Breaking News

ರಾಜ್ಯ

ಮಹಿಳೆಯ ಮೇಲೆ ದಾಳಿ ಮಾಡಿದ ಚಿರತೆ, ಮುಂದೇನಾಯ್ತು : ಭಯಾನಕ Video Viral

ಮುಂಬೈ : ಮುಂಬೈನಲ್ಲಿ ಮಧ್ಯ ವಯಸ್ಕ ಮಹಿಳೆ ಮೇಲೆ ಹೊಂಚು ಹಾಕಿಕೊಂಡಿದ್ದ ಚಿರತೆಯೊಂದು ದಾಳಿ ಮಾಡಿದ್ದು, ಮಹಿಳೆ ತನ್ನ ವಾಕಿಂಗ್ ಸ್ಟಿಕ್ ನಿಂದ ಚಿರತೆಯೊಂದಿಗೆ ಹೋರಾಡಿದ್ದು, ಚಿರತೆ ಅಲ್ಲಿಂದ ಕಾಲ್ಕಿತ್ತ ಘಟನೆ ನಡೆದಿದೆ. ಮುಂಬೈನ ಆರೆಯಲ್ಲಿ ಚಿರತೆ ಮಹಿಳೆ ಮೇಲೆ ದಾಳಿ ಮಾಡಲು ಹೊರಟಿತ್ತು. ಮೂರು ದಿನಗಳಲ್ಲಿ ಅದೇ ಪ್ರದೇಶದಲ್ಲಿ ನಡೆದ ಎರಡನೇ ದಾಳಿ ಇದಾಗಿದೆ. ಈ ಮಹಿಳೆ ಚಿರತೆಯನ್ನು ಎಷ್ಟು ಧೈರ್ಯದಿಂದ ಎದುರಿಸಿದಳು ಎಂಬುದನ್ನು ದೃಶ್ಯಾವಳಿಗಳು ತೋರಿಸುತ್ತವೆ. ಸದ್ಯ …

Read More »

ಬೆಳಗಾವಿ ಮಹಾನಗರ ಪೊಲೀಸರು ಇಂದಿನಿಂದ ವಿನೂತನ ಕಾರ್ಯಕ್ರಮ

ಬೆಳಗಾವಿ ಮಹಾನಗರ ಪೊಲೀಸರು ಇಂದಿನಿಂದ ವಿನೂತನ ಕಾರ್ಯಕ್ರಮವೊಂದನ್ನು ಹಾಕಿಕೊಂಡಿದ್ದಾರೆ. *ಜನಸ್ನೆಹಿ ಪೊಲೀಸ್* ಕಾರ್ಯಕ್ರಮದ ಅಡಿಯಲ್ಲಿ ಇವತ್ತಿನಿಂದ ಬೆಳಗಾವಿ ನಗರ ಪೊಲೀಸ್ ವ್ಯಾಪ್ತಿಯಲ್ಲಿ ಎಲ್ಲ ಅಧಿಕಾರಿಗಳು ಕಾಲ್ನಡಿಗೆ ಗಸ್ತು ನಡೆಯಲಿದ್ದಾರೆ. ಅವರವರ ಠಾಣೆಯ ಬೀಟ್ ಪ್ರದೇಶಗಳಲ್ಲಿ ಬೀಟ್ ಸಿಬ್ಬಂದಿ ಹಾಗೂ ಇನ್ನಿತರ ಪೊಲೀಸ್ ಸಿಬ್ಬಂದಿಯೊಂದಿಗೆ *ಪ್ರತಿದಿನ ಸಾಯಂಕಾಲ 7 ಗಂಟೆಯಿಂದ 9 ಗಂಟೆವರೆಗೆ *ಕಾಲ್ನಡಿಗೆ ಗಸ್ತು* ನಡೆಸಲಿದ್ದಾರೆ.   ತನ್ಮೂಲಕ   ಪೊಲೀಸ್ ವ್ಯವಸ್ಥೆಯಲ್ಲಿ ಸಾರ್ವಜನಿಕರ ಸಹಕಾರ ಕೋರಲಿದ್ದಾರೆ. ಈ ಕಾರ್ಯಾಚರಣೆಯು ಇನ್ನು …

Read More »

ಕಾಂಗ್ರೆಸ್ ಸಭೆಯಲ್ಲಿ ಜಟಾಪಟಿಗೆ ಬಿದ್ದು ಘೋಷಣೆ ಕೂಗಿದ ಕಾರ್ಯಕರ್ತರು

ಶಿರಸಿ: ಕಾಂಗ್ರೆಸ್ ಸಭೆಯಲ್ಲಿ ಆರ್.ವಿ.ದೇಶಪಾಂಡೆ ಹಾಗೂ ಘೋಟ್ನೇಕರ್ ಬೆಂಬಲಿಗರು ಗೊಂದಲ ಸೃಷ್ಟಿಸಿದ ಘಟನೆ ಶಿರಸಿಯ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಅಂಬೇಡ್ಕರ್ ಭವನದಲ್ಲಿ ಕಾಂಗ್ರೆಸ್​ನ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಸಭೆಯಲ್ಲಿ ಘೋಟ್ನೇಕರ್ ಹಾಗೂ ಆರ್.ವಿ.ದೇಶಪಾಂಡೆ ಬೆಂಬಲಿಗರ ನಡುವೆ ಜಯಘೋಷದ ಗೊಂದಲ ಏರ್ಪಟ್ಟಿತು. ಭಾಷಣದ ವೇಳೆ ಹಳಿಯಾಳದ ರಾಜಕೀಯ ಸ್ಥಿತಿ ವಿವರಿಸಿ ದೇಶಪಾಂಡೆ ಹಾಗೂ ಬ್ಲಾಕ್ ಅಧ್ಯಕ್ಷರ ವಿರುದ್ಧ ವಿಧಾನ ಪರಿಷತ್ ಸದಸ್ಯ ಘೋಟ್ನೇಕರ್ …

Read More »

ಕಿಡಿಗೇಡಿಗಳ ಕಲ್ಲು ತೂರಾಟದಲ್ಲಿ ಸಾರ್ವಜನಿಕರ ತುರ್ತು ಸೇವೆಯ 112 ವಾಹನ.

  ಘಟಪ್ರಭಾ: ಸೋಮವಾರ ರಾತ್ರಿ 12 ಗಂಟೆ ಸುಮಾರಿಗೆ ಘಟಪ್ರಭಾದ ದಳವಾಯಿ ನಗರದಲ್ಲಿ ಜನರ ತುರ್ತು ಸೇವೆಗಾಗಿರುವ ಪೊಲೀಸ್ ಇಲಾಖೆಯ 112 ವಾಹನದ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿ ವಾಹನ ಜಖುಂಗೊಳಿಸಿ ಪರಾರಿಯಾಗಿದ್ದಾರೆ. ವಾಹನದಲ್ಲಿದ್ದ ಇಬ್ಬರು ಪೊಲೀಸರು ಅಪಾಯದಿಂದ ಪರಾಗಿದ್ದು 7 ಜನರ ಮೇಲೆ ಪೊಲೀಸರೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.   ಘಟನೆಯ ವಿವರ: ಗೋಕಾಕ ತಾಲೂಕಿನ ಶಿಂಗಳಾಪೂರ ಗ್ರಾಮದ ಯುವತಿಯೊರ್ವಳನ್ನ ಘಟಪ್ರಭಾ ದಳವಾಯಿ …

Read More »

ವಿದ್ಯುತ್ ಬಿಲ್ ವಸೂಲಿಗೆ ತೆರಳಿದ್ದ ಬೆಸ್ಕಾಂ ಸಿಬ್ಬಂದಿಗೆ ಅಟ್ಟಾಡಿಸಿ ಹೊಡೆದ ಗ್ರಾಮಸ್ಥರು

ತುಮಕೂರು: ವಿದ್ಯುತ್ ಬಿಲ್ ವಸೂಲಿಗಾಗಿ ತೆರಳಿದ್ದ ಬೆಸ್ಕಾಂ ಸಿಬ್ಬಂದಿಗೆ ಗ್ರಾಮಸ್ಥರು ಕಲ್ಲು, ದೊಣ್ಣೆಗಳಿಂದ ಹೊಡೆದ ಘಟನೆ ತುಮಕೂರು ಜಿಲ್ಲೆ, ಶಿರಾ ತಾಲೂಕಿನ ಚಿಕ್ಕನಕೋಟೆ ಗೊಲ್ಲರಹಟ್ಟಿಯಲ್ಲಿ ನಡೆದಿದೆ. ವಿದ್ಯುತ್ ಬಿಲ್ ವಸೂಲಿಗಾಗಿ ಶಾಖಾಧಿಕಾರಿ ತೆರಳಿದ್ದರು. ಈ ವೇಳೆ ಗ್ರಾಮಸ್ಥರು ಕಲ್ಲು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಗ್ರಾಮಸ್ಥರು ಹಲ್ಲೆ ನಡೆಸಿರುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ. ಲೈನ್ ಮ್ಯಾನ್​ಗಳಾದ ಭೂತರಾಜು, ನರಸಿಂಹರಾಜು, ತಿಪ್ಪೇಸ್ವಾಮಿ ಎಂಬುವರ ಮೇಲೆಯೂ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಗಾಯಾಳುಗಳೆಲ್ಲರನ್ನೂ ಶಿರಾ …

Read More »

ಕೆಎಂಎಫ್ ಸಂಸ್ಥೆ ಇಡೀ ದೇಶದಲ್ಲಿ ನಂಬರ್ 1 ಸಂಸ್ಥೆಯಾಗಬೇಕು: ಸಿಎಂ ಬೊಮ್ಮಾಯಿ

ಬೆಂಗಳೂರು, ಸೆ. 29: “ಹಾಲು ಮತ್ತು ಸಕ್ಕರೆಯ ಉಪ ಉತ್ಪನ್ನಗಳು ಬಹಳಷ್ಟಿವೆ. ಕೆಎಂಎಫ್‌ನ ಉತ್ಪನ್ನಗಳು ಕೂಡ ಉತ್ತಮವಾಗಿವೆ. ಹೀಗಾಗಿ ತನ್ನ ಉತ್ಪನ್ನಗಳ ಮಾರುಕಟ್ಟೆಯನ್ನು ವಿಸ್ತರಣೆ ಮಾಡುವ ಮೂಲಕ ಹೆಚ್ಚಿನ ಲಾಭ ಗಳಿಸುವಂತೆ” ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ. ಬುಧವಾರ ಕರ್ನಾಟಕ ಹಾಲು ಮಹಾಮಂಡಲದ ನೂತನ ಯೋಜನೆಗಳಿಗೆ ಚಾಲನೆ ನೀಡಿ ನಂದಿನಿ ಉತ್ಪನ್ನಗಳನ್ನು ಬಿಡುಗಡೆ ಮಾಡಿ ಮಾತನಾಡಿದರು. ”ಹಾಲಿನ‌ ಉಪ ಉತ್ಪನ್ನಗಳ ಮಾರುಕಟ್ಟೆಯನ್ನು ಪರಿಣಾಮಕಾರಿಯಾಗಿ ವಿಸ್ತರಣೆ ಮಾಡಬೇಕು. ಈ ಉತ್ಪನ್ನಗಳಿಗೆ ಹೆಚ್ಚಿನ …

Read More »

ಅಡವಿಟ್ಟ ಮಾಂಗಲ್ಯ ಸರ ಬಿಡಿಸಿಕೊಳ್ಳಲು ಬಂದಾಗ ನಕಲಿ ಚಿನ್ನವೆಂದ ಬ್ಯಾಂಕ್ ಮ್ಯಾನೇಜರ್! ಮಹಿಳೆಯ ಕಣ್ಣೀರು

ಹಾಸನ: ಅಡವಿಡುವಾಗ ಅಸಲಿ ಬಂಗಾರವಾಗಿದ್ದ ಮಾಂಗಲ್ಯ ಸರ, ಇದೀಗ ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಬಂದಾಗ ನಕಲಿ ಚಿನ್ನ ಎನ್ನುತ್ತಿರುವ ಬ್ಯಾಂಕ್ ಮ್ಯಾನೇಜರ್ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಂಗಲ್ಯ ಸರ ಬಿಡಿಸಿಕೊಳ್ಳಲು ಬಂದ ಚನ್ನರಾಯಪಟ್ಟಣದ ಹಿರೇಹಳ್ಲಿ ಗ್ರಾಮದ ಜಯಮ್ಮ ಎಂಬಾಕೆ ಬ್ಯಾಂಕ್ ಮ್ಯಾನೇಜರ್ ಹೇಳಿದ್ದನ್ನು ಕೇಳಿ ಕಂಗಾಲಾಗಿದ್ದಾಳೆ. ಮಗನ ಕಾಯಿಲೆಗೆಂದು ವರ್ಷದ ಹಿಂದೆ ಜಯಮ್ಮ 30 ಗ್ರಾಂ ಮಾಂಗಲ್ಯದ ಸರವನ್ನು ಒಂದು ಲಕ್ಷದ ಮೂವತ್ತು ಸಾವಿರಕ್ಕೆ ಅಡವಿಟ್ಟಿದ್ದರು. ಇದೀಗ ಅಡವಿಟ್ಟಿದ್ದ …

Read More »

ದೇಶದಲ್ಲಿ ಇಂದು ಮತ್ತೆ ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಏರಿಕೆ

ದೇಶದಲ್ಲಿ ಇಂದು ಮತ್ತೆ ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಏರಿಕೆಯಾಗಿದ್ದು, ಪೆಟ್ರೋಲ್ ದರ ಪ್ರತಿ ಲೀಟರ್ ಗೆ 24 ರಿಂದ 25 ಪೈಸೆಯಷ್ಟು ಹಾಗೂ ಡೀಸೆಲ್ ದರ ಪ್ರತಿ ಲೀಟರ್ ಗೆ 30 ರಿಂದ 35 ಪೈಸೆಯಷ್ಟು ಹೆಚ್ಚಳ ಕಂಡಿದೆ. ದೆಹಲಿ: ಲೀಟರ್ ಪೆಟ್ರೋಲ್ ದರ 101.64 ರೂ. ಆಗಿದ್ದು, ಡೀಸೆಲ್ ದರ 89.87 ರೂ. ತಲುಪಿದೆ. ಮಹಾರಾಷ್ಟ್ರ: ಲೀಟರ್ ಪೆಟ್ರೋಲ್ ದರ 107.71 ರೂ. ಆಗಿದ್ದು, ಡೀಸೆಲ್ ದರ 97.52 …

Read More »

ಶಾಹೀನ್ ಚಂಡಮಾರುತ- ಅ.3ರ ವರೆಗೆ ರಾಜ್ಯದಲ್ಲಿ ಭಾರೀ ಮಳೆ

ಬೆಂಗಳೂರು: ಶಾಹೀನ್ ಚಂಡಮಾರುತ ಹಿನ್ನೆಲೆ ಇಂದಿನಿಂದ ಅಕ್ಟೋಬರ್ 3 ರವರೆಗೆ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಾಳೆ ಶಾಹೀನ್ ಚಂಡಮಾರುತ ಅಪ್ಪಳಿಸುವ ಹಿನ್ನೆಲೆಯಲ್ಲಿ ಇಂದಿನಿಂದ ಕರ್ನಾಟಕದಲ್ಲೂ ಮಳೆ ಹೆಚ್ಚಾಗುವ ಸಾಧ್ಯತೆ ಇದೆ. ಅ.3ರ ವರೆಗೂ ಕರ್ನಾಟಕದ ಉತ್ತರ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.   ಇಂದಿನಿಂದ ಅ.3 ರವರೆಗೆ ಉಡುಪಿ, ಬಳ್ಳಾರಿ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, …

Read More »

ಪಾರ್ಕಿನಲ್ಲಿ ಆಟ ಆಡುವಾಗ ವಿದ್ಯುತ್ ತಗುಲಿ ಬಾಲಕ ಸಾವು

ಕಲಬುರಗಿ: ಪಾರ್ಕ್ ನಲ್ಲಿ ಆಟ ಆಡುತ್ತಿರುವಾಗ ವಿದ್ಯುತ್ ತಂತಿ ತಗುಲಿ ಬಾಲಕ ಸಾವನ್ನಪ್ಪಿದ ಆಘಾತಕಾರಿ ಘಟನೆ ನಗರದ ಎನ್.ಜಿ.ಓ. ಕಾಲೋನಿಯ ಹನುಮಾನ್ ಮಂದಿರದ ಉದ್ಯಾನವನದಲ್ಲಿ ನಡೆದಿದೆ. ನಗರದ ಎನ್.ಜಿ.ಓ. ಕಾಲೋನಿಯ ಮಹಾದೇವಿ ಸುರೇಶ ದಂಪತಿ ಪುತ್ರ 6 ವರ್ಷದ ಸಿದ್ದು ಮೃತ ಬಾಲಕ. ವಿದ್ಯುತ್ ತಂತಿ ತಗಲಿ ಮೃತಪಟ್ಟಿದ್ದಾನೆ. ಹನುಮಾನ್ ಮಂದಿರದ ಉದ್ಯಾನವನದಲ್ಲಿನ ಹೈ ಮಾಸ್ಕ್ ದೀಪದ ವಿದ್ಯುತ್ ವೈರ್ ಕಟ್ ಆಗಿ ಬಿದ್ದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆ. …

Read More »