ಗೋಕಾಕ ;- ನಗರಸಭೆಯಿಂದ “ಸ್ವಚ್ಛ ಭಾರತ ಮಿಷಣ್’ ಯೋಜನೆಯಡಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ಯ ವಾರ್ಡ ನಂ. 29 ರಲ್ಲಿ ಬುಧವಾರದಂದು “ಕಸ ವಿಂಗಡನೆ ಅಮೃತ ದಿನ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮುಖಂಡರಾದ ಬಸವರಾಜ ದೇಶನೂರ ಅವರು ಮಾತನಾಡಿ, ನಗರವನ್ನು ಸ್ವಚ್ಛವಾಗಿಡುವ ಉದ್ದೇಶದಿಂದ ನಗರಸಭೆಯವರು ಕಸ ವಿಲೇವಾರಿ ಮಾಡುತ್ತಿದ್ದಾರೆ. ಈ ಕಾರ್ಯಕ್ಕೆ ಜನತೆಯು ನಗರಸಭೆಯವರು ತಿಳಿಸಿದಂತೆ ಒಣಕಸ, ಹಸಿಕಸ ಹಾಗೂ ಹಾನಿಕಾರಕ ಕಸವನ್ನು ಪ್ರತ್ಯೇಕಿಸಿ ನಗರಸಭೆಯ ವಾಹನಗಳಿಗೆ ನೀಡಬೇಕು. …
Read More »ರಾಯಚೂರು: ಕೌಟುಂಬಿಕ ಕಲಹ; ಒಂದೇ ಮನೆಯ ಮೂವರ ಬರ್ಬರ ಕೊಲೆ
ರಾಯಚೂರು: ಸಮೀಪದ ಯರಮರಸ್ ಕ್ಯಾಂಪ್ ನಲ್ಲಿ ಕೌಟುಂಬಿಕ ಕಲಹದಿಂದ ಮೂವರ ಕೊಲೆಯಾದ ಧಾರುಣ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ಒಂದೇ ಕುಟುಂಬದ ಸಂತೋಷಿ(45) ವೈಷ್ಣವಿ(18) ಮತ್ತು ಆರತಿ(16)ಎಂಬುವವರ ಕೊಲೆಯಾಗಿದೆ. ಅಳಿಯ ಸಾಯಿ ಎಂಬಾತನೆ ಅತ್ತೆ ಹೆಂಡತಿ ಹಾಗೂ ಸೊಸೆಯನ್ನು ಕೊಂದಿರಬಹುದು ಎಂದು ಶಂಕಿಸಲಾಗಿದೆ. ಕಳೆದ ಆರು ತಿಂಗಳ ಹಿಂದೆಯಷ್ಟೇ ಮಗಳು ವೈಷ್ಣವಿ ಮದುವೆ ಜರುಗಿತ್ತು. ಆದರೆ, ಅಳಿಯ ಮಗಳ ನಡುವೆ ಹೊಂದಾಣಿಕೆ ಇರಲಿಲ್ಲ. ಪದೇಪದೆ ಜಗಳ ಆಡುತ್ತಿದ್ದರು. ಕಳೆದ ಒಂದು ತಿಂಗಳ …
Read More »ಡಬಲ್ ಬಾರ್ ಬಂದೂಕಿನಿಂದ ಹೊರಬಂದ ಗುಂಡು ಸಮಂಧಿಕನ ಕಾಲಿಗೆ
ಬೆಳಗಾವಿ-ರಾಗಿಯ ರಾಶಿ ಮಾಡಲು ಅಪ್ಪ ಮಕ್ಕಳು ಹೊಲಕ್ಕೆ ಹೋಗಿದ್ರು. ಜೊತೆಗೆ ಸಮಂಧಿಕನೊಬ್ಬ ಹೋಗಿದ್ದ ,ಹೊಲದಲ್ಲಿ ಹಂದಿಗಳ ಕಾಟ ಇದೆ ಅಂತಾ ಡಬಲ್ ಬಾರ್ ಬಂದೂಕು ಹೊತ್ಕೊಂಡ ಹೋದ ಅಪ್ಪ ಮಕ್ಕಳು ಎಡವಟ್ಟು ಮಾಡಿಕೊಂಡ ಘಟನೆ ಬೆಳಗಾವಿ ಸಮೀಪದ ರಾಜಕಟ್ಟಿ ಗ್ರಾಮದಲ್ಲಿ ನಡೆದಿದೆ. ರಾಜಕಟ್ಟಿ ಗ್ರಾಮದ ಅಪ್ಪ ಮಕ್ಕಳು ಹೊಲದಲ್ಲಿ ರಾಗಿ ರಾಶಿ ಮಾಡಲು ಹೋಗಿದ್ದರು.ಗದ್ದೆಯಲ್ಲಿ ಕಾಲಿಡುತ್ತಿದ್ದಂತೆಯೇ ಕಾಡು ಹಂದಿ ರಾಗಿ ಬೆಳೆ ಹಾಳು ಮಾಡುತ್ತಿರುವದನ್ನು ನೋಡಿದ ಇವರು ಅಲರ್ಟ್ ಆದ್ರು.ಇವರ …
Read More »ಸಿದ್ದರಾಮಯ್ಯ ಒಬ್ಬ ಭಯೋತ್ಪಾದಕ ಎಂದ ನಳೀನ್ ಕುಮಾರ್ ಕಟೀಲ್...!
ಆರ್ಎಸ್ಎಸ್ನದ್ದು ತಾಲಿಬಾನ್ ಸಂಸ್ಕೃತಿ ಎಂದ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭರ್ಜರಿ ಟಾಂಗ್ ನೀಡಿದ್ದಾರೆ. ಮಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಸಿದ್ದರಾಮಯ್ಯ ಒಬ್ಬ ಭಯೋತ್ಪಾದಕ ಎಂದು ಗುಡುಗಿದ್ರು. ಸಿದ್ದರಾಮಯ್ಯ ಅತಂತ್ರ ಸ್ಥಿತಿಯಲ್ಲಿ ಇದ್ದಾರೆ. ಸಿದ್ದರಾಮಯ್ಯ ಆಡಳಿತದಲ್ಲಿ ಅನೇಕರ ಹತ್ಯೆಯಾಯ್ತು. ಅವರ ಆಡಳಿತದಲ್ಲಿ ರಾಜ್ಯದಲ್ಲಿ ತಾಲಿಬಾನ್ ಸ್ಥಿತಿಯೇ ಇತ್ತು. ರಾಜ್ಯದಲ್ಲಿ 24 ಹಿಂದೂ ಯುವಕರನ್ನು ಕೊಲೆಗೈಯಲಾಯ್ತು. ದಕ್ಷಿಣ ಕನ್ನಡದಲ್ಲಿ …
Read More »ನಾಡ ಹಬ್ಬ ಮೈಸೂರು ದಸರಾ ಉದ್ಘಾಟಕರ ಹೆಸರು ಘೋಷಣೆ
ಮೈಸೂರು: ನಾಡ ಹಬ್ಬ ದಸರಾ ಉದ್ಘಾಟಕರ ಹೆಸರು ಘೋಷಣೆಯಾಗಿದೆ. ಈ ಬಾರಿ ನಡೆಯಲಿರುವ ದಸರಾ ಹಬ್ಬವನ್ನು ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರು ಉದ್ಘಾಟಿಸಲಿದ್ದಾರೆ. ಇಂದು (ಸೆ.28) ಸಂಜೆ ದಸರಾ ಹಬ್ಬದ ಸಿದ್ಧತೆ ಕುರಿತು ಚರ್ಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು. ಅಕ್ಟೋಬರ್ 7ರಿಂದ ಆರಂಭವಾಗಲಿರುವ ನಾಡಹಬ್ಬ ದಸರಾ ಮಹೋತ್ಸವವನ್ನು ಉದ್ಘಾಟಿಸಲು ಹಿರಿಯ ಮುತ್ಸದ್ಧಿ, ಮಾಜಿ ಮುಖ್ಯಮಂತ್ರಿ ಶ್ರೀ ಎಸ್.ಎಂ.ಕೃಷ್ಣ ರವರಿಗೆ ಆಹ್ವಾನ ನೀಡಲು …
Read More »ನಟನೆಯ ಕನಸು ಕಾಣುತ್ತಿದ್ದ ಮೌನಿ ರಾಯ್ ಇದಕ್ಕಾಗಿ ಮಾಡಿದ್ದೇನು ಗೊತ್ತಾ..?
ಬಾಲಿವುಡ್ ಕನಸು ಬೆನ್ನತ್ತಿ ಕಾಲೇಜು ವ್ಯಾಸಂಗಕ್ಕೆ ತಿಲಾಂಜಲಿ ಬಿಟ್ಟಿದ್ದ ಮೌನಿ ರಾಯ್ ಅಕ್ಷಯ್ ಕುಮಾರ್ ಜೊತೆಗೆ ‘ಗೋಲ್ಡ್’ ಚಿತ್ರದ ಮೂಲಕ ಬಾಲಿವುಡ್‌ಗೆ ಭರ್ಜರಿ ಎಂಟ್ರಿ ಕೊಟ್ಟು ಚಿತ್ರರಂಗದಲ್ಲಿ ಇದುವರೆಗೂ ಬಹು ದೂರ ಸಾಗಿ ಬಂದಿದ್ದಾರೆ. ಚಿತ್ರೋದ್ಯಮದಲ್ಲಿ ತಮ್ಮದೇ ಛಾಪು ಹೊಂದಿರುವ ಮೌನಿ, ಬಾಲಿವುಡ್‌ಗೆ ಬರಬೇಕಾದರೆ ತಾವೆಂತೆಂಥಾ ತ್ಯಾಗಗಳನ್ನು ಮಾಡಿದ್ದಾರೆ ಎಂಬ ಸಂಗತಿಯನ್ನು ಹಂಚಿಕೊಂಡಿದ್ದಾರೆ. ನಟನೆಯ ಕನಸು ಕಾಣುತ್ತಿದ್ದ ಮೌನಿ, ಇದಕ್ಕಾಗಿ ತಮ್ಮ ಕಾಲೇಜು ವ್ಯಾಸಂಗ ತ್ಯಜಿಸಿ ಕನಸಿನ ನಗರಿಗೆ …
Read More »ಲಂಚ ಪಡೆಯುವಾಗಲೇ ಎಸಿಬಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕುಂದಗೋಳ ಅಧಿಕಾರಿ
ಕುಂದಗೋಳ: ರೈತರೊಬ್ಬರ ಬಳಿ ಹಣದ ಬೇಡಿಕೆ ಇಟ್ಟಿದ್ದರು ಎನ್ನಲಾದ ಕಂದಾಯ ನಿರೀಕ್ಷಕರೊಬ್ಬರು ಎಸಿಬಿ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಕುಂದಗೋಳ ಪಟ್ಟಣದ ಕಂದಾಯ ನಿರೀಕ್ಷಕ ಶಿವಾನಂದ ಬೆಮಣ್ಣವರ ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ರೈತನ ಹೊಸ ಪಾಣಿಯನ್ನ ಮಾಡಿಕೊಡಲು ಅಧಿಕಾರಿ 35 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಅನ್ನೋ ಆರೋಪ ಕೇಳಿ ಬಂದಿತ್ತು. ಹೀಗಾಗಿ ರೈತ ಎಸಿಬಿ ಪೊಲೀಸರಿಗೆ ಅಧಿಕಾರಿ ವಿರುದ್ಧ ದೂರು ನೀಡಿದ್ದರಂತೆ. ಇಂದು ಕಚೇರಿಯಲ್ಲಿ ರೈತನಿಂದ ಅಧಿಕಾರಿ ಹಣ …
Read More »ಕುಡುಕುನ ವೇಷ ಧರಿಸಿ ಆರೋಪಿ ಬಂಧಿಸಿದ ಪೊಲೀಸರು.. 9 ವರ್ಷಗಳ ಹಿಂದಿನ ಕೇಸ್ಗೆ ಕೊನೆಗೂ ಮುಕ್ತಿ
ಬೆಂಗಳೂರು: ಒಂಭತ್ತು ವರ್ಷದ ಹಿಂದಿನ ಪ್ರಕರಣವೊಂದನ್ನ ಪೊಲೀಸರು ಬೇಧಿಸಿದ್ದಾರೆ, ಕುಡುಕನ ಸೋಗಿನಲ್ಲಿ ಹೋಗಿ ಆರೋಪಿಯನ್ನ ಬಂಧಿಸಿದ್ದಾರೆ. ಟ್ರ್ಯಾಕ್ಟರ್ ಓಡಿಸುತ್ತಿದ್ದ ಆಂಥೋನಿ ಎಂಬಾತ ಆಟೋಗೆ ಡಿಕ್ಕಿಹೊಡೆದು ಪರಾರಿಯಾಗಿದ್ದನಂತೆ. ಘಟನೆಯಲ್ಲಿ 8 ವರ್ಷದ ಕೌಶಲ್ ಕುಮಾರ್ ಎಂಬಾತ ಮೃತಪಟ್ಟಿದ್ದ. ಬ್ಯಾಟರಾಯನಪುರ ಠಾಣಾ ವ್ಯಾಪ್ತಿಯ ಬಾಪೂಜಿನಗರದಲ್ಲಿ ಘಟನೆ ನಡೆದಿತ್ತು. ಪ್ರಕರಣ ಸಂಬಂಧ ಆರೋಪಿಗೆ 10 ತಿಂಗಳು 15 ದಿನ ಜೈಲು ಶಿಕ್ಷೆಯಾಗಿತ್ತು. ಆತನಿಗೆ ಶಿಕ್ಷೆ ಪ್ರಕಟ ಆಗ್ತಿದ್ದಂತೆ ಆತ ತಲೆಮೆರೆಸಿಕೊಂಡಿದ್ದ. ಬಳಿಕ ವಿಳಾಸ ಬದಲಿಸಿಕೊಂಡು …
Read More »ಮಧ್ಯರಾತ್ರಿ ಭೀಕರ ರಸ್ತೆ ಅಪಘಾತ; ಸ್ಥಳದಲ್ಲೇ ಇಬ್ಬರು ಸಾವು
ಧಾರವಾಡ: ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ವಾಹನ ಪಲ್ಟಿಯಾದ ಘಟನೆ ಜಿಲ್ಲೆಯ ಕ್ಯಾರಕೊಪ್ಪ ಗ್ರಾಮದಲ್ಲಿ ನಡೆದಿದೆ. ದುರ್ಘಟನೆಯಲ್ಲಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ, ಇನ್ನಿಬ್ಬರಿಗೆ ಗಂಭೀರ ಗಾಯವಾಗಿದೆ. ಕ್ಯಾರಕೊಪ್ಪ ಗ್ರಾಮದ ಎನ್‌ಎಚ್ 4 ಬಳಿ ಅನಾಹುತ ಸಂಭವಿಸಿದೆ. ನಿದ್ರೆ ಮಂಪರಿನಲ್ಲಿ ಕ್ಯಾಂಟರ್ ಚಾಲಕ ಇದ್ದ. ಹೀಗಾಗಿ ದುರ್ಘಟನೆ ನಡೆದಿರಬಹುದು ಅಂತಾ ಹೇಳಲಾಗಿದೆ. ಮೃತರ ಬಗ್ಗೆ ಇನ್ನೂ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಸದ್ಯ ಗಾಯಗೊಂಡಿರುವವರನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ …
Read More »ರೈತರನ್ನು ಕಡೆಗಣಿಸಿದ ಸರ್ಕಾರಕ್ಕೆ ಉಳಿಗಾಲವಿಲ್ಲ: ಆಶ್ರಫ ಮಾಚಾರ
ಶಹಾಪುರ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ ತಿದ್ದುಪಡಿಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಸೋಮವಾರ ಕರೆ ನೀಡಿದ ಭಾರತ್ ಬಂದ್‌ಗೆ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಹಲವೆಡೆ ಅಂಗಡಿ ಮುಗ್ಗಟ್ಟು ತೆರೆದಿದ್ದವು. ಸಾರಿಗೆ ವ್ಯವಸ್ಥೆ ಸಾಮಾನ್ಯವಾಗಿತ್ತು. ನಂತರ ವಿವಿಧ ರೈತ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ನಗರದ ಬಸವೇಶ್ವರ ವೃತ್ತದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಆಶ್ರಯದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಎಸ್ಡಿಪಿಐ ಕನ್ನಡಪರ …
Read More »
Laxmi News 24×7