Breaking News

ರಾಜ್ಯ

‘ನಮ್ಮನೆ ಯುವರಾಣಿ’ ಅಂಕಿತಾಗೆ ಹೊಗಳಿಕೆಯೋ ಹೊಗಳಿಕೆ

ಎಸ್​.ಪಿ. ಬಾಲಸುಬ್ರಹ್ಮಣ್ಯಂ​ ಅವರು ಜಡ್ಜ್​​ ಆಗಿ ನಡೆಸಿಕೊಡುತ್ತಿದ್ದ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತ್ತು. ಸಾಕಷ್ಟು ಟ್ಯಾಲೆಂಟ್​ಗಳಿಗೆ ಇದು ವೇದಿಕೆ ಆಗಿತ್ತು. ‘ನಮ್ಮನೆ ಯುವರಾಣಿ’ ಧಾರಾವಾಹಿ ಮೂಲಕ ಹೆಚ್ಚು ಮನೆ ಮಾತಾದವರು ಅಂಕಿತಾ. ಮೀರಾ ಪಾತ್ರದಲ್ಲಿ ನಟಿಸುವ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿಕೊಂಡರು. ಈಗ ಅವರನ್ನು ಅಭಿಮಾನಿಗಳು ಬಾಯ್ತುಂಬ ಹೊಗಳುತ್ತಿದ್ದಾರೆ. ಹಾಗಂತ ಇದು ನಟನೆ ವಿಚಾರಕ್ಕಲ್ಲ. ಹಾಗಾದರೆ ಮತ್ತಿನ್ನೇನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ. ಎಸ್​.ಪಿ. ಬಾಲಸುಬ್ರಹ್ಮಣ್ಯಂ​ …

Read More »

ದಲಿತ ಸಮುದಾಯದ ಮಗು ದೇವಸ್ಥಾನ ಪ್ರವೇಶಿಸಿದ್ದಕ್ಕೆ ದಂಡ ಕೇಸ್; ಐವರನ್ನ ಬಂಧಿಸಿದ ಪೊಲೀಸ್

ಕೊಪ್ಪಳ: ಮಕ್ಕಳು ದೇವರ ಸಮಾನ ಅಂತಾರೆ. ಆದ್ರೆ, ಇಲ್ಲೊಂದು ದಲಿತ ಸಮುದಾಯದ ಮಗು ತನ್ನ ಹುಟ್ಟು ಹಬ್ಬದ ಸಂತಸದಲ್ಲಿ ಗ್ರಾಮದ ದೇವಸ್ಥಾನ ಪ್ರವೇಶ ಮಾಡಿದ್ದಕ್ಕೆ ಬಾಲಕನಿಗೆ ದಂಡವಿಧಿಸಿ ಅಮಾನವೀಯವಾಗಿ ನಡೆದಿಕೊಂಡಿದ್ದಾರೆ. ಗ್ರಾಮಸ್ಥರ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮಕೈಗೊಂಡಿದೆ. ಗ್ರಾಮದಲ್ಲಿ ಡಿಸಿ, ಎಸ್​ಪಿ, ಎಸಿ ಸಭೆ ನಡೆಸಿದ್ದು, ಅಸ್ಪೃಶ್ಯತೆ ಆಚರಿಸಿದ ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲಿಸಿ ಐದು ಜನರು ಬಂಧಿಸಿದ್ದಾರೆ.   ಸೆಪ್ಟೆಂಬರ್ 4 ರಂದು ಚಂದ್ರಶೇಖರ ಚೆನ್ನದಾಸರ ಅವರ ಪುತ್ರ …

Read More »

ದೇವರ ಮೂರ್ತಿ ಮೇಲೆ ಚಪ್ಪಲಿ ಧರಿಸಿ ಕಾಲಿಟ್ಟಿದ್ದ ಯುವಕನಿಗೆ ಥಳಿತ!

ತುಮಕೂರು: ದೇವರ ಮೂರ್ತಿ ಮೇಲೆ ಚಪ್ಪಲಿ ಧರಿಸಿ ಕಾಲಿಟ್ಟಿದ್ದ ಆರೋಪದಡಿ ಯುವಕನನ್ನು ಹಿಡಿದು ಗ್ರಾಮಸ್ಥರು ಥಳಿಸಿದ ಘಟನೆ ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ. ಶ್ರೀಸ್ವಾಮಿ ಕೋಟೆ ಕಲ್ಲಪ್ಪನ ಮೂರ್ತಿ ಮೇಲೆ ಚಪ್ಪಲಿ ಧರಿಸಿ ಯುವಕ ಕಾಲಿಟ್ಟಿದ್ದ ವಿಡಿಯೊ ಸೋಷಿಯಲ್‍ ಮೀಡಿಯಾದಲ್ಲಿ ವೈರಲ್‍ ಆಗಿತ್ತು. ಯುವಕನ ವರ್ತನೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಯುವಕನ ವಿರುದ್ಧ ಮಧುಗಿರಿ ಠಾಣೆಗೆ ಗ್ರಾಮಸ್ಥರು ದೂರು ಸಲ್ಲಿಸಿದ್ದರು. …

Read More »

ಮಗುವನ್ನ ಶಾಲೆಗೆ ಸೇರಿಸಲು ಬಂದ ಮಹಿಳೆಯಿಂದ ಮಸಾಜ್ ಮಾಡಿಸಿಕೊಂಡ ಹೆಡ್ ಮಾಸ್ಟರ್

ಬೆಂಗಳೂರು: ನಗರದ ಕೋದಂಡರಾಮಪುರ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯ ಲೋಕೇಶಪ್ಪ ಎಂಬಾತ ಮಗುವಿನ ದಾಖಲಾತಿಗೆಂದು ಬಂದ ಮಹಿಳೆಯಿಂದ ಮಸಾಜ್ ಮಾಡಿಸಿಕೊಂಡ ಘಟನೆ ನಡೆದಿದೆ. ಸದ್ಯ ಲೋಕೇಶಪ್ಪನನ್ನ ಸೇವೆಯಿಂದ ಅಮಾನತು ಮಾಡಲಾಗಿದೆ. ಕೋದಂಡರಾಮಪುರ ಪ್ರೌಢಶಾಲೆಗೆ ತಮ್ಮ ಮಗುವನ್ನ ದಾಖಲು ಮಾಡಲೆಂದು ಮಹಿಳೆಯೋರ್ವರು ಶಾಲೆಗೆ ಬಂದರೆ ಆ ಮಹಿಳೆಯಿಂದಲೇ ಹೆಡ್ ಮಾಸ್ಟರ್ ಲೋಕೇಶಪ್ಪ ಮಸಾಜ್ ಮಾಡಿಸಿಕೊಂಡಿದ್ದಾನೆ. ಈ ಸಂಬಂಧ ಸಿಸಿಟಿವಿ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಚಾರವಾಗಿ ಪ್ರಶ್ನಿಸಿದಾಗ ತಾನು ಮಸಾಜ್ ಮಾಡಿಸಿಕೊಂಡಿದ್ದಾಗಿ …

Read More »

ಇನ್ಮುಂದೆ ಕ್ರಿಕೆಟ್​ನಲ್ಲಿ ‘ಬ್ಯಾಟ್ಸ್​ಮನ್’​ ಎನ್ನುವಂತಿಲ್ಲ: ಲಿಂಗ ಸಮಾನತೆಗಾಗಿ ‘ಬ್ಯಾಟರ್’ ಪದ ಬಳಕೆಗೆ ಆದೇಶ

ಕ್ರಿಕೆಟ್ ಆಟದಲ್ಲಿ ಇನ್ನು ಬ್ಯಾಟಿಂಗ್ ಮಾಡುವವರನ್ನು “ಬ್ಯಾಟ್ಸ್‌ಮನ್” (Batsman) ಎಂದು ಕರೆಯಲಾಗುವುದಿಲ್ಲ. ಕ್ರಿಕೆಟ್ ​ಅನ್ನು ಅಂತರ್ಗತ ಆಟವಾಗಿ ಬಲಪಡಿಸುವ ಪ್ರಯತ್ನವಾಗಿ ಬ್ಯಾಟ್ಸ್​ಮನ್​ ಎಂಬ ಪದದ ಬದಲು ಇನ್ನು ಮುಂದೆ ಲಿಂಗ ತಟಸ್ಥ ಪದ “ಬ್ಯಾಟರ್”​ (Batter) ಎಂಬ ಪದವನ್ನು ಕ್ರಿಕೆಟ್ ನಿಯಮಾವಳಿಯಲ್ಲಿ ಅಳವಡಿಸಲಾಗಿದೆ. ಇದಕ್ಕೆ ಸಂಬಂಧಿಸಿ ನಿಯಮ ರೂಪಿಸಲಾಗಿದ್ದು ಬದಲಾವಣೆ ತಕ್ಷಣದಿಂದ ಜಾರಿಯಾಗಿದೆ ಎಂದು ಮೆರಿಲ್‌ಬಾರ್ನ್‌ ಕ್ರಿಕೆಟ್ ಕ್ಲಬ್‌ (MCC) ತಿಳಿಸಿದೆ. ಎಂಸಿಸಿ ಕ್ರಿಕೆಟ್ ನಿಯಮಗಳ ರಕ್ಷಕನಾಗಿದ್ದು, ಐಸಿಸಿ (ICC) …

Read More »

ಹೈ-ಎಂಡ್ ಬೈಕ್ ಯಾಕೆ? ನಮಗೆ ಈ ಹೋರಿನೇ ಸಾಕು..!

ಬಾಗಲಕೋಟೆ: ಹದಿನೆಂಟು ತಿಂಗಳ ಕಿಲಾರಿ ಹೋರಿಯೊಂದು ದಾಖಲೆಯ ಮೊತ್ತಕ್ಕೆ ಮಾರಾಟವಾಗುವ ಮೂಲಕ ಅಚ್ಚರಿ ಹುಟ್ಟಿಸಿದೆ. ಜಿಲ್ಲೆಯ ರಬಕವಿಬನಹಟ್ಟಿ ತಾಲ್ಲೂಕಿನ ತೇರದಾಳ ಪಟ್ಟಣದ ನಾಲ್ಕನೇ ಕಿನಾಲ್ ತೋಟದ ವಸತಿ ಪ್ರದೇಶದ ಭೀಮಪ್ಪ ಬರಡಗಿ ಎಂಬುವರ ಹೋರಿ ಬರೋಬ್ಬರಿ 3 ಲಕ್ಷ 25 ಸಾವಿರ ರೂಪಾಯಿಗಳಿಗೆ ಮಾರಾಟವಾಗಿದೆ. ಅಶೋಕ‌ ಕುರಿ ಎಂಬುವರು 3 ಲಕ್ಷ 25 ಸಾವಿರಕ್ಕೆ ಖರೀದಿ ಮಾಡಿದ್ದಾರೆ. ಜಾನುವಾರು ಪ್ರದರ್ಶನದಲ್ಲಿ ಭಾಗಿಯಾಗಿ ಗಮನ ಸೆಳೆದಿದ್ದ ಹೋರಿ ನೋಡೋದಕ್ಕೆ ಬಾರಿ ಮೈಮಾಟ …

Read More »

ರಾಜ್ಯದಲ್ಲಿ ಇನ್ಮುಂದೆ ಭಾನುವಾರ ಕೊರೊನಾ ಲಸಿಕೆ ಸಿಗಲ್ಲ, ಆರೋಗ್ಯ ಇಲಾಖೆ ಸಿಬ್ಬಂದಿಗೆ ಭಾನುವಾರ ರಜೆ ದಿನ

ಬೆಂಗಳೂರು: ರಾಜ್ಯದಲ್ಲಿ ಇನ್ಮುಂದೆ ಭಾನುವಾರ ಕೊರೊನಾ ಲಸಿಕೆ ಹಾಕದಿರಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದಾಗಿದೆ. ಇಡೀ ದೇಶವನ್ನು ಕೊರೊನಾ ಮುಕ್ತ ಮಾಡಲು ಮಕ್ಕಳು ಹೊರೆತು ಪಡಿಸಿ ಪ್ರತಿಯೊಬ್ಬರಿಗೂ ಕೊರೊನಾ ಲಸಿಕೆಯನ್ನು ಹಾಕಲಾಗುತ್ತಿತ್ತು. ವಾರದ 7 ದಿನವೂ ಲಸಿಕೆ ಹಾಕುವ ಅಭಿಯಾನ ನಡೆಯುತ್ತಿತ್ತು. ಆದ್ರೆ ಈಗ ಭಾನುವಾರ ಕೊರೊನಾ ಲಸಿಕೆ ಹಾಕದಿರಲು ಆರೋಗ್ಯ ಇಲಾಖೆ ಮುಂದಾಗಿದೆ. ಯಾವುದೇ ರಜೆ ಇಲ್ಲದೇ, ನಿರಂತರವಾಗಿ ಆರೋಗ್ಯ ಸಿಬ್ಬಂದಿ ಕೆಲಸ ಮಾಡ್ತಾ ಇದ್ದರು. …

Read More »

ವಿಧಾನಸಭೆ: ಕೇಂದ್ರ ಸಚಿವರನ್ನು ಕರೆದು ಯಾಕೆ ಅಪಮಾನ ಮಾಡ್ತೀರಿ?

 ಇದು ಬಿಜೆಪಿ ಸದಸ್ಯ ಬಸನಗೌಡ ಪಾಟೀಲ ಯತ್ನಾಳ್‌ ಅವರು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರಿಗೆ ಕೊಟ್ಟ ಟಾಂಗ್‌. ಪ್ರಶ್ನೋತ್ತರ ವೇಳೆಯಲ್ಲಿ ಬೇಲೂರು ಶಾಸಕ ಕೆ.ಎಸ್‌.ಲಿಂಗೇಶ್‌ ಅವರು ಮುಖ್ಯಮಂತ್ರಿಗಳ ಅಮೃತ ಗ್ರಾಮಪಂಚಾಯಿತಿ ಯೋಜನೆಯನ್ನು ಪ್ರಸ್ತಾಪಿಸಿ ಗ್ರಾಮ ಪಂಚಾಯಿತಿಯೊಂದಕ್ಕೆ 25 ಲಕ್ಷ ರೂ. ಕೊಡುವುದಾಗಿ ಹೇಳಲಾಗಿದೆ. ಆದರೆ, ಹಣ ಬಿಡುಗಡೆಯಲ್ಲಿ ಸಮಸ್ಯೆಯಾಗುತ್ತಿದೆ ಎಂದು ಗಮನಸೆಳೆದರು. ಜೆಡಿಎಸ್‌ ಸದಸ್ಯ ಬಂಡೆಪ್ಪ ಕಾಶೆಂಪೂರ ಈ ಪ್ರಶ್ನೆಗೆ ಪೂರಕವಾಗಿ ಮಾತಾಡಿದರು. ಆಗ ಸಚಿವ ಈಶ್ವರಪ್ಪ ಉತ್ತರಿಸಿ, ಗ್ರಾಪಂಗಳಿಗೆ …

Read More »

ಅಬುಧಾಬಿಯಲ್ಲಿಂದು ಹೈವೋಲ್ಟೇಜ್ ಪಂದ್ಯ: ಮುಂಬೈ-ಕೋಲ್ಕತ್ತಾ ನಡುವೆ ಯಾರಿಗೆ ವಿಜಯ?

ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯಲ್ಲಿಂದು (IPL 2021) 34ನೇ ಪಂದ್ಯ ನಡೆಯಲಿದ್ದು ರೋಹಿತ್ ಶರ್ಮಾ (Rohit Sharma) ನಾಯಕತ್ವದ ಮುಂಬೈ ಇಂಡಿಯನ್ಸ್ ಮತ್ತು ಇಯಾನ್ ಮಾರ್ಗನ್ (Eion Morgan) ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ (MIvsKKR) ತಂಡಗಳು ಮುಖಾಮುಖಿ ಆಗುತ್ತಿವೆ. ಮುಂಬೈ ತಂಡ ಈ ಬಾರಿಯ ಟೂರ್ನಿಯಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಕಂಡಿದೆ. ಆಡಿದ ಎಂಟು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ನಾಲ್ಕರಲ್ಲಿ ಸೋಲು ಅನುಭವಿಸಿದೆ. ಇತ್ತ ಕೆಕೆಆರ್ ತಂಡ ಆಡಿದ …

Read More »

ಕೊಡಗು, ಮಲೆನಾಡಿನಲ್ಲಿ ಇನ್ನೂ 3 ದಿನ ಮಳೆ ಹೆಚ್ಚಳ; ಹಲವೆಡೆ ಇಂದು ಹಳದಿ ಅಲರ್ಟ್ ಘೋಷಣೆ

ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಇನ್ನೂ ನಿಂತಿಲ್ಲ. ಸುಮಾರು 10 ದಿನಗಳಿಂದ ರಾಜ್ಯಾದ್ಯಂತ ಮಳೆ ಹೆಚ್ಚಾಗಿದ್ದು, ಇಂದಿನಿಂದ 3 ದಿನ ಮಳೆ ಸುರಿಯಲಿದೆ. ಇಂದು ಮತ್ತು ನಾಳೆ ಕರಾವಳಿ ಜಿಲ್ಲೆಗಳು, ಮಲೆನಾಡು ಹಾಗೂ ಕೊಡಗಿನಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ. ಸೆ. 25ರಂದು ಕರ್ನಾಟಕದ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆ ಜಾಸ್ತಿಯಾಗಲಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಸೆ. 26ರವರೆಗೂ ಮಳೆ …

Read More »