Breaking News

ರಾಜ್ಯ

ರೋಗಗ್ರಸ್ಥ ನಿಗಮಗಳನ್ನು ಲಾಭದತ್ತ ಕೊಂಡೊಯ್ಯಲು ಸಚಿವ ಮುರುಗೇಶ್‌ ನಿರಾಣಿ ಯೋಜನೆ

ಬೆಂಗಳೂರು: ರೋಗಗ್ರಸ್ಥ ನಿಗಮಗಳಲ್ಲಿ ಬಂಡವಾಳವನ್ನು ಹಿಂತೆಗೆದುಕೊಂಡು ಪುನಶ್ಚೇತನಗೊಳಿಸಿ ಲಾಭದತ್ತ ಕೊಂಡೊಯ್ಯಲು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಹೇಳಿದರು. ವಿಧಾನಸೌಧದ ತಮ್ಮ ಕಚೇರಿಯಲ್ಲಿ ಶುಕ್ರವಾರ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗೋಷ್ಡಿಯಲ್ಲಿ ಮಾತನಾಡಿದ ಅವರು, ಕಲಬುರಗಿಯ ಸಿಮೆಂಟ್ ಕಾರ್ಪೋರೇಷನ್, ಮೈಶುಗರ್, ಮೈಸೂರು ಪೇಪರ್ ಮಿಲ್ಸ್ ಸೇರಿದಂತೆ ಹಲವಾರು ನಿಗಮಗಳು ಮತ್ತು ಸಂಸ್ಥೆಗಳು ನಷ್ಟದ ಹಾದಿಯಲ್ಲಿವೆ. ತಾವು ಎರಡು ದಿನಗಳ ಹಿಂದೆ ದೆಹಲಿಗೆ …

Read More »

ಚಾಮುಂಡಿ ಬೆಟ್ಟದ ತಪ್ಪಲಿನ ಸಾವಿರಾರು ಎಕರೆ ಭೂಮಿ ಮತ್ತೆ ರಾಜಮನೆತನದ ವಶಕ್ಕೆ

ಬೆಂಗಳೂರು- ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ಸಾವಿರಾರು ಎಕರೆ ಭೂಮಿಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನದಲ್ಲಿ ರಾಜ್ಯ ಸರ್ಕಾರ ಕೈ ಚೆಲ್ಲಿದೆ. ಮೈಸೂರಿನ ಸರ್ವೆ ನಂಬರ್ 4 ರ ಭೂಮಿ ಸ್ವಾಮ್ಯತೆಯ ಬಿ ಖರಾಬ್ ನ್ನು ರಾಜ್ಯ ಸರ್ಕಾರ ರದ್ದು ಮಾಡಿದೆ. ಈ ಮೂಲಕ ಮೈಸೂರು ರಾಜ ಮನೆತನ ಸೇರಿದಂತೆ ಅಲ್ಲಿನ ಭೂ ಮಾಲೀಕರು ಕಾನೂನು ಹೋರಾಟದಲ್ಲಿ ಜಯ ಗಳಿಸಿದ್ದಾರೆ. ಮೈಸೂರಿನ ಸರ್ವೆ ನಂಬರ್ 4 ಮಾತ್ರವಲ್ಲದೆ, ಚೌಡಳ್ಳಿ ಸರ್ವೆ …

Read More »

ಮೊದಲು ನಮ್ಮ ಕನ್ನಡ ತಾಯಿ ಉಳಿಸಿಕೊಂಡರೆ ಭಾರತ ಮಾತೆ ಉಳಿಸಿಕೊಳ್ಳಬಹುದು: ಸಿಟಿ ರವಿಗೆ ಎಚ್​ಡಿಕೆ ತಿರುಗೇಟು

ರಾಮನಗರ: ಮೊದಲು ನಮ್ಮ ಕನ್ನಡ ತಾಯಿ ಉಳಿಸಿಕೊಂಡರೆ, ಭಾರತ ಮಾತೆಯನ್ನು ಉಳಿಸಿಕೊಳ್ಳಬಹುದು ಎನ್ನುವ ಮೂಲಕ ಮೇಕೆದಾಟು ವಿಚಾರದಲ್ಲಿ ನಾನು ಭಾರತದ ಪರ ಎಂದಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ತಿರುಗೇಟು ನೀಡಿದರು. ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೇಕೆದಾಟು ವಿಚಾರವಾಗಿ ರಾಷ್ಟ್ರಪತಿಗಳು ಹಾಗೂ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದೇವೆ. ಅಲ್ಲದೆ, ಮುಖ್ಯಮಂತ್ರಿಗಳ ಬಳಿ ಸಮಯ …

Read More »

ನಾನು ಅಂಗಾಂಗ ದಾನಕ್ಕೆ ಸಹಿ ಹಾಕುತ್ತಿದ್ದೇನೆ, ಇತರರಿಗೂ ಕರೆ ಕೊಡುತ್ತೇನೆ: ಸಿಎಂ ಬೊಮ್ಮಾಯಿ

ಉಡುಪಿ: ಇಂದು ವಲ್ಡ್ ಆರ್ಗನ್ ಡೊನೇಶನ್ ಡೇ. ಇತ್ತೀಚೆಗೆ ಅಂಗಾಂಗ ಕಸಿ ಮಾಡುವ ತಂತ್ರಜ್ಞಾನ ಬಂದಿದೆ. ಅಂಗಾಂಗ ದಾನ ಮಾಡುವುದರಿಂದ ಜೀವ ಉಳಿಸಬಹುದು. ನಾನು ಕೂಡ ಅಂಗಾಂಗ ದಾನಕ್ಕೆ ಸಹಿ ಹಾಕುತ್ತಿದ್ದೇನೆ. ಇತರರು ಕೂಡ ಸಹಿ ಹಾಕಬೇಕೆಂದು ಕರೆ ಕೊಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್ಚಿನ ಜನ ಅಂಗಾಂಗ ದಾನಕ್ಕೆ ಮುಂದೆ ಬರಬೇಕು. ಇದರಿಂದ ಸಾವಿರಾರು ಜೀವ ಉಳಿಸಲು ಸಾಧ್ಯವಿದೆ. ನಿಮ್ಮಿಂದ ಇನ್ನೊಂದು …

Read More »

ರಾಹುಲ್ ಇನ್ ಸ್ಟಾಗ್ರಾಂ ಖಾತೆಯೂ ಬ್ಲಾಕ್..? ಕ್ರಮ ಕೈಗೊಳ್ಳುವಂತೆ ಫೇಸ್ ಬುಕ್ ಗೆ NCPCR ಪತ್ರ

ನವ ದೆಹಲಿ : ಟ್ವೀಟರ್ ಖಾತೆಯ ಬ್ಲಾಕ್ ಗೆ ಸಂಬಂಧಿಸಿದಂತೆ ಕಾಂಗ್ರೆಸ್, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಬೆನ್ನಿಗೆ, ನ್ಯಾಶನಲ್ ಕಮಿಷನ್ ಫಾರ್ ಪ್ರೊಟೆಕ್ಶನ್ ಆಫ್ ಚೈಲ್ಡ್ ರೈಟ್ಸ್ (ಎನ್ ಸಿ ಪಿ ಸಿ ಆರ್) ಫೇಸ್ ಬುಕ್ ಸಂಸ್ಥೆ ರಾಹುಲ್ ಗಾಂಧಿ ಅವರ ಿನ್ ಸ್ಟಾಗ್ರಾಂ ಖಾತೆಯನ್ನು ಬ್ಲಾಕ್ ಮಾಡುವಂತೆ ಒತ್ತಾಯಿಸಿದೆ. ಆಗಸ್ಟ್ 4 ರಂದು ಎನ್ ಸಿ ಪಿ ಸಿ ಆರ್, ದೆಹಲಿಯ ದಲಿತ ಅಪ್ರಾಪ್ತೆಯ …

Read More »

ಪಂಚಮಸಾಲಿ ಸಮಾಜ ಮಾತ್ರವಲ್ಲ ಇತರೆ ಸಮಾಜದ ಮೀಸಲು ಬೇಡಿಕೆ‌ಯೂ ಈಡೇರಲಿ: ಯತ್ನಾಳ್

ವಿಜಯಪುರ: ಶೋಷಿತ ಸಮುದಾಯಗಳಿಗೆ ಮೀಸಲು ಸೌಲಭ್ಯ ಕಲ್ಪಿಸುವ ಅಧಿಕಾರವನ್ನು ಪ್ರಧಾನಿ ಮೋದಿ ಅವರು ಕೇಂದ್ರದ ಬದಲಾಗಿ ರಾಜ್ಯ ಸರ್ಕಾರಕ್ಕೆ ನೀಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೆಪಗಳನ್ನು ಹೇಳದೇ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲು ಮಾತ್ರವಲ್ಲ ಮೀಸಲು ಬೇಡಿಕೆ ಇರುವ ಎಲ್ಲ ಸಮುದಾಯಗಳಿಗೆ ಮೀಸಲು ಬೇಡಿಕೆ ಈಡೇರಿಸಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆಗ್ರಹಿಸಿದ್ದಾರೆ. ಶುಕ್ರವಾರ ನಗರದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ …

Read More »

ರಾಜ್ಯದಲ್ಲಿ ಶಾಲೆ ಆರಂಭಕ್ಕೂ ಮುನ್ನವೇ ಪೋಷಕರಿಗೆ ಬಿಗ್ ಶಾಕ್ : ಬೆಂಗಳೂರಿನಲ್ಲಿ 500 ಕ್ಕೂ ಹೆಚ್ಚು ಮಕ್ಕಳಲ್ಲಿ ಕೊರೊನಾ ಸೋಂಕು

ಬೆಂಗಳೂರು : ಶಾಲಾ ಆರಂಭದ ನಿರೀಕ್ಷೆಯಲ್ಲಿ ಶಾಲಾ ಮಕ್ಕಳ ಪೋಷಕರಿಗೆ ಬಿಗ್ ಶಾಕ್ ವೊಂದು ಎದುರಾಗಿದ್ದು, ಬೆಂಗಳೂರಿನಲ್ಲಿ ಮಕ್ಕಳಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಆಗಸ್ಟ್ ಮೊದಲ ಎರಡು ವಾರಗಳಲ್ಲಿ ಸುಮಾರು 500 ಮಕ್ಕಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.   ಆಗಸ್ಟ್ 23 ರಿಂದ 9-12 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ಮತ್ತೆ ತೆರೆಯಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ.ಈ ಹೊತ್ತಲ್ಲೇ ಮಕ್ಕಳಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಪತ್ತೆಯಾಗುತ್ತಿರುವುದು ಆತಂಕ …

Read More »

ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಭೇಟಿ ಮಾಡಿದ ಸಲ್ಮಾನ್ ಖಾನ್

ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ವೇಟ್‌ಲಿಫ್ಟರ್‌ ಮೀರಾಬಾಯ್ ಚಾನುರನ್ನು ಭೇಟಿ ಮಾಡಿದ ನಟ ಆಕೆಯೊಂದಿಗೆ ಫೋಟೋ ತೆಗೆದುಕೊಂಡು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ವೇಟ್‌ಲಿಫ್ಟಿಂಗ್ ಶಿಸ್ತಿನ ಮಹಿಳೆಯರ ವಿಭಾಗದ 49 ಕೆಜಿ ಕೆಟಗರಿಯಲ್ಲಿ ಮೀರಾಬಾಯ್ ಬೆಳ್ಳಿ ಪದಕ ಜಯಿಸಿದ್ದರು. “ಬೆಳ್ಳಿ ಪದಕ ವಿಜೇತೆ ನಿಮ್ಮನ್ನು ಭೇಟಿಯಾಗಿದ್ದು ಬಹಳ ಸಂತಸವಾಗಿದೆ.. ನನ್ನ ಹಾರೈಕೆಗಳು ನಿಮ್ಮಂದಿಗೆ ಸದಾ ಇರಲಿವೆ!” ಎಂದು ಸಲ್ಮಾನ್ ಪೋಸ್ಟ್‌ ಮಾಡಿದ್ದಾರೆ.

Read More »

ಪೊಲೀಸ್ ನೇಮಕಾತಿಯಲ್ಲಿ ಮೋಸ ಅಧಿಕಾರಿಗಳ ಬಲೆಗೆ ಬಿದ್ದ ಆರೋಪಿಗಳಿಬ್ಬರು

ಬೆಳಗಾವಿ: ಕಳೆದ ಅಗಸ್ಟ್ 8 ರಂದು ಕೆ.ಎಸ್.ಆರ್.ಪಿ 2 ನೇ ಪಡೆ ಮಚ್ಚೆ ಮೈದಾನದಲ್ಲಿ ನಾಗರೀಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಯ ಸಹಿಷ್ಣುತೆ ಪರೀಕ್ಷೆ, ದೇಹದಾರ್ಡ್ಯತೆ ಪರೀಕ್ಷೆಯಲ್ಲಿ ಅಕ್ರಮ ಎಸಗುತ್ತಿದ್ದ ಆರೋಪಿಗಳಿಬ್ಬರನ್ನು ಪೊಲೀಸ್ ರು ವಶಕ್ಕೆ ಪಡೆದಿದ್ದಾರೆ. ಚಿಕ್ಕೋಡಿ ತಾಲ್ಲೂಕಿನ ಜಾಗನೂರದ ಬಾಳೇಶ ಸನ್ನಪ್ಪ ದುರದುಂಡಿ ಹಾಗೂ ಮೂಡಲಗಿ ತಾಲ್ಲೂಕು ಕುಲಗೋಡದ ಉಮೇಶ ಎನ್ ಬಂಧಿತ ಆರೋಪಿಗಳು, ಅಭ್ಯರ್ಥಿ ಬಾಳೇಶ ಎತ್ತರ ಕಡಿಮೆ ಇರೊದರಿಂದ ತನ್ನ ತಲೆಯ ಮೇಲ್ಬಾದಲ್ಲಿ ಥರ್ಮಾಕೋಲ್ …

Read More »

ಪ್ರವಾಸಿಗರ ಫೇವರೇಟ್ ಗೋವಾ | ಭೇಟಿಗೆ ಷರತ್ತುಗಳು ಅನ್ವಯ

ಪಣಜಿ : ಕೋವಿಡ್ ಎರಡನೇಯ ಅಲೆಯಿಂದಾಗಿ ಸಂಪೂರ್ಣ ಲಾಕ್ ಆಗಿದ್ದ ಪ್ರಸಿದ್ಧ ಪ್ರವಾಸಿ ತಾಣ ಗೋವಾ ಇದೀಗ ಹಂತ ಹಂತವಾಗಿ ಅನ್ ಲಾಕ್ ಆಗುತ್ತಿದೆ. ಪ್ರವಾಸಿರ ಅಚ್ಚುಮೆಚ್ಚಿನ ತಾಣ ಗೋವಾ ಇದೀಗ ಪ್ರವಾಸಿಗರಿಗೆ ಅನ್‍ಲ ಲಾಕ್ ಗೊಳಿಸಲಾಗಿದೆ. ಕೆಲವು ಷರತ್ತುಗಳ ಮೂಲಕ ಪ್ರವಾಸಿಗರು(ಕೇರಳ ಮತ್ತು ಮಹಾರಾಷ್ಟ್ರ ಪ್ರವಾಸಿಗರು ಹೊರತುಪಡಿಸಿ) ಗೋವಾಕ್ಕೆ ಆಗಮಿಸಲು ಸರ್ಕಾರ ಅನುಮತಿ ನೀಡಿದೆ.   ಗೋವಾದಲ್ಲಿನ ಹಲವು ಪ್ರವಾಸಿ ತಾಣಗಳು, ಬೀಚ್‍ ಗಳಲ್ಲಿ ಪ್ರವಾಸಿಗರ ಆಗಮನಕ್ಕೆ ಅವಕಾಶ …

Read More »