Breaking News

ರಾಜ್ಯ

2024ರ ಸಾರ್ವತ್ರಿಕ ಚುನಾವಣೆ ಗುರಿ: ಎರಡನೇ ಬಾರಿ ಶರದ್ ಪವಾರ್, ಪ್ರಶಾಂತ್ ಕಿಶೋರ್ ಚರ್ಚೆ

ಮುಂಬಯಿ: ಭಾರತೀಯ ಜನತಾ ಪಕ್ಷದ ವಿರುದ್ಧ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೋರಾಡುವ ನಿಟ್ಟಿನಲ್ಲಿ 2024ರ ಚುನಾವಣೆಯ ಪೂರ್ವಸಿದ್ಧತೆಗಾಗಿ ಎರಡು ವಾರಗಳ ಅವಧಿಯಲ್ಲಿ ಚುನಾವಣಾ ನೀತಿ ತಂತ್ರಗಾರ ಪ್ರಶಾಂತ್ ಕಿಶೋರ್ ಅವರನ್ನು ಎನ್ ಸಿಪಿ ಮುಖಂಡ ಎರಡನೇ ಬಾರಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಮುಂಬಯಿಯ ಶರದ್ ಪವಾರ್ ನಿವಾಸದಲ್ಲಿ ಜೂನ್ 11ರಂದು ಕಿಶೋರ್ ಜತೆ ಚರ್ಚೆ ನಡೆಸಿದ ನಂತರ ಇದೀಗ ದೆಹಲಿಯಲ್ಲಿ ಇಬ್ಬರು ಭೇಟಿಯಾಗಿ ಮಾತುಕತೆ ನಡೆಸಿರುವುದಾಗಿ ವರದಿ …

Read More »

ಲೋಂಡಾ ರೈಲು ನಿಲ್ದಾಣದ ಒಂದನೇ ಪ್ಲಾಟ್ ಫಾರ್ಮ್ ಕೆಲಕಾಲ ಜಲಾವೃತ

ಖಾನಾಪುರ: ಶನಿವಾರ ಇಡೀ ದಿನ ಸತತ ವರ್ಷಧಾರೆಯ ಪರಿಣಾಮ ತಾಲ್ಲೂಕಿನ ಲೋಂಡಾ ಗ್ರಾಮದ ಬಳಿ ಹರಿಯುವ ಪಾಂಡರಿ ನದಿಯಲ್ಲಿ ಪ್ರವಾಹವೇರ್ಪಟ್ಟಿದ್ದರಿಂದ ಲೋಂಡಾ ರೈಲು ನಿಲ್ದಾಣದ ಒಂದನೇ ಪ್ಲಾಟ್ ಫಾರ್ಮ್ ಕೆಲಕಾಲ ಜಲಾವೃತಗೊಂಡ ಘಟನೆ ಸಂಭವಿಸಿದೆ. ಶನಿವಾರ ಮಧ್ಯಾಹ್ನದ ಬಳಿಕ ಲೋಂಡಾ ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಪಾಂಡರಿ ನದಿಯ ನೀರು ಹರಿದುಬಂದಿದ್ದರಿಂದ ಕೆಳ ಸೇತುವೆ, ಪ್ರವೇಶದ್ವಾರ, ರೈಲ್ವೆ ಹಳಿಗಳು, ಮೊದಲ ಪ್ಲಾಟ್ ಫಾರ್ಮ್ ಸೇರಿದಂತೆ ರೈಲು ನಿಲ್ದಾಣ ಮತ್ತು ಅಕ್ಕಪಕ್ಕದ …

Read More »

ಕೊರೊನಾ ಗಂಡಾಂತರ ಕಾಲದಲ್ಲಿ ನಮ್ಮ ದೇಶದ ಯೋಗ ಭರವಸೆಯ ಆಶಾ ಕಿರಣವಾಗಿದೆ : ಪ್ರಧಾನಿ ಮೋದಿ

ನವದೆಹಲಿ: ಕೊರೊನಾ ಗಂಡಾಂತರ ಕಾಲದಲ್ಲಿ ನಮ್ಮ ದೇಶದ ಯೋಗ ಭರವಸೆಯ ಆಶಾ ಕಿರಣವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 7ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಮಾತನಾಡಿದ ಅವರು, ಭಾರತದಲ್ಲಿ ಕೊರೋನಾ ವೈರಸ್ ಎಂಬ ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಎರಡು ವರ್ಷಗಳಿಂದ ಯಾವುದೇ ಸಾರ್ವಜನಿಕ ಸಭೆ, ಸಮಾರಂಭ-ಕಾರ್ಯಕ್ರಮಗಳು ನಡೆದಿಲ್ಲ. ಆದರೂ ಜನರಲ್ಲಿ ಯೋಗದ ಬಗ್ಗೆ ಇರುವ ಉತ್ಸಾಹ, ಆಸಕ್ತಿ ಇನ್ನೂ ಕಡಿಮೆಯಾಗಿಲ್ಲ ಎಂದರು. ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು …

Read More »

ಆಂಬುಲೆನ್ಸ್ ನಿಂದ ಜಿಗಿದು ರಸ್ತೆ ಮಧ್ಯೆದಲ್ಲೇ ಕತ್ತು ಕೊಯ್ದುಕೊಂಡು ವ್ಯಕ್ತಿ ಆತ್ಮಹತ್ಯೆ!

ಚಲಿಸುತ್ತಿದ್ದ ಆಂಬುಲೆನ್ಸ್ ನಿಂದ ಜಿಗಿದ ಮಾನಸಿಕ ಅಸ್ವಸ್ಥನೊಬ್ಬ ರಸ್ತೆ ಮಧ್ಯೆದಲ್ಲೇ ಕತ್ತು ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ಭೀಕರ ಘಟನೆ ಮೈಸೂರು ಜಿಲ್ಲೆಯ ತಿ‌. ನರಸೀಪುರ ತಾಲೂಕಿನಲ್ಲಿ ನಡೆದಿದೆ. ತಿ. ನರಸೀಪುರ ತಾಲೂಕಿನ ಕನ್ನಳ್ಳಿ ಮೋಳೆ ಗ್ರಾಮದ ಶಿವಣ್ಣ (42) ಮೃತ ವ್ಯಕ್ತಿ.‌ ಮಾನಸಿಕ‌ ಅಸ್ವಸ್ಥ ಶಿವಣ್ಣನನ್ನು ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಆಯಬುಲೆನ್ಸ್​ನಿಂದ ಜಿಗಿದು ರಸ್ತೆ ಮಧ್ಯೆ ಕುಳಿತು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ‌. ಈತನ ವರ್ತನೆ ಕಂಡು ಸಾರ್ವಜನಿಕರು …

Read More »

ಮೂರನೇ ಅಲೆ ತಡೆಗೆ ಮಹತ್ವದ ಕ್ರಮ: ಆರೋಗ್ಯ ವ್ಯವಸ್ಥೆ ಉತ್ತಮ ಪಡಿಸಲು 7500 ವೈದ್ಯ ಸಿಬ್ಬಂದಿ ನೇಮಕ

ಮೈಸೂರು: ಕೊರೋನಾ ಮೂರನೇ ಅಲೆ ನಿಯಂತ್ರಣಕ್ಕೆ ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ, ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಡಾ.ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ. ಮೈಸೂರು ಜಿಲ್ಲೆ ಸರಗೂರಿನ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಆವರಣದಲ್ಲಿ ಕೋವಿಡ್ ವಾರ್ಡ್ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈದ್ಯರು, ನರ್ಸುಗಳು, ಡಿ ಗ್ರೂಪ್, ಪ್ಯಾರಾ ಮೆಡಿಕಲ್ ಸೇರಿದಂತೆ 7500 ವೈದ್ಯ ಸಿಬ್ಬಂದಿಯನ್ನು ಶೀಘ್ರದಲ್ಲೇ ನೇಮಕ ಮಾಡಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಮೂರನೇ ಅಲೆ ಸೇರಿ …

Read More »

ತರಕಾರಿ, ಸೊಪ್ಪು ಕಾಲಿನಿಂದ ಒದ್ದು ಚೆಲ್ಲಾಪಿಲ್ಲಿ ಮಾಡಿ ದರ್ಪ ತೋರಿದ್ದ PSI ಸಸ್ಪೆಂಡ್

ತರಕಾರಿ, ಸೊಪ್ಪನ್ನು ಕಾಲಿನಿಂದ ಒದ್ದು ದರ್ಪ ತೋರಿಸಿದ್ದ ರಾಯಚೂರು ಸದರ ಬಜಾರ್ ಠಾಣೆ ಪಿಎಸ್‌ಐ ಆಜಂ ಖಾನ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ರಾಯಚೂರು ಎಸ್.ಪಿ. ಪ್ರಕಾಶ್ ನಿಕ್ಕಂ ಅವರು ಪಿಎಸ್‌ಐ ಅಜಂ ಅವರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ. ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ರಾಯಚೂರಿನ ಚಂದ್ರಮೌಳೇಶ್ವರ ವೃತ್ತದಲ್ಲಿ ತರಕಾರಿ, ಸೊಪ್ಪನ್ನು ಮಾರಾಟ ಮಾಡುತ್ತಿದ್ದು, ಅಲ್ಲಿಗೆ ಬಂದ ಅಜಂ ಕಾಲಿನಿಂದ ತರಕಾರಿ, ಸೊಪ್ಪು ಒದ್ದು ಚೆಲ್ಲಾಪಿಲ್ಲಿ ಮಾಡಿದ್ದರು. ರಾಯಚೂರಿನ ಚಂದ್ರಮೌಳೇಶ್ವರ ವೃತ್ತದ …

Read More »

ಬಸ್, ಹೋಟೆಲ್, ಚಿತ್ರೀಕರಣ ಪುನಾರಂಭ: ಮಾಲ್, ಈಜುಕೊಳ, ಸಿನಿಮಾ ಮಂದಿರಕ್ಕೆ ನಿರ್ಬಂಧ; ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಬಸ್ ಸಂಚಾರ ಸೇರಿ ಬಹುತೇಕ ಎಲ್ಲಾ ಚಟುವಟಿಕೆ ಪುನಾರಂಭವಾಗಲಿವೆ. ಬಸ್‌ ಮತ್ತು ಮೆಟ್ರೋ ಸಂಚಾರಕ್ಕೆ ಅವಕಾಶ ನೀಡಿ ಶೇಕಡ 50 ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಣೆಗೆ ಅನುಮತಿ ನೀಡಿದೆ. ದಕ್ಷಿಣ ಕನ್ನಡ ಮತ್ತು ಮೈಸೂರು ಜಿಲ್ಲೆಗಳನ್ನು ಹೊರತುಪಡಿಸಿ 28 ಜಿಲ್ಲೆಗಳಲ್ಲಿ ಬಸ್ ಸಂಚಾರ ಶುರುವಾಗಿದೆ. ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವುದರಿಂದ ಬಸ್ ಗಳ ಸಂಖ್ಯೆ ಕೂಡ ವಿರಳವಾಗಿದೆ. ಇಂದಿನಿಂದ ಎಲ್ಲಾ ಅಂಗಡಿಗಳನ್ನು ಸಂಜೆ 5 ಗಂಟೆವರೆಗೆ ತೆರೆಯಲು …

Read More »

ಗೋಕಾಕ ತಾಲೂಕಿನ ಅನ್ ಲಾಕ್ ನಿಯಮ ಜಾರಿ

ಗೋಕಾಕ  ತಾಲೂಕಿನಲ್ಲಿ ಕಳೆದ ಒಂದು ವಾರದ Covid 19 ಪಾಜಿಟಿವಿಟಿ ದರದ ಆಧಾರದ ಮೇಲೆ ಮತ್ತು ಸರ್ಕಾರದ ನಿರ್ದೇಶನದಂತೆ ದಿನಾಂಕ: 21.06.2021, ಬೆಳಿಗ್ಗೆ 6.00 ರಿಂದ 05.07.2021, ಬೆಳಿಗ್ಗೆ 5.00 ರ ವರೆಗೆ ನಿರ್ಬಂಧಗಳ ಸಡಿಲಿಕೆಗಳನ್ನು ನೀಡಲಾಗಿದೆ.   • ಎಲ್ಲಾ ಅಂಗಡಿಗಳನ್ನು ಸಂಜೆ 5.00 ಗಂಟೆವರೆಗೆ ತೆರೆಯಲು ಅನುವು ಮಾಡಿಕೊಡಲಾಗಿದೆ. • ಎಸಿ. ಚಾಲನೆಗೊಳಿಸದೇ ಹೋಟೆಲ್‌, ಕ್ಲಬ್ಸ್‌, ರೆಸ್ಟೋರೆಂಟ್‌ಗಳಲ್ಲಿ (ಮದ್ಯಪಾನ ಹೊರತುಪಡಿಸಿ) ಕುಳಿತು ತಿನ್ನಲು ಸಂಜೆ 5.00 ಗಂಟೆವರೆಗೆ …

Read More »

ಕೋವಿಡ್ ನಿಯಂತ್ರಣಕ್ಕೆ ತಮ್ಮ ಶಾಸಕರ ಪ್ರದೇಶಾಭಿವೃದ್ದಿ ನಿಧಿ ಸಂಪೂರ್ಣ ಬಳಕೆ-ಶಾಸಕ ಬಾಲಚಂದ್ರ ಜಾರಕಿಹೊಳಿ.

  ಗೋಕಾಕ: ಕೊರೋನಾ ಒಂದು ಮತ್ತು ಎರಡನೇ ಅಲೆಯು ಮಾನವ ಸಂಕುಲನಕ್ಕೆ ಮಹಾಮಾರಿಯಾಗಿ ಕಾಡುತ್ತಿದ್ದು, ದೇವರ ದಯೆಯಿಂದ ಮೂರನೇ ಅಲೆ ಬರಬಾರದು. ಒಂದು ವೇಳೆ ಬಂದರೂ ಅದನ್ನು ಸಮರ್ಥವಾಗಿ ಎದುರಿಸಲಿಕ್ಕೆ ಎಲ್ಲರೂ ಸನ್ನದ್ಧರಾಗಬೇಕು. ತಮ್ಮ ಶಾಸಕರ ಪ್ರದೇಶಾಭಿವೃದ್ದಿ ನಿಧಿಯನ್ನು ಕೋವಿಡ್‍ಗೆ ವೆಚ್ಚ ಮಾಡಲಾಗುವುದೆಂದು ಶಾಸಕ ಹಾಗೂ ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.   ನಗರದ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ತಮ್ಮ ಶಾಸಕರ ಪ್ರದೇಶಾಭಿವೃದ್ದಿ ನಿಧಿಯಡಿಯಲ್ಲಿ ಮೂಡಲಗಿ ತಾಲೂಕಿನ ಎಲ್ಲ …

Read More »

ರಾಮಮಂದಿರ ಟ್ರಸ್ಟ್ ಇನ್ನಷ್ಟು ಭೂ ಹಗರಣ ಬಯಲಿಗೆ

ಲಕ್ನೋ, ಜೂನ್ 20: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ನಿರ್ವಹಣೆ ಹೊಣೆ ಹೊತ್ತುಕೊಂಡಿರುವ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವಿರುದ್ಧ ಗಂಭೀರ ಭೂಹಗರಣದ ಆರೋಪ ಕೇಳಿ ಬಂದಿದೆ. ಸುಪ್ರೀಂ ಕೋರ್ಟ್ ತೀರ್ಪಿನಂತೆ ರಾಮಮಂದಿರ ನಿರ್ಮಾಣದ ಮೇಲ್ವಿಚಾರಣೆ ಮತ್ತು ನಿರ್ವಹಣೆಯನ್ನು ಈ ಟ್ರಸ್ಟ್‌ನ ಮೂಲಕ ಮಾಡಲಾಗುತ್ತಿದೆ. ಇದರಲ್ಲಿ 15 ಮಂದಿ ಸದಸ್ಯರಿದ್ದು ಇದರಲ್ಲಿ 12 ಮಂದಿ ಸದಸ್ಯರನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ. ”ಆಸ್ತಿ ಖರೀದಿಯಲ್ಲಿ ಸುಮಾರು 16. 5ಕೋಟಿ ರು ಅವ್ಯವಹಾರ ನಡೆದಿದೆ,” …

Read More »