Breaking News

ರಾಜ್ಯ

,16.85 ಕೋಟಿ ಅನುದಾನದಲ್ಲಿ ನಾಕಾ ನಂ,1ರಿಂದ ಮಾರ್ಕಂಡೆಯ ನದಿಯವರೆಗೆ ಎರಡೂಬದಿ ಚರಂಡಿ ಮತ್ತು ರಸ್ತೆ ರಮೇಶ್ ಜಾರಕಿಹೊಳಿ ಚಾಲನೆ ನೀಡಿದರು.

ಗೋಕಾಕದಲ್ಲಿರುವ ಶಾಸಕರ ಗೃಹ ಕಚೇರಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಭಾಗ್ಯ ಲಕ್ಷ್ಮಿ ಯೋಜನೆಯ 2020-21 ನೇ ಸಾಲಿನ ಅಂಚೆ ಇಲಾಖೆಯ ವತಿಯಿಂದ ಅನುಷ್ಠಾನ ಗೊಳಿಸಿದ್ದ ಸುಕನ್ಯಾ ಸಮೃದ್ದಿ ಯೋಜನೆಯನ್ನು ಬೆಳಗಾವಿ ಜಿಲ್ಲೆಯಲ್ಲಿ ಗೋಕಾಕದಲ್ಲಿ ಪ್ರಥಮವಾಗಿ ಶಾಸಕರಾದ ಶ್ರೀ ರಮೇಶ ಜಾರಕಿಹೋಳಿಯವರು ಪಲಾನುಭವಿಗಳಿಗೆ ಅಂಚೆ ಇಲಾಖೆಯ ಪಾಸಬುಕ್ ನೀಡುವ ಮೂಲಕ ಚಾಲನೆ ನೀಡಿದರು. ನಂತರ ನಗರೋತ್ಥಾನ ಹಂತ -3ರ ಪ್ರೋತ್ಸಾಹ ಧನದಲ್ಲಿ ರೂ,16.85 ಕೋಟಿ ಅನುದಾನದಲ್ಲಿ ನಾಕಾ ನಂ,1ರಿಂದ …

Read More »

ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಕೊಹ್ಲಿಯ ಮಾಸ್ಟರ್ ಪ್ಲಾನ್: ಇಲ್ಲಿದೆ ನೋಡಿ ಸಂಭಾವ್ಯ ಪ್ಲೇಯಿಂಗ್ XI

ಐಪಿಎಲ್ 2021 (IPL 2021) ರಲ್ಲಿ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ಎರಡನೇ ಚರಣದಲ್ಲಿ ಇಂದು ತನ್ನ ಅಭಿಯಾನ ಆರಂಭಿಸಲಿದೆ. ಅಬುಧಾಬಿಯ ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ವಿರುದ್ಧ ವಿರಾಟ್ ಕೊಹ್ಲಿ (Virat Kohli) ಪಡೆ ಕಣಕ್ಕಿಳಿಯಲಿದ್ದು ಮತ್ತೊಂದು ಗೆಲುವನ್ನು ಎದುರು ನೋಡುತ್ತಿದೆ. ಇದಕ್ಕಾಗಿ ಆರ್​ಸಿಬಿ ಬಲಿಷ್ಠ ತಂಡವನ್ನೇ ಕಣಕ್ಕಿಳಿಸುವ ಪ್ಲಾನ್ …

Read More »

ಇಂದು ಕೆಸಿಇಟಿ ಫಲಿತಾಂಶ ಪ್ರಕಟ; ಈ ವೆಬ್​ಸೈಟ್​ನಲ್ಲಿ ರಿಸಲ್ಟ್ ವೀಕ್ಷಿಸಿ

ಬೆಂಗಳೂರು: ಇಂದು (ಸೆ.20) 2020-21ನೇ ಸಾಲಿನ ಕೆಸಿಇಟಿ ಫಲಿತಾಂಶ (KCET Result 2021) ಪ್ರಕಟವಾಗಲಿದೆ. ಆಗಸ್ಟ್ 28, 29, 30ರಂದು ಸಿಇಟಿ ಪರೀಕ್ಷೆ ನಡೆದಿತ್ತು. ಇಂದು ಮಧ್ಯಾಹ್ನ 2:30ಕ್ಕೆ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ (Ashwath Narayan) ಸುದ್ದಿಗೋಷ್ಠಿ ನಡೆಸುತ್ತಾರೆ. ಮಲ್ಲೇಶ್ವರಂನ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಆ ಬಳಿಕ ಸಿಇಟಿ ಫಲಿತಾಂಶ ಪ್ರಕಟವಾಗುತ್ತದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೆಬ್​ಸೈಟ್​ನಲ್ಲಿ ಫಲಿತಾಂಶ ನೋಡಬಹುದು. kea.kar.nic.in ವೆಬ್​ಸೈಟ್​ನಲ್ಲಿ …

Read More »

ಪಂಜಾಬ್ ಸಿಎಂ ಆಗಿ ಆಯ್ಕೆಯಾದ ಚನ್ನಿಗೆ ರಾಹುಲ್ ಅಭಿನಂದನೆ

ನವದೆಹಲಿ : ಚರಣ್ಜಿತ್ ಸಿಂಗ್ ಚನ್ನಿಯನ್ನು ಮುಂದಿನ ಪಂಜಾಬ್ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಅಭಿನಂದಿಸಿದರು ಮತ್ತು ಪಕ್ಷವು ರಾಜ್ಯದ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವುದನ್ನು ಮುಂದುವರಿಸಬೇಕು ಎಂದು ಹೇಳಿದರು. ಭಾನುವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಚನ್ನಿ, ಸೋಮವಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ, ಅಮರೀಂದರ್ ಸಿಂಗ್ ಉತ್ತರಾಧಿಕಾರಿಯಾಗಿದ್ದು, ಪಕ್ಷದಿಂದ ಅವಮಾನ ಮಾಡಲಾಗಿದೆ ಎಂದು ಶನಿವಾರ ರಾಜೀನಾಮೆ ನೀಡಿದರು. “ಹೊಸ ಜವಾಬ್ದಾರಿಗಾಗಿ ಶ್ರೀ …

Read More »

ಖಾಸಗಿ ರೆಸಾರ್ಟ್‌ನಲ್ಲಿ ರೇವ್‌ ಪಾರ್ಟಿ: 11ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದ ಖಾಕಿ

ಬೆಂಗಳೂರು: ಡ್ರಗ್ ಪಾರ್ಟಿ ನಡೆಯುತ್ತಿದ್ದ ಆನೇಕಲ್‌ನ ರೆಸಾರ್ಟ್‌ನಲ್ಲಿ ದಾಳಿ ನಡೆಸಿದ ಪೊಲೀಸರು 4 ಮಲಯಾಳಿ ಮಹಿಳೆಯರು ಸೇರಿದಂತೆ 28 ಜನರನ್ನು ಬಂಧಿಸಿದ್ದಾರೆ.ನಿಷೇಧಿತ ಔಷಧಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಆನೇಕಲ್ ನ ಗ್ರೀನ್ ವ್ಯಾಲಿ ರೆಸಾರ್ಟ್ ನಲ್ಲಿ ನಡೆದ ಡ್ರಗ್ ಪಾರ್ಟಿಯಲ್ಲಿ ಬೆಂಗಳೂರಿನ ಹಲವು ಐಟಿ ಕಂಪನಿ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಮಲಯಾಳಿ ಸೇರಿದಂತೆ ಮೂವರನ್ನು ಡ್ರಗ್ಸ್ ಮಾರಾಟ ಮಾಡುತ್ತಿದ್ದ ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು.

Read More »

ಮಾಜಿ ಕೇಂದ್ರ ಸಚಿವರಿಗೆ ‘ವಿಡಿಯೋ’ ಸಂಕಷ್ಟ : ಪೊಲೀಸ್ ಆಯುಕ್ತರಿಗೆ ದೂರು ನೀಡಿದ ‘ಡಿ.ವಿ ಸದಾನಂದಗೌಡ’

ಬೆಂಗಳೂರು : ಕೇಂದ್ರದ ಮಾಜಿ ಸಚಿವ ಡಿ ವಿ ಸದಾನಂದಗೌಡರ ವಿರುದ್ಧ ವಿಡಿಯೋವೊಂದನ್ನು ಕಿಡಿಗೇಡಿಗಳು ಹರಿಬಿಟ್ಟಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಡಿ ವಿ ಸದಾನಂದಗೌಡರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಈ ಸಂಬಂಧ ನಗರ ಪೊಲೀಸ್ ಆಯುಕ್ತ ಕಮಪ್ ಪಂತ್ ಗೆ ದೂರು ನೀಡಿದ ಸದಾನಂದಗೌಡರು ‘ನನ್ನ ವಿರುದ್ಧ ಫ್ಯಾಬ್ರಿಕೇಟಡ್, ಫೇಕ್, ಮಿಶ್ರಿತ ವಿಡಿಯೋ ಒಂದನ್ನು ಮಾಡಿದ್ದಾರೆ ಎನ್ನುವುದು ನನ್ನ ಗಮನಕ್ಕೆ ಬಂದಿದೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುತ್ತಿದೆ, …

Read More »

ಎಣ್ಣೆ ಮತ್ತಲ್ಲಿ ಅಡ್ಡಾದಿಡ್ಡಿ ಚಾಲನೆ; ಲಾರಿ ಡ್ರೈವರ್​​ನ ತಡೆದು ನಿಲ್ಲಿಸಿದ್ದೇ ದೊಡ್ಡ ಚಾಲೆಂಜ್

ಉಡುಪಿ: ಕುಡಿದ ಮತ್ತಲ್ಲಿ ಚಾಲಕನೋರ್ವ ಬೃಹತ್​ ಕಂಟೈನರ್​ ವಾಹನವನ್ನು ಅಡ್ಡಾದಿಡ್ಡಿ ಚಲಾಯಿಸಿ ಆತಂಕ ಉಂಟು ಮಾಡಿದ ಘಟನೆ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ನಡೆದಿದೆ.     ಏಣ್ಣೆ ಏಟಲ್ಲಿ ಗಾಡಿ ಹತ್ತಿದ ಚಾಲಕ ಯದ್ವಾತದ್ವ ಗಾಡಿ ಚಲಾಯಸಿದ್ದಾನೆ. ಅಷ್ಟೇ ಅಲ್ಲದೆ ಹೆದ್ದಾರಿಯಲ್ಲಿ ವೇಗ ತಡೆಗಾಗಿ ಅಳವಡಿಸಿದ ಬ್ಯಾರಿಕೇಡ್ ಎಳೆದೊಯ್ದ ಬಹು ದೂರ ಸಾಗಿದ್ದಾನೆ. ವಾಹನವನ್ನು ತಡೆಯಲು ಮುಳ್ಳಿಕಟ್ಟೆ ರಿಕ್ಷಾ ಚಾಲಕರು ಹರಸಾಹಸ ಪಟ್ಟಿದ್ದು, ಕೊನೆಗೆ ಹೆಮ್ಮಾಡಿ ಬಳಿ ಕಂಟೈನರ್ …

Read More »

ಡಾ.ರಾಜ್ ಕುಮಾರ್ ವೃತ್ತಿ ಜೀವನ ಆರಂಭಿಸಿದ ದೇವಸ್ಥಾನ ಇದೆ ನೋಡಿ

ಈಶ್ವರ ದೇವಸ್ಥಾನ ವಾಣಿಜ್ಯ ನಗರಿ ಹುಬ್ಬಳ್ಳಿಯ ಸ್ಟೇಷನ್ ರಸ್ತೆಯಲ್ಲಿದೆ. ಸ್ಟೇಷನ್ ರೋಡ್​ನಲ್ಲಿರುವ ಈಶ್ವರ ದೇವಸ್ಥಾನಕ್ಕೆ ಒಂದು ವಿಶೇಷವಾದ ಶಕ್ತಿ ಇದೆ. ಹುಬ್ಬಳ್ಳಿ: ಜಿಲ್ಲೆಯಲ್ಲಿರುವ ಈಶ್ವರ ದೇವಸ್ಥಾನ (Ishwara Temple) ಒಂದು ಸಾವಿರ ವರ್ಷಗಳ ಇತಿಹಾಸ ಹೊಂದಿದೆ. ಪ್ರಸಿದ್ಧ ಆರೂಢ ಸಂಪ್ರದಾಯದ ಸಿದ್ದರೋಡ ಮಹಾಸ್ವಾಮಿಗಳು ತಪ್ಪಸ್ಸು ಮಾಡಿರುವ ದೇವಸ್ಥಾನ. ಚಾಲುಕ್ಯರ ಕಾಲದಲ್ಲಿ ಸ್ಥಾಪಿತವಾದ ದೇವಸ್ಥಾನ ಬಹಳ ಪ್ರಸಿದ್ಧಿಯನ್ನ ಪಡೆದಿದ್ದು, ಈ ದೇವಸ್ಥಾನಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಬಂದು ದೇವರ ದರ್ಶನ ಪಡೆದು …

Read More »

ವಿರೋಧ ಪಕ್ಷ ಕಾಂಗ್ರೆಸ್‌ಗೆ ಲಸಿಕೆ ಜ್ವರ: ಪ್ರಹ್ಲಾದ ಜೋಶಿ

ದಾವಣಗೆರೆ: ಸ್ಪೆಷಲ್ ಡ್ರೈವ್‌ಗೂ ಮುನ್ನ ದೇಶದಲ್ಲಿ 60 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಇದನ್ನು ಸೋನಿಯಾ ಗಾಂಧಿ ನೀಡಿದ್ದಾರಾ. ವಿರೋಧ ಪಕ್ಷ ಕಾಂಗ್ರೆಸ್‌ಗೆ ಲಸಿಕೆ ಜ್ವರ ಬಂದಿದೆ ಎಂದು ಕೊರೊನಾ ವಿಚಾರವಾಗಿ ವಿರೋಧ ಪಕ್ಷಗಳ ವಾದಕ್ಕೆ ಸಂಬಂಧಪಟ್ಟಂತೆ ದಾವಣಗೆರೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. ಬಳಿಕ ಪಂಜಾಬ್ ಮುಖ್ಯಮಂತ್ರಿ ವಿಚಾರವಾಗಿ ಮಾತನಾಡಿದ ಅವರು, ಇದ್ದ ಒಬ್ಬ ಮುಖ್ಯಮಂತ್ರಿಯನ್ನೂ ಕಾಂಗ್ರೆಸ್ ತೆಗೆದುಹಾಕಿದೆ. ಪಂಜಾಬ್ ಸಿಎಂ ರನ್ನು ತೆಗೆದುಹಾಕಿ ಕಾಂಗ್ರೆಸ್ ಗೊಂದಲದಲ್ಲಿದೆ. …

Read More »

ಪ್ರಧಾನಿ ಮೋದಿ‌ ಹೆಸರಲ್ಲಿ‌ ಗೆಲವು ಕಷ್ಟ :ಮಾಜಿ ಸಿಎಂ ಬಿಎಸ್​ವೈ

ದಾವಣಗೆರೆ: ಪ್ರತಿಪಕ್ಷಗಳನ್ನು ಹಗುರವಾಗಿ ಪರಿಗಣಿಸಬಾರದು. ಮುಂದಿನ ವಿಧಾನಸಭಾ ಚುನಾವಣಾ ದೃಷ್ಟಿಯಿಂದ ನಿರಂತರ ಪ್ರವಾಸದಿಂದ ಪಕ್ಷವನ್ನು ಸಂಘಟಿಸಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ಹೇಳಿದರು. ದಾವಣಗೆರೆಯಲ್ಲಿ ಬಿಜೆಪಿ‌ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ‌ ಸಿಎಂ ಬಿಎಸ್‌ವೈ, ಜನರ ಸಂಕಷ್ಟಕ್ಕೆ ಸ್ಪಂದಿಸಿ‌ದ ಕಾರಣಕ್ಕೆ ನಾವು ಅಧಿಕಾರದಲ್ಲಿದ್ದೇವೆ. ಕೇಂದ್ರದಲ್ಲಿ ಮೋದಿಯವರ ನಾಯಕತ್ವ ದೊರೆತಿರುವುದೇ ನಮ್ಮೆಲ್ಲರ ಸೌಭಾಗ್ಯ ಎಂದರು. ಬಿಜೆಪಿ ಮುಖಂಡರನ್ನು‌ ಕಾಂಗ್ರೆಸ್ ಮುಖಂಡರು‌ ಸಂಪರ್ಕಿಸುತ್ತಿದ್ದಾರೆ. ಈ ಬಗ್ಗೆ ಎಲ್ಲರೂ‌ …

Read More »