ಗೋಕಾಕ: ಕೊರೋನಾ ಚೈನ್ ಬ್ರೇಕ್ ಮಾಡಲು ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ವಾರದ ಕೊನೆಯ ಮೂರು,ದಿನ,ಶುಕ್ರವಾರದಿಂದ,ಸೋಮವಾರಮುಂಜಾನೆ 6 ಗಂಟೆಯವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಿಸಿದ್ದು, ಇಂತಹ ಸಂದರ್ಭದಲ್ಲಿ ಯಾರು ಕೂಡಾ ಮನೆಯಿಂದ ಹೊರಗಡೆ ಬಾರದೆ ಸಹಕರಿಸುವಂತೆ ಗೋಕಾಕ ನಗರ ಠಾಣೆ ಪಿಎಸ್‌ಐ ಕೆ ವಾಲಿಕಾರ ಇವರು ಸಾರ್ವಜನಿಕರಿಗೆ ತಿಳಿಸಿದ್ದಾರೆ. ಇನ್ನು ಕೊರೋನಾ ಸೋಂಕು ಹರಡದಂತೆ ಬೆಳಗಾವಿ ಜಿಲ್ಲಾ ಪೋಲಿಸ್ ಇಲಾಖೆಯಿಂದ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು,ಕೊರೋನಾ ನಿಯಂತ್ರಿಸಲು ಪೊಲೀಸರು ಸಾಕಷ್ಟು …
Read More »ಮೂಡಲಗಿಗೆ ಶೀಘ್ರ ಅಗ್ನಿಶಾಮಕ ಠಾಣೆ ಮಂಜೂರು : ಶಾಸಕ-ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ : ಮೂಡಲಗಿಯಲ್ಲಿ ಹೊಸದಾಗಿ ಅಗ್ನಿಶಾಮಕ ಠಾಣೆಯನ್ನು ಮಂಜೂರಾತಿ ಪಡೆಯಲು ಇಷ್ಟರಲ್ಲಿಯೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳಲಾಗುವುದು ಎಂದು ಶಾಸಕ ಹಾಗೂ ಕಹಾಮ ಅಧ್ಯಕ್ಷರು ಬಾಲಚಂದ್ರ ಜಾರಕಿಹೊಳಿಯವರು ತಿಳಿಸಿದ್ದಾರೆ. ಕಳೆದ ಮಂಗಳವಾರದಂದು ಅಗ್ನಿಶಾಮಕ ಇಲಾಖೆಯೂ ಹೊರಡಿಸಿದ ನೂತನವಾಗಿ ರಚನೆಯಾಗಿರುವ ಅಗ್ನಿಶಾಮಕ ಠಾಣೆಯ ಪಟ್ಟಿಯಲ್ಲಿ ಮೂಡಲಗಿಯನ್ನು ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು ಮೂಡಲಗಿಯಲ್ಲಿ ಅತಿ ಶೀಘ್ರವೇ ಅಗ್ನಿಶಾಮಕ ಠಾಣೆಯ ಮಂಜೂರಾತಿ …
Read More »ಬುಲ್ಬುಲ್’ ಸಿನಿಮಾ ನಟಿ ಜತೆ ಅನುಷ್ಕಾ ಶರ್ಮಾ ಸಹೋದರನ ಡೇಟಿಂಗ್
ಸೆಲೆಬ್ರಿಟಿಗಳು ಮಾತ್ರವಲ್ಲ ಅವರ ಕುಟುಂಬದವರ ಮೇಲೂ ಅಭಿಮಾನಿಗಳು ಕಣ್ಣಿಟ್ಟಿರುತ್ತಾರೆ. ತಮ್ಮಿಷ್ಟದ ನಟ/ನಟಿಯ ಕುಟುಂಬದವರು ಏನು ಮಾಡುತ್ತಾರೆ? ಯಾರ ಜತೆ ಸುತ್ತಾಟ ನಡೆಸುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಈಗ ನಟಿ ಅನುಷ್ಕಾ ಶರ್ಮಾ ಅವರ ಸಹೋದರ ಕರ್ಣೇಶ್ ಶರ್ಮಾ ಮೇಲೆ ಅಭಿಮಾನಿಗಳ ಕಣ್ಣುಬಿದ್ದಿದೆ. ಅಷ್ಟೇ ಅಲ್ಲ ಅವರ ಡೇಟಿಂಗ್ ವಿಚಾರವನ್ನು ಅಭಿಮಾನಿಗಳು ಬಯಲಿಗೆಳೆದಿದ್ದಾರೆ. ನೆಟ್ಫ್ಲಿಕ್ಸ್ನಲ್ಲಿ ರಿಲೀಸ್ ಆದ ಬುಲ್ಬುಲ್ ಸಿನಿಮಾ ನಟಿ ತೃಪ್ತಿ ದಿಮ್ರಿ ನಟಿಸಿದ್ದರು. ಈಗ ಅವರ …
Read More »ಆಸ್ಪತ್ರೆಯಲ್ಲಿ ಮಾಡಬಾರದ್ದು ಮಾಡಿ ಸಿಕ್ಕಿಬಿದ್ದ ಪ್ರೇಮಿಗಳು! ಇವರ ಕೃತ್ಯ ಕೇಳಿದ್ರೆ ಹಿಡಿಶಾಪ ಹಾಕೋದು ಗ್ಯಾರಂಟಿ
ಹುಬ್ಬಳ್ಳಿ: ಮಹಾಮಾರಿ ಕರೊನಾ ಮರಣಮೃದಂಗ ಬಾರಿಸುತ್ತಲೇ ಇದೆ. ಲೆಕ್ಕವಿಲ್ಲದಷ್ಟು ಸೋಂಕಿತರಿಗೆ ಸಮಯಕ್ಕೆ ಸರಿಯಾಗಿ ಆಸ್ಪತ್ರೆ ಬಳಿ ಬೆಡ್, ಆಕ್ಸಿಜನ್, ವೆಂಟಿಲೇಟರ್ ಬೆಡ್, ಔಷಧ, ರೆಮಿಡಿಸಿವರ್ ಇಂಜಕ್ಷನ್ ಸಿಗದೆ ಸಾಯುತ್ತಿದ್ದಾರೆ. ಇಂತಹ ಸಂಕಷ್ಟ ಕಾಲದಲ್ಲೂ ಇಲ್ಲೊಂದು ಜೋಡಿ ಅಮಾನವೀಯವಾಗಿ ವರ್ತಿಸಿ ಜೈಲು ಸೇರಿದ್ದಾರೆ. ಹುಬ್ಬಳ್ಳಿಯ ವೆಂಕಟೇಶ್ವರ ಕಾಲನಿಯ ಸಿದ್ದನಗೌಡಾ ಪಾಟೀಲ್ ಮತ್ತು ವಿನಾಯಕನಗರದ ರಿಯಾ ಬಂಧಿತರು. ಸುಚಿರಾಯು ಆಸ್ಪತ್ರೆಯಲ್ಲಿ ಕ್ಲೀನರ್ ಆಗಿ ಸಿದ್ದನಗೌಡ ಕೆಲಸ ಮಾಡುತ್ತಿದ್ದ. ಹುಬ್ಬಳ್ಳಿ ನಗರದ ತತ್ವದರ್ಶಿ ಆಸ್ಪತ್ರೆಯ …
Read More »ಮಾಜಿ ಸ್ಪೀಕರ್ ರಮೇಶ್ಕುಮಾರ್ ಪ್ರತಿಭಟನೆ: ಲಾಕ್ಡೌನ್ ವೇಳೆ ಕಿರುಕುಳ ನೀಡ್ತಿದ್ದ PSI ಅಮಾನತು
ಕೋಲಾರ: ಲಾಕ್ಡೌನ್ ಸಂದರ್ಭದಲ್ಲಿ ಆಂಧ್ರ ಹಾಗೂ ಕರ್ನಾಟಕ ಗಡಿಯ ಚೆಕ್ಪೋಸ್ಟ್ನಲ್ಲಿ ರೈತರ ವಾಹನಗಳನ್ನು ಹಿಡಿದು ಕಿರುಕುಳ ನೀಡುತ್ತಿದ್ದ ಆರೋಪದಲ್ಲಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ರಾಯಲ್ಪಾಡು ಪೊಲೀಸ್ ಠಾಣೆ ಪಿಎಸ್‌ಐ ನರಸಿಂಹಮೂರ್ತಿ ಯನ್ನು ಅಮಾನತು ಮಾಡಲಾಗಿದೆ. ಶ್ರೀನಿವಾಸಪುರ ಕ್ಷೇತ್ರದ ಶಾಸಕ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ಗೆ ಸ್ಥಳೀಯರಿಂದ ಪಿಎಸ್‌ಐ ನರಸಿಂಹ ಮೂರ್ತಿ ಅವರು ಸಾರ್ವಜನಿಕರಿಗೆ ಅನತ್ಯವಾಗಿ ಕಿರುಕುಳ ನೀಡಿ ಜನರಿಂದ ಹಣ ವಸೂಲಿ ಮಾಡುತಿದ್ದಾರೆ ಎಂಬ ದೂರು ಬಂದ …
Read More »ಪ್ರಿಯತಮೆಯನ್ನು ಕರೆಸಿಕೊಳ್ಳಲು 10 ತಿಂಗಳ ಮಗುವನ್ನೇ ಕಿಡ್ನಾಪ್ ಮಾಡಿದ್ದ ಪಾಗಲ್ ಪ್ರೇಮಿ ಅರೆಸ್ಟ್
ತುಮಕೂರು: ಪ್ರಿಯತಮೆಗಾಗಿ 10 ತಿಂಗಳ ಮಗುವನ್ನೇ ಯುವಕ ಅಪಹರಿಸಿರುವ ಘಟನೆ ತುಮಕೂರು ನಗರದ ಪುರೋಸ್ ಕಾಲೋನಿಯಲ್ಲಿ ನಡೆದಿದೆ. ತನ್ನ ಪ್ರಿಯತಮೆಯನ್ನು ತನ್ನ ಬಳಿ ಕರೆಸಿಕೊಳ್ಳಲು ಯುವಕ 10 ತಿಂಗಳ ಪುಟ್ಟ ಮಗುವನ್ನು ಅಪಹರಣ ಮಾಡಿದ್ದ. ಸದ್ಯ ಈಗ ಆರೋಪಿ ಅರೆಸ್ಟ್ ಆಗಿದ್ದಾನೆ. 25 ವರ್ಷದ ಸಿದ್ದಿಕ್ ಮತ್ತು ಸಲ್ಮಾ ಇಬ್ಬರೂ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸ್ತಿದ್ದರು. ಅಲ್ಲದೆ ಇದರ ನಡುವೆ ಸಿದ್ದಿಕ್, ಸಲ್ಮಾ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಇಬ್ಬರೂ …
Read More »ಮೈಸೂರಿನಲ್ಲಿ ಇಂಜಿನಿಯರ್ ಸಾವು! 2 ತಿಂಗಳ ಹಿಂದಷ್ಟೇ ಮದ್ವೆ ಆಗಿದ್ದವರ ಬಾಳಿಗೆ ಕೊಳ್ಳಿ ಇಟ್ಟ ಕರೊನಾ..
ಮೈಸೂರು: ನೂರಾರು ಕನಸಿನ ಬುತ್ತಿಯೊಂದಿಗೆ ಎರಡು ತಿಂಗಳ ಹಿಂದಷ್ಟೇ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಅಷ್ಟರಲ್ಲಿ ಸುಖಸಂಸಾರಕ್ಕೆ ಬಂದಪ್ಪಳಿಸಿದ ಮಹಾಮಾರಿ ಕರೊನಾ, ನವವಿವಾಹಿತನ ಪ್ರಾಣ ತೆಗೆದ ಹೃದಯವಿದ್ರಾವಕ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಆಲನಹಳ್ಳಿ ಬಡಾವಣೆ ನಿವಾಸಿ, ಇಂಜಿನಿಯರ್ ನವೀನ್ ಕುಮಾರ್ ಮೃತ ದುರ್ದೈವಿ. ಬೆಂಗಳೂರಿನ ಜೈನ್ ವಿವಿಯಲ್ಲಿ ಕೆಲಸ ಮಾಡುತ್ತಿದ್ದ ನವೀನ್, ಎರಡು ತಿಂಗಳ ಹಿಂದಷ್ಟೆ ಮದುವೆ ಆಗಿದ್ದರು. ಇತ್ತೀಚಿಗೆ ತೀವ್ರ ಉಸಿರಾಟದ ಬಳಲುತ್ತಿದ್ದ ನವೀನ್, ಬೆಂಗಳೂರಿನಿಂದ …
Read More »ಲಸಿಕೆ ಪಡೆದವರ ಸಂಖ್ಯೆ ೨೨ ಕೋಟಿಗೂ ಅಧಿಕ
ನವದೆಹಲಿ, : ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯ ನಡುವೆ ಲಸಿಕೆ ವಿತರಣೆ ವೇಗ ಹೆಚ್ಚಿಸಲಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 22 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಲಸಿಕೆ ವಿತರಿಸಲಾಗಿದೆ. ದೇಶದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಆರಂಭವಾಗಿ 138 ದಿನಗಳಲ್ಲಿ 22,08,62,449 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಬುಧವಾರ ರಾತ್ರಿ 7 ಗಂಟೆ ವೇಳೆಗೆ 22,45,112 ಮಂದಿಗೆ …
Read More »ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ದಕ್ಷಿಣದ ಇಬ್ಬರು ನಟಿಯರ ರಕ್ಷಣೆ, ಮೂವರ ಬಂಧನ
ಥಾಣೆ: ಮಹಾರಾಷ್ಟ್ರದ ಥಾಣೆಯಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆಯಿಂದ ದಕ್ಷಿಣ ಭಾರತದ ಇಬ್ಬರು ನಟಿಯರನ್ಬು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ನಗರದ ನೌಪಡ ಪ್ರದೇಶದ ಫ್ಲ್ಯಾಟ್‌ನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ‘ಅಮೃತ್ ನಗರದ ಮಹಿಳೆಯೊಬ್ಬರು ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಬಗ್ಗೆ ಮಾಹಿತಿ ದೊರೆತಿದ್ದು, ಪೊಲೀಸರು ಗ್ರಾಹಕರ …
Read More »ಕೊರೊನಾ ಮಧ್ಯೆ ಶುರುವಾಯ್ತು ಜನರಿಗೆ ಚಿಕನ್ ಗುನ್ಯಾ ಕಾಟ
ಧಾರವಾಡ: ಕೊರೊನಾ ಮಧ್ಯೆ ಗ್ರಾಮವೊಂದಕ್ಕೆ ಕೊರೊನಾ ಮಧ್ಯದಲ್ಲಿ ಈಗ ಚಿಕನ್ ಗುನ್ಯಾ ಕಾಟ ಆರಂಭವಾಗಿದೆ. ಜಿಲ್ಲೆಯ ಲಕಮಾಪುರ ಎಂಬ 2 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಚಿಕನ್ ಗುನ್ಯಾ ಕಾಣಿಸಿಕೊಂಡಿದ್ದು. ಕಳೆದ ವಾರ ಗ್ರಾಮದಲ್ಲಿ ಕೈ ಕಾಲು ಬೇನೆ ಬಂದವರಿಗೆ ತಪಾಸಣೆ ಮಾಡಿಸಿದಾಗ, ಗ್ರಾಮದ ಒಬ್ಬರಲ್ಲಿ ಚಿಕನ್ ಗುನ್ಯಾ ಪತ್ತೆಯಾಗಿತ್ತು. ನಂತರ ಗ್ರಾಮದಲ್ಲಿ ಇದು ಹೆಚ್ಚಾಗಬಾರದೆಂದು ಆರೋಗ್ಯ ಇಲಾಖೆಯವರು ಲಾರ್ವಾ ಸರ್ವೇ ಕೂಡಾ ಮಾಡಿಸಿದ್ದರು. ಈಗ ಗ್ರಾಮದಲ್ಲಿ ಚಿಕನ್ ಗುನ್ಯಾ …
Read More »
Laxmi News 24×7