Breaking News

ರಾಜ್ಯ

ಮಲ್ಲಿಕಾರ್ಜುನ ಖರ್ಗೆ ಆರೋಗ್ಯದಲ್ಲಿ ಏರುಪೇರು

ಬೆಂಗಳೂರು: ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಸಿರಾಟದ ತೊಂದರೆ ಹಾಗೂ ಜ್ವರ ಕಾಣಿಸಿಕೊಂಡ ಕಾರಣ ಮಂಗಳವಾರ ಸಂಜೆ ಖರ್ಗೆ ಅವರನ್ನು ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಆಗಮಿಸುತ್ತಿದ್ದಂತೆ ಹಿರಿಯ ವೈದ್ಯರು, ಹಲವು ಪರೀಕ್ಷೆಗಳನ್ನು ನಡೆಸಿದರು. ಸದ್ಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಖರ್ಗೆ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಸದ್ಯ ಜನರಲ್ ವಾರ್ಡ್​ನಲ್ಲಿ ವಿಶ್ರಾಂತಿ …

Read More »

ರೌಡಿಶೀಟರ್ ಸೈಫುದ್ದೀನ್ ಕೊಲೆ ಪೂರ್ವ ನಿಯೋಜಿತ ಕೃತ್ಯ: ಉಡುಪಿ ಎಸ್ಪಿ ಹರಿರಾಂ ಶಂಕ‌ರ್

ಉಡುಪಿ: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದ ರೌಡಿಶೀಟರ್ ಸೈಫ್ ಯಾನೆ ಸೈಫುದ್ದೀನ್ ಅತ್ರಾಡಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಬಂಧಿತ ಮೂವರು ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ಪೊಲೀಸ್‌ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಬಂಧಿತ ಮೂವರು ಆರೋಪಿಗಳಾದ ಮೊಹಮದ್ ಫೈಸಲ್ ಖಾನ್, ಮೊಹಮದ್ ಶರೀಫ್ ಮತ್ತು ಅಬ್ದುಲ್ ಶುಕೂರು ಯಾನೆ ಅದ್ದು ಎಂಬುವನನ್ನು ಪ್ರಕರಣದ ತನಿಖಾಧಿಕಾರಿ, ಮಲ್ಪೆ ಪೊಲೀಸ್ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಭದ್ರತೆಯಲ್ಲಿ …

Read More »

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲೂ ಇನ್ಮುಂದೆ ಮಾರ್ಷಲ್‌ಗಳು

ಹುಬ್ಬಳ್ಳಿ: ವಿಧಾನಸಭೆ ಕಲಾಪದಲ್ಲಿ ಮಾರ್ಷಲ್‌ಗಳು ಕಾರ್ಯ ನಿರ್ವಹಿಸುವುದನ್ನು ನೋಡಿದ್ದೇವೆ‌. ಅದೇ ಮಾದರಿಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲೂ ಇನ್ಮುಂದೆ ಮಾರ್ಷಲ್‌ಗಳು ನಿರ್ವಹಿಸಲಿದ್ದಾರೆ. ರಾಜ್ಯದ 2ನೇ ಅತಿ ದೊಡ್ಡ ಮಹಾನಗರ ಪಾಲಿಕೆ ಎಂಬ ಖ್ಯಾತಿ ಪಡೆದಿರುವ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯಲ್ಲಿ ಇದೇ ಮೊದಲ ಬಾರಿಗೆ ಮಾರ್ಷಲ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. 8 ಮಹಿಳೆಯರು ಹಾಗೂ 10 ಪುರುಷ ಮಾರ್ಷಲ್‌ಗಳನ್ನು ಪಾಲಿಕೆ ಕಲಾಪ ನಿರ್ವಹಣೆಗೆ ನೇಮಿಸಿಕೊಳ್ಳಲಾಗಿದೆ.ಸುಗಮ ಕಲಾಪ ನಡೆಸಲು ಮಾರ್ಷಲ್​ಗಳು ಅಗತ್ಯವಾಗಿಬೇಕು. …

Read More »

ಶಕ್ತಿಸೌಧದಲ್ಲಿ ಆಯುಧ ಪೂಜೆ

ಬೆಂಗಳೂರು: ದಸರಾ ಹಬ್ಬದ ಆಯುಧ ಪೂಜೆ ಪ್ರಯುಕ್ತ ವಿಧಾನಸೌಧ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ವಿಧಾನಸೌಧದ ಬಹುತೇಕ ಎಲ್ಲ ಕೊಠಡಿಗಳು ಹೂವಿನ ಅಲಂಕಾರ, ರಂಗೋಲಿಯೊಂದಿಗೆ ಕಳೆಗಟ್ಟಿತು. ನಾಳೆ ಆಯುಧ ಪೂಜೆ ಪ್ರಯುಕ್ತ ಇಂದೇ ವಿಧಾನಸೌಧ, ವಿಕಾಸಸೌಧದಲ್ಲಿ ಪೂಜೆ ನೆರವೇರಿಸಲಾಯಿತು. ನಾಳೆ ಸರ್ಕಾರಿ ರಜಾ ದಿನವಾಗಿರುವುದರಿಂದ ಸಿಬ್ಬಂದಿ ಇಂದು ತಮ್ಮ ಕಚೇರಿ ಕೊಠಡಿಯಲ್ಲಿ ಆಯುಧ ಪೂಜೆ ಕೈಗೊಂಡರು. ಬಹುತೇಕ ಎಲ್ಲ ಕೊಠಡಿ, ಸಚಿವರ ಕೊಠಡಿಯಲ್ಲಿ ಅದ್ದೂರಿಯಾಗಿ ಆಯುಧ ಪೂಜೆ ನೆರವೇರಿಸಲಾಯಿತು.ಕೊಠಡಿಗಳ ಬಾಗಿಲಿಗೆ, ಒಳಗೆ, ಹೊರಗೆ …

Read More »

ವಜ್ರಮುಷ್ಟಿ ಕಾಳಗಕ್ಕೆ ತಾನು ರೆಡಿ ಎನ್ನುತ್ತಿದ್ದಾರೆ ಚಾಮರಾಜನಗರದ ಜಟ್ಟಿ

ಚಾಮರಾಜನಗರ : ವಿಶ್ವವಿಖ್ಯಾತ ಮೈಸೂರು ಜಂಬೂ ಸವಾರಿಗೆ ದಿನಗಣನೆ ಆರಂಭವಾಗಿದ್ದು, ನಾಡಹಬ್ಬದ ಪ್ರಮುಖ ಆಕರ್ಷಣೆಯಾದ ಮುಷ್ಟಿ ಕಾಳಗಕ್ಕೆ ಆಯ್ಕೆಯಾಗಿರುವ ಚಾಮರಾಜನಗರದ ಮಹೇಶ್ ನಾರಾಯಣ ಜಟ್ಟಿ ಅವರು ನಿತ್ಯವೂ ಬೆವರು ಹರಿಸುತ್ತಿದ್ದಾರೆ. ನಾಡಹಬ್ಬ ದಸರಾದ ವಿಜಯದಶಮಿ ದಿನದಂದು ಮೈಸೂರಿನ ಅಂಬಾ ವಿಲಾಸ ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ನಡೆಯುವ ಮೈನವಿರೇಳಿಸುವ ವಜ್ರಮುಷ್ಟಿ ಕಾಳಗಕ್ಕೆ ಚಾಮರಾಜನಗರದ ಮಹೇಶ್ ನಾರಾಯಣ ಜಟ್ಟಿ ಸಜ್ಜುಗೊಂಡಿದ್ದಾರೆ. ಕಳೆದ 20 ದಿನಗಳಿಂದ ಚಾಮರಾಜನಗರದ ದೊಡ್ಡ ಗರಡಿಯಲ್ಲಿ ತರಬೇತುದಾರ ಪುಟ್ಟಣ್ಣ ಜಟ್ಟಿ ಅವರಿಂದ …

Read More »

ನಾನು ಕುಮಾರಸ್ವಾಮಿಗೆ ಉತ್ತರ ಕೊಡುತ್ತೇನೆ:ಡಿಸಿಎಂ

ಬೆಂಗಳೂರು: ನಾನು ಹೆಚ್.ಡಿ. ಕುಮಾರಸ್ವಾಮಿಗೆ ಉತ್ತರ ಕೊಡುತ್ತೇನೆ. ಇದಕ್ಕೆ ಕೊನೆ ಹಾಡಲೇಬೇಕಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ‌. ಶಿವಕುಮಾರ್ ತಿಳಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಮಾಧ್ಯದಮದವರೊಂದಿಗೆ ಮಾತನಾಡಿದ ಅವರು, ಜೈಲಿಗೆ ಹೋಗುವ ದಿನ ದೂರವಿಲ್ಲ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಪಾಪ ಅವರು ನನ್ನನ್ನು ಜೈಲಿಗೆ ಕಳಿಸೋಕೆ ನೋಡ್ತಿದ್ದಾರೆ. ಅದಕ್ಕಾಗಿ ಅವರು ಏನೇನೋ ಮಾಡ್ತಿರಬಹುದು. ಮೊದಲಿಂದಲೂ ನಮ್ಮ ವಿರುದ್ಧ ಅವರ ಕುಟುಂಬ ಷಡ್ಯಂತ್ರ ಮಾಡ್ತಿದೆ. ಸಿಎಂ ಆಗಿದ್ದಾಗಲೂ ಸಾಕಷ್ಟು ಕೇಸ್ …

Read More »

ದಸರಾ ಬೊಂಬೆಗಳೊಂದಿಗೆ ಕೊರಿಯಾ ಡಾಲ್ ಸೇರ್ಪಡೆ

ಚಿಕ್ಕಮಗಳೂರು : ದಸರಾ ಹಬ್ಬದ ಸಂದರ್ಭದಲ್ಲಿ ಮನೆ ಮನೆಯಲ್ಲಿ ಬೊಂಬೆಗಳನ್ನು ಕೂರಿಸುವುದು ಸರ್ವೇ ಸಾಮಾನ್ಯ. ಆದರೆ, ಚಿಕ್ಕಮಗಳೂರಿನಲ್ಲಿ ಈ ಬೊಂಬೆಗಳ ಸಾಮ್ರಾಜ್ಯ ನೋಡಿದರೆ ಸಂತೋಷವಾಗುವುದಂತೂ ಖಂಡಿತ. ರಜನಿ ಸತೀಶ್ ಅವರ ಮನೆಯಲ್ಲಿ ಕೊರಿಯಾದ ಸಂಪ್ರದಾಯ ಸಾರುವ ಬೊಂಬೆಗಳನ್ನ ತಂದು ಕೂರಿಸಿದ್ದಾರೆ. ರಜನಿ ಸತೀಶ್ ಅವರು ಕೊರಿಯಾಗೆ ಹೋದ ಸಂದರ್ಭದಲ್ಲಿ ಕೊರಿಯಾದ ಸಂಪ್ರದಾಯ ಸಾರುವ ಬೊಂಬೆಗಳನ್ನ ತಂದು ಅದನ್ನ ಮನೆಯಲ್ಲಿ ಕೂರಿಸಿ ಜನರನ್ನು ಆಕರ್ಷಿತರನ್ನಾಗಿಸಿದ್ದಾರೆ. ಅದರ ಜೊತೆಗೆ ವಿಶೇಷವಾಗಿ ಆನೆಯ ಮೇಲೆ ಸಿದ್ದಿ …

Read More »

ಹುಕ್ಕೇರಿಯಲ್ಲಿ ಸೋಲಷ್ಟೇ ಆಗಿದೆ, ಮುಖಭಂಗ ಆಗಿಲ್ಲ: ಸತೀಶ ಜಾರಕಿಹೊಳಿ‌

ಬೆಳಗಾವಿ: ನಾನು ಜಿಲ್ಲಾ ಉಸ್ತುವಾರಿ ಸಚಿವ ಎನ್ನುವ ಒಂದೇ ಕಾರಣಕ್ಕೆ ಹುಕ್ಕೇರಿ ವಿದ್ಯುತ್ ಗ್ರಾಮೀಣ ಸಹಕಾರಿ ಸಂಘದ ಚುನಾವಣೆ ಹೆಚ್ಚು ಪ್ರಾಧಾನ್ಯತೆ ಪಡೆಯಿತು. ಇದರಲ್ಲಿ ನಮಗೆ ಸೋಲು ಅಷ್ಟೇ ಆಗಿದ್ದು, ಮುಖಭಂಗ ಆಗಿದೆ ಎನ್ನುವ ಪ್ರಶ್ನೆ ಬರಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ಸಮರ್ಥಿಸಿಕೊಂಡರು. ಬೆಳಗಾವಿಯಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೋಲು ಗೆಲುವು ಇದ್ದಿದ್ದೆ. ಸೋತೆವು ಅಂತಾ ಸುಮ್ಮನೆ ಕೂರಲು ಆಗುವುದಿಲ್ಲ. ಮುಂದೆ ಗೆಲುವು ಆಗಿಯೇ ಆಗುತ್ತದೆ. ನಮ್ಮ …

Read More »

ಭೀಮಾನದಿಯ ಪ್ರವಾಹ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ

ಭೀಮಾನದಿಯ ಪ್ರವಾಹ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ; ಸಚಿವರ ಸಾಥ್ ಭೀಮಾನದಿ ತೀರದಲ್ಲಿ ಸುರಿದ ಭಾರಿ ಮಳೆಯಿಂದಾದ ಪ್ರವಾಹದ ಪರಿಣಾಮವಾಗಿ ರಾಜ್ಯದ ಕಲಬುರಗಿ, ಬೀದರ್, ಯಾದಗಿರಿ, ವಿಜಯಪುರ ಜಿಲ್ಲೆಗಳು ತತ್ತರಿಸಿ ಹೋಗಿದೆ. ಲಕ್ಷಾಂತರ ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆ ಹಾನಿಯಾಗಿದ್ದು, ರೈತರು ತಲ್ಲಣಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಸಚಿವರು, ಜನಪ್ರತಿನಿಧಿಗಳು ಮುಖ್ಯಮಂತ್ರಿಗಳಿಗೆ ಸಮೀಕ್ಷೆ ನಡೆಸಿ, ಪರಿಹಾರ ಕಲ್ಪಿಸಿಕೊಡುವಂತೆ ಸಲ್ಲಿಸಿದ್ದ ಮನವಿಗೆ ಸ್ಪಂದಿಸಿದ್ದಾರೆ. ಇಂದು ಸಿದ್ದರಾಮಯ್ಯ, ಸಚಿವ ಸಂಪುಟದ ಸಹೋದ್ಯೋಗಿಗಳಾದ ಕೃಷ್ಣಭೈರೇಗೌಡರು, …

Read More »

ದರ್ಶನ್​ಗೆ ಜೈಲಿನಲ್ಲಿ ಹಾಸಿಗೆ – ದಿಂಬು ನೀಡದ ಆರೋಪ: ಅ.9ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್ ಅವರಿಗೆ ಜೈಲಿನಲ್ಲಿ ಹೆಚ್ಚುವರಿ ಹಾಸಿಗೆ ಹಾಗೂ ದಿಂಬುಗಳನ್ನ ನೀಡದ ಆರೋಪ ಕುರಿತ ಅರ್ಜಿಯ ಆದೇಶವನ್ನ 57ನೇ ಸೆಷನ್ಸ್ ನ್ಯಾಯಾಲಯ ಅಕ್ಟೋಬರ್ 9ಕ್ಕೆ ಕಾಯ್ದಿರಿಸಿದೆ. ಇಂದು ಅರ್ಜಿಯ ವಿಚಾರಣೆ ಆರಂಭವಾಗುತ್ತಿದ್ದಂತೆ ಖುದ್ದು ಹಾಜರಾದ ಜೈಲು ಅಧೀಕ್ಷಕ ಸುರೇಶ್ ಅವರು ದರ್ಶನ್‌ಗೆ ನೀಡಿರುವ ಸೌಲಭ್ಯಗಳ ಕುರಿತು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದರು. ಜೈಲಾಧಿಕಾರಿಗಳ ಪರ ವಾದ ಆರಂಭಿಸಿದ ಪ್ರಸನ್ನ ಕುಮಾರ್, ‘ಜೈಲಿನ ನಿಯಮಗಳ ಪ್ರಕಾರ ಸೌಲಭ್ಯಗಳನ್ನು …

Read More »