Breaking News

ರಾಜ್ಯ

ದೇಶದಲ್ಲಿ ಭೂಕಂಪನ , ಜಲ ಪ್ರಳಯ ಸಂಭವಿಸುತ್ತೆ’ : ಬಬಲಾದಿ ಸದಾಶಿವ ಮಠದ ಸ್ವಾಮೀಜಿ ಭವಿಷ್ಯ

ವಿಜಯಪುರ : ಜಿಲ್ಲೆಯ ಬಬಲೇಶ್ವರ ತಾಲೂಕಿನ ಹೊಳೆ ಬಬಲಾದಿ ಸದಾಶಿವ ಮುತ್ಯಾನ ಮಠದ ಸ್ವಾಮೀಜಿ 2023 ರ ಕಾಲಜ್ಞಾನ ಬಗ್ಗೆ ಭವಿಷ್ಯ ನುಡಿದಿದ್ದಾರೆ. ದೇಶದಲ್ಲಿ ಭೂಕಂಪನ ಹಾಗೂ ಜಲಪ್ರಳಯ ಉಂಟಾಗಲಿದೆ ಎಂದು ಹೊಳೆಬಬಲಾದಿ ಮಠಾಧೀಶರು ಮತ್ತು ಕಾರ್ಣಿಕರಾದ ಶ್ರೀ ಸಿದ್ಧರಾಮಯ್ಯ ಹೊಳಿಮಠ ಭವಿಷ್ಯ ನುಡಿದಿದ್ದಾರೆ. ರಾಜ್ಯದಲ್ಲಿ ಭೂಮಿ ಕುಪ್ಪಳಿಸಲಿದೆ ಎಂದು ಸಿದ್ಧರಾಮಯ್ಯ ಹೊಳಿಮಠ ಸ್ವಾಮೀಜಿ ಇದೀಗ ಭವಿಷ್ಯ ನುಡಿದಿದ್ದಾರೆ. ಸಜ್ಜನರು ಕೂಡ ದುರ್ಜನರಾಗುತ್ತಾರೆ, ಹಿಂಗಾರು ಮುಂಗಾರು ಮಳೆ ಉತ್ತಮವಾಗಲಿದೆ.ನಮ್ಮ ನಮ್ಮಲ್ಲಿ …

Read More »

2024ರ ಲೋಕಸಭೆ ಚುನಾವಣೆ: ಕಾಂಗ್ರೆಸ್ ನೇತೃತ್ವದ ಸರ್ಕಾರವೇ ಅಧಿಕಾರಕ್ಕೆ- ಖರ್ಗೆ

ಕೊಹಿಮಾ: ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಅವರಂತಹ ನೂರು ಮಂದಿ ಬಂದರೂ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ನಾಗಾಲ್ಯಾಂಡ್‌ನಲ್ಲಿ ಚುನಾವಣೆ ರ್‍ಯಾಲಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.   ದೇಶವನ್ನು ಉತ್ತಮವಾಗಿ ಮುನ್ನಡೆಸುವ ವ್ಯಕ್ತಿ ತಾನೊಬ್ಬನೇ, ಬೇರೆ ಯಾರು ಇಲ್ಲ ಎಂದುಕೊಂಡಿದ್ದಾರೆ. ನಿಮ್ಮ ಈ ಎಲ್ಲಾ ನಂಬಿಕೆಗಳು ಮುಂದಿನ ಚುನಾವಣೆಯಲ್ಲಿ ಹುಸಿಯಾಗಲಿವೆ ಎಂದರು. ನೀವು ಸರ್ವಾಧಿಕಾರಿ ಅಲ್ಲ, ಜನರಿಂದ ಆಯ್ಕೆಯಾದ ನಿಮಗೆ …

Read More »

ಮುಗಳಖೋಡ: ‘ವಿವಿಧ ಸಮಾಜಗಳ ಏಳಿಗೆಗಾಗಿ ಬಿಜೆಪಿ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದೆ’ ಎಂದ ಬಿಜೆಪಿ

ಮುಗಳಖೋಡ: ‘ವಿವಿಧ ಸಮಾಜಗಳ ಏಳಿಗೆಗಾಗಿ ಬಿಜೆಪಿ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದೆ’ ಎಂದು ಬಿಜೆಪಿ ವಿಜಯಪುರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರಜೋಳ ಹೇಳಿದರು. ‘ಮಾಳಿ-ಮಾಲಗಾರ, ಹಡಪದ, ಹೂಗಾರ, ಗಾಣಿಗೆ ಸಮಾಜದ ನಿಗಮ ಘೋಷಣೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.   ಡಾ.ಸಿ.ಬಿ. ಕುಲಿಗೋಡ ಮಾತನಾಡಿ, ‘ನಿಗಮ ಘೋಷಿಸಲು ಕಾರಣರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಲಕ್ಷ್ಮಣ ಸವದಿ, ಶಾಸಕರಾದ ಪಿ. ರಾಜೀವ್, ಬಾಲಚಂದ್ರ …

Read More »

ಫೆ. 27ರಂದು ಸೋಮವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ರವರೆಗೆ ವಿದ್ಯುತ್ ವ್ಯತ್ಯಯ

ಬೆಳಗಾವಿ: ಇಲ್ಲಿನ 110 ಕೆವಿ  ವಡಗಾಂವ ಉಪಕೇಂದ್ರ ವಿದ್ಯುತ್ ಸರಬರಾಜು ಆಗುವ ಬೆಳಗಾವಿ ನಗರದ ವಿವಿಧ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಪೂರಕಗಳ ಮೇಲೆ ಬರುವ ಪ್ರದೇಶಗಳಲ್ಲಿ ಫೆ. 27ರಂದು ಸೋಮವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ರವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ. ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು ಎಫ್-04 ಬಜಾರ ಗಲ್ಲಿ ವ್ಯಾಪ್ತಿಯ ಭಾರತ ನಗರ,ಲಕ್ಷ್ಮೀ ನಗರ, ಗಣೇಶಪುರಗಲ್ಲಿ, ಜೇಡಗಲ್ಲಿ, ಅಳ್ವಾನ ಗಲ್ಲಿ, ಮಂಗಾಯಿ ನಗರ, ಪಾಟೀಲಗಲ್ಲಿ, ಯರಮಾಳ ರೋಡ, ಬಾಝಾರಗಲ್ಲಿ, …

Read More »

ಅಕ್ರಮ ಸಂಬಂಧಕ್ಕೆ ಬೇಸತ್ತು ಪತಿಯಿಂದಲೇ ಹೆಂಡತಿ, ಮಕ್ಕಳ ಹತ್ಯೆ!

ಚಿಕ್ಕಬಳ್ಳಾಪುರ: ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತ್ನಿ ಸೇರಿ ತನ್ನ ಇಬ್ಬರು ಮಕ್ಕಳಿಗೆ ಬೆಂಕಿ ಹಚ್ಚಿ ಕೊಂದು ವಿಷ ಸೇವಿಸಿ ಪತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶಿಡ್ಲಘಟ್ಟ ತಾಲೂಕಿನ ಯೆಣ್ಣೂರು ಗ್ರಾಮದಲ್ಲಿ ನಡೆದಿದೆ. ವರ್ಷಿತಾ(12), ಸ್ನೇಹಾ(9) ಇಬ್ಬರು ಪುತ್ರಿಯರು, ಪತ್ನಿ ನೇತ್ರಾವತಿ(37) ಹತ್ಯೆಗೀಡಾದ ದುರ್ದೈವಿಗಳು. ಇವರಿಗೆ ಬೆಂಕಿ ಹಚ್ಚಿದ ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಪತಿ ಸೊನ್ನೇಗೌಡ ಸ್ಥಿತಿ ಗಂಭಿರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.   ಪತ್ನಿಯ ಅಕ್ರಮ …

Read More »

ಸುರಕ್ಷಾ ಆಯಪ್‌: ಅರ್ಜಿ ವಿಲೇವಾರಿ

ಬೆಂಗಳೂರು: ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ರಕ್ಷಣೆಗಾಗಿ ರಾಜ್ಯ ಪೊಲೀಸ್ ಇಲಾಖೆಯು ‘ಸುರಕ್ಷಾ’ ಎಂಬ ಮೊಬೈಲ್ ಆಪ್‌ ಪರಿಚಯಿಸಿದ್ದು, 112 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು ಅಥವಾ ಸುರಕ್ಷಾ ಆಯಪ್ ಮೂಲಕ ನೆರವು ಪಡೆದುಕೊಳ್ಳಬಹುದಾದ ವ್ಯವಸ್ಥೆ ರೂಪಿಸಲಾಗಿದೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.   ‘ಅಪಘಾತ ಹಾಗೂ ಮತ್ತಾವುದೇ ಅವಘಡ ಉಂಟಾದ ಸಂದರ್ಭಗಳಲ್ಲಿ ಪೊಲೀಸ್ ಇಲ್ಲವೇ ಅಗತ್ಯ ತುರ್ತು ಸೇವೆಗಳ ಸೌಲಭ್ಯ ಪಡೆಯಲು ಸಿದ್ಧಪಡಿಸಲಾಗಿರುವ 112ರ ತುರ್ತು ಕರೆ ದೂರವಾಣಿ …

Read More »

ಮೇಕೆದಾಟು ಯೋಜನೆಗೆ ಹಣ ಇಡುತ್ತೇವೆ: ಕಾರಜೋಳ

ಬಜೆಟ್‌ ಪ್ರತಿಯಲ್ಲಿ ಮೇಕೆದಾಟು, ಎತ್ತಿನಹೊಳೆ ಯೋಜನೆಗಳಿಗೆ ಹಣ ಇಟ್ಟಿಲ್ಲ ಎಂಬ ನಿಮ್ಮ ಆರೋಪದಲ್ಲಿ ಹುರುಳಿಲ್ಲ. ನೀರಾವರಿಗಾಗಿ ಒಟ್ಟು ₹22,854 ಕೋಟಿ ಇಟ್ಟಿದ್ದು, ಇಲಾಖೆಯ ಕ್ರಿಯಾ ಯೋಜನೆ ರೂಪಿಸುವಾಗ ಇವೆರಡೂ ಯೋಜನೆಗಳಿಗೂ ಹಣ ಇಡುತ್ತೇವೆ’ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದರು.   ‘ಮೇಕೆದಾಟು ಮತ್ತು ಎತ್ತಿನಹೊಳೆ ಯೋಜನೆಗಳಿಗೆ ಹಣವಿಟ್ಟಿಲ್ಲ’ ಎಂಬ ಸಿದ್ದರಾಮಯ್ಯ ಅವರ ಟೀಕೆಗೆ ಪ್ರತಿಕ್ರಿಯಿಸಿದ ಸಚಿವರು, ‘ಯಾವ ಯೋಜನೆಗಳಿಗೆ ಎಷ್ಟು ಹಣ ಇಟ್ಟಿದ್ದೇವೆ ಎಂಬುದನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಲು …

Read More »

ಅಕ್ರಮ ಗಣಿಗಾರಿಕೆ: ವಾರ್ಷಿಕ ₹20 ಸಾವಿರ ಕೋಟಿ ನಷ್ಟ

ಬೆಂಗಳೂರು: ಅಕ್ರಮ ಗಣಿಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ ಸುಮಾರು ₹ 18 ಸಾವಿರ ಕೋಟಿಯಿಂದ ₹ 20 ಸಾವಿರ ಕೋಟಿಯಷ್ಟು ರಾಜಧನ ವರಮಾನ ನಷ್ಟವಾಗುತ್ತಿದೆ. ಅದನ್ನು ತಡೆಗಟ್ಟಲು ಪರಿಣಾಮಕಾರಿ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ (ಪಿಎಸಿ) ಸರ್ಕಾರಕ್ಕೆ ಶಿಫಾರಸು ಮಾಡಿದೆ.   ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂಬಂಧಿಸಿದಂತೆ ಮಹಾಲೇಖಪಾಲರು 2017-18ನೇ ಸಾಲಿನ ವರದಿಯಲ್ಲಿ ಗಣಿ ಗುತ್ತಿಗೆ ಕುರಿತು ಉಲ್ಲೇಖಿಸಿದ್ದ ಅಂಶಗಳ ಕುರಿತು ವಿಧಾನಸಭೆಯಲ್ಲಿ …

Read More »

ಪಿಎಸ್‌ಐ ಹಗರಣ: ಜಾಮೀನು ತಿರಸ್ಕೃತ

ಬೆಂಗಳೂರು: ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣದ 30ನೇ ಆರೋಪಿಯಾದ ಪೊಲೀಸ್‌ ಇಲಾಖೆಯ ಕೇಂದ್ರ ಕಚೇರಿಯ ಸೂಪರಿಂಟೆಂಡೆಂಟ್‌ ಆರ್.ಮಂಜುನಾಥ್‌ ಜಾಮೀನು ಅರ್ಜಿಯನ್ನು ಹೈಕೋರ್ಟ್‌ ತಿರಸ್ಕರಿಸಿದೆ. ಆರ್‌.ಮಂಜುನಾಥ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಕೆ.ನಟರಾಜನ್‌ ಏಕಸದಸ್ಯ ಪೀಠ ಮಂಗಳವಾರ ಪ್ರಕಟಿಸಿತು. ‘ಅಭ್ಯರ್ಥಿ ಯಶವಂತಗೌಡ ಲಿಖಿತ ಪರೀಕ್ಷೆ ಬರೆದ ನಂತರ ಬಳಸಿದ್ದ ಪೆನ್ನಿನಲ್ಲೇ ಒಎಂಆರ್‌ ಶೀಟ್‌ ತಿದ್ದಲು ಸಹಾಯ ಮಾಡಿದ ಆರೋಪವನ್ನು ಆರ್.ಮಂಜುನಾಥ್‌ ಎದುರಿಸುತ್ತಿದ್ದಾರೆ.

Read More »

ವೆಂಕಟಾಪೂರ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಕೆಎಂಎಫ್ ನಿಂದ ೧೨ ಲಕ್ಷ ರೂಪಾಯಿ ನೆರವು-

ಮೂಡಲಗಿ- ವೆಂಕಟಾಪೂರ ಹಾಲು ಉತ್ಪಾದಕ ಸಹಕಾರಿ ಸಂಘಕ್ಕೆ ೧೨ ಲಕ್ಷ ರೂ. ನೆರವು ನೀಡುವುದಾಗಿ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ತಾಲ್ಲೂಕಿನ ವೆಂಕಟಾಪೂರ ಗ್ರಾಮಕ್ಕೆ ಇತ್ತೀಚೆಗೆ ಭೇಟಿ ನೀಡಿ ಮಾತನಾಡಿದ ಅವರು, ಇದರಲ್ಲಿ ಕೆಎಂಎಫ್ ನಿಂದ ೧೦ ಲಕ್ಷ ರೂ ಮತ್ತು ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದಿಂದ ೨ ಲಕ್ಷ ರೂ. ಗಳ ನೆರವು ನೀಡುವ ಭರವಸೆಯನ್ನು ನೀಡಿದರು.   ವೆಂಕಟಾಪೂರ ಗ್ರಾಮದ ಹಣಮಂತ ದೇವರ …

Read More »