ಗೋಕಾಕ: ಇಂದು ಗೋಕಾಕ ನಗರದಲ್ಲಿ ಸಂಭ್ರಮದ ದಿನ ಸಡಗರದ ದಿನ ಯಾಕಂದ್ರೆ ಇವತ್ತು ಛೋಟಾ ಸಾಹುಕಾರರ ಹುಟ್ಟು ಹಬ್ಬದ ದಿನ ಸದಾ ಸಮಾಜಮುಖಿ ಕಾರ್ಯ ಗಳಲ್ಲಿ ತೊಡಗಿಕೊಂಡ ಶ್ರೀ ಲಖನ ಜಾರಕಿಹೊಳಿ ಅವರ ಹುಟ್ಟು ಹಬ್ಬ ರಾಜ್ಯ ದೇಶ ಈ ಒಂದು ಕೋವಿದ್ ಕಾರಣ ದಿಂದಾಗಿ ತತ್ತರಿಸಿ ಹೋಗಿದೆ ಇಂತ ಒಂದು ಸಂಧರ್ಭದಲ್ಲಿ ಸಂಭ್ರ ಮಾಚರಣೆ ಬೇಡ ಎಂದು ಛೋಟಾ ಸಾಹುಕಾರರು ಅಭಿಮಾನಿ ವೃಂದಕ್ಕೆ ತಿಳಿಸಿದ್ದರು ಅದರ ಪ್ರೇರಣೆ ಯಾಗಿ …
Read More »ಅಕ್ರಮ ಮರಳು ಅಡ್ಡೆಯ ಮೇಲೆ ದಾಳಿ ನಡೆಸಿದ ಅಧಿಕಾರಿ:ಅಧಿಕಾರಿಗಳ ಮೇಲೆ ಕಲ್ಲು ತೂರಾಟ
ಬೆಳಗಾವಿ: ಅಕ್ರಮ ಮರಳು ಅಡ್ಡೆಯ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ಮೇಲೆ 20ಕ್ಕೂ ಹೆಚ್ಚು ದಂಧೆಕೋರರು ಕಲ್ಲುತೂರಾಟ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆ ಯಮಕನಮರಡಿಯಲ್ಲಿ ನಡೆದಿದೆ. ಅಕ್ರಮವಾಗಿ ಮರಳು ದಂಧೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಗಣಿ ಮತ್ತು ಭೂ ವಿಜ್ನಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಅಧಿಕಾರಿಗಳ ಮೇಲೆಯೇ ಮುಗಿಬಿದ್ದ ದಂಧೆಕೋರರು ಕಲ್ಲುತೂರಾಟ ನಡೆಸಿ, ಇಲಾಖೆ ವಾಹನಗಳ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ. ಘಟನೆಯಲ್ಲಿ ಚಾಲಕ …
Read More »ಸರ್ಕಸ್ ಕಲಾವಿದರಿಗೆ ದಿನಸಿ ಸಾಮಗ್ರಿ ವಿತರಿಸಿದ ಶಾಸಕ ಗಣೇಶ ಹುಕ್ಕೇರಿ
ಚಿಕ್ಕೋಡಿ: ಲಾಕ್‍ಡೌನ್ ಆಗುವ ಮೊದಲು ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದಲ್ಲಿ ಸರ್ಕಸ್ ಪ್ರದರ್ಶಿಸಲು ಸರ್ಕಸ್ ಕಲಾವಿದರು ಆಗಮಿಸಿದ್ದರು. ಲಾಕ್‍ಡೌನ್ ಹಿನ್ನೆಲೆಯಲ್ಲಿ ಪ್ರದರ್ಶನ ಇಲ್ಲದೆ ಹಣ, ಊಟವಿಲ್ಲದೆ ಕೊರಗುತ್ತಿದ್ದ ಸರ್ಕಸ್ ಕಲಾವಿದರಿಗೆ ಶಾಸಕ ಗಣೆಶ್ ಹುಕ್ಕೇರಿ ದಿನಸಿ ಸಾಮಾಗ್ರಿ ವಿತರಿಸಿದ್ದಾರೆ. ಸರ್ಕಸ್ ಕಂಪನಿಯ ಕಲಾವಿದರು ಸಂಕಷ್ಟದಲ್ಲಿ ಇರುವುದನ್ನು ಮನಗಂಡು, ಚಿಕ್ಕೋಡಿ-ಸದಲಗಾ ಕ್ಷೇತ್ರದ ಶಾಸಕ ಗಣೇಶ ಹುಕ್ಕೇರಿ ಸುಮಾರು ಆರವತ್ತಕ್ಕೂ ಹೆಚ್ಚು ಕಲಾವಿದರಿಗೆ ಒಂದು ತಿಂಗಳಿಗೆ ಸಾಕಾಗುವಷ್ಟು ರೇಶನ್ ಹಾಗೂ ಗೃಹಪಯೋಗಿ ಸಾಮಗ್ರಿಗಳನ್ನು …
Read More »ನಮ್ಮೊಂದಿಗೆ ದೇವರಿದ್ದಾನೆ, ನಮಗೆ ಲಸಿಕೆ ಬೇಡ: ಕೊರೋನಾ ಲಸಿಕೆ ಪಡೆಯಲು ಗದಗದ ಜನರ ವಿರೋಧ
ಗದಗ: ಗಾಢ ನಂಬಿಕೆಗಳು ಕೂಡ ಕೆಲವೊಮ್ಮೆ ಜನರನ್ನು ಅಪಾಯಕ್ಕೆ ಸಿಲುಕಿಸಿಬಿಡುತ್ತವೆ. ದೇವರ ಮೇಲೆ ಗಾಢ ನಂಬಿಕೆ ಇಟ್ಟಿರುವ ಗದಗ ಜಿಲ್ಲೆಯ ದಾವಲ್ ಮಲ್ಲಿಕ್ ಗ್ರಾಮಸ್ಥರು ಕೊರೋನಾ ಲಸಿಕೆ ಪಡೆಯಲು ವಿರೋಧ ವ್ಯಕ್ತಪಡಿಸಿದ್ದಾರೆ. ಲಸಿಕೆ ಬಗ್ಗೆ ಅನುಮಾನ ಬೇಡ. ಧೈರ್ಯವಾಗಿ ಲಸಿಕೆಯನ್ನು ಪಡೆಯಬಹುದು ಎಂದು ವೈದ್ಯರು ಈ ಬಗ್ಗೆ ಸ್ಪಷ್ಟಪಡಿಸಿದ್ದರೂ ಗ್ರಾಮಸ್ಥರು ಈ ಬಗ್ಗೆ ನಂಬಿಕೆ ಇಲ್ಲದಂತೆ ವರ್ತಿಸುತ್ತಿದ್ದಾರೆ. ಗದಗ ತಾಲೂಕಿನ ಮುಳಗುಂದದ ದಾವಲ್ ಮಲ್ಲಿಕ್ ದರ್ಗಾ ಬಳಿಯ ವ್ಯಾಪಾರಿಗಳು ಲಸಿಕೆ …
Read More »ಪೆಟ್ರೋಲ್, ಡಿಸೇಲ್ ದರ ಹೆಚ್ಚಿಸಲು ಬಿಜೆಪಿ ನಾಯಕರಿಗೆ ನಾಚಿಕೆಯಾಗಲ್ವೇ : ಸಿದ್ದು ಕಿಡಿ
ಬೆಂಗಳೂರು : ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ವಿರುದ್ಧವೇ ಪ್ರತಿಭಟನೆ ಮಾಡಿ ಅಧಿಕಾರಕ್ಕೆ ಬಂದ ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಪೆಟ್ರೋಲ್ ಡೀಸೆಲ್ ದರ 100 ರೂ. ಗಡಿ ದಾಟಿದರೂ ತುಟಿಕ್ ಪಿಟಿಕ್ ಎನ್ನುತ್ತಿಲ್ಲ ಎಂಬ ಜನ ಸಾಮಾನ್ಯರ ಆಕ್ರೊಶದ ಬೆನ್ನಿಗೆ ಈಗ ಕಾಂಗ್ರೆಸ್ ಕೂಡ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದು, ಪ್ರತಿಭಟನೆಯ ಎಚ್ಚರಿಕೆಯನ್ನು ಕೂಡ ನೀಡಿದೆ. ಈ ಬಗ್ಗೆ ಟ್ವೀಟರ್ ಖಾತೆಯ ಮೂಲಕ …
Read More »ನಾನು ಸಹಿ ಹಾಕಿಲ್ಲ, ಯಾವುದೇ ಊಹಾ ಪೋಹಗಳಿಗೆ ಕಿವಿಗೊಡುವ ಅಗತ್ಯವಿಲ್ಲ .: –ಶಶಿಕಲಾ ಜೊಲ್ಲೆ ,
ಗದಗ: ಕೋವಿಡ್ 2ನೇ ಅಲೆಯ ಸೋಂಕಿನಿಂದ ಹೆತ್ತವರನ್ನು ಕಳೆದುಕೊಂಡ ಗದಗ ಜಿಲ್ಲೆಯ ಇಬ್ಬರು ಸಹಿತ ರಾಜ್ಯದಲ್ಲಿ 32 ಮಕ್ಕಳು ಅನಾಥರಾಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ಜಿಲ್ಲೆಯಲ್ಲಿ ಒಬ್ಬ ಆಶಾ ಕಾರ್ಯಕರ್ತೆ ಮರಣ ಹೊಂದಿದ್ದು, ಅವರ ಕುಟುಂಬಕ್ಕೆ 30 ಲ.ರೂ. ಪರಿಹಾರ ನೀಡಲಾಗಿದೆ. ಕೋವಿಡ್ ಸೋಂಕಿನಿಂದ ಹೆತ್ತವರನ್ನು ಕಳೆದುಕೊಂಡ ಮಕ್ಕಳಿಗೆ ರಾಜ್ಯ ಸರಕಾರ ದಿಂದ ಬಾಲ ಸೇವಾ ಯೋಜನೆಯನ್ನು ಜಾರಿಗೆ ತರಲಾಗಿದೆ. …
Read More »ಮತ್ತೂಮ್ಮೆ ಅನಾಥ ಮಕ್ಕಳ ಸರ್ವೇ: ಸಚಿವೆ ಜೊಲ್ಲೆ
ಕೊಪ್ಪಳ: ಕೋವಿಡ್ ನಿಂದ ಹೆತ್ತವರನ್ನು ಕಳೆದುಕೊಂಡ ಮಕ್ಕಳಿಗೆ ಸರಕಾರವೇ ಆಸರೆಯಾಗ ಲಿದೆ. ಕೆಲವು ಕಾರಣಗಳಿಂದ ಮಕ್ಕಳ ಅಂಕಿಅಂಶದಲ್ಲಿ ಸಣ್ಣಪುಟ್ಟ ಲೋಪಗಳಿರಬಹುದು. ಹಾಗಾಗಿ ಸರಕಾರದಿಂದ ಮತ್ತೂಮ್ಮೆ ಸರ್ವೇ ನಡೆಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಾಥ ಮಕ್ಕಳ ಪಾಲನೆಯನ್ನು ಸರಕಾರವೇ ನೋಡಿ ಕೊಳ್ಳಲಿದೆ. ಕೆಲವು ಜಿಲ್ಲೆಗಳಲ್ಲಿ ಅನಾಥ ಮಕ್ಕಳ ಕುರಿತು ವರದಿಯಾಗಿಲ್ಲ. ಹಾಗಾಗಿ ಮತ್ತೂಮ್ಮೆ ಸರ್ವೇಗೆ ಸೂಚಿಸಲಾಗಿದೆ. ಬಾಲ …
Read More »ಬಡಪತ್ರಕರ್ತನ ಕುಟುಂಬದ ಸಂಕಷ್ಟಕ್ಕೆ ಸ್ಪಂದಿಸಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ….?
ಕೋವಿಡ್ ಗೆ ಬಲಿಯಾದ ಹಿರಿಯ ಪತ್ರಕರ್ತ ಸಂಜೀವಕುಮಾರ ನಾಡಿಗೇರ ಕುಟುಂಬಕ್ಕೆ ಒಂದು ಲಕ್ಷ ರೂ. ವೈಯಕ್ತಿಕ ಧನಸಹಾಯ ಬೆಳಗಾವಿ: ಎಷ್ಟೇ ಅಧಿಕಾರ, ಶ್ರೀಮಂತಿಕೆ ಇದ್ದರೂ ಬಡವರ ಸಂಕಷ್ಟಕ್ಕೆ ಮಿಡಿಯುವ ಮನಸ್ಸಿರುವುದು ಮುಖ್ಯ. ಹೃದಯ ಶ್ರೀಮಂತಿಕೆ, ಉದಾರ ಮನೋಭಾವದವರಲ್ಲಿ ಮಾತ್ರ ಇಂತಹ ಗುಣ ಕಾಣಲು ಸಾಧ್ಯ. ಇಂತಹ ಅಪರೂಪದ ರಾಜಕಾರಣಿಗಳ ಸಾಲಿನಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮತ್ತೊಮ್ಮೆ ಸಾಬೀತುಪಡಿಸಿದರು. ಹಾದು, ಪತ್ರಿಕಾರಂಗದಲ್ಲಿ ಸುಮಾರು ಇಪ್ಪತ್ತು ವರ್ಷಗಳ ಕಾಲ …
Read More »ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಅವರ ಪ್ರವಾಸದ ವಿವರ ಇಂತಿದೆ. ಸತೀಶ ಜಾರಕಿಹೊಳಿ….
ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಜೂನ್ 11 ರಿಂದ ಜೂ.14 ರವರೆಗೂ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಅವರ ಪ್ರವಾಸದ ವಿವರ ಇಂತಿದೆ. ಜೂ.11 ಹಾಗೂ 13 ರಂದು ಗೋಕಾಕನಲ್ಲಿ ಇರಲಿದ್ದಾರೆ. 14 ರಂದು ಜಿಲ್ಲೆಯ ವಿವಿಧ ತಾಲೂಕು ಆಸ್ಪತ್ರೆ ಹಾಗೂ ಗ್ರಾಮಗಳಿಗೆ ಭೇಟಿ ನೀಡಲಿದ್ದಾರೆ. 14 ರಂದು ಮಧ್ಯಾಹ್ನ 12ಕ್ಕೆ ಅಥಣಿ ತಾಲೂಕು ಆಸ್ಪತ್ರೆ, ಮಧ್ಯಾಹ್ನ 2 ಗಂಟೆಗೆ ಅಥಣಿ ತಾಲೂಕಿನ ಐನಾಪುರ, …
Read More »: ಸರ್ಕಾರದ ವಿರುದ್ಧ ಕರವೇ ಪ್ರತಿಭಟನೆ ‘ ಉಚಿತ ಲಸಿಕೆ ನೀಡಿ..ಇಲ್ಲವೇ ಅಧಿಕಾರ ಬಿಡಿ’
ಬೆಳಗಾವಿ : ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಕಾರ್ಯಾಕರ್ತರು ತಾಲೂಕಾಧ್ಯಕ್ಷರಾದ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿ #ಉಚಿತ_ಲಸಿಕೆ_ಕೊಡಿ_ಇಲವೇ_ ಅಧಿಕಾರ ಬಿಡಿ ಎಂದು ಕೇಂದ್ರ ಸರಕಾರದ ವಿರುದ್ಧ ನಗರದ ವಾಲ್ಮೀಕಿ ವೃತ್ತದಲ್ಲಿ ಇಂದು ಪ್ರತಿಭಟನೆ ನಡೆಸಿದರು. *ಹಕ್ಕೊತ್ತಾಯಗಳು* *1. ಉಚಿತ ಲಸಿಕೆ* ರಾಜ್ಯದ ಎಲ್ಲ ನಾಗರಿಕರಿಗೂ ಬಡವ-ಶ್ರೀಮಂತನೆಂಬ ಭೇದವಿಲ್ಲದೆ ಉಚಿತವಾಗಿಯೇ ಲಸಿಕೆ ಕೊಡಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಹಣಕ್ಕೆ ಸಿಗುವ ಲಸಿಕೆಯಿಂದಾಗಿ ಅಸಮಾನತೆ ಸೃಷ್ಟಿಯಾಗುತ್ತದೆ. ಹೀಗಾಗಿ …
Read More »
Laxmi News 24×7