ವಿಜಯಪುರ: ದೇಶದ ಆರ್ಥಿಕ ಸ್ಥಿತಿ ಗಂಭೀರವಾಗಿದೆ. ಈ ಗಂಭೀರ ಸ್ಥಿತಿಯನ್ನು ತಡೆಗಟ್ಟಲು ದೇಶದ 100 ಕೋಟಿ ಜನರಿಗೆ ಕೋವಿಡ್ ತಡೆ ಲಸಿಕೆ (ವ್ಯಾಕ್ಸಿನೆಷನ್) ಮಾಡುವುದೊಂದೆ ಶಾಶ್ವತ ಪರಿಹಾರ. ಆದಷ್ಟು ಬೇಗ ಲಸಿಕೆಯನ್ನು ನೀಡಬೇಕು ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ. ಕೊರೊನಾ ಮಹಾಮಾರಿ ಮೊದಲನೇ ಅಲೆ ಮುಗಿದು, ಸದ್ಯ ಎರಡನೇಯ ಅಲೆಯ ಹಾನಿಯನ್ನು ಅನುಭವಿಸುತ್ತಿರುವ ನಮ್ಮ ದೇಶಕ್ಕೆ ಮುಂದೆ 3ನೇ ಅಲೆ ಆತಂಕವೂ ಇದೆ. ಈ ಕಾರಣದಿಂದ ದೇಶದಲ್ಲಿ ಲಕ್ಷಾಂತರ …
Read More »ಅತ್ಯಾಚಾರವೆಸಗಿ, ಮಹಿಳೆಯನ್ನ ವಿದ್ಯುತ್ ಕಂಬಕ್ಕೆ ನೇತು ಹಾಕಿದ ಕಾಮುಕರು
ಪಾಟ್ನಾ: ಬಿಹಾರದ ಸಮಸ್ತಿಪುರ ಜಿಲ್ಲೆಯಲ್ಲಿ ಅಮಾನವೀಯ ಘಟನೆವೊಂದು ನಡೆದಿರುವುದು ಬೆಳಕಿಗೆ ಬಂದಿದೆ. ಮಹಿಳೆಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ನಂತರ, ಆಕೆಯನ್ನ ವಿದ್ಯುತ್ ಕಂಬಕ್ಕೆ ನೇತು ಹಾಕಿರುವ ಪ್ರಕರಣ ನಡೆದಿದೆ. ಸಮಸ್ತಿಪುರ ಜಿಲ್ಲೆಯ ವಿಭೂತಿಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬೆಳಗ್ಗೆ ಶೌಚಕ್ಕಾಗಿ ಮನೆಯಿಂದ ಹೊರಗಡೆ ಹೋಗಿದ್ದ ಸಂದರ್ಭದಲ್ಲಿ ಮಹಿಳೆಗೆ ಕಿರುಕುಳ ನೀಡಿರುವ ದುಷ್ಕರ್ಮಿಗಳು ಅತ್ಯಾಚಾರವೆಸಗಿದ್ದಾರೆ. ಈ ವೇಳೆ ಪ್ರಜ್ಞೆ ತಪ್ಪಿರುವ ಆಕೆಯನ್ನ ವಿದ್ಯುತ್ ಕಂಬಕ್ಕೆ ಕಟ್ಟಿ ನೇತು …
Read More »ಆಕ್ಸಿಜನ್ ಸರಿಯಾಗಿ ಪೂರೈಕೆಯಾಗದೆ ದಾವಣಗೆರೆಯಲ್ಲಿ ಸೋಂಕಿತೆ ಸಾವು
ದಾವಣಗೆರೆ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಆಕ್ಸಿಜನ್ ಸಮಸ್ಯೆಯೂ ದೊಡ್ಡ ಮಟ್ಟದಾಗಿ ಕಾಡುತ್ತಿದೆ. ಸರಿಯಾದ ಸಮಯಕ್ಕೆ ಆಕ್ಸಿಜನ್ ಪೂರೈಕೆ ಆಗದೆ ಈಗಾಗಲೇ ಹಲವರು ಮೃತಪಟ್ಟಿದ್ದಾರೆ. ಹರಿಹರ ತಾಲೂಲು ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತೆ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಆಕ್ಸಿಜನ್ ಸರಿಯಾಗಿ ಪೂರೈಕೆಯಾಗದೆ ಸೋಂಕಿತೆ ಸಾವನ್ನಪ್ಪಿದ್ದಾರೆ. ಸಾಯುವುದಕ್ಕೂ ಮುನ್ನ ಸೋಂಕಿತೆ ವಿಡಿಯೋ ಮಾಡಿದ್ದಾರೆ. ಸಾಯುವುದಕ್ಕೂ ಮುನ್ನ ಅಕ್ಸಿಜನ್ ಬರುತ್ತಿಲ್ಲ ಎಂದು ಸೋಂಕಿತ ಮಹಿಳೆ ವಿಡಿಯೋ ಮಾಡಿದ್ದಾರೆ. ಸರಿಯಾದ ಸಮಯಕ್ಕೆ …
Read More »ಕೊರೊನಾ ಪಾಸಿಟಿವ್ ಇದ್ದರೂ ಹೆರಿಗೆ ಮಾಡಿಸಿ ಧೈರ್ಯ ತುಂಬಿದ ವೈದ್ಯ
ಮುದ್ದೇಬಿಹಾಳ: ಎಲ್ಲೆಡೆ ಕೊರೊನಾ ಮಹಾಮಾರಿ ಸೋಂಕು ಹೆಚ್ಚಾಗುತ್ತಿದ್ದು, ಮನೆ ಸದಸ್ಯರೇ ಸೋಂಕಿಗೊಳಗಾದವರನ್ನ ಮುಟ್ಟಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ತಾಲೂಕಿನ ಕಾಳಗಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರೊಬ್ಬರು ಕೊರೊನಾ ಸೋಂಕಿತ ಗರ್ಭಿಣಿಗೆ ಹೆರಿಗೆ ಮಾಡಿಸಿ ಧೈರ್ಯ ತುಂಬಿದ್ದಾರೆ. ಕೊರೊನಾ ಪಾಸಿಟಿವ್ ಇದ್ದರೂ ಹೆರಿಗೆ ಮಾಡಿಸಿ ಧೈರ್ಯ ತುಂಬಿದ ವೈದ್ಯತಾಲೂಕಿನ ಕಾಳಗಿ ಸಮುದಾಯ ಆರೋಗ್ಯ ಕೇಂದ್ರ ಎರಡು ಬಾರಿ ಕಾಯಕಲ್ಪ ಪ್ರಶಸ್ತಿಗೆ ಭಾಜನವಾಗಿದ್ದು, ಹೆರಿಗೆಗೆಂದು ಬರುವ ಗರ್ಭಿಣಿಯರಿಗೆ ಒಳ್ಳೆಯ ಸೌಲಭ್ಯ ಕಲ್ಪಿಸಲಾಗಿದೆ. ಸದ್ಯಕ್ಕೆ …
Read More »ಫೋಟೋ ಮೇಲೆ ಹಾಲು ಸುರಿಯದೆ ಹಸಿದವರಿಗೆ ನೀಡಿ ಎಂದ ಸೋನು ಸೂದ್
ಮುಂಬೈ: ಕೊರೊನಾ ಸಂಕಷ್ಟದಲ್ಲಿ ನೆರವಿಗೆ ನಿಂತಿರು ಬಾಲಿವುಡ್ ನಟ ಸೋನು ಸೂದ್ ಅಭಿಮಾನಿಗಳಿಗೆ ದೊಡ್ಡ ಕರೆಯೊಂದನ್ನು ನೀಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ. ದಯಮಾಡಿ ಎಲ್ಲರೂ ಹಾಲನ್ನು ಉಳಿಸಿ, ಅಗತ್ಯ ಇರುವವರಿಗೆ ನೀಡಿ. ಯಾರೂ ನನ್ನ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಬೇಡಿ ಎಂದು ಮನವಿ ಮಾಡಿಕೊಂಡು ಟ್ವೀಟ್ ಮಾಡಿ ಸೋನು ಅವರ ಭಾವ ಚಿತ್ರಕ್ಕೆ ಹಾಲಿನ ಅಭೀಷೆಕ ಮಾಡುತ್ತಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಆಂಧ್ರಪ್ರದೇಶದ ಕುರ್ನೂಲ್ ಮತ್ತು ನೆಲ್ಲೂರಿನಲ್ಲಿ ಸೋನು ಸೂದ್ ಫೋಟೋಗೆ ಹಾಲಿನ …
Read More »: ಕೇಂದ್ರ ಸರ್ಕಾರದ ನೂತನ ಐಟಿ ನಿಯಮಗಳನ್ನು ಪ್ರಶ್ನಿಸಿ ಫೇಸ್ ಬುಕ್ ಒಡೆತನದ ವಾಟ್ಸ್ ಆಯಪ್ ದೆಹಲಿ ಹೈಕೋರ್ಟ್ ನಲ್ಲಿ ದೂರು
ನವದೆಹಲಿ: ಕೇಂದ್ರ ಸರ್ಕಾರದ ನೂತನ ಐಟಿ ನಿಯಮಗಳನ್ನು ಪ್ರಶ್ನಿಸಿ ಫೇಸ್ ಬುಕ್ ಒಡೆತನದ ವಾಟ್ಸ್ ಆಯಪ್ ದೆಹಲಿ ಹೈಕೋರ್ಟ್ ನಲ್ಲಿ ದೂರು ದಾಖಲಿಸಿದೆ ಎಂದು ವರದಿ ತಿಳಿಸಿದೆ. ಅದಾಗ್ಯೂ ಈ ಮಾಹಿತಿ ಖಚಿತವಾಗಿಲ್ಲ. ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯವು ನೂತನ ಐಟಿ ನಿಯಮಗಳನ್ನು ಜಾರಿ ಮಾಡಲು ಸಾಮಾಜಿಕ ಜಾಲತಾಣಗಳಿಗೆ ನೀಡಿರುವ ಗಡುವು ಬುಧವಾರ (26-5-2021) ಮುಗಿಯಲಿದ್ದು, ಇದಕ್ಕೆ ತಡೆ ಕೋರಿ ಕ್ಯಾಲಿಫೋರ್ನಿಯಾ ಮೂಲದ ವಾಟ್ಸಾಪ್ ಕಾನೂನು ಹೋರಾಟಕ್ಕಿಳಿದಿದೆ. “ಮಾಹಿತಿಯ ಪ್ರಾಥಮಿಕ …
Read More »ಪೊಲೀಸರಿಂದಲೇ ಚಿನ್ನ ಕಳ್ಳತನ ಪ್ರಕರಣ ತನಿಖೆ ಬೆಳಗಾವಿ ಜಿಲ್ಲೆ ಹಾಗೂ ರಾಜ್ಯದಲ್ಲಿ ಕೆಲ ಹಿರಿಯ ಪೊಲೀಸ ಅಧಿಕಾರಿಗಳಲ್ಲಿ ನಡುಕ
ಬೆಳಗಾವಿ : ಪೊಲೀಸರಿಂದಲೇ ಚಿನ್ನ ಕಳ್ಳತನ ಪ್ರಕರಣ ತನಿಖೆ ಬೆಳಗಾವಿ ಜಿಲ್ಲೆ ಹಾಗೂ ರಾಜ್ಯದಲ್ಲಿ ಕೆಲ ಹಿರಿಯ ಪೊಲೀಸ ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿದೆ. ಯಮಕನಮರಡಿ ಠಾಣೆ ವ್ಯಾಪ್ತಿಯಲ್ಲಿ ನಡೆದ 2.5 ಕೋಟಿ ಬೆಲೆ ಬಾಳುವ ಐದು ಕೆ.ಜಿ. ಚಿನ್ನ ಪ್ರಕರಣದಲ್ಲಿ ಅದರ ಸಿಐಡಿ ಅಧಿಕಾರಿಗಳು ಕಿರಣ್ ವೀರನಗೌಡರ್ ಎಂಬ ಡಿಲ್ ನ ಮಧ್ಯವರ್ತಿ ವ್ಯಕ್ತಿಯ ಜನ್ಮ ಜಾಲಾಡಿದ್ದಾರೆ. ಕಿರಣ ವೀರನಗೌಡರ ಹಿರಿಯ ಅಧಿಕಾರಿಗಳೊಂದಿಗೆ ಸಂಪರ್ಕ ಹೊಂದಿದ್ದು, ಅಕ್ರಮಗಳ ಬಗ್ಗೆ ಪೊಲೀಸರಿಗೆ …
Read More »ಸಿದ್ದರಾಮಯ್ಯ ಮೇಲೆ ಜಮೀರ್ ಅತಿಯಾದ ಗುರುಭಕ್ತಿ: ಹೈಕಮಾಂಡ್ ಕೆಂಗಣ್ಣು
ಬೆಂಗಳೂರು, ಮೇ 25: ಇತ್ತೀಚೆಗೆ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಜೊತೆಗಿನ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ತೀವ್ರ ಮುಜುಗರಕ್ಕೆ ಒಳಗಾದರಾ? ಹೌದು ಎನ್ನುವ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಕಾರಣ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಮೇಲೆ ಜಮೀರ್ ಅಹ್ಮದ್ ತೋರುತ್ತಿರುವ ಅತಿಯಾದ ಪ್ರೀತಿ, ವಿಶ್ವಾಸವೇ ಕಾರಣ. ಒಂದು ವೇಳೆ ಕಾಂಗ್ರೆಸ್ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ, ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಚರ್ಚೆಯನ್ನು …
Read More »ಬೆಳಗಾವಿಯಲ್ಲಿ ಅಮಿತ್ ಶಾ ನೇತೃತ್ವದಲ್ಲಿ ಸಮಾವೇಶ: ಆಯೋಜಕರ ವಿರುದ್ಧ ಎಫ್‌ಐಆರ್ ಯಾಕಿಲ್ಲ; ಹೈಕೋರ್ಟ್ ಪ್ರಶ್ನೆ
ಬೆಂಗಳೂರು, : ಬೆಳಗಾವಿಯಲ್ಲಿ ಜ.17ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಸಮಾವೇಶದಲ್ಲಿ ಕೋವಿಡ್-19 ಮಾರ್ಗಸೂಚಿಗಳ ಉಲ್ಲಂಘನೆ ಕುರಿತು ಸಲ್ಲಿಸಿರುವ ಅರ್ಜಿ ಸಂಬಂಧ ಅಲ್ಲಿನ ನಗರ ಪೊಲೀಸ್ ಆಯುಕ್ತರು ಸಲ್ಲಿಸಿರುವ ಪ್ರಮಾಣ ಪತ್ರಕ್ಕೆ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆಯ ಅನುಸಾರ ಕ್ರಮ ಕೈಗೊಂಡಿಲ್ಲ. ತಪ್ಪಿತಸ್ಥರಿಗೆ ಕೇವಲ ದಂಡ ವಿಧಿಸಲಾಗಿದೆ. ಪೊಲೀಸ್ ಆಯುಕ್ತರಿಗೆ ಕಾಯ್ದೆಯ ಬಗ್ಗೆ ಅರಿವಿದ್ದಂತೆ ಕಾಣುತ್ತಿಲ್ಲ …
Read More »ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಮಾತು..?
ಬೆಂಗಳೂರು: ಬಳ್ಳಾರಿ ಜಿಲ್ಲೆ ತೋರಣಗಲ್‌ನಲ್ಲಿ ಜಿಂದಾಲ್ ಕಂಪನಿಗೆ 3,677 ಎಕರೆ ಭೂಮಿ ಪರಭಾರೆ ಮಾಡಿರುವುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರವನ್ನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಸಂಬಂಧ ಚರ್ಚೆ ನಡೆಸಲು ಕೂಡಲೇ ಶಾಸಕಾಂಗ ಪಕ್ಷದ ಸಭೆ ಕರೆಯಬೇಕು ಎಂದು ಶಾಸಕರು ಒತ್ತಡ ಹೇರಲು ಆರಂಭಿಸಿದ್ದಾರೆ. ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯ, ಹೆಚ್ಚುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕೆಂಬ ವಿಷಯದಲ್ಲಿ ಕೂಡ ಶಾಸಕರು ಒಗ್ಗೂಡುತ್ತಿರುವುದು ಪಕ್ಷದಲ್ಲಿನ ಹೊಸ ಬೆಳವಣಿಗೆಯಾಗಿದೆ. ಪಕ್ಷ ಮತ್ತು ಸರ್ಕಾರದಲ್ಲಿನ ಈ …
Read More »
Laxmi News 24×7