ಬೆಂಗಳೂರು: ನಿರೂಪಕಿ ಅನುಶ್ರೀ ಅವರ ನಿರೂಪಣೆ ಬಗ್ಗೆ ಸದಾ ಒಂದಲ್ಲ ಒಂದು ವಿವಾದ ಇದ್ದೇ ಇರುತ್ತದೆ. ನಿರೂಪಣೆ ಮಾಡೋದು ಬಿಟ್ಟು ಬಾಕಿ ಎಲ್ಲ ಮಾಡ್ತಾರೆ ಅನ್ನೋದು ಅನೇಕರ ಅಭಿಪ್ರಾಯ ಕೂಡ. ಟಿವಿ ಟಿಆರ್‌ಪಿಗಾಗಿ, ದುಡ್ಡಿಗಾಗಿ ಅನುಶ್ರೀ ನಡೆದುಕೊಳ್ಳುತ್ತಿದ್ದಾರೆ ಅಂತ ಅವರ ನಿರೂಪಣೆ ರೀತಿಯನ್ನು ಟೀಕೆ ಮಾಡುವವರು ಕೂಡ ಇದ್ದಾರೆ. ಈ ನಡುವೆ ಅಪ್ಪು ಹೆಸರಿನಲ್ಲಿ ನಿರೂಪಕಿ ಅನುಶ್ರೀ ಓವರ್ ಆಕ್ಟಿಂಗ್ ಮಾಡುತ್ತಿದ್ದಾರೆ ಅಂತ ಅನೇಕ ಮಂದಿ ಅನುಶ್ರೀಯವರ ನಡೆಯನ್ನು ಕಿಡಿಕಾರುತ್ತಿದ್ದಾರೆ. …
Read More »ನ.1ರಂದು ಪುನೀತ್ ಗೆ ಕರ್ನಾಟಕರತ್ನ ಪ್ರಶಸ್ತಿ; ರಜಿನಿಕಾಂತ್, ಜೂ.ಎನ್‌ಟಿಆರ್ ಭಾಗಿ: CMಘೋಷಣೆ
ಬೆಂಗಳೂರು: ಈ ಬಾರಿ ನವೆಂಬರ್ ಒಂದನೇ ತಾರೀಕು ದಿವಂಗತ ನಟ ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕೋಟಿ ಕಂಠ ಗಾಯನ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ನವೆಂಬರ್ ಒಂದರಂದು ಸಂಭ್ರಮದಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತೇವೆ. ವಿಧಾನಸೌಧದಲ್ಲಿ ಸಂಜೆ 4 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಪುನೀತ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ …
Read More »ರಾಷ್ಟ್ರ-ಅಂತರಾಷ್ಟ್ರದಲ್ಲಿ ಬೆಳಗಾವಿಯ ಕೀರ್ತಿಯನ್ನು ಹೆಚ್ಚಿಸಿ-ರಾಹುಲ ಜಾರಕಿಹೊಳಿ
ಬೆಳಗಾವಿಯನ್ನು ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಕ್ರೀಡಾಪಟುಗಳಿಗೆ ಆರ್ಥಿಕ ಸಹಾಯ, ಸಹಕಾರ ನೀಡಲಾಗುವುದು” ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಹೇಳಿದರು. ಕಾಕತಿ ಗ್ರಾಮದ ಹೆಮ್ಮೆಯ ಪುತ್ರ ಸಂಭಾಜಿ ಪರಮೋಜಿ ಮುಕ್ತ ರಾಷ್ಟ್ರೀಯ ನಾಗಾ ಕುಸ್ತಿ ಚಾಂಪಿಯನ್‌ಶಿಪ್ ಗೆ ಆಯ್ಕೆಯಾಗಿದ್ದು, ನಾಗಾಲ್ಯಾಂಡ್ ಗೆ ಪ್ರಯಾಣ ಬೆಳೆಸಲಿದ್ದಾರೆ. ಇವರಿಗೆ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ೨೫ ಸಾವಿರ ರೂ. ಆರ್ಥಿಕ ಸಹಾಯ ನೀಡಿ, ಸನ್ಮಾನಿಸಿ ಶುಭಹಾರೈಸಿದರು. ವಿದ್ಯಾರ್ಥಿಗಳ ಏಳಿಗೆಗಾಗಿ ಯಮಕನಮರಡಿ …
Read More »ಸರ್ಕಾರ ಆದೇಶಿಸಿದರೂ ಸರ್ಕಾರಿ ಸೌಲಭ್ಯಗಳನ್ನು ನೀಡದಿರುವ ಸರ್ಕಾರಿ ಸೌಲಭ್ಯ
ಕಾರ್ಮಿಕ ಕಾರ್ಡ್ ಮಾಡಿಕೊಂಡ ಕಾರ್ಮಿಕರಿಗೆ ಮತ್ತು ಅವರ ಮಕ್ಕಳಿಗೆ ಸರ್ಕಾರ ಆದೇಶಿಸಿದರೂ ಸರ್ಕಾರಿ ಸೌಲಭ್ಯಗಳನ್ನು ನೀಡದಿರುವ ಸರ್ಕಾರದ ಧೋರಣೆಯನ್ನು ಖಂಡಿಸಿ ಇಂದು ಬೆಳಗಾವಿಯಲ್ಲಿ ಕಟ್ಟಡ ಕಾರ್ಮಿಕರು ಬೆಳಗಾವಿ ಜಿಲ್ಲಾಧಿಕಾರಿ ಕಾರ್ಯಾಲಯದೆದುರು ಪ್ರತಿಭಟನೆ ನಡೆಸಿದರು. ಶುಕ್ರವಾರದಂದು ಬೆಳಗಾವಿ ಜಿಲ್ಲಾಧಿಕಾರಿ ಕಾರ್ಯಾಲಯಕ್ಕೆ ಆಗಮಿಸಿದ ಕಾರ್ಮಿಕ ಕಾರ್ಡ್ ಮಾಡಿಕೊಂಡ ಕಾರ್ಮಿಕರಿಗೆ ಸರ್ಕಾರಿ ಸೌಲಭ್ಯಗಳನ್ನು ನೀಡದಿರುವ ಸರ್ಕಾರದ ಧೋರಣೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ಈ ವಿಷಯದ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು. ಕಟ್ಟಡ ನಿರ್ಮಾಣ …
Read More »ಬಹುಪ್ರತೀಕ್ಷಿತ ಗಂಧದ ಗುಡಿ ಚಿತ್ರ ರಿಲೀಸ್ ಬೆಳಗಾವಿಯ ಥಿಯೇಟರ್‌ಗಳ ಮುಂದೆ ಹಬ್ಬದ ವಾತಾವರಣೆ
ಅಪ್ಪು ಅಭಿಮಾನಿಗಳ ಬಹುಪ್ರತೀಕ್ಷಿತ ಗಂಧದ ಗುಡಿ ಚಿತ್ರ ರಿಲೀಸ್ ಆಗಿದ್ದು, ಬೆಳಗಾವಿಯ ಥಿಯೇಟರ್‌ಗಳ ಮುಂದೆ ಹಬ್ಬದ ವಾತಾವರಣ ಮನೆ ಮಾಡಿತ್ತು. ಇಂದು ರಾಜ್ಯಾದ್ಯಂತ ಪವರ್ ಸ್ಟಾರ್ ಅಭಿನಯದ ಗಂಧದ ಗುಡಿ ಚಿತ್ರ ಬಿಡುಗಡೆಗೊಂಡಿದೆ. ಬೆಳಗಾವಿಯಲ್ಲೂ ಮೂರು ಚಿತ್ರ ಮಂದಿರಗಳಲ್ಲಿ ಚಿತ್ರ ಬಿಡುಗಡೆ ನಡೆಯಿತು. ಸ್ವರೂಪ-ನರ್ತಕಿ, ಕಾರ್ನಿವಲ್ ಹಾಗೂ ಐನಾಕ್ಸ್ ಈ ಮೂರು ಚಿತ್ರ ಮಂದಿರಗಳಲ್ಲಿ ಚಿತ್ರದ ಮೊದಲ ಶೋ ವಿಕ್ಷೀಸಲು ೧೦:೪೫ ಗಂಟೆಗೆ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ದರು. …
Read More »ಗ್ರಾಮಗಳ ರಸ್ತೆಗಳನ್ನು ಡಾಂಬರಿಕರಣ ಕಾಮಗಾರಿಗೆ ಶಾಸಕ ಶ್ರೀಮಂತ ಪಾಟೀಲ ಚಾಲನೆ
ಕಾಗವಾಡ ವಿಧಾನಸಭಾ ಮತಕ್ಷೇತ್ರದ ಎಲ್ಲ ಗ್ರಾಮಗಳ ರಸ್ತೆಗಳನ್ನು ಡಾಂಬರಿಕರಣ ಮಾಡುವಗೋಸ್ಕರ ೨೦೦ ಕೋಟಿ ರೂ. ಅನುದಾನವನ್ನು ಕ್ಷೇತ್ರಕ್ಕೆ ತಂದಿದ್ದು, ಎಲ್ಲ ಕಾಮಗಾರಿಗಳು ಭರದಿದಂದ ಸಾಗಿವೆಯೆಂದು ಕಾಗವಾಡ ಮತಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲ ಹೇಳಿದರು. ಗುರುವಾರ ರಂದು ಕಾಗವಾಡ ಮತಕ್ಷೇತ್ರದ ಜಕಾರಟ್ಟಿ ಗ್ರಾಮದಲ್ಲಿ ೪ ಕೋಟಿ ರೂ. ವೆಚ್ಚದ ಮದಭಾವಿ-ಸಂಬರಗಿ ಹಾಗೂ ಜಕಾರಟ್ಟಿಯಿಂದ ಖುಟ್ಟಿ ತೋಟದವರೆಗಿನ ರಸ್ತೆಗೆ ೧.೫೦ ಕೋಟೆ ರೂ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಕಳೆದ …
Read More »ನ್ಯಾಯಾಲಯಕ್ಕೆ ಮುರುಘಾಶ್ರೀ ವಿರುದ್ಧ 694 ಪುಟಗಳ ಆರೋಪ ಪಟ್ಟಿ
ಚಿತ್ರದುರ್ಗ: ಪೋಕ್ಸೊ ಹಾಗೂ ಪರಿಶಿಷ್ಟ ಜಾತಿ, ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ದಾಖಲಾದ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ನ್ಯಾಯಾಲಯಕ್ಕೆ ಗುರುವಾರ 694 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ತನಿಖೆಯನ್ನು ಭಾಗಶಃ ಪೂರ್ಣಗೊಳಿಸಿರುವ ಪೊಲೀಸರು, ದೋಷಾರೋಪ ಪಟ್ಟಿಯ ತಲಾ 347 ಪುಟಗಳ ಎರಡು ಪ್ರತಿಗಳನ್ನು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿದರು. ಒಂದರಲ್ಲಿ ಮುರುಘಾ ಶರಣರು …
Read More »ಮನೆಯಲ್ಲಿನ ಅಡುಗೆ ಅನಿಲ ಸೋರಿಕೆ ಸುಟ್ಟು ಕರಕಲಾಗಿರುವ ವಸ್ತುಗಳು
ಮನೆಯಲ್ಲಿನ ಅಡುಗೆ ಅನಿಲ ಸೋರಿಕೆಯಾಗಿರುವ ಪರಿಣಾಮ ಬೆಂಕಿ ಹತ್ತಿದ್ದು, ದೊಡ್ಡ ಪ್ರಮಾಣದಲ್ಲಿನ ಗೃಹಬಳಕೆಯ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಹುಬ್ಬಳ್ಳಿಯ ವೀರಾಪೂರ ಓಣಿಯಲ್ಲಿ ನಡೆದಿದೆ. ದೀಪಾವಳಿ ಹಿನ್ನೆಲೆಯಲ್ಲಿ ಮನೆಯವರೆಲ್ಲರೂ ಊರಿಗೆ ಹೋಗಿದ್ದ ಸಂದರ್ಭದಲ್ಲಿ ಸಿಲಿಂಡರ್ ಲೀಕ್ ಆಗಿದ್ದು, ಸೋರಿಕೆಯಾದ ಸಿಲಿಂಡರ್ ಏರ್ ಪಾಸ್ ಆಗಲು ಯಾವುದೇ ಸ್ಥಳಾವಕಾಶ ಇಲ್ಲದೇ ಇರುವುದರಿಂದ ಆಕಸ್ಮಿಕ ಬೆಂಕಿ ತಗುಲಿದ್ದು, ದೊಡ್ಡ ಪ್ರಮಾಣದಲ್ಲಿ ಮನೆಯಲ್ಲಿರುವ ವಸ್ತುಗಳು ಸುಟ್ಟು ಕರಕಲಾಗಿವೆ.
Read More »ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದಿರುವ ಬೆಳಗಾವಿಯ ಕರಾಟೆಪಟು
ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದಿರುವ ಕರಾಟೆ ಪಟು ಕೇತನ ಕಲ್ಲಪ್ಪಾ ಫಾಟಕೆ ಬ್ಲ್ಯಾಕ್ ಬೆಲ್ಟ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಬೆಳಗಾವಿಯ ಮಂಡೋಳಿ ರಸ್ತೆಯ ಮನೋಪ್ರಭಾ ಮಂಗಲ ಕಾರ್ಯಾಲಯದಲ್ಲಿ ಇದೇ ಅಕ್ಟೋಬರ್ 23ರಂದು ಕರಾಟೆ ಬ್ಲ್ಯಾಕ್ ಬೆಲ್ಟ್ ಪರೀಕ್ಷೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ 70 ಕರಾಟೆ ಪಟುಗಳು ಭಾಗಿಯಾಗಿದ್ದರು. ಈ ವೇಳೆ ಮುಖ್ಯ ತೀರ್ಪುಗಾರರಾಗಿ ಗಜೇಂದ್ರ ಕಾಕತಿಕರ ಆಗಮಿಸಿದ್ದರು. ಕಳೆದ 9 ವರ್ಷಗಳಿಂದ ಇಲ್ಲಿ ತರಬೇತಿ ಪಡೆದು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ …
Read More »ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿ ದೇವೇಗೌಡರ ಪುನರಾಯ್ಕೆ
ಬೆಂಗಳೂರು: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತೂಮ್ಮೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜೆಪಿ ಭವನದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಅವಿರೋಧವಾಗಿ ಆಯ್ಕೆ ಮಾಡಲು ನಿರ್ಣಯ ಕೈಗೊಳ್ಳಲಾಯಿತು. ಎಚ್.ಡಿ.ದೇವೇಗೌಡರೇ ರಾಷ್ಟ್ರೀಯ ಅಧ್ಯಕ್ಷರಾಗಿ ಮುಂದುವರಿಯಬೇಕು ಎಂದು ಎಲ್ಲ ರಾಜ್ಯ ಪ್ರತಿನಿಧಿಗಳ ಒಮ್ಮತ ಅಭಿಪ್ರಾಯ ಪಟ್ಟರು. 13 ರಾಜ್ಯಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಕೇರಳದ …
Read More »
Laxmi News 24×7