ಬಾಗಲಕೋಟೆ: ಮಾಜಿ ಸಚಿವ ರಮೇಶ ಜಾರಕಿಹೊಳಿ ಬಹಳ ಸರಳ ಮನುಷ್ಯ. ಅವರ ಕ್ಯಾಸೆಟ್ (ಸಿಡಿ) ಕ್ರಿಯೆಟ್ ಮಾಡಿ ಅವರಿಗೆ ದುಃಖ ತಂದಿದ್ದಾರೆ. ಅವರು ಎರಡು ವರ್ಷ ಶಾಸಕರಾಗಿ ಇರುತ್ತಾರೆ. ಪ್ರಸಂಗ ಬಂದರೆ ಶೀಘ್ರವೇ ಸಚಿವರೂ ಆಗುತ್ತಾರೆ ಎಂದು ಆಹಾರ ಖಾತೆ ಸಚಿವ ಉಮೇಶ ಕತ್ತಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ ಜಾರಕಿಹೊಳಿ ಅವರನ್ನು ಮತ್ತೆ ಸಚಿವರನ್ನಾಗಿ ಮಾಡುವ ಪ್ರಯತ್ನ ನಮ್ಮ ಸಚಿವ ಸಂಪುಟದಿಂದ ನಡೆದಿದೆ. ನಾನು, ಜಾರಕಿಹೊಳಿ ಒಂದೇ …
Read More »ನಮ್ಮ ಪಕ್ಷದಲ್ಲಿ ಬಣ ರಾಜಕಾರಣ ಇಲ್ಲ -ಒಗ್ಗಟ್ಟಿನ ಮಂತ್ರ ಜಪಿಸಿದ ಸಿದ್ದರಾಮಯ್ಯ
ಬೆಂಗಳೂರು: ನಮ್ಮ ಪಕ್ಷದಲ್ಲಿ ಯಾವುದೇ ಬಣ ರಾಜಕಾರಣ ಇಲ್ಲ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಇಂದು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕೊರೊನಾ ಮೂರನೇ ಅಲೆಗೆ ಸರ್ಕಾರ ಸಿದ್ಧತೆಯನ್ನೇ ಮಾಡಿಕೊಂಡಿಲ್ಲ. ಸರ್ಕಾರ ಸಿದ್ಧತೆ ಮಾಡಿಕೊಳ್ಳಬೇಕು. ಬೆಡ್ ಇಲ್ಲದೆಯೇ ಬಹಳ ಜನ ಸತ್ತು ಹೋಗಿದ್ರು. ಆದರೂ ಸರ್ಕಾರ ಇನ್ನೂ ಎಚ್ಚೆತ್ತುಕೊಂಡಿಲ್ಲ ಅಂತ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ‘ಕಾಂಗ್ರೆಸ್ ಬದುಕಿದೆ’ ಎಂಬ …
Read More »ಊಟ ಮಾಡಿಸೋ ವೇಳೆ ತೆಂಗಿನ ಕಾಯಿ ಬಿದ್ದು 11 ತಿಂಗಳ ಮಗು ಸಾವು
ಹಾವೇರಿ: ಮಗುವಿಗೆ ಊಟ ಮಾಡಿಸುತ್ತಿದ್ದ ವೇಳೆ ತೆಂಗಿನ ಕಾಯಿ ತಲೆ ಮೇಲೆ ಬಿದ್ದು 11 ತಿಂಗಳ ಮಗು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಹಿರೆಕೇರೂರು ತಾಲೂಕಿನ ಹಂಸಭಾವಿಯಲ್ಲಿ ನಡೆದಿದೆ. ಹಂಸಭಾವಿಯ ಮಲ್ಲಿಕಾರ್ಜುನ ಮತ್ತು ಮಾಲಾ ಎಂಬ ದಂಪತಿಗಳ ಮಗು ತನ್ವೀತ್ ವಾಲ್ಮೀಕಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದೆ. ನಿನ್ನೆ ಬೆಳಗ್ಗೆ ಮನೆಯ ಎದುರು ಮಗುವನ್ನು ಆಟವಾಡಿಸುತ್ತಾ ಊಟ ಮಾಡುವ ಸಂದರ್ಭದಲ್ಲಿ ದುರ್ಘಟನೆ ನಡೆದಿದ್ದು, ತಕ್ಷಣವೇ ಮಗುವನ್ನು ಕುಟುಂಬಸ್ಥರು ದಾವಣಗೆರೆ ಖಾಸಗಿ …
Read More »ಧಿಡೀರ್ ದೆಹಲಿಗೆ ಹಾರಿದ್ದಾರೆ ರಮೇಶ್ ಜಾರಕಿಹೊಳಿ ಅವ್ರಿಗೆ ರಾತ್ರಿ ಕರೆ ಮಾಡಿ ದ್ದಾದರು ಯಾರು…
ರಮೇಶ್ ಜಾರಕಿಹೊಳಿ ಒಂದು ಸರಕಾರವನ್ನು ಬೀಳಿಸಿ ಮತ್ತೊಂದು ಸರಕಾರ ರಚಿಸಲು ಪ್ರಮುಖ ಕಾರಣ ರಾದ ರಮೇಶ್ ಜಾರಕಿಹೊಳಿ ಪ್ರತಿದಿನ ಒಂದು ಹೊಸ ವಿಷಯ ದೊಂದಿಗೆ ಚರ್ಚೆ ಯಲ್ಲಿದ್ದಾರೆ. ಶಾಸಕ ರಮೇಶ್ ಜಾರಕಿಹೊಳಿ ಇಂದು ಮಧ್ಯಾಹ್ನ ಸಡನ್ ಆಗಿ ದೆಹಲಿಗೆ ಹಾರಿದ್ದಾರೆ. ಇದು ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ, ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ ಎಂದಿದ್ದ ಸಾಹುಕಾರರು ಮಧ್ಯಾಹ್ನ ಮುಖ್ಯ ಮಂತ್ರಿಗಳನ್ನಾ ಭೇಟಿ ಮಾಡಿ ದೆಹಲಿಗೆ ಹಾರಿದ್ದಾರೆ. ಹೌದು ನಿನ್ನೆ …
Read More »ಕಾನ್‍ಸ್ಟೇಬಲ್ ಹುದ್ದೆಗೆ ಅರ್ಜಿ- ವಯೋಮಿತಿ ಹೆಚ್ಚಿಸಲು ಆಗ್ರಹ
ಧಾರವಾಡ: ಸರ್ಕಾರ ಕೊವಿಡ್ ನಿಯಂತ್ರಣಕ್ಕೆ ನಿರಂತರ ಲಾಕ್‍ಡೌನ್ ಜಾರಿಗೊಳಿಸಿ, ಪೊಲೀಸ್ ನೇಮಕಾತಿಗಳನ್ನು ವಿಳಂಬ ಮಾಡಿದ್ದರಿಂದ ಕೆಲವು ವಿದ್ಯಾರ್ಥಿಗಳಿಗೆ ಪೊಲೀಸ್ ಕಾನ್‍ಸ್ಟೇಬಲ್ ಹುದ್ದೆಗೆ ಅರ್ಜಿ ಹಾಕುವ ವಯೋಮಿತಿ ಮೀರಿ ಹೋಗಿದೆ. ಹೀಗಾಗಿ ಸರ್ಕಾರ ವಯೋಮಿತಿಯನ್ನು ಹೆಚ್ಚಿಸಬೇಕು ಎಂದು ವಿದ್ಯಾಕಾಶಿ ಕರಿಯರ್ ಅಕಾಡೆಮಿ ಸಿಬ್ಬಂದಿ ಆಗ್ರಹಿಸಿದ್ದಾರೆ. ವಯೋಮಿತಿ ಹೆಚ್ಚಿಸುವಂತೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದರು. ವಯೋಮಿತಿ ಹೆಚ್ಚಿಸದಿದ್ದರೆ, ಪೊಲೀಸ್ ಹುದ್ದೆಯನ್ನು ನೆಚ್ಚಿಕೊಂಡು ಕುಳಿತ ಸಾವಿರಾರು ವಿದ್ಯಾರ್ಥಿಗಳ ಕನಸಿಗೆ ಅಡ್ಡಿಯಾಗಲಿದೆ. ಕೆಲವು ರಾಜ್ಯಗಳಲ್ಲಿ ಪೊಲೀಸ್ …
Read More »ನಾಲ್ಕು ದಿನಗಳ ಕಾಲ ಅರಣ್ಯದಲ್ಲಿ ನಾಪತ್ತೆಯಾಗಿದ್ದ 110 ವರ್ಷದ ವೃದ್ಧ ಇಂದು ಪತ್ತೆ
ಧಾರವಾಡ: ನಾಲ್ಕು ದಿನಗಳ ಕಾಲ ಅರಣ್ಯದಲ್ಲಿ ನಾಪತ್ತೆಯಾಗಿದ್ದ 110 ವರ್ಷದ ವೃದ್ಧ ಇಂದು ಪತ್ತೆಯಾಗಿದ್ದಾರೆ. ಜಿಲ್ಲೆಯ ಬೈಚವಾಡ್ ಗ್ರಾಮದ ವೃದ್ಧ ಜನ್ನು ಪಾಂಡ್ರಾಮೀಸೆ 4 ದಿನಗಳ ಕಾಲ ಅರಣ್ಯದಲ್ಲಿದ್ದು, ಇಂದು ಸಿಕ್ಕಿದ್ದಾರೆ. ನಾಲ್ಕು ದಿನಗಳ ಹಿಂದೆ ತಮ್ಮ ಮಗಳ ಮನೆಗೆ ಹೋಗಿ ಬೈಚವಾಡ್ ಗ್ರಾಮಕ್ಕೆ ವಾಪಸ್ ಬರುವಾಗ ಅರಣ್ಯದಲ್ಲಿ ತಪ್ಪಿಸಿಕೊಂಡಿದ್ದರು. ನಂತರ ಗ್ರಾಮಸ್ಥರು ಸಾಕಷ್ಟು ಹುಡುಕಾಟ ನಡೆಸಿ, ಅರಣ್ಯ ಇಲಾಖೆಗೆ ಸಹ ಮಾಹಿತಿ ನೀಡಿದ್ದರು. ಇಂದು ಬೆಳಗಿನ ಜಾವ …
Read More »ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೀಶ್ವರ ವಿಜಯಪುರಕ್ಕೆ ಭೇಟಿ ನೀಡಿದ್ದು, ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಭೇಟಿಯಾಗಿ ಮಾತುಕತೆ
ವಿಜಯಪುರ – ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೀಶ್ವರ ವಿಜಯಪುರಕ್ಕೆ ಭೇಟಿ ನೀಡಿದ್ದು, ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಇಲಾಖೆಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿಜಯಪುರಕ್ಕೆ ಬಂದಿರುವ ಅವರು, ಯತ್ನಾಳ್ ಅವರನ್ನು ವಯಕ್ತಿಕವಾಗಿ ಭೇಟಿ ಮಾಡಲಿದ್ದಾರೆ. ಆದರೆ ಭೇಟಿಯಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ, ರಾಜಕೀಯ ಮಾತುಕತೆ ಇಲ್ಲ ಎಂದಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಯತ್ನಾಳ ಬಹು ಹಿಂದಿನಿಂದಲೇ ಪ್ರಯತ್ನ ನಡೆಸುತ್ತಿದ್ದರೆ ಯೋಗೀಶ್ವರ ಈಚೆಗೆ ಆರಂಭಿಸಿದ್ದಾರೆ. ಇದೇ …
Read More »ಕೆಂಪೇಗೌಡರು ಒಂದು ಜಾತಿಗೆ ಸೀಮಿತವಲ್ಲ
ವಿಜಯಪುರ: ನಾಡಪ್ರಭು ಕೆಂಪೇ ಗೌಡರು ಒಂದು ಜಾತಿಗೆ ಸೀಮಿತರಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು. ಹೊಸಕೋಟೆ ನಗರದ ಮಿನಿವಿಧಾನಸೌಧ ಮುಂಭಾಗದಲ್ಲಿಒಕ್ಕಲಿಗರ ಸಂಘದಿಂದ ನಡೆದ ನಾಡ ಪ್ರಭುಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ನಾಡಪ್ರಭು ಕೆಂಪೇಗೌಡ ಜಯಂತಿ ಯನ್ನು ರಾಜ್ಯದಲ್ಲಿ ಸರಳವಾಗಿ ಸಂಭ್ರಮದಿಂದ ಆಚರಣೆ ಮಾಡಲಾ ಗುತ್ತಿದೆ. 39 ವರ್ಷಗಳ ಕಾಲ ಬೆಂಗ ಳೂರುನಗರವನ್ನುಕಟ್ಟಿ ರಾಜಕೀಯ, ಆರ್ಥಿಕ, ಸ್ವಾವಲಂಬಿ ಶಕ್ತಿಯನ್ನು ತುಂಬಿ ಬೆಂಗಳೂರು ನಗರವನ್ನು ವಿಶ್ವ ವಿಖ್ಯಾತಿಗೊಳಿಸಿದ ಕೀರ್ತಿ …
Read More »ಪರೀಕ್ಷೆ ನಡೆಸಿ ರಾಜ್ಯ ಸರ್ಕಾರ ಜೀವ ,ಜೀವನ ಎರಡನ್ನೂ ತೆಗೆಯಲು ಹೊರಟಿದೆ: ವಿಶ್ವನಾಥ್
ದಾವಣಗೆರೆ: ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಖಂಡಿತವಾಗಿಯೂ ಸಚಿವರಾಗುತ್ತಾರೆ ಎಂದು ಬಾಂಬೆ ದೋಸ್ತ್‌ಗಳಲ್ಲಿ ಒಬ್ಬರಾದ ನಗರಾಭಿವೃದ್ಧಿ ಇಲಾಖೆ ಸಚಿವ ಭೈರತಿ ಬಸವರಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುನಿರತ್ನಂ ಅವರು ಸಚಿವರಾಗುವುದು ಖಂಡಿತ. ಅವರನ್ನು ಮಂತ್ರಿ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಒಪ್ಪಿಕೊಂಡಿದ್ದಾರೆ. ಮುನಿರತ್ನ ನಿರಾಶರಾಗುವ ಅವಶ್ಯಕತೆಯೇ ಇಲ್ಲ. ಸಚಿವ ಸ್ಥಾನ ಖಂಡಿತವಾಗಿಯೂ ಸಿಗುತ್ತದೆ ಎಂದರು. ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋದ 17 ಶಾಸಕರು ನೆಮ್ಮದಿಯಿಂದ ಇಲ್ಲ ಎಂಬ …
Read More »ಅಕ್ರಮ ರೇವು ಪಾರ್ಟಿ: ಬಿಗ್ ಬಾಸ್ ಸ್ಪರ್ಧಿ, ನಟಿಯರು ವಶಕ್ಕೆ
ಮಹಾರಾಷ್ಟ್ರ:ನಾಸಿಕ್ ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ರೇವು ಪಾರ್ಟಿ ಅಡ್ಡೆ ಮೇಲೆ ಭಾನುವಾರ ಪೊಲೀಸರು ದಾಳಿ ಮಾಡಿದ್ದು, ಸುಮಾರು 22 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಡ್ರಗ್ಸ್ ಪತ್ತೆಯಾಗಿದ್ದು, ತನಿಖೆ ಚುರುಕುಗೊಳಿಸಲಾಗಿದೆ. ಮುಂಬೈನಿಂದ 120 ಕಿ.ಮೀ ದೂರದಲ್ಲಿರುವ ಇಗತ್ಪುರಿಯಲ್ಲಿರುವ ಎರಡು ಖಾಸಗಿ ವಿಲ್ಲಾಗಳಲ್ಲಿ ರೇವು ಪಾರ್ಟಿ ನಡೆಯುವ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಪೊಲೀಸರು ದಾಳಿ ನಡೆಸಿದರು. ಈ ದಾಳಿಯಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿ ಸೇರಿದಂತೆ ಹಿಂದಿ ಸಿನಿಮಾ …
Read More »
Laxmi News 24×7