Breaking News

ರಾಜ್ಯ

ಶಾಸಕ ಎಂ.ಪಿ.ರೇಣುಕಾಚಾರ್ಯ ಅವರಿಗೆ ಸಿಡಿ ಭೀತಿ ಶುರು?

ಬೆಂಗಳೂರು: ಇದೀಗ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರಿಗೆ ಸಿಡಿ ಭೀತಿ ಶುರುವಾಗಿದೆ. ಆದ್ದರಿಂದ ತಮ್ಮ ವಿರುದ್ಧ ಯಾವುದಾದರೂ ಸಿಡಿಗಳು ಇದ್ದರೆ ಅದು ಎಲ್ಲಿಯೂ ಪ್ರಸಾರವಾಗಬಾರದು ಎಂದು ಕೋರಿ ಬೆಂಗಳೂರಿನ ಸಿವಿಲ್​ ಕೋರ್ಟ್​ ಮೊರೆ ಹೋಗಿದ್ದಾರೆ. ಇಂದು ಇದರ ವಿಚಾರಣೆ ನಡೆಸಿರುವ ಕೋರ್ಟ್​, ಸಿಡಿಯನ್ನು ಎಲ್ಲಿಯೂ ಪ್ರಸಾರ ಮಾಡಬಾರದು ಎಂದು ತಡೆಯಾಜ್ಞೆ ನೀಡಿದೆ. ಸಿಡಿಯ ಕುರಿತಂತೆ ಮಾತನಾಡಿರುವ ರೇಣುಕಾಚಾರ್ಯ ಅವರು, ಈಗೀಗ ತಂತ್ರಜ್ಞಾನ ಹೇಗಿದೆ ಎಂದರೆ, ಯಾರದ್ದೋ ತಲೆ, ಯಾರದ್ದೋ ಮುಖ, ಯಾರದ್ದೋ …

Read More »

ಸಚಿವ ಸಂಪುಟ ರಚನೆ: ‘ವಿಜಯಪುರ ಕಡೆಗಣಿಸಿದರೆ ದೊಡ್ಡ ಶಾಕ್‌ ಕೊಡುವೆ’-ಯತ್ನಾಳ

ವಿಜಯಪುರ: ವಿಜಯಪುರ ಜಿಲ್ಲೆಗೆ ಗೌರವಯುತವಾಗಿ ಸಚಿವ ಸ್ಥಾನ ಕೊಡಲೇಬೇಕು. ಒಂದು ವೇಳೆ ಜಿಲ್ಲೆಯನ್ನು ಕಡೆಗಣಿಸಿದರೆ ಸಚಿವ ಸಂಪುಟ ವಿಸ್ತರಣೆ ಬಳಿಕ ದೊಡ್ಡ ಶಾಕ್‌ ಕೊಡಬೇಕಾಗುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಎಚ್ಚರಿಕೆ ನೀಡಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳ್ಳೆಯವರನ್ನು, ಪ್ರಾಮಾಣಿಕರನ್ನು, ಹಿಂದುತ್ವ ಉಳ್ಳವರನ್ನು, ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಶಕ್ತಿಯುಳ್ಳವರನ್ನು ಸಚಿವರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು. ನನಗೆ ಹೈಕಮಾಂಡ್ ಮೇಲೆ ವಿಶ್ವಾಸವಿದೆ. ಯಡಿಯೂರಪ್ಪನವರು ಹೇಳಿದ್ದೇ …

Read More »

ಮುಖ್ಯಮಂತ್ರಿ ಠಾಕ್ರೆ ಮತ್ತು ವಿರೋಧ ಪಕ್ಷದ ನಾಯಕ ಫಡ್ನವೀಸ್ ಕೊಲ್ಹಾಪುರದಲ್ಲಿ ಏಕಕಾಲಕ್ಕೆ ಪ್ರತ್ಯಕ್ಷರಾಗಿ ಮುಖಾಮುಖಿಯಾದರು!

ಮಹಾರಾಷ್ಟ್ರದ ಮುಖ್ಯಮಂತ್ರಿ ಉಧವ್ ಠಾಕ್ರೆ ಮತ್ತು ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನಾವಿಸ್ ಅವರು ಶುಕ್ರವಾರ ಬೆಳಗ್ಗೆ ಕೊಲ್ಹಾಪುರದಲ್ಲಿ ಏಕಕಾಲಕ್ಕೆ ಪ್ರತ್ಯಕ್ಷರಾಗಿ ಜನರಲ್ಲಿ ಆಚ್ಚರಿ ಮೂಡಿಸಿದರು. ಇಬ್ಬರು ನಾಯಕರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ನಗರಕ್ಕೆ ಆಗಮಿಸಿದ್ದರು. ಮುಖಾಮುಖಿಯಾದ ನಂತರ ಅವರಿಬ್ಬರು ಪ್ರವಾಹ ಪರಿಸ್ಥಿತಿ ಮತ್ತು ಪುನರ್ವಸತಿ ವಿಷಯಗಳ ಬಗ್ಗೆ ಚರ್ಚಿಸಿದರು. ‘ಅವರು ಅಲ್ಲಿಗೆ ಹೋಗಿದ್ದು ಗೊತ್ತಿತ್ತು, ನಾನು ಸಹ ಅದೇ ಸ್ಥಳಕ್ಕೆ ಭೇಟಿ ನಿಡುತ್ತಿದ್ದರಿಂದ ಅವರಿಗೆ ಅಲ್ಲೇ …

Read More »

ಅಕ್ರಮವಾಗಿ ವಿದೇಶಕ್ಕೆ ಸಾಗಣೆ ಮಾಡಲು ಮುಂದಾಗಿದ್ದ 6 ಕೋಟಿ ರೂ. ಮೌಲ್ಯದ ರಕ್ತ ಚಂದನವನ್ನು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಕೆಂಪೇಗೌಡ ವಿಮಾನ ನಿಲ್ದಾಣ ಬೆಂಗಳೂರು: ಅಕ್ರಮವಾಗಿ ವಿದೇಶಕ್ಕೆ ಸಾಗಣೆ ಮಾಡಲು ಮುಂದಾಗಿದ್ದ 6 ಕೋಟಿ ರೂ. ಮೌಲ್ಯದ ರಕ್ತ ಚಂದನವನ್ನು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇಲ್ಲಿನ ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ(ಕೆಐಎಬಿ) ಕಾರ್ಗೋ ಟರ್ಮಿನಲ್‍ನಲ್ಲಿ ರಕ್ತ ಚಂದನ ಜಪ್ತಿ ಮಾಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ತ ಚಂದನವನ್ನು ಅಕ್ರಮವಾಗಿ ಸಾಗಿಸುವ ಯತ್ನ ನಡೆದಿತ್ತು. ಅನುಮಾನಗೊಂಡು ಏರ್ ಕಾರ್ಗೋ ಕಸ್ಟಮ್ಸ್ ಅಧಿಕಾರಿಗಳು, …

Read More »

ಅನೈತಿಕ ಸಂಬಂಧ ಪ್ರಶ್ನೆ ‌ಮಾಡಿದ್ದಕ್ಕೆ ಗಂಡ ತನ್ನ ಹೆಂಡತಿಯನ್ನೇ ಕೊಲೆ ಮಾಡಿದ ಪತಿ

ಕೊಪ್ಪಳ: ಅನೈತಿಕ ಸಂಬಂಧ ಪ್ರಶ್ನೆ ‌ಮಾಡಿದ್ದಕ್ಕೆ ಗಂಡ ತನ್ನ ಹೆಂಡತಿಯನ್ನೇ ಕೊಲೆ ಮಾಡಿದ ಘಟನೆ ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದಲ್ಲಿ ನಡೆದಿದೆ. ಮೊಬೈಲ್ ಚಾರ್ಜರ್​ ಬಳಸಿ ಮಡದಿ ಮಂಜುಳಾ (25) ಕತ್ತು ಬಿಗಿದು ಮಂಜುನಾಥ್ ಕಟ್ಟಿಮನಿ ಎಂಬಾತ ಹೆಂಡತಿಯನ್ನು ಕೊಲೆ ಮಾಡಿದ್ದಾನೆ. ಮಂಜುಳಾ ಪತಿ ಮಂಜುನಾಥ್ ಕಟ್ಟಿಮನಿ ಬೇರೊಬ್ಬ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಇದೇ ವಿಷಯಕ್ಕೆ ಗಂಡ ಹೆಂಡತಿ ಮದ್ಯೆ ಪದೇ ಪದೇ ಗಲಾಟೆ ಆಗ್ತಿತ್ತು ಎಂದು …

Read More »

ಇಬ್ಬರು ಮಹಿಳೆಯರ ಹತ್ಯೆ, ಕೊಳೆತ ಸ್ಥಿತಿಯಲ್ಲಿ ಪತ್ತೆ

ದಾವಣಗೆರೆ, ಜುಲೈ 30; ಇಬ್ಬರು ಮಹಿಳೆಯಯನ್ನು ಕೊಲೆ ಮಾಡಿರುವ ಘಟನೆ ದಾವಣಗೆರೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಕೊಳೆತ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆಯನ್ನು ನಡೆಸಿದ್ದಾರೆ. ದಾವಣಗೆರೆ ನಗರದ ಹೊರಭಾಗದ ಆಂಜನೇಯ ಕಾಟನ್ ಮಿಲ್ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಕೊಲೆಯಾದವರನ್ನು ಮೂಲತಃ ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಬೆನಕನಹಳ್ಳಿ ಗ್ರಾಮದವರಾದ ಗೌರಮ್ಮ (34) ಹಾಗೂ ರಾಧಿಕಾ (32) ಎಂದು ಗುರುತಿಸಲಾಗಿದೆ. ಆಂಜನೇಯ ಕಾಟನ್ ಮಿಲ್ ಬಡಾವಣೆಯ …

Read More »

ತೋಟದಲ್ಲಿ ಈಜು ಕಲಿಯಲು ಹೋಗಿ ಇಬ್ಬರು ಮೃತಪಪಟ್ಟರು

ಕಬ್ಬೂರ – ಪಟ್ಟಣದ ಹೊರವಲಯದ ಗಣೇಶ ನಗರದ ನಾವಗೇರ ತೋಟದಲ್ಲಿ ಈಜು ಕಲಿಯಲು ಹೋಗಿ ಇಬ್ಬರು ಮೃತಪಟ್ಟ ಘಟನೆ ಶುಕ್ರವಾರ ಮಧ್ಯಾಹ್ನ ೨ ಗಂಟೆಯ ಸಮಯದಲ್ಲಿ ನಡೆದಿದೆ. ಮೃತಪಟ್ಟವರು ಮಹಾಂತೇಶ ಶ್ರೀಕಾಂತ ನಾವಿ(೨೫) ಮತ್ತು ಶ್ರೀಶೈಲ ಬಸವರಾಜ ನಾವಲಗೇರ(೧೦). ತಮ್ಮ ಬಾವಿಯಲ್ಲಿ ಈಜು ಕಲಿಯಲು ಡಬ್ಬಿಯನ್ನು ಸೊಂಟಕ್ಕೆ ಕಟ್ಟಿಕೊಂಡು ಈಜುವಾಗ ಡಬ್ಬಿ ಬಿಚ್ಚಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾರೆ.ಘಟನಾ ಸ್ಥಳಕ್ಕೆ ಚಿಕ್ಕೋಡಿ ಪ್ರಮುಖ ಅಗ್ನಿಶಾಮಕ ದಳದ ಟಿ.ಬಿ.ಪರೀಟ ಹಾಗೂ ಸಿಬ್ಬಂದಿಗಳು ಬಾವಿಯಲ್ಲಿ …

Read More »

ಬಿಜೆಪಿ ಹೈಕಮಾಂಡ್ ಎದುರು ಪಂಚಮಸಾಲಿ ಸಮುದಾಯ ಇಟ್ಟ ಹೊಸ ಬೇಡಿಕೆ ಇದು!

ಬೆಂಗಳೂರು, ಜು. 30: ಈ ಸಲ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮುಖ್ಯಮಂತ್ರಿ ಹುದ್ದೆ ಖಚಿತ ಎಂಬ ಮಾಹಿತಿ ಬಂದಿತ್ತು. ಅದರಂತೆಯೆ ಆರ್‌ಎಸ್‌ಎಸ್‌ ಪ್ರಮುಖರು ಹಾಗೂ ಬಿಜೆಪಿ ಹೈಕಮಾಂಡ್ ಕೂಡ ಲಿಂಗಾಯತ ಪಂಚಮಸಾಲಿ ಸಮುದಾಯದ ನಾಯಕರಿಗೆ ಮುಖ್ಯಮಂತ್ರಿ ಹುದ್ದೆ ಕೊಡಲು ತೀರ್ಮಾನಿಸಿತ್ತು. ಆದರೆ ಕೊನೆಯ ಕ್ಷಣದಲ್ಲಿ ಮುಖ್ಯಮಂತ್ರಿ ಹುದ್ದೆ ಆ ಸಮುದಾಯಕ್ಕೆ ಸಿಗಲಿಲ್ಲ ಎಂಬ ನಂಬಿಕೆ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಖಚಿತ ಮಾಹಿತಿಯಿದೆ. ಹೀಗಾಗಿ ಮುಖ್ಯಮಂತ್ರಿ ಹುದ್ದೆ ತಪ್ಪಿಸಿಕೊಂಡಿರುವ ಲಿಂಗಾಯತ ಪಂಚಮಸಾಲಿ …

Read More »

ಕೃಷ್ಣಾ ನದಿಯಲ್ಲಿ ತಗ್ಗಿದ ನೀರಿನ ಪ್ರಮಾಣ : ಸಂತ್ರಸ್ತರು ನಿರಾಳ

ಬನಹಟ್ಟಿ : ಕಳೆದ ಹಲವಾರು ದಿನಗಳಿಂದ ಮಹಾರಾಷ್ಟ್ರದಲ್ಲಿನ ಮಳೆ ಮತ್ತು ಜಲಾಶಯದಿಂದ ಕೃಷ್ಣಾ ನದಿಗೆ ಅಪಾರ ನೀರು ಹರಿದು ಬರುತ್ತಿರುವುದರಿಂದ ಬಾಘಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಹಿಪ್ಪರಗಿ ಜಲಾಶಯಕ್ಕೆ 4 ಲಕ್ಷ ಕ್ಯೂಸೆಕ್ಸ್ ಗೂ ಹೆಚ್ಚು ನೀರು ಹರಿದು ಬರುತ್ತಿತ್ತು. ಇಂದು ಶುಕ್ರವಾರ ಅದರ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ಸಂತ್ರಸ್ತರಲ್ಲಿ ನೆಮ್ಮದಿ ಮೂಡಿಸಿದೆ. ಗುರುವಾರ ಯಾವುದೇ ರೀತಿಯ ಏರಿಳಿತವಾಗದಿದ್ದರೂ ಇಂದು ಶುಕ್ರವಾರ ಸುಮಾರು 70 ಸಾವಿರ ಕ್ಯೂಸೆಕ್ಸ್ ನಷ್ಟು ನೀರು …

Read More »

ಐಷಾರಾಮಿ ವಾಹನದಲ್ಲಿ ಬಂದು ದನಗಳ್ಳತನ ಮಾಡುತ್ತಿದ್ದ ಅಂತರ್ ಜಿಲ್ಲಾ ದನಗಳ್ಳರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಶಿರಸಿ: ಐಷಾರಾಮಿ ವಾಹನದಲ್ಲಿ ಬಂದು ದನಗಳ್ಳತನ ಮಾಡುತ್ತಿದ್ದ ಅಂತರ್ ಜಿಲ್ಲಾ ದನಗಳ್ಳರಿಬ್ಬರನ್ನು ಉತ್ತರ ಕನ್ನಡ ಜಿಲ್ಲೆ ಶಿರಸಿ ಪೊಲೀಸರು ಬಂಧಿಸಿದ್ದಾರೆ. ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ವಿವೇಕಾನಂದನಗರ ಮತ್ತು ಮರಾಠಿಕೊಪ್ಪದಲ್ಲಿ ದನಗಳ್ಳತನ ಆದ ಬಗ್ಗೆ ಪ್ರಕರಣಗಳು ವರದಿಯಾಗಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧೀಕ್ಷಕ ಶಿವಪ್ರಕಾಶ್ ದೇವರಾಜ್, ಸಿ.ಪಿ.ಐ ರಾಮಚಂದ್ರ ನಾಯಕ, ಪಿ.ಎಸ್.ಐ ಭಿಮಾಶಂಕರ ಸಿನ್ನೂರ ಸಂಗಣ್ಣ ರವರ ಒಂದು ವಿಶೇಷ ತಂಡವನ್ನು ರಚಿಸಲಾಗಿತ್ತು. ಪಿ.ಎಸ್.ಐ ಭೀಮಾಶಂಕರ್ …

Read More »