Breaking News

ರಾಜ್ಯ

ವಾಹನ ಡಿಕ್ಕಿಯಾಗಿ ಇಬ್ಬರ ಸಾವು

ಕಾರಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ ದುರ್ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹಂಚಿನಾಳ ಕ್ರಾಸ್ ಬಳಿ ನಡೆದಿದೆ. ಗೋಕಾಕ ಮೂಲದ ಸಂಜುಹಿತಾರಗೌಡರ(33) ಹಾಗೂ ನಾಗರಾಜ ಯಡವಣ್ಣವರ (34) ಮೃತ ದುರ್ದೈವಿಗಳು. ಆಶಿಫ್ ಮುಲ್ಲಾ(24) ಗಾಯಗೊಂಡಿದ್ದಾನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಂದಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದು ಪ್ರಕರಣ ದಾಖಲಾಗಿದೆ.

Read More »

ಎಸಿಸಿ ಸಿಮೆಂಟ್​ ಘಟಕ​ ಬಂದ್​. ಸಾವಿರಾರು ಉದ್ಯೋಗಿಗಳಿಗೆ ಬರಸಿಡಿಲ

1984ರಲ್ಲಿ ಇಲ್ಲಿ ಎಸಿಸಿ ಗಗ್ಗಲ್​ ಘಟಕವನ್ನು ಸ್ಥಾಪಿಸಲಾಯಿತು. ಕೆಲವು ವರ್ಷಗಳ ಹಿಂದೆ ವಿದೇಶಿ ಕಂಪನಿ ಹೊಲ್ಸಿಮ್​ ವಲಫರ್ಜ್​ ಇದರ ನಿರ್ವಹಣೆ ಮಾಡುತ್ತಿದ್ದು, ಇದೀಗ ಇದು ಅದಾನಿ ಗ್ರೂಪ್​ಗೆ ಸೇರಿದೆ. ಬಿಲಾಸ್ಪುರ್​ (ಹಿಮಾಚಲ ಪ್ರದೇಶ): ನಷ್ಟದ ಹಿನ್ನೆಲೆ ಇಲ್ಲಿರುವ ಎಸಿಸಿ ಸಿಮೆಂಟ್​​​ ಘಟಕಕ್ಕೆ ಬೀಗ ಹಾಕಲಾಗಿದ್ದು, ತಕ್ಷಣದಿಂದಲೇ ಎಲ್ಲಾ ಕಾರ್ಯಚಟುವಟಿಕೆಗಳನ್ನು ನಿಲ್ಲಿಸಲಾಗಿದೆ. ಎಲ್ಲಾ ನೌಕರರು ಕರ್ತವ್ಯಕ್ಕೆ ಬರದಂತೆ, ಇಲ್ಲಿ ಕೆಲಸ ಸ್ಥಗಿತಗೊಳಿಸುತ್ತಿರುವ ಕುರಿತು ನೋಟಿಸ್​ ಜಾರಿ ಮಾಡಲಾಗಿದೆ. ಘಟಕ ಬಂದ್​ ಮಾಡುತ್ತಿರುವ …

Read More »

ನಮ್ಮ ಸರ್ವೇ ಕ್ಲಿಯರ್, ನಾವು 136 ಸೀಟ್ ಗೆಲ್ಲುತ್ತೇವೆ, :ಡಿ.ಕೆ ಶಿ

ಬೆಂಗಳೂರು: ನಾವು ನಡೆಸಿದಂತ ಸರ್ವೇಯಲ್ಲಿ ಕ್ಲಿಯರ್ ಆಗಿದೆ. ನಾವು 136 ಸೀಟ್ ಗೆಲ್ಲುತ್ತೇವೆ. ಬಿಜೆಪಿ ಕೇವಲ 60 ರಿಂದ 65 ಸ್ಥಾನವನ್ನು ಗೆಲ್ಲಲಿದೆ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ( KPCC President DK Shivakumar ) ಭವಿಷ್ಯ ನುಡಿದಿದ್ದಾರೆ.   ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾವು ಮುಂಬರುವಂತ ಚುನಾವಣೆಯಲ್ಲಿ 136 ಸ್ಥಾನ ಗೆಲ್ಲಲಿದ್ದೇವೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ 60 ರಿಂದ 65 ಸ್ಥಾನ ಗೆಲ್ಲಲಿದೆ. …

Read More »

ಗದಗ ಶಿರಹಟ್ಟಿ ಕ್ಷೇತ್ರದ ಕಾಂಗ್ರೆಸ್‌ ನ ಮಾಜಿ ಶಾಸಕ ಎಸ್.ಎನ್‌ ಪಾಟೀಲ ಇನ್ನಿಲ್ಲ

ಗದಗ: ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಮಾಜಿ ಶಾಸಕ ಎಸ್.ಎನ್‌ ಪಾಟೀಲ ಇಂದು ನಿಧನ ಹೊಂದಿದ್ದಾರೆ. ಎಸ್‌.ಎನ್.ಪಾಟೀಲ ಅವರಿಗೆ 81 ವಯಸ್ಸಾಗಿತ್ತು.   ಅನಾರೋಗ್ಯ ಕಾರಣದಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇಂದು ಸಂಜೆ 4 ಗಂಟೆಗೆ ಸ್ವಗ್ರಾಮ ಪುಟಗಾಂವ್ ಬಡ್ನಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಎಸ್. ಎನ್‌ ಪಾಟೀಲ ಸರಳ, ಸಜ್ಜನಿಕೆ, ನೇರ-ನಿಷ್ಠುರ ವ್ಯಕ್ತಿತ್ವ ಹೊಂದಿದ್ದಾರೆ. 1989-1994 ರ ಅವಧಿಯಲ್ಲಿ ಕಾಂಗ್ರೆಸ್‌ನಿಂದ ಪಾಟೀಲ ಅವರು ಶಾಸಕರಾಗಿದ್ದರು. …

Read More »

ಬಿಜೆಪಿಗೆ ಬಿಗ್ ಶಾಕ್: ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಶಾಸಕ ವಿ.ಎಸ್ ಪಾಟೀಲ್

ಬೆಂಗಳೂರು: ಯಲ್ಲಾಪುರ ಮಾಜಿ ಶಾಸಕರಾದ ವಿ.ಎಸ್ ಪಾಟೀಲ್ ( Former MLC V S Patil ) ಹಾಗೂ ಶ್ರೀನಿವಾಸ್ ಭಟ್ ಅವರು ಬಿಜೆಪಿ ತೊರೆದು ಗುರುವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹಾಗೂ ಹಿರಿಯ ಮುಖಂಡ ಆರ್.ವಿ. …

Read More »

ವಿದ್ಯಾರ್ಥಿನಿಯರನ್ನು ಬಾರ್ ಮುಂದೆ ಇಳಿಸಿದ ಸಾರಿಗೆ ಚಾಲಕ

ಬೆಳಗಾವಿ ತಾಲೂಕಿನ ಸುಳಗಾ ಶಾಲೆಯ ಮಕ್ಕಳು ಕುದುರೆಮನೆಯ ಮಾರ್ಗವಾಗಿ ಬರುವ ಸಾರಿಗೆ ಬಸ್ ನಲ್ಲಿ ಪ್ರಯಾಣಿಸುವ ವೇಳೆ ಸರಿಯಾದ ಬಸ್ ನಿಲ್ದಾಣಕ್ಕೆ ನಿಲ್ಲಿಸದೆ ಚಾಲಕ ಬಾರ್ ಅಂಗಡಿ ಮುಂದೆ ನಿಲ್ಲಿಸಿದ್ದಕ್ಕೆ ಗ್ರಾಮಸ್ಥರು ಬಸ್ ಚಾಲಕ ಹಾಗೂ ನಿರ್ವಾಹಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಎಂದಿನಂತೆ ಶಾಲೆಯ ವಿದ್ಯಾರ್ಥಿಗಳು ಶಾಲೆಗೆ ಹೋಗಿ ಮರಳಿ ಸಾರಿಗೆ ಬಸ್ ನಲ್ಲಿ ಬರುವಾಗ ಸುಮಾರು 16 ವಿದ್ಯಾರ್ಥಿನಿಯರು ಸುಳಗಾಕ್ಕೆ ಇಳಿಸದೆ ಬಾರ್ ವೊಂದರ ಮುಂದೆ …

Read More »

ಬೆಳಗಾವಿಯ ಮಹಾಲಕ್ಷ್ಮೀ ಮಹಿಳಾ ಮಂಡಳದ 32ನೇ ವಾರ್ಷಿಕೋತ್ಸವ

ಬೆಳಗಾವಿಯ ಮಹಾಲಕ್ಷ್ಮೀ ಮಹಿಳಾ ಮಂಡಳದ 32ನೇ ವಾರ್ಷಿಕೋತ್ಸವ ಅತ್ಯಂತ ಅದ್ಧೂರಿಯಾಗಿ ಆಚರಿಸಲಾಯಿತು. ನಗರದ ಮಹಾಂತ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೀಪ ಬೆಳಗಿಸುವ ಮೂಲಕ ವೇದಿಕೆ ಮೇಲಿದ್ದ ಗಣ್ಯರು ಚಾಲನೆ ನೀಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಲೇಖಕಿಯರ ಸಂಘದ ಸಂಸ್ಥಾಪಕ ಜಿಲ್ಲಾಧ್ಯಕ್ಷೆ ಆಶಾ ಕಡಪಟ್ಟಿ ಕಳೆದ 32 ವರ್ಷಗಳಿಂದ ಮಹಾಲಕ್ಷ್ಮೀ ಮಹಿಳಾ ಮಂಡಳ ಬಹಳಷ್ಟು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಹಿಳೆಯರಿಗೆ ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿದೆ …

Read More »

B.SY. ಕೊಪ್ಪಳ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ : C.M. ಸ್ಪಷ್ಟನೆ

ನವದೆಹಲಿ : ಬಿ.ಎಸ್ ಯಡಿಯೂರಪ್ಪಕೊಪ್ಪಳ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನವದೆಹಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ ಬಿ.ಎಸ್ ಯಡಿಯೂರಪ್ಪ ಕೊಪ್ಪಳ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ,ಕಾಂಗ್ರೆಸ್ ಕತ್ತಲಿನಲ್ಲಿ ಕರಿ ಬೆಕ್ಕು ಹುಡುಕುವ ಕೆಲಸ ಮಾಡ್ತಿದೆ, ಅಹಮದಾವಾದ್ ನಲ್ಲಿ ಎಲ್ಲರೂ ಜೊತೆಯಾಗಿ ಇದ್ವಿ, ಕಾಂಗ್ರೆಸ್ ನವರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ತಮ್ಮ ಬಿರುಕು ಮರೆಮಾಚಲು ಕಾಂಗ್ರೆಸ್ ಯತ್ನ ಮಾಡುತ್ತಿದೆ. ಬಿ.ಎಸ್ ಯಡಿಯೂರಪ್ಪ ನಾಳೆ ಕೊಪ್ಪಳ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ …

Read More »

ಬೆಳಗಾವಿ ಗಡಿ ವಿವಾದ, ಸದ್ಯಕ್ಕಿಲ್ಲ ಗಡಿಬಿಡಿ :ಅಮಿತ್ ಶಾ’

ನವದೆಹಲಿ : ಬೆಳಗಾವಿ ಗಡಿ ವಿವಾದವನ್ನು ಬಗೆಹರಿಸಲು ಶೀಘ್ರವೇ 6 ಮಂದಿ ಕೇಂದ್ರ ಸಚಿವರು ಇರುವ ತಟಸ್ಥ ಸಮಿತಿ ರಚಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಇಂದು ಗಡಿ ವಿವಾದಕ್ಕೆ ಸಂಬಂಧಪಟ್ಟಂತೆ ನವದೆಹಲಿಯಲ್ಲಿ ನಡೆದ ಮಹಾ ಸಿಎಂ ಮತ್ತು ಕರ್ನಾಟಕ ಸಿಎಂಗಳ ನಡುವೆ ನಡೆದ ಸಭೆಯಲ್ಲಿ ಉಭಯ ನಾಯಕರುಗಳಿಂದ ಮಾಹಿತಿಯನ್ನು ಪಡೆದುಕೊಂಡು ನಂತರ ಮಾತನಾಡಿದ ಅಮಿತ್ ಶಾ ಈ ಬಗ್ಗೆ ಸುಪ್ರಿಂಕೋರ್ಟ್ ಅಂತಿಮ ಆದೇಶ ಹೊರಡಿಸಲಿದೆ. …

Read More »

ವಿವಿಧ ಇಲಾಖೆಗಳಲ್ಲಿ 9.79 ಲಕ್ಷ ಹುದ್ದೆಗಳು ಖಾಲಿ: ಕೇಂದ್ರ ಸರ್ಕಾರ

ನವದೆಹಲಿ: ಕೇಂದ್ರ ಸರ್ಕಾರಗಳ ವಿವಿಧ ಇಲಾಖೆಗಳಲ್ಲಿ ಸುಮಾರು 9.79 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ಕೇಂದ್ರ ಸರ್ಕಾರ ಬುಧವಾರ ಲೋಕಸಭೆಗೆ ಮಾಹಿತಿ ನೀಡಿದೆ. ಈ ಕುರಿತು ಸಿಬ್ಬಂದಿ ಸಚಿವಾಲಯದ ರಾಜ್ಯ ಖಾತೆ ಸಚಿವ ಜಿತೇಂದ್ರ ಸಿಂಗ್ ಮಾಹಿತಿ ನೀಡಿದರು.   ವೆಚ್ಚ ಇಲಾಖೆಯ ವಾರ್ಷಿಕ ವರದಿಯ ಪ್ರಕಾರ, 2021 ಮಾರ್ಚ್ 1ರಂತೆ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು/ಇಲಾಖೆಗಳಲ್ಲಿ 9,79,327 ಹುದ್ದೆಗಳು ಖಾಲಿ ಇವೆ ಎಂದು ಸಚಿವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. …

Read More »