Breaking News

ರಾಜ್ಯ

ಅನುಕಂಪದ ಉದ್ಯೋಗ’ ಹಕ್ಕಲ್ಲ – ‘ಸುಪ್ರೀಂ ಕೋರ್ಟ್’ ಮಹತ್ವದ ಅಭಿಪ್ರಾಯ

ನವದೆಹಲಿ: ಉದ್ಯೋಗಿ ಮರಣ ಹೊಂದಿದ ನಂತ್ರ ಅವರ ಕುಟುಂಬದ ಓರ್ವ ಸದಸ್ಯನಿಗೆ ಅನುಕಂಪದ ಆಧಾರದಲ್ಲಿ ( Compassionate employment ) ನೀಡುವ ಉದ್ಯೋಗ ಸ್ಥಾಪಿತವಾದ ಹಕ್ಕಲ್ಲ. ಈ ರೀತಿಯ ಉದ್ಯೋಗ ಪಡೆದವರಿಂದ ಕರ್ತವ್ಯ ಲೋಪಗಳಾದರೇ, ಅವರಿಗೆ ನೀಡಲಾದ ಹುದ್ದೆಯ ಅರ್ಹತೆಯನ್ನು ಹೊಂದುವಲ್ಲಿ ವಿಫಲವಾದರೇ, ಅಂತಹವರನ್ನು ಕೆಲಸದಿಂದ ತೆಗೆಯ ಬಹುದು ಎಂದು ಸುಪ್ರೀಂ ಕೋರ್ಟ್ ( Supreme Court ) ಮಹತ್ವದ ಅಭಿಪ್ರಾಯ ಪಟ್ಟಿದೆ.   ಈ ಸಂಬಂಧ ಪ್ರಕರಣವೊಂದರ ವಿಚಾರಣೆ …

Read More »

ಡೆತ್​ನೋಟ್​ ಬರೆದಿಟ್ಟು ಉಪನ್ಯಾಸಕಿ ಆತ್ಮಹತ್ಯೆ: ಹುಟ್ಟು ಹಬ್ಬದ ದಿನವೇ ದುರಂತ ಅಂತ್ಯ

ಚಾಮರಾಜನಗರ: ಕಾಲೇಜು ಉಪನ್ಯಾಸಕಿಯೊಬ್ಬರು ಹಾಸ್ಟೆಲ್​ನಲ್ಲಿ ನೇಣುಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ಸಂಭವಿಸಿದೆ. ಸಾವಿಗೂ ಮುನ್ನ ಬರೆದ ಡೆತ್‌ನೋಟ್ ಸಿಕ್ಕಿದೆ. ಚಂದನಾ(26) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಯಳಂದೂರು ತಾಲೂಕಿನ ಅಂಬಳೆ ಗ್ರಾಮದ ಚಂದನಾ, ಚಾಮರಾಜನಗರದ ಜೆಎಸ್‌ಎಸ್‌ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇಂದು(ಆ.9) ಅವರ ಬರ್ತ್​ ಡೇ. ಈ ದಿನವೇ ಜೆಎಸ್‌ಎಸ್ ಕಾಲೇಜಿನ ಹಾಸ್ಟೆಲ್​ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೆತ್​ನೋಟ್​ ಪತ್ತಯಾಗಿದ್ದು, ‘ನನ್ನ ಸಾವಿಗೆ ನಾನೇ ಕಾರಣ’ ಎಂದು ಬರೆಯಲಾಗಿದೆ. ಚಾಮರಾಜನಗರ ಪಟ್ಟಣ …

Read More »

ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ನಾನು ಕೂಡ ಮುಖ್ಯಮಂತ್ರಿ ಸ್ಥಾನದ ಅಕಾಂಕ್ಷಿ: ಉಮೇಶ್ ಕತ್ತಿ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ನಾನು ಕೂಡ ಮುಖ್ಯಮಂತ್ರಿ ಸ್ಥಾನದ ಅಕಾಂಕ್ಷಿ ಎಂದು ಹೇಳುವ ಮೂಲಕ ಮತ್ತೆ ಅರಣ್ಯ ಮತ್ತು ಆಹಾರ ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಸಿಎಂ ಸ್ಥಾನವನ್ನು ಜಪಿಸಿದ್ದಾರೆ. ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರದ ಗಗನಚುಕ್ಕಿ ಜಲಪಾತ ವೀಕ್ಷಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಉಮೇಶ ಕತ್ತಿ ಮುಖ್ಯಮಂತ್ರಿ ಬದಲಾವಣೆ ಕೇವಲ ಊಹಾಪೋಹವಾಗಿದೆ. ನಾನು ಕೂಡ 8 ಬಾರಿ ಶಾಸಕನಾಗಿ ಆಯ್ಕೆಯಾಗಿ, ಹಲವು …

Read More »

ಬೊಮ್ಮಾಯಿಯವರೇ, ಸಿಎಂ ಹುದ್ದೆಗೆ ‘ಕತ್ತಿ ವರಸೆ’ ಶುರುವಾಗಿದೆ ಎಂದ ಕಾಂಗ್ರೆಸ್

ಬೆಂಗಳೂರು: ರಾಜ್ಯಕ್ಕೆ ಕೇಂದ್ರ ಸಚಿವ ಅಮಿತ್ ಶಾ ಭೇಟಿ ಬೆನ್ನಲ್ಲೇ ಸಿಎಂ ಬದಲಾವಣೆ ವಿಚಾರವಾಗಿ ಮತ್ತೆ ವದಂತಿಗಳು ಹಬ್ಬಿರುವ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಕಾಲೆಳೆದಿದೆ. ಅಮಿತ್ ಶಾ ಬಂದು ಹೋದ ನಂತರ ಬಿಜೆಪಿಯಲ್ಲಿ ಮೋಡ ಕವಿದ ವಾತಾವರಣವಿದೆ! 40% ಸರ್ಕಾರದಲ್ಲಿ ‘3ನೇ ಸಿಎಂ’ ಸೀಟು ಹತ್ತುವ ಕಾಲ ಸನ್ನಿಹಿತವಾಗಿದೆ! ಸಿಎಂ ಬೊಮ್ಮಾಯಿ ಗೊಂಬೆಯಾಟ ಮುಗಿಯುವ ಹಂತಕ್ಕೆ ಬಂದಿದೆ. ಅಮಿತ್ ಶಾ ಅವರ ಭೇಟಿಯ ಬಗ್ಗೆ ಸರ್ಕಾರದ …

Read More »

ಬೆಳಗಾವಿ: ಈ 22 ಶಾಲೆಗಳಿಗೆ ಬುಧವಾರವೂ ರಜೆ: B.E.O.ರವಿ ಭಜಂತ್ರಿ 

ಬೆಳಗಾವಿ – ಬೆಳಗಾವಿ ನಗರ ಮತ್ತು ಗ್ರಾಮೀಣ ವಲಯದ 22 ಶಾಲೆಗಳಿಗೆ ಬುಧವಾರವೂ ರಜೆ ಘೋಷಿಸಲಾಗಿದೆ. ಜಾಧವ ನಗರದಲ್ಲಿ ಕಾಣಿಸಿಕೊಂಡ ಚಿರತೆ ಸೆರೆ ಸಿಕ್ಕದ ಕಾರಣ ಸುತ್ತಲಿನ 22 ಶಾಲೆಗಳಿಗೆ ರಜೆ ನೀಡಲಾಗಿದೆ. ಕಳೆದ ರಾತ್ರಿ ಗಾಲ್ಫ್ ಮೈದ0ಾನದಲ್ಲಿ ಕ್ಯಾಮರಾದಲ್ಲಿ ಸೆೆರೆಸಿಕ್ಕ ಚಿರತೆ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ರಜೆ ಮುಂದುವರಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ ಎಂದು ಡಿಡಿಪಿಐ ಬಸವರಾಜ ನಾಲತವಾಡ ಮತ್ತು ನಗರ ಬಿಇಒ ರವಿ ಭಜಂತ್ರಿ  ತಿಳಿಸಿದ್ದಾರೆ. …

Read More »

ಹೆಸರಿಗೆ ಮಾತ್ರ ಹಾಲಿನ ವ್ಯಾಪಾರ, ಆದ್ರೆ ಮಾಡೋದು ಬೇರೆನೇ ಕೆಲಸ

ಇವರೆಲ್ಲಾ ಮಾಡುತ್ತಿದ್ದದ್ದು ಹಾಲಿನ ವ್ಯಾಪಾರ (Milk Business). ಆದ್ರೆ ಒಳಗೆ ನಡೀತಾ ಇದ್ದಿದ್ದು ಮಾತ್ರ ಬೇರೆನೇ ಕೆಲಸ. ಹೌದು, ಹುಬ್ಬಳ್ಳಿಯಲ್ಲಿ ನಕಲಿ ನೋಟು (Fake Note) ಚಲಾವಣೆ ಗ್ಯಾಂಗ್​ನ್ನು (Gang) ಪೊಲೀಸರು ಭೇದಿಸಿದ್ದಾರೆ. ಈ ಕೇಸ್​ನಲ್ಲಿ ತಗ್ಲಾಕೊಂಡ ವ್ಯಕ್ತಿಯ ಹಿನ್ನೆಲೆ ಕೇಳಿದ್ರೆ ಇನ್ನೂ ಶಾಕ್ ಆಗ್ತೀರಾ. ಯಾಕೆಂದರೆ ಆತ ಸ್ಥಳೀಯ ಬಿಜೆಪಿ ಮುಖಂಡ (BJP Leader). ಹೊರಗೆ ಈತ ಸೇರಿ ಉಳಿದ ಆರೋಪಿಗಳು (Accused) ನಡೆಸ್ತಿದ್ದದ್ದು ಹಾಲಿನ ವ್ಯಾಪಾರ. ಆದರೆ …

Read More »

ನಂದು ಇನ್ನೊಂದು ವಿಡಿಯೋ ಇದೆ; ಅದ್ಯಾವಾಗ ಬಿಡ್ತಾನೋ ಗೊತ್ತಿಲ್ಲ-ಸೋನು ಗೌಡ

ಟಿಕ್​ ಟಾಕ್​ ಹಾಗೂ ರೀಲ್ಸ್​ ಮೂಲಕ ಫೇಮಸ್​ ಆಗಿರೋ ಸೋನು ಶ್ರೀನಿವಾಸ್​ ಗೌಡ (Sonu Srinivas Gowda) ಅವರು ಈಗ ಬಿಗ್​ ಬಾಸ್​ (Bigg Boss) ರಿಯಾಲಿಟಿ ಶೋನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ (Bigg Boss House) ಸ್ಪರ್ಧಿಗಳು ತಮ್ಮ ಖಾಸಗಿ ಬದುಕಿನ ಅನೇಕ ವಿವರಗಳನ್ನು ತೆರೆದಿಡುತ್ತಿದ್ದಾರೆ. ಸೋನು ಶ್ರೀನಿವಾಸ್​​ ಗೌಡ ಅವರ ಖಾಸಗಿ ವಿಡಿಯೋ (Sonu Srinivas Gowda Viral Video) ಲೀಕ್​ ಆಗಿತ್ತು ಎಂಬುದು …

Read More »

ಗೋಡೆ ಕುಸಿದು ನಾಲ್ವರಿಗೆ ಗಂಭೀರ ಗಾಯ

ರಾಯಬಾಗ ತಾಲೂಕಿನ ಸೌಂದತ್ತಿವಾಡಿಯಲ್ಲಿ ಮೊಹರಂ ಹಬ್ಬದ ನಿಮಿತ್ಯ ಕುಂಡಲಿ ಪೂಜಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಜನರ ಮೇಲೆ ಗೋಡೆ ಕುಸಿದು ನಾಲ್ವರಿಗೆ ಗಂಭೀರ ಗಾಯವಾಗಿದೆ. ನಿರಂತರವಾಗಿ ಬೀಳುತ್ತಿರುವ ಅತಿಯಾದ ಮಳೆಯಿಂದ ಗೋಡೆ ಕುಸಿದು ಬಿದ್ದಿದೆ. ಅನೇಕ ಮಹಿಳೆಯರು ದೇವರಿಗೆ ಪೂಜೆ ಸಲ್ಲಿಸುವಾಗ ಈ ಘಟನೆ ನಡೆದಿದ್ದು ಮಂಗಲ ಹಿರೇಗೌಡ, ಶ್ರೀದೇವಿ ತಂಗಡೆ ಸೇರಿದಂತೆ ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ತಲೆಗೆ ಬಲವಾದ ಪೆಟ್ಟು ಬಿದ್ದ ಹಿನ್ನೆಲೆ ರಕ್ತಸ್ರಾವವಾಗಿದೆ. ಗಾಯಾಳುಗಳನ್ನು ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ …

Read More »

ದರೋಡೆ ಮಾಡ್ತಿದ್ದ ಮಂಕಿ ಕ್ಯಾಪ್ ಕಳ್ಳರನ್ನು ಬಂಧಿಸಿದ ಪೊಲೀಸರು

ವಿಜಯಪುರ :ಜಿಲ್ಲೆಯ ಹೆದ್ದಾರಿಗಳಲ್ಲಿ ಮಂಕಿ ಕ್ಯಾಪ್​​ ಧರಿಸಿ ದರೋಡೆ ಮಾಡ್ತಿದ್ದ ಕುಖ್ಯಾತರನ್ನು ಗಾಂಧಿಚೌಕ್​ ಪೊಲೀಸರು ಅರೆಸ್ಟ್ ಮಾಡಿದ್ದಾರೆ.ನಗರ ಬಸ್ ನಿಲ್ದಾಣ ಬಳಿಯ ನಯೇರಾ ಪೆಟ್ರೋಲ್ ಪಂಪ್ ಬಳಿ ದರೋಡೆ ಯತ್ನ ನಡೆಯುತ್ತಿರೋ ಖಚಿತ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ನಬಿರಸೂಲ ಜಿಲಾನಿ ಕೋರವಾರ, ಅವಿನಾಶ ರಮೇಶ ಬಾಗಡೆ, ಅಲ್ತಾಫ್ ಕುತುಬುದ್ದೀನ್ ಐನಾಪುರ, ಮತೀನ ಖಲೀಲ‌ಅಹ್ಮದ್ ಖಾಜಿ, ಸಮೀರ ಅಬ್ದುಲ್ ರಜಾಕ್ ಯರಗಲ್ ಎಂಬುವರನ್ನು ಬಂಧಿಸಲಾಗಿದೆ. ಸರ್ಫರಾಜ್ ಎಂಬಾತ ಪರಾರಿಯಾಗಿದ್ದಾನೆ. …

Read More »

ಸವದತ್ತಿ ತಾಲೂಕಿನ ಹಿರೇಬಿದನೂರು ಗ್ರಾಮದಲ್ಲಿ ವರ್ಷಕ್ಕೆ ಐದು ದಿನಗಳ ಕಾಲ ವಿಜೃಂಭಣೆಯಿಂದ ಮೊಹರಂ ಆಚರಿಸಲಾಗುತ್ತದೆ.

ಬೆಳಗಾವಿ, : ಮುಸ್ಲಿಮರಿಲ್ಲದ ಮೊಹರಂ ಆಚರಣೆಯ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ?. ಮುಸಲ್ಮಾನರ ಸಂಖ್ಯೆಯೇ ಇಲ್ಲದ ಬೆಳಗಾವಿಯ ಹಳ್ಳಿಯೊಂದು ಈ ಹಬ್ಬವನ್ನು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದೆ.   ಬೆಳಗಾವಿಯ ಸವದತ್ತಿ ತಾಲೂಕಿನ ಹಿರೇಬಿದನೂರು ಗ್ರಾಮದಲ್ಲಿ ವರ್ಷಕ್ಕೆ ಐದು ದಿನಗಳ ಕಾಲ ವಿಜೃಂಭಣೆಯಿಂದ ಮೊಹರಂ ಆಚರಿಸಲಾಗುತ್ತದೆ. ಮೊಹರಂ, ರಂಜಾನ್ ನಂತರ ಎರಡನೇ ಪವಿತ್ರ ಹಬ್ಬವಾಗಿದೆ ಇಸ್ಲಾಮಿಕ್ ಕ್ಯಾಲೆಂಡರ್‌ನ ಮೊದಲ ತಿಂಗಳು ಬರುತ್ತದೆ. ಈ ವರ್ಷ ಜುಲೈ 31 ರಂದು ಪ್ರಾರಂಭವಾಗಿ ಆಗಸ್ಟ್ …

Read More »