ಪೊಲೀಸರಲ್ಲಿ ಕೊವಿಡ್ …
Read More »ದೇಶದಲ್ಲಿ 3.82 ಲಕ್ಷ ಹೊಸ ಸೋಂಕು ಪ್ರಕರಣ ಪತ್ತೆ
ನವದೆಹಲಿ: ದೇಶದ ಕೋವಿಡ್ 19 ಸೋಂಕಿತರ ಸಂಖ್ಯೆ ಏರುಗತಿಯಲ್ಲೇ ಸಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ . ಆರೋಗ್ಯ ಇಲಾಖೆ ಇಂದು ಬಿಡುಗಡೆ ಮಾಡಿದ ವರದಿಯ ಪ್ರಕಾರ ದೇಶದಲ್ಲಿ ಕಳೆದ 24 ಗಂಟೆಯಲ್ಲಿ ದಾಖಲೆಯ 3.82 ಲಕ್ಷ ಹೊಸದಾಗಿ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು, 3780 ಮಂದಿ ಮೃತಪಟ್ಟಿದ್ದಾರೆ. ದೇಶದ ಒಟ್ಟು ಸೋಂಕಿತರ ಸಂಖ್ಯೆ 2,06,65,148ಕ್ಕೆ ಏರಿಕೆಯಾಗಿದ್ದು, ದೇಶದಲ್ಲಿ ಸದ್ಯ 34,87,229 ಸಕ್ರಿಯ ಕೋವಿಡ್ ಪ್ರಕರಣಗಳಿವೆ. ದೇಶದಲ್ಲಿ ಒಟ್ಟು ಸಾವನ್ನಪ್ಪಿದ ಕೋವಿಡ್ 19 …
Read More »ಕೊರೊನಾ ಸೋಂಕಿತ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರವು ಮೇ 10ರವರೆಗೆ ಲಾಕ್‌ಡೌನ್ ವಿಸ್ತರಿಸಿದೆ.
ಲಕ್ನೋ, ಮೇ 05: ಕೊರೊನಾ ಸೋಂಕಿತ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರವು ಮೇ 10ರವರೆಗೆ ಲಾಕ್‌ಡೌನ್ ವಿಸ್ತರಿಸಿದೆ. ಕೊರೊನಾ ವೈರಸ್ ಪ್ರಕರಣಗಳು ಮತ್ತಷ್ಟು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಾರಾಂತ್ಯದ ಲಾಕ್‌ಡೌನ್ ಅವಧಿಯನ್ನು ಮೇ 10 ರಂದು ಬೆಳಗ್ಗೆ 7 ಗಂಟೆಯವರೆಗೆ ವಿಸ್ತರಿಸಲು ಉತ್ತರ ಪ್ರದೇಶ ಸರ್ಕಾರ ಬುಧವಾರ ನಿರ್ಧರಿಸಿದೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ. ಕೊರೊನಾ ಕರ್ಫ್ಯೂ ವೇಳೆ ಎಲ್ಲಾ ಅಂಗಡಿಗಳು ಮತ್ತು ಸಂಸ್ಥೆಗಳು ಸೋಮವಾರ ಬೆಳಗ್ಗೆ 7 …
Read More »ಚಾಮರಾಜನಗರ ಆಸ್ಪತ್ರೆ ದುರಂತ ನನ್ನ ತಪ್ಪಿನಿಂದ ಆಗಿದ್ದಲ್ಲ, ಊಹಾಪೋಹ ಹಬ್ಬಿಸಬೇಡಿ’: ಮೈಸೂರು ಡಿಸಿ ರೋಹಿಣಿ ಸಿಂಧೂರಿ
ಮೈಸೂರು: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 24 ರೋಗಿಗಳು ಮೃತಪಟ್ಟ ಘಟನೆ ಬಗ್ಗೆ ಎಲ್ಲರಿಗೂ ನೋವಿದೆ, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿಕೆ ನೀಡಿದ್ದಾರೆ, ಆದರೂ ಮಾಧ್ಯಮಗಳಲ್ಲಿ ಹಲವಾರು ಊಹಾಪೋಹಗಳು ಬರುತ್ತಿವೆ, ವದಂತಿಗಳನ್ನು ಹಬ್ಬಿಸಿ ಜನತೆಯನ್ನು ತಪ್ಪು ದಾರಿಗೆಳೆಯುವುದು ಬೇಡ, ಸರ್ಕಾರ ತನಿಖೆಗೆ ಅಧಿಕಾರಿಗಳನ್ನು ನೇಮಿಸಿದೆ, ತನಿಖೆಯಲ್ಲಿ ಗೊತ್ತಾಗುತ್ತದೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಬುಧವಾರ ಪ್ರತಿಕ್ರಿಯಿಸಿದ್ದಾರೆ. ರೋಗಿಗಳು ಎಲ್ಲಿ ಸಾವಾದರೂ ಅದು ನಮಗೆ ನೋವಿನ ಸಂಗತಿಯೇ, ಅದು ನಮ್ಮ …
Read More »ಸ್ಮಶಾನದಲ್ಲಿಯೇ ಸೋಂಕಿತನ ಶವ ಬಿಸಾಡಿದ ಪಾಪಿಗಳು?
ಚಿಕ್ಕಬಳ್ಳಾಪುರ : ಇಲ್ಲಿಯ ನಿಮ್ಮಾಕಲಕುಂಟೆ ಹತ್ತಿರದ ಸ್ಮಶಾನದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಜನ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ನೋಡಿದ ಸ್ಥಳೀಯರು ಕೋವಿಡ್ ಸೋಂಕಿತ ಶವವನ್ನು ಮಣ್ಣು ಮಾಡದೆ ಬಿಸಾಡಿ ಹೋಗಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಮೃತ ದೇಹವನ್ನು ಬಿಸಾಡಿ ಮೂರ್ನಾಲ್ಕು ದಿನಗಳೇ ಕಳೆದಿವೆ. ಮೃತ ದೇಹ ಆಸ್ಪತ್ರೆಯಲ್ಲಿ ಪ್ಯಾಕ್ ಮಾಡಿದ ರೀತಿಯಲ್ಲಿದೆ. ನಾಯಿಗಳು ಮೃತದೇಹದ ಭಾಗಗಳನ್ನು ಎಳೆದು ತಿನ್ನುತ್ತಿವೆ. ಅಷ್ಟೇ ಇಲ್ಲ, ಈ ಸ್ಮಶಾನದ ಅಕ್ಕ ಪಕ್ಕದಲ್ಲಿಯೇ …
Read More »ನಟಿ ಕಂಗನಾಗೆ ಮತ್ತೊಂದು ಶಾಕ್: ಟ್ವಿಟರ್ ಬಳಿಕ ಫ್ಯಾಶನ್ ಡಿಸೈನರ್ಗಳಿಂದಲೂ ಬಹಿಷ್ಕಾರ..!
ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶದ ಬಗ್ಗೆ ಸಾಲು ಸಾಲು ಟ್ವೀಟ್ಗಳನ್ನ ಮಾಡಿದ ಕಂಗನಾ ರಣಾವತ್ ಖಾತೆಗೆ ಟ್ವಿಟರ್ ಇಂಡಿಯಾ ಕೊಕ್ ನೀಡಿದೆ. ಟ್ವಿಟರ್ ಮಾರ್ಗಸೂಚಿಗಳನ್ನ ಉಲ್ಲಂಘಿಸಿದ ಹಿನ್ನೆಲೆ ಕಂಗನಾ ರಣಾವತ್ರ ಟ್ವಿಟರ್ ಖಾತೆಯನ್ನ ಶಾಶ್ವತವಾಗಿ ಅಮಾನತು ಮಾಡಲಾಗಿದೆ. ಕಂಗನಾ ರಣಾವತ್ರನ್ನ ಟ್ವಿಟರ್ ಬಹಿಷ್ಕರಿಸಿದ ಬೆನ್ನಲ್ಲೇ ಇದೀಗ ಭಾರತೀಯ ಫ್ಯಾಷನ್ ಡಿಸೈನರ್ಗಳೂ ಸಹ ಕಂಗನಾರನ್ನ ಬಹಿಷ್ಕರಿಸಿದ್ದಾರೆ. ಡಿಸೈನರ್ ರಿಮಜಿನ್ ದಾದು ಈ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ವೊಂದನ್ನ ಶೇರ್ ಮಾಡಿದ್ದಾರೆ. ಒಳ್ಳೆಯ …
Read More »ಹಾಲು ಖರೀದಿಸುವ ಸಮಯದಲ್ಲಿ ಮದ್ಯ ಕೊಳ್ಳಲು ಯಾರು ಬರಲ್ಲ.
ಕೊಪ್ಪಳ: ಹಾಲು ಖರೀದಿಸುವ ಸಮಯದಲ್ಲಿ ಮದ್ಯ ಕೊಳ್ಳಲು ಯಾರು ಬರಲ್ಲ. ರಾಜ್ಯ ಸರ್ಕಾರ ಬಾರ್ ಗಳಿಗೆ ನೀಡಿರುವ ಸಮಯ ವ್ಯಾಪಾರಕ್ಕೆ ಸೂಕ್ತವಲ್ಲ ಎಂದು ಮದ್ಯದಂಗಡಿಗಳ ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ. ಸರ್ಕಾರ ನೀಡಿರುವ ಸಮಯದಲ್ಲಿ ನಮಗೆ ವ್ಯಾಪಾರ ಸಹ ಆಗುತ್ತಿಲ್ಲ. ಸರ್ಕಾರಕ್ಕೆ ಆದಾಯವು ಬರಲ್ಲ. ಹೀಗಾಗಿ ರಾಜ್ಯದಲ್ಲಿ ಸಂಪೂರ್ಣವಾಗಿ ಬಾರ್ ಗಳನ್ನು ಬಂದ್ ಮಾಡಿದ್ರೆ ಉತ್ತಮ ಎಂದು ಕೊಪ್ಪಳ ಬಾರ್ ಮಾಲೀಕರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತುಮಾತನಾಡಿರುವ ಮದ್ಯ ಮಾರಾಟಗಾರರು, …
Read More »
Laxmi News 24×7