ನವದೆಹಲಿ: ಕೊರೊನಾ ಎರದನೆ ಅಲೆ ನಿಯಂತ್ರಣಕ್ಕೆ 6-8 ವಾರಗಳ ಕಾಲ ಸಂಪೂರ್ಣ ಲಾಕ್ ಡೌನ್ ಜಾರಿಮಾಡಬೇಕು ಎಂದು ಐಸಿಎಂಆರ್ (ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ) ಕೇಂದ್ರ ಸರ್ಕಾರಕ್ಕೆ ಸಲಹೆ ನಿಡಿದೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಜಿಲ್ಲೆಗಳಲ್ಲಿ ಮುಂದಿನ 6-8 ವಾರಗಳ ಕಾಲ ಲಾಕ್ ಡೌನ್ ಜಾರಿ ಮಾಡುವುದು ಒಳ್ಳೆಯದು. ಕೊರೊನಾ ಚೈನ್ ಲಿಂಕ್ ಬ್ರೇಕ್ ಮಾಡಲು ಲಾಕ್ ಡೌನ್ ಅಗತ್ಯವಿದೆ ಎಂದು ಐಸಿಎಂಆರ್ ಮುಖ್ಯಸ್ಥ ಡಾ.ಬಲರಾಮ್ ಭಾರ್ಗವ ಅಭಿಪ್ರಾಯಪಟ್ಟಿದ್ದಾರೆ. …
Read More »ಸಿಇಟಿ ಪರೀಕ್ಷೆ ಮುಂದೂಡಿಕೆ: ದಿನಾಂಕ ಮರು ನಿಗದಿ ಮಾಡಲಾಗಿದೆ.
ಬೆಂಗಳೂರು: ಕೋವಿಡ್ 19 ಸೋಂಕು ಹೆಚ್ಚಳವಾಗುತ್ತಿರುವ ಕಾರಣ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ಮುಂದೂಡಿಕೆ ಮಾಡಿರುವ ಹಿನ್ನೆಲೆಯಲ್ಲಿ ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ಪರೀಕ್ಷೆಯನ್ನು ಮುಂದೂಡಿ, ದಿನಾಂಕವನ್ನು ಮರು ನಿಗದಿ ಮಾಡಲಾಗಿದೆ. ಈ ಹಿಂದೆ ಸಿಇಟಿ ಪರೀಕ್ಷೆಯನ್ನು ಜುಲೈ 7 ಮತ್ತು 8ರಂದು ನಡೆಸಲು ತೀರ್ಮಾನಿಸಲಾಗಿದೆ. ಇದೀಗ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ಮುಂದೂಡಿಕೆಯಾದ ಕಾರಣ ಸಿಇಟಿ ಪರೀಕ್ಷೆಯನ್ನು ಮುಂದೂಡಿ, ಆಗಸ್ಟ್ 28 ಮತ್ತು 29ರಂದು ನಡೆಸಲು ಕರ್ನಾಟಕ ಪರೀಕ್ಷಾ …
Read More »ಹೆಲ್ಮೆಟ್ ಧರಿಸದ ಬೈಕ್ ಸವಾರನಿಗೆ ದಂಡ ಹಾಕಿದ ಎಸ್ಐಗೆ ನಡುರಸ್ತೆಯಲ್ಲೇ ಎಸಿ, ತಹಸೀಲ್ದಾರ್ ಅವಾಜ್! ವಿಡಿಯೋ ವೈರಲ್
ಮಂಡ್ಯ: ಹೆಲ್ಮೆಟ್ ಹಾಕದೆ ಬೈಕ್ನಲ್ಲಿ ಬಂದ ಕಂದಾಯ ಇಲಾಖೆ ಸಿಬ್ಬಂದಿಗೆ ದಂಡ ಹಾಕಿದ ಸಬ್ಇನ್ಸ್ಪೆಕ್ಟರ್ಗೆ ನಡು ರಸ್ತೆಯಲ್ಲೇ ನಿಂತು ಎಸಿ ಮತ್ತು ತಹಸೀಲ್ದಾರ್ ಅವಾಜ್ ಹಾಕಿರುವ ವಿಡಿಯೋ ವೈರಲ್ ಆಗಿದೆ. ಇನ್ನುಂದೆ ಕಂದಾಯ ಇಲಾಖೆ ಸಿಬ್ಬಂದಿಗೆ ದಂಡ ಹಾಕದಂತೆ ಪೊಲೀಸರಿಗೆ ಎಸಿ ಶಿವಾನಂದಮೂರ್ತಿ, ತಹಸೀಲ್ದಾರ್ ಕುಂಞ ಅಹಮದ್ ವಾರ್ನಿಗ್ ಮಾಡಿರುವ ಘಟನೆ ನಾಗಮಂಗಲದಲ್ಲಿ ಸಂಭವಿಸಿದೆ. ನಾಗಮಂಗಲ ಟೌನ್ ಪೊಲೀಸ್ ಠಾಣೆ ಎಸ್‌ಐ ರವಿಶಂಕರ್ ನೇತೃತ್ವದ ತಂಡ ವಾಹನ ತಪಾಸಣೆ ಮಾಡುತ್ತಿದ್ದರು, …
Read More »ಹಳೆ ವೀಡಿಯೋಗೆ ಧ್ವನಿ ; ಪೊಲೀಸರಿಂದ ಪದ್ಮಾ ಹರೀಶ್ ವಿಚಾರಣೆ
ಬೆಂಗಳೂರು, : ಮುಂಬೈ ಪೊಲೀಸರು ವೃದ್ಧ ವ್ಯಕ್ತಿಯ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಿದ್ದಾರೆ ಎನ್ನಲಾದ ವಿಡಿಯೋಗೆ ಹಿನ್ನೆಲೆ ಧ್ವನಿ ಕೊಟ್ಟಿದ್ದ ಕೈ ಪಕ್ಷದ ಮಹಿಳಾ ಮಣಿ ತೊಂದರೆಯಲ್ಲಿ ಸಿಲುಕಿದ್ದಾರೆ. ಕರ್ನಾಟಕ ಪೊಲೀಸರಿಗೆ ಛೀಮಾರಿ ಹಾಕಿ ವೈರಲ್ ಮಾಡಿದ್ದ ಕೈ ಪಕ್ಷದ ಮಹಿಳಾ ಮಣಿಯೊಬ್ಬಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಸುಳ್ಳು ಸುದ್ದಿ ಹಬ್ಬಿಸಿದ ಪ್ರಕರಣ ಕುರಿತು ನಗರ ಪೊಲೀಸ್ ಆಯುಕ್ತ ಕಮಲಪಂತ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಕೈ ಪಕ್ಷದ ನಾಯಕಿ ಇದೀಗ …
Read More »ಮೈಸೂರು ತಲುಪಿದ ಆಮ್ಲಜನಕ ಟ್ಯಾಂಕ್
ಮೈಸೂರು: ಕೇಂದ್ರ ಸರ್ಕಾರವು ಆಮ್ಲಜನಕ ಎಕ್ಸ್‌ಪ್ರೆಸ್‌ನಲ್ಲಿ ಮಂಗಳವಾರ ಬೆಂಗಳೂರಿಗೆ ಸಾಗಿಸಿದ್ದ ಆಮ್ಲಜನಕದ ಒಂದು ಕಂಟೈನರ್ ಅನ್ನು (ಟ್ಯಾಂಕ್) ಬುಧವಾರ ಬೆಳಿಗ್ಗೆ ಮೈಸೂರಿಗೆ ತರಲಾಯಿತು. ಈ ಕಂಟೈನರ್‌ನಲ್ಲಿ 20 ಸಾವಿರ ಲೀಟರ್ ಆಮ್ಲಜನಕ ತುಂಬಿದೆ. ಈ ಆಮ್ಲಜನಕವನ್ನು ಸ್ಥಳೀಯವಾಗಿ ಶೇಖರಿಸಿ ಕೂಡಲೇ ಕಂಟೈನರ್ ಹಿಂದಿರುಗಿಸಬೇಕಿತ್ತು. ಆದರೆ, ಇಷ್ಟು ಆಮ್ಲಜನಕವನ್ನು ಸಂಗ್ರಹಿಸಲು ಬೇಕಾದ ಶೇಖರಣಾ ಘಟಕ ಮೈಸೂರು ಜಿಲ್ಲೆಯಲ್ಲಿ ಇರಲಿಲ್ಲ. ಹೀಗಾಗಿ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ವಿಕೋಪ ನಿರ್ವಹಣೆ ಕಾಯ್ದೆ ಪ್ರಯೋಗಿಸಿ …
Read More »ರಾಜ್ಯಕ್ಕೆ 12 ದಿನಗಳಲ್ಲಿ 8 ಲಕ್ಷ ಡೋಸ್ ಲಸಿಕೆ ಪೂರೈಕೆ: ಮುಖ್ಯ ಕಾರ್ಯದರ್ಶಿ
ಬೆಂಗಳೂರು: ’45 ವರ್ಷ ದಾಟಿದವರಿಗೆ ಕೇಂದ್ರ ಸರ್ಕಾರವೇ ಉಚಿತವಾಗಿ ಲಸಿಕೆ ನೀಡುತ್ತಿದ್ದು, ಪ್ರತಿ 15 ದಿನಕ್ಕೆ 15 ಲಕ್ಷ ಡೋಸ್ ಲಸಿಕೆ ಕೊಡಬೇಕಿತ್ತು. ಆದರೆ, ರಾಜ್ಯಕ್ಕೆ 12 ದಿನಗಳಲ್ಲಿ 8 ಲಕ್ಷ ಮಾತ್ರ ಬಂದಿದೆ’ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ತಿಳಿಸಿದ್ದಾರೆ. ‘ಮೊದಲ ಡೋಸ್ ಪಡೆದವರಿಗೆ ಎರಡನೇ ಡೋಸ್ ಕೊಡುತ್ತೇವೆ. 45 ವರ್ಷ ದಾಟಿದವರಿಗೆ ಕೊಡಲು 15 ದಿನಗಳಲ್ಲಿ 80 ಸಾವಿರ ಡೋಸ್ ಮಾತ್ರ ಕೋವ್ಯಾಕ್ಸಿನ್ ಲಸಿಕೆ ಬಂದಿದೆ. …
Read More »ಡಿಸಿಎಂ ಸವದಿ ಸಹೋದರನ ಪುತ್ರ ಕೊರೊನಾ ಸೋಂಕಿಗೆ ಬಲಿ
ಬೆಂಗಳೂರು; ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಸಹೋದರನ ಪುತ್ರ ವಿನೋದ್ ಸವದಿ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ. ಡಿಸಿಎಂ ಸವದಿ ಅವರ ಸಹೋದರ ಪರಪ್ಪ ಸವದಿ ಅವರ ಪುತ್ರ ವಿನೋದ್ ಸವದಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ. ಕೇವಲ 36 ವರ್ಷದ ವಿನೋದ್ ಸವದಿ ಕೊರೊನಾಗೆ ಬಲಿಯಾಗಿರುವುದು ಕುಟುಂಬದವರಿಗೆ ಬರಸಿಡಿಲುಬಡಿದಂತಾಗಿದೆ.
Read More »ಕೊರೋನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ ಸಂಸತ್ ನಿರ್ಮಾಣ ಕಾರ್ಯ ಬೇಕಿತ್ತಾ?: ಎಂ.ಬಿ. ಪಾಟೀಲ್ ಪ್ರಶ್ನೆ
ವಿಜಯಪುರ: ದೇಶದಲ್ಲಿ ಜನರು ಸಾಯುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ಮಾತ್ರ ರಾಜಪಥ ಅಭಿವೃದ್ಧಿ, ಪ್ರಧಾನಮಂತ್ರಿಗಳ ನಿವಾಸ, ಉಪರಾಷ್ಟ್ರಪತಿಗಳ ನಿವಾಸದ ಪ್ರಗತಿಗೆ ಸಾವಿರಾರು ಕೋಟಿ ವ್ಯಯಿಸುತ್ತಿದೆ. ಕೊರೋನಾ ಸಾಂಕ್ರಾಮಿಕ ರೋಗ ಸಮಯದಲ್ಲಿ ಸಂಸತ್ ನಿರ್ಮಾಣ ಕಾರ್ಯ ಬೇಕಿತ್ತಾ ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ್ ಅವರು ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ವಿರುದ್ದ ಹರಿಹಾಯ್ದಿದ್ದಾರೆ. ಪ್ರಧಾನಿ ಮೋದಿಯವರು ಈ ಹಿಂದೆ ಯಾವ ಮಹಾರಾಜರು ಮಾಡದ ರೀತಿಯಲ್ಲಿ ವರ್ತಿಸುತ್ತಿದ್ದಾರೆ. …
Read More »ಹಿರಿಯ ಕಾಂಗ್ರೆಸ್ ಮುಖಂಡರೂ, ಮಾಜಿ ಪತ್ರಕರ್ತರೂ ಆಗಿದ್ದ ಹುಕ್ಕೇರಿಯ ಪ್ರಕಾಶ ದೇಶಪಾಂಡೆ ನಿಧನರಾಗಿದ್ದಾರೆ.
ಹುಕ್ಕೇರಿ – ಹಿರಿಯ ಕಾಂಗ್ರೆಸ್ ಮುಖಂಡರೂ, ಮಾಜಿ ಪತ್ರಕರ್ತರೂ ಆಗಿದ್ದ ಹುಕ್ಕೇರಿಯ ಪ್ರಕಾಶ ದೇಶಪಾಂಡೆ ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಕೊರೋನಾದಿಂದಾಗಿ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವಿವಿಧ ಪತ್ರಿಕೆಗಳಿಗೆ ಬಿಡಿ ವರದಿಗಾರರಾಗಿ ಹಲವಾರು ವರ್ಷ ಕಾರ್ಯನಿರ್ವಹಿಸಿದ್ದರು. ಕಾಂಗ್ರೆಸ್ ಪಕ್ಷದಲ್ಲಿ, ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಸೇವಾದಳದಲ್ಲಿ ಕೆಲಸ ಮಾಡಿದ್ದರು. ಸಧ್ಯ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಹುಕ್ಕೇರಿ ಘಟಕದ ಅಧ್ಯಕ್ಷರಾಗಿಯೂ ಕೆಲಸ ಮಾಡುತ್ತಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ. …
Read More »ಕರ್ನಾಟಕದಲ್ಲಿ ಈವರೆಗೆ ಎಷ್ಟು ಜನರಿಗೆ ಲಸಿಕೆ ಹಾಕಲಾಗಿದೆ ಎಂಬ ಮಾಹಿತಿ ಹಂಚಿಕೊಂಡ ಸಚಿವ ಡಾ.ಸುಧಾಕರ್
ಬೆಂಗಳೂರು: ಕರ್ನಾಟಕದಲ್ಲಿ ಈವರೆಗೆ 1,07,59,572 ಜನರಿಗೆ ಕೊವಿಡ್ ಲಸಿಕೆ ನೀಡಲಾಗಿದೆ. 18 ರಿಂದ44 ವರ್ಷದೊಳಗಿನ 41,803 ಜನರಿಗೆ ಲಸಿಕೆ ಹಾಕಲಾಗಿದೆ. ಕರ್ನಾಟಕಕ್ಕೆ ಅಂದಾಜು 6.52 ಕೋಟಿ ಲಸಿಕೆ ಅಗತ್ಯವಿದೆ. ಹೀಗಾಗಿ ಸದ್ಯ ಕೇಂದ್ರ ಸರ್ಕಾರದ ಬಳಿ 2 ಕೋಟಿ ಕೊವಿಶೀಲ್ಡ್, 1 ಕೋಟಿ ಕೊವ್ಯಾಕ್ಸಿನ್ ಡೋಸ್ ಲಸಿಕೆ ಒದಗಿಸುವಂತೆ ಬೇಡಿಕೆ ಇಟ್ಟಿದ್ದೇವೆ. ಸೇರಮ್ ಸಂಸ್ಥೆಯಿಂದ ಕೊವಿಶೀಲ್ಡ್ ಲಸಿಕೆ ಪಡೆಯಲಾಗಿದೆ. ಭಾರತ್ ಬಯೋಟೆಕ್ ಸಂಸ್ಥೆ ಇನ್ನೂ ಕೊವ್ಯಾಕ್ಸಿನ್ ಪೂರೈಸಿಲ್ಲ. ಮೇ 3ನೇ …
Read More »
Laxmi News 24×7