Breaking News

ರಾಜ್ಯ

ಖಾನಾಪೂರ ಪಟ್ಟಣದಲ್ಲಿ ಇಂದು ಖಾನಾಪೂರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಘಟಕದ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿದ ಯುವ ನಾಯಕ ರಾಹುಲ ಜಾರಕಿಹೊಳಿ..

ಖಾನಾಪೂರ ಪಟ್ಟಣದಲ್ಲಿ ಇಂದು ಖಾನಾಪೂರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಘಟಕದ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿದ ಯುವ ನಾಯಕ ರಾಹುಲ ಜಾರಕಿಹೊಳಿ.. ಯುವ ಶಕ್ತಿ – ಕಾಂಗ್ರೆಸ್ ಶಕ್ತಿಯಾಗಬೇಕು. ಈ ನಿಟ್ಟಿನಲ್ಲಿ ಸಂಘಟನೆ ಗಟ್ಟಿ ಮಾಡಿದಾಗಲೇ ಬದಲಾವಣೆ ಸಾಧ್ಯ ಎಂದು ಪಕ್ಷದ ಬಲವರ್ಧನೆ ಕುರಿತಾಗಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಾಯಿತು. ಈ ವೇಳೆ ನೂತನವಾಗಿ ಆಯ್ಕೆಯಾಗಿರುವ ಯುವ ಕಾಂಗ್ರೆಸ್ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಹಾಗೂ ತಾಲೂಕಿನ ಎಲ್ಲ ಪದಾಧಿಕಾರಿಗಳು, …

Read More »

ಯಮಕನಮರಡಿ ಕ್ಷೇತ್ರದಲ್ಲಿನ ಮಸರಗುಪ್ಪಿ, ಗವನಾಳ, ಗೋಟುರ ಹಾಗೂ ಕೋಚರಿ ಗ್ರಾಮಗಳಲ್ಲಿ ಅಂದಾಜು 1.44 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ 7 ಶಾಲಾ ಕೊಠಡಿಗಳನ್ನು ಉದ್ಘಾಟಿಸಿ,ಮಾತನಾಡಿದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ..

ಯಮಕನಮರಡಿ ಕ್ಷೇತ್ರದಲ್ಲಿನ ಮಸರಗುಪ್ಪಿ, ಗವನಾಳ, ಗೋಟುರ ಹಾಗೂ ಕೋಚರಿ ಗ್ರಾಮಗಳಲ್ಲಿ ಅಂದಾಜು 1.44 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ 7 ಶಾಲಾ ಕೊಠಡಿಗಳನ್ನು ಉದ್ಘಾಟಿಸಿ,ಮಾತನಾಡಿದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ.. ಈ ವೇಳೆ ಗ್ರಾಮದ ಮುಖಂಡರು, ಗ್ರಾ.ಪಂ. ಸದಸ್ಯರು, ಎಸ್ ಡಿಎಂಸಿ ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು. ಕಾಮಗಾರಿಗಳ ವಿವರ. 1. ಹುಕ್ಕೇರಿ ತಾಲೂಕಿನ ಯಮಕನಮರಡಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಜಿ.ಎಚ್.ಪಿ.ಎಸ್ ಮಸರಗುಪ್ಪಿ ಉರ್ದು ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ …

Read More »

ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಐದು ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ.

ಚಿಕ್ಕೋಡಿ(ಬೆಳಗಾವಿ): ಮಹಾರಾಷ್ಟ್ರ ಸತಾರ ಜಿಲ್ಲೆಯಲ್ಲಿರುವ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಐದು ಸಾವಿರ ಕ್ಯೂಸೆಕ್ ನೀರು ಹರಿಬಿಡಲಾಗಿದೆ. ಕೊಯ್ನಾ ಜಲಾಶಯ 105 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿದ್ದು, ಸದ್ಯ 76 ಟಿಎಂಸಿ ಭರ್ತಿಯಾಗಿದೆ. ಮಹಾರಾಷ್ಟ್ರದ ಪಶ್ಚಿಮಘಟ್ಟ ಹಾಗೂ ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕೆ ಕ್ರಮವಾಗಿ ನೀರು ಬಿಡಲಾಗಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಪಂಚ ನದಿಗಳಲ್ಲಿ ನೀರಿನಮಟ್ಟ ಇಳಿಕೆ: ಮಹಾರಾಷ್ಟ್ರದಲ್ಲಿ ಹಾಗೂ ಚಿಕ್ಕೋಡಿ – ನಿಪ್ಪಾಣಿ ತಾಲೂಕಿನಲ್ಲಿ …

Read More »

ಡಾನ್ ಸುಶೀಲ್ ಹತ್ಯೆ: ಗುಂಡೇಟು ತಿಂದ ಇಬ್ಬರು

ಡಾನ್ ಸುಶೀಲ್ ಹತ್ಯೆ: ಗುಂಡೇಟು ತಿಂದ ಇಬ್ಬರು ಭೀಮಾತೀರದ ನಟೋರಿಯಸ್ ಹಂತಕ ಬಾಗಪ್ಪ ಹರಿಜನ ಹಳೆ ಶಿಷ್ಯ ಸುಶೀಲ ಕಾಳೆ ಮೇಲೆ ನಿನ್ನೆ ಹಾಡು ಹಗಲೆ ಗುಂಡು ಹಾರಿಸಿ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ಇಬ್ಬರು ಆರೋಪಿಗಳು ಇಂದು ಬೆಳಿಗ್ಗೆ 6ಗಂಟೆ ಸುಮಾರಿಗೆ ವಿಜಯಪುರ ನಗರದ ಹೊರವಲಯದ ಇಟ್ಟಂಗಿಹಾಳ ಗ್ರಾಮದ ಬಳಿ ಪರಾರಿ ಆಗುತ್ತಿರುವ ಮಾಹಿತಿ ಪೊಲೀಸರಿಗೆ ಬಂದಿದೆ. ಬೈಕ್‌ನಲ್ಲಿ ಪರಾರಿ ಆಗಲು ಯತ್ನಿಸುತ್ತಿದ್ದಾಗ ಆರೋಪಿಗಳನ್ನು …

Read More »

ಹೇಮರಡ್ಡಿ ಮಲ್ಲಮ್ಮ ನಾಟಕಕ್ಕೆ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರು ರಂಗಭೂಮಿಗೆ ಸಾವಿಲ್ಲ ಎಂಬುದು ಸಾಬೀತು ಎಂದ ಬಸವರಾಜ ಜಗಜಂಪಿ

ಹೇಮರಡ್ಡಿ ಮಲ್ಲಮ್ಮ ನಾಟಕಕ್ಕೆ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರು ರಂಗಭೂಮಿಗೆ ಸಾವಿಲ್ಲ ಎಂಬುದು ಸಾಬೀತು ಎಂದ ಬಸವರಾಜ ಜಗಜಂಪಿ ಬೆಳಗಾವಿ: ರಂಗಸೃಷ್ಟಿ ತಂಡದವರಿಂದ ಬೆಳಗಾವಿಯಲ್ಲಿ ನಡೆದ ಇಳೆಯ ಬೆಳಕು (ಸಾಧ್ವಿ ಹೇಮರಡ್ಡಿ ಮಲ್ಲಮ್ಮ) ನಾಟಕಕ್ಕೆ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರನ್ನು ನೋಡಿದರೆ ರಂಗಭೂಮಿಗೆ ಸಾವಿಲ್ಲ ಎನ್ನುವುದು ಸಾಬೀತಾಗಿದೆ ಎಂದು ಹಿರಿಯ ವಿಧ್ವಾಂಸ, ನಿವೃತ್ತ ಪ್ರಾಚಾರ್ಯ ಡಾ.ಬಸವರಾಜ ಜಗಜಂಪಿ ಹೇಳಿದ್ದಾರೆ. ಶನಿವಾರ ಕನ್ನಡಭವನದಲ್ಲಿ ನಡೆದ ನಾಟಕದ ಮಧ್ಯೆ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. …

Read More »

150ನೇ ವರ್ಷಕ್ಕೆ ಕಾಲಿಟ್ಟ ಬೆಳಗಾವಿ ಬಾರ್ ಅಸೋಸಿಯೇಷನ್… ಸವಿನೆನಪಿನ ಕಚೇರಿಯನ್ನು ಉದ್ಘಾಟಿಸಿ ವಕೀಲರು…

150ನೇ ವರ್ಷಕ್ಕೆ ಕಾಲಿಟ್ಟ ಬೆಳಗಾವಿ ಬಾರ್ ಅಸೋಸಿಯೇಷನ್… ಸವಿನೆನಪಿನ ಕಚೇರಿಯನ್ನು ಉದ್ಘಾಟಿಸಿ ವಕೀಲರು… ಬೆಳಗಾವಿಯ ವಕೀಲರ ಸಂಘವು 150ನೇ ವರ್ಷಕ್ಕೆ ಕಾಲಿಟ್ಟ ಹಿನ್ನೆಲೆ ಇಂದು 150ನೇ ವಾರ್ಷಿಕೋತ್ಸವದ ಸವಿನೆನಪಿನ ಕಚೇರಿ ಉದ್ಘಾಟನೆ ಸಮಾರಂಭವು ಅತ್ಯಂತ ಉತ್ಸಾಹದಿಂದ ನಡೆಯಿತು. ಬೆಳಗಾವಿಯ ವಕೀಲರ ಸಮುದಾಯ ಭವನದ ಸಭಾಂಗಣದ 2ನೇ ಮಹಡಿಯಲ್ಲಿ ಬೆಳಗಾವಿಯ ವಕೀಲರ ಸಂಘದ150ನೇ ವಾರ್ಷಿಕೋತ್ಸವದ ಸವಿನೆನಪಿನ ಕಚೇರಿ ಉದ್ಘಾಟನೆ ಸಮಾರಂಭವು ಅತ್ಯಂತ ಉತ್ಸಾಹದಿಂದ ನಡೆಯಿತು. ಬೆಳಗಾವಿ ಬಾರ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಎಸ್. …

Read More »

ಡಾ. ಅಂಜನಾ ಬಾಗೇವಾಡಿಗೆ ಅತ್ಯುತ್ತಮ ಪ್ರಬಂಧ ಪ್ರಶಸ್ತಿ

ಡಾ. ಅಂಜನಾ ಬಾಗೇವಾಡಿಗೆ ಅತ್ಯುತ್ತಮ ಪ್ರಬಂಧ ಪ್ರಶಸ್ತಿ ಬ್ಯಾಂಕಾಕ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಸಮ್ಮೇಳನ ಬ್ಯಾಂಕಾಕ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಸಮ್ಮೇಳನದಲ್ಲಿ ಡಾ. ಅಂಜನಾ ಬಾಗೇವಾಡಿ ಅತ್ಯುತ್ತಮ ಪ್ರಬಂಧ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಕೆಎಲ್‌ಇ ವಿಕೆ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್, ಬೆಳಗಾವಿಯ ಓರಲ್ ಮೆಡಿಸಿನ್ ಮತ್ತು ರೇಡಿಯಾಲಜಿ ವಿಭಾಗದ ಉಪ ಪ್ರಾಂಶುಪಾಲರು ಹಾಗೂ ಪ್ರಾಧ್ಯಾಪಕರಾದ ಡಾ. ಅಂಜನಾ ಬಾಗೇವಾಡಿ, ಜುಲೈ 9 ರಿಂದ 12ರ ವರೆಗೆ ಥೈಲ್ಯಾಂಡ್‌ನ …

Read More »

ಬಿ. ಸರೋಜಾದೇವಿ ಎಲ್ಲ ಪಾತ್ರಕ್ಕೂ ಜೀವ ತುಂಬುವ ಅಭಿನಯ ಸರಸ್ವತಿ… ಬಿ.ಸರೋಜಾದೇವಿ ಅಂತಿಮ ದರ್ಶನ ಪಡೆದ ಸಿಎಂ ಸಿದ್ಧರಾಮಯ್ಯ

ಬಿ. ಸರೋಜಾದೇವಿ ಎಲ್ಲ ಪಾತ್ರಕ್ಕೂ ಜೀವ ತುಂಬುವ ಅಭಿನಯ ಸರಸ್ವತಿ… ಬಿ.ಸರೋಜಾದೇವಿ ಅಂತಿಮ ದರ್ಶನ ಪಡೆದ ಸಿಎಂ ಸಿದ್ಧರಾಮಯ್ಯ ಬಹುಭಾಷಾ ನಟಿ ಬಿ. ಸರೋಜಾ ದೇವಿ ಸೋಮವಾರದಂದು ತಮ್ಮ 87ರ ಹರೆಯದಲ್ಲಿ ಇಹಲೋಕ ತ್ಯಜಿಸಿದ್ದು, ಇಂದು ಚನ್ನಪಟ್ಟಣ ತಾಲೂಕಿನ ದಶವಾರ ಗ್ರಾಮದಲ್ಲಿ ಅಂತಿಮ ವಿಧಿ-ವಿಧಾನಗಳು ನಡೆಯಲಿವೆ. ಸಿಎಂ ಸಿದ್ದರಾಮಯ್ಯ ಅವರಿಂದು ನಟಿಯ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಬಿ.ಸರೋಜಾ ದೇವಿ ಅವರ ನಿಧನ …

Read More »

ನಕಲಿ ದಾಖಲೆಗಳ ಮೂಲಕ ಶೂರಿಟಿ ನೀಡುತ್ತಿದ್ದ 8 ಆರೋಪಿಗಳ ಬಂಧನ

ಬೆಂಗಳೂರು: ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ನಕಲಿ ಶೂರಿಟಿ ನೀಡುತ್ತಿದ್ದ 8 ಆರೋಪಿಗಳನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಫಿ, ಪ್ರವೀಣ್ ಕುಮಾರ್, ಅಭಿಷೇಕ್, ಗೋವಿಂದ ನಾಯ್ಕ್ ಮತ್ತು ದೊರೆರಾಜು ಹಾಗೂ ಮತ್ತೊಂದು ಪ್ರಕರಣದಲ್ಲಿ ಅಬೀದ್, ವಾಸಿಂ ಅಹಮ್ಮದ್ ಮತ್ತು ಗೋವಿಂದರಾಜು ಎಂಬವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ವಿವಿಧ ಪ್ರಕರಣಗಳಲ್ಲಿ ಜಾಮೀನು ಪಡೆಯಲು ನಕಲಿ ಶೂರಿಟಿಗಳನ್ನು ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಭೂಮಿ ಆ್ಯಪ್‌ನ ಮೂಲಕ ಬೇರೆ …

Read More »

ಬಡತನಕ್ಕೆ ಬಗ್ಗದ ಛಲ… ಬೆಳಗಾವಿಯ ಪ್ರಶಾಂತ್’ಗೆ ಸಿಎ ಪರೀಕ್ಷೆಯಲ್ಲಿ ಅಗ್ರಸ್ಥಾನ

ಬಡತನಕ್ಕೆ ಬಗ್ಗದ ಛಲ… ಬೆಳಗಾವಿಯ ಪ್ರಶಾಂತ್’ಗೆ ಸಿಎ ಪರೀಕ್ಷೆಯಲ್ಲಿ ಅಗ್ರಸ್ಥಾನ ಯಾವುದೇ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸುವ ಶಕ್ತಿ ಇದ್ದರೆ ಯಾವುದೇ ಸಾಧನೆ ಅಸಾಧ್ಯವಲ್ಲ ಎಂಬುದಕ್ಕೆ ಬಹುದೊಡ್ಡ ಸಾಕ್ಷ್ಯವಾಗಿದ್ದಾರೆ ಬೆಳಗಾವಿಯ ಯುವಕನ ಈ ಸಾಧನೆ. ಹಾಗಾದರೇ, ಆ ಯುವಕ ಮಾಡಿರುವ ಸಾಧನೆಯಾದರೂ ಯಾವುದು? ಎಂಬುದನ್ನು ನೋಡೋಣ ಬನ್ನಿ. ಹೌದು, ಬೆಳಗಾವಿಯ ಕಂಗ್ರಾಳಿ ಬುದ್ರುಕ್ ಗ್ರಾಮದ ಪ್ರಶಾಂತ್ ಮಂಗೇಶ್ ಚೌಗುಲೆ. ಆರ್ಥಿಕ ಸಂಕಷ್ಟಗಳಿಂದ ಜರ್ಜರಿತ ಕುಟುಂಬದಿಂದ ಬಂದ ಈ ಪ್ರತಿಭಾವಂತ ಯುವಕ. ಈತ …

Read More »