ಬೆಂಗಳೂರು: ವಾಹನ ಸವಾರರಿಗೆ ಮತ್ತೆ ಶಾಕಿಂಗ್ ನ್ಯೂಸ್ ಸಿಕ್ಕಿದ್ದು, ಇಂದು ಕೂಡ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ಏರಿಕೆ ಕಂಡಿದೆ. ನೆನ್ನೆ ಪೆಟ್ರೋಲ್-ಡೀಸೆಲ್ ದರಗಳಲ್ಲಿ ಏರಿಕೆ ಕಂಡುಬಂದಿದ್ದು, ಪೆಟ್ರೋಲ್ ದರದಲ್ಲಿ 36 ಪೈಸೆ ಮತ್ತು ಡೀಸೆಲ್ ದರದಲ್ಲಿ 37 ಪೈಸೆ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 35 ಪೈಸೆ ಮತ್ತು ಲೀಟರ್ ಡೀಸೆಲ್ ದರದಲ್ಲಿ 36 ಪೈಸೆ ಹೆಚ್ಚಳವಾಗಿದೆ. ಇದರಂತೆ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ …
Read More »ಶಿವಣ್ಣ ಅಭಿಮಾನಿಗಳಿಗೆ ರಸದೌತಣ – ವಿಶ್ವದಾದ್ಯಂತ ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಮೇಲೆ ಭಜರಂಗಿ -2
ಬೆಂಗಳೂರು: ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ ಭಜರಂಗಿ 2 ಇಂದು 375 ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ವಿಶ್ವದಾದ್ಯಂತ 1000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಭಜರಂಗಿ ಹವಾ ಕ್ರಿಯೆಟ್ ಮಾಡಲಿದೆ. ಜೆ.ಪಿ.ನಗರದ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಬೆಳಗ್ಗೆ 5 ಗಂಟೆಗೆ ಅಭಿಮಾನಿಗಳಿಗಾಗಿ ವಿಶೇಷ ಶೋ ಆಯೋಜನೆ ಮಾಡಲಾಗಿತ್ತು. ಮೊದಲ ಶೋ ಗಾಗಿ ತುದಿಗಾಲಲ್ಲಿ ಅಭಿಮಾನಿಗಳು ನಿಂತಿದ್ದರು. ತೆರೆ ಮೇಲೆ ಶಿವಣ್ಣನನ್ನ ನೋಡುತಿದ್ದಂತೆ ಹುಚ್ಚೆದ್ದು ಕುಣಿದ ಅಭಿಮಾನಿಗಳು, ಸ್ಕ್ರೀನ್ ಮುಂದೆ ಹೂ ಎರಚಿ …
Read More »ಹಾನಗಲ್, ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದ್ದು, ಬಿಜೆಪಿಗೆ ಈಗಲೇ ಭಯ ಶುರುವಾಗಿದೆ: ಸತೀಶ ಜಾರಕಿಹೊಳಿ
ಸಿಂಧಗಿ ಚುನಾವಣೆ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಸತೀಶ್ ಜಾರಕಿಹೊಳಿ. @Laxminews Gokak ಗೋಕಾಕ: ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಹೀಗಾಗಿ, ಬಿಜೆಪಿಗೆ ಈಗಲೇ ಭಯ ಶುರುವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ನಗರದ ಹಿಲ್ ಗಾರ್ಡನ್ ಗೃಹಕಚೇರಿಯಲ್ಲಿ ಇಂದು ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಲಿನ ಭೀತಿಯಿಂದ ಮುಖ್ಯಮಂತ್ರಿಗಳು ಹಾನಗಲ್ ನಲ್ಲಿ ಬೀಡುಬಿಟ್ಟು ಪ್ರಚಾರ ನಡೆಸಿದ್ದಾರೆ ಎಂದರು. ಉಪಚುನಾವಣೆ ಎಂದರೆ ಹಾಗೆ. …
Read More »ಆರ್ಯನ್ ಖಾನ್ ಇಂದು ಬಿಡುಗಡೆ ಆಗೋದು ಡೌಟ್; ‘ಪಿಕ್ಚರ್ ಅಭಿ ಬಾಕಿ ಹೈ’ ಎಂದ ನವಾಬ್ ಮಲಿಕ್..!
ನವದೆಹಲಿ: ಬಾಲಿವುಡ್ ಐಷಾರಾಮಿ ಡ್ರಗ್ಸ್ ಕೇಸ್ನಲ್ಲಿ ಜೈಲು ಪಾಲಾಗಿದ್ದ ಆರ್ಯನ್ ಖಾನ್ಗೆ ಕೊನೆಗೂ ಬಿಡುಗಡೆಯ ಭಾಗ್ಯ ಸಿಕ್ಕಿದೆ. ನಿನ್ನೆ ಬಾಂಬೆ ಹೈಕೋರ್ಟ್ನ ಏಕ ಸದಸ್ಯ ಪೀಠ ಜಾಮೀನು ನೀಡುವ ಮೂಲಕ, ಆರ್ಯನ್ ಖಾನ್ನ 22 ದಿನಗಳ ಜೈಲು ವಾಸದಿಂದ ಮುಕ್ತಗೊಳಿಸಿದೆ. ಆದ್ರೆ ರಿಲೀಸ್ ಭಾಗ್ಯ ಮಾತ್ರ ಇವತ್ತೂ ಸಿಗೋದು ಡೌಟ್. ಡ್ರಗ್ಸ್ ಕೇಸ್ನಲ್ಲಿ ಅಂದರ್ ಆಗಿದ್ದ ಆರ್ಯನ್ಗೆ ಬೇಲ್ 23 ದಿನಗಳ ಬಳಿಕ ಜೈಲು ಹಕ್ಕಿಗೆ ಬಿಡುಗಡೆಯ ಭಾಗ್ಯ ಬಾಲಿವುಡ್ …
Read More »ತುಂಬಿ ಹರಿಯುತ್ತಿದ್ದ ಹಳ್ಳ ದಾಟಲು ಹೋಗಿ ಕೊಚ್ಚಿ ಹೋದ ಯುವಕ, 24 ಗಂಟೆ ಕಳೆದರೂ ಪತ್ತೆಯಾಗದ ಶವ
ದಾವಣಗೆರೆ: ಜಿಲ್ಲೆಯಲ್ಲಾದ ಭಾರಿ ಮಳೆಗೆ ಚಿರಡೋಣಿ ಹಾಗೂ ದೊಡ್ಡಘಟ್ಟ ಗ್ರಾಮಗಳ ನಡುವಿನ ಹಳ್ಳ ತುಂಬಿ ಹರಿಯುತ್ತಿದೆ. ಈ ಹಳ್ಳದಾಟಲು ಹೋಗಿ ಯುವಕ ಕೊಚ್ಚಿ ಹೋದ ಘಟನೆ ದಾವಣಗೆರೆಯಲ್ಲಿ ಸಂಭವಿಸಿದೆ. ಶಿವರಾಜ್ (23) ನೀರು ಪಾಲದ ಯುವಕ. ಘಟನೆ ಸಂಭವಿಸಿ 24 ಗಂಟೆ ಕಳೆದರೂ ಯುವಕನ ಶವ ಪತ್ತೆಯಾಗಿಲ್ಲ. ಭಾರಿ ಮಳೆಗೆ ತುಂಬಿ ಹರಿಯುತ್ತಿರುವ ಹಳ್ಳವನ್ನು ದಾಟಲು ಮುಂದಾಗಿದ್ದ ಯುವಕ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾನೆ. ಕಳೆದ 24 ಗಂಟೆಗಳಿಂದ ಹಳ್ಳಕ್ಕೆ …
Read More »ಸಿನಿಮಾ ಪೈರಸಿ ಮಾಡಲು ಬಿಡುವುದಿಲ್ಲ,ಕಣ್ಣಿಡುತ್ತೇವೆ: ಸಚಿವ ಆರಗ ಜ್ಞಾನೇಂದ್ರ
ಬೆಂಗಳೂರು : ‘ಪೈರಸಿ ಮಾಡಲು ಯತ್ನಿಸುವವರ ಮೇಲೆ ಕಣ್ಣಿಡುತ್ತೇವೆ. ಬಿಡುವುದಿಲ್ಲ, ಶಿಕ್ಷೆ ಆಗುತ್ತದೆ ಸಿನಿಮಾ ತಯಾರಕರ ರಕ್ಷಣೆಗೆ ಎಲ್ಲ ಪ್ರಯತ್ನ ಮಾಡುತ್ತೇವೆ’ ಎಂದು ಗುರುವಾರ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ಕರ್ನಾಟಕ ಸಿನಿಮಾ ನಿಯಂತ್ರಣ ಕಾಯ್ದೆ 1964 ರ ನಂತರ 2014 ರಲ್ಲಿ ನಿಯಮಾವಳಿ ರೂಪಿಸಿತ್ತು. ಇದಕ್ಕೀಗ ತಿದ್ದುಪಡಿ ತರುವ ಪ್ರಸ್ತಾವನೆ ಇದೆ” ಎಂದು ತಿಳಿಸಿದರು. ”ಮೊದಲೆಲ್ಲ ಚಿತ್ರಮಂದಿರದಲ್ಲಿ ಪ್ರೊಜೆಕ್ಟರ್ ಗೆ ಪ್ರತ್ಯೇಕ ಕೊಠಡಿ, …
Read More »ರಾಜ್ಯದಲ್ಲಿ ಮೊಳಗಿದ ಕನ್ನಡ ಕಂಪು.. ಒಂದು ಲಕ್ಷ ಕಂಠಸಿರಿಯಲ್ಲಿ ಕನ್ನಡ ಡಿಂಡಿಮ..
ಬೆಂಗಳೂರು: ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ‘ಕನ್ನಡಕ್ಕಾಗಿ ನಾವು ಅಭಿಯಾನ’ ಎಂಬ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು. ಬೆಳಗ್ಗೆ 11.06 ನಿಮಿಷಕ್ಕೆ ಸರಿಯಾಗಿ ರಾಜ್ಯಾದ್ಯಂತ ಸಾಮೂಹಿಕ ಕನ್ನಡ ಗೀತ ಗಾಯನ ಕಾರ್ಯಕ್ರಮ ನಡೆಯಿತು. ಬರೋಬ್ಬರಿ ಗಂಟೆಗೆ ಒಂದು ಲಕ್ಷ ಕಂಠಗಳಲ್ಲಿ ಕನ್ನಡದ ಮೂರು ಗೀತೆಗಳನ್ನ ಹಾಡಲಾಯಿತು. ಯಾವ ಹಾಡು ಹಾಡಲಾಯಿತು..? ರಾಷ್ಟ್ರಕವಿ ಕುವೆಂಪು ರಚಿತ ‘ಬಾರಿಸು ಕನ್ನಡ ಡಿಂಡಿಮವ’, ಕೆ.ಎಸ್. ನಿಸಾರ್ ಅಹಮದ್ ರಚಿತ ‘ಜೋಗದ …
Read More »ಜಮೀನು ವಿವಾದ; ಎರಡು ಗ್ರಾಮಗಳ ನಡುವೆ ಮಾರಾಮಾರಿ; ಆಸ್ಪತ್ರೆ ಸೇರಿದ 13 ಮಂದಿ
ದಾವಣಗೆರೆ: ಜಮೀನು ವಿವಾದಕ್ಕೆ ಎರಡು ಗ್ರಾಮಗಳ ನಡುವೆ ಮಾರಾಮಾರಿ ಸಂಭವಿಸಿದೆ. ದೊಣ್ಣೆ, ಕುಡುಗೋಲುಗಳಿಂದ ಪರಸ್ಪರ ಹಲ್ಲೆ ಮಾಡಿಕೊಂಡು ಬಡಿದಾಡಿಕೊಂಡಿದ್ದಾರೆ. ನ್ಯಾಮತಿ ತಾಲ್ಲೂಕಿನ ಕಂಚಿಕೊಪ್ಪ, ಹಾಗೂ ಹೊನ್ನಾಳಿಯ ತುಗ್ಗಲಹಳ್ಳಿ ಗ್ರಾಮಸ್ಥರ ನಡುವೆ ಮಾರಾಮಾರಿ ನಡೆದಿದೆ. ಕಂಚಿಕೊಪ್ಪ ಗ್ರಾಮದ 30 ದಲಿತ ಕುಟುಂಬಗಳು ತುಗ್ಗಲಹಳ್ಳಿ ಗ್ರಾಮದ ಬಳಿ ಇರುವ ಸರ್ವೇ ನಂಬರ್ 29- 30 ರಲ್ಲಿ 40 ಎಕರೆ ಜಮೀನನಲ್ಲಿ ಉಳುಮೆ ಮಾಡುತ್ತಿದ್ದರು. ಇದು ತುಗ್ಗಲಹಳ್ಳಿ ಗ್ರಾಮದ ಗೋಮಾಳ ಜಾಗ ಅಂತ ಬೆಳೆ ನಾಶ …
Read More »ಶಾಲಾ ಮಕ್ಕಳಿಗೆ ಮತ್ತೊಂದು ಗುಡ್ ನ್ಯೂಸ್: ಬಿಸಿಯೂಟಕ್ಕೆ ಪೌಷ್ಠಿಕಾಂಶವಿರುವ ಸಾರವರ್ಧಿತ ಅಕ್ಕಿ
ರಾಜ್ಯಾದ್ಯಂತ 1 ರಿಂದ 10 ನೇ ತರಗತಿ ಆರಂಭವಾಗಿದ್ದು, ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಕೂಡ ಆರಂಭಿಸಲಾಗಿದೆ. ಮಕ್ಕಳಿಗೆ ಅಗತ್ಯವಾದ ಪೌಷ್ಠಿಕ ಅಂಶ ಒಳಗೊಂಡ ಸಾರವರ್ಧಿತ ಅಕ್ಕಿಯನ್ನು ಸಾಮಾನ್ಯ ಅಕ್ಕಿಯೊಂದಿಗೆ ಮಿಶ್ರಣ ಮಾಡಿ ಬಿಸಿಯೂಟದಲ್ಲಿ ನೀಡಲಾಗುತ್ತದೆ. ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ಬಿಸಿಯೂಟ ನೀಡುತ್ತಿದ್ದು, ಇದರಲ್ಲಿ ಸಾರವರ್ಧಿತ ಅಕ್ಕಿ ಬಳಕೆ ಮಾಡಲಾಗುವುದು. ಒಂದರಿಂದ ಎಂಟನೇ ತರಗತಿ ಮಕ್ಕಳ ಬಿಸಿಯೂಟಕ್ಕೆ ಕೇಂದ್ರ ಸರ್ಕಾರ ಅಕ್ಕಿ ನೀಡುತ್ತಿದ್ದು, ಪ್ರತಿ ಕ್ವಿಂಟಲ್ ಗೆ 10 ಕೆಜಿಯಂತೆ …
Read More »ಶುಭ ಸುದ್ದಿ: ಪಿಯು ಕಾಲೇಜ್ ಗಳಲ್ಲಿ 3552 ಅತಿಥಿ ಉಪನ್ಯಾಸಕರ ನೇಮಕಾತಿಗೆ ಅನುಮೋದನೆ
ಬೆಂಗಳೂರು: ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಈ ಶೈಕ್ಷಣಿಕ ಸಾಲಿನಲ್ಲಿ 3552 ಅತಿಥಿ ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. 2020 -21 ನೇ ಸಾಲಿನಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ನಾನಾ ಕಾರಣಗಳಿಂದ ಖಾಲಿಯಾದ 2832 ಉಪನ್ಯಾಸಕರಿಗೆ 1835 ಅತಿಥಿ ಉಪನ್ಯಾಸಕರನ್ನು 9 ಸಾವಿರ ರೂಪಾಯಿ ಗೌರವಧನದ ಆಧಾರದಲ್ಲಿ ಫೆಬ್ರವರಿಯಿಂದ ನೇಮಕ ಮಾಡಿಕೊಳ್ಳಲಾಗಿತ್ತು. ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಬಹುತೇಕ ಎಲ್ಲ ಮಕ್ಕಳು ಉತ್ತೀರ್ಣರಾಗಿ ಪಿಯು ಕಾಲೇಜ್ ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ …
Read More »
Laxmi News 24×7