Breaking News

ರಾಜ್ಯ

ಆಗಸ್ಟ್ 1ರಂದು ಕೇರಳ, ಆಗಸ್ಟ್ 2ರಂದು ಕರ್ನಾಟಕ ಮತ್ತು ಆಗಸ್ಟ್ 3ರಂದು ತಮಿಳುನಾಡು ಎಐಸಿಸಿ ಮತ್ತು ರಾಜ್ಯ ತಂಡಗಳೊಂದಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಭೆ

ತಮಿಳುನಾಡು ಎಐಸಿಸಿ ಮತ್ತು ರಾಜ್ಯ ತಂಡಗಳೊಂದಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಭೆ ನಡೆಸಲಿದ್ದಾರೆ. ನವದೆಹಲಿ: ಮಣಿಪುರ ಹಿಂಸಾಚಾರದ ಬಗ್ಗೆ ಸಂಸತ್ತಿನಲ್ಲಿ ಗದ್ದಲದ ಮಧ್ಯೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ 2024ರ ಲೋಕಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಆಗಸ್ಟ್​ 1 ರಿಂದ 129 ಸದಸ್ಯರನ್ನು ಲೋಕಸಭೆಗೆ ಕಳುಹಿಸುವ ದಕ್ಷಿಣ ಭಾರತದ ಕರ್ನಾಟಕ ಸೇರಿ ಐದು ರಾಜ್ಯಗಳಲ್ಲಿನ ಪಕ್ಷದ ಸಿದ್ಧತೆಗಳನ್ನು ಖರ್ಗೆ ಅವಲೋಕನ ಮಾಡಲಿದ್ದಾರೆ.   2024ರ ಲೋಕಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು …

Read More »

ನೊಣಗಳ ಸಮಸ್ಯೆಗೆ ಮುಕ್ತಿ ನೀಡಲು ಗ್ರಾಮಗಳಿಗೆ ಭಾನುವಾರ ಔಷಧಿ ಸಿಂಪಡಣೆ

ನೊಣಗಳ ಉಪಟಳದಿಂದ ಬೇಸತ್ತಿರುವ ದಾವಣಗೆರೆ ತಾಲೂಕಿನ ಹತ್ತೂರು ಗ್ರಾಮಕ್ಕೆ ತಕ್ಕಮಟ್ಟಿಗೆ ಮುಕ್ತಿ ಸಿಕ್ಕಂತಾಗಿದೆ.‌ ‘ದಾವಣಗೆರೆಯ ಗ್ರಾಮಗಳಲ್ಲಿ ಹೆಚ್ಚಾಯಿತು ನೊಣಗಳ ಉಪಟಳ ಆತಂಕದಲ್ಲಿ ಜನ’ ಶೀರ್ಷಿಕೆಯಡಿಯಲ್ಲಿ ಈಟಿವಿ ಭಾರತ್ ಜುಲೈ 29 ರಂದು ವರದಿ ಮಾಡಿತ್ತು. ಸುದ್ದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಹೆಬ್ಬಾಳು ಗ್ರಾಮ ಪಂಚಾಯತಿ ಸಿಬ್ಬಂದಿ ನೊಣಗಳ ಸಮಸ್ಯೆಗೆ ಮುಕ್ತಿ ನೀಡಲು ಗ್ರಾಮಗಳಿಗೆ ಭಾನುವಾರ ಔಷಧಿ ಸಿಂಪಡಣೆ ಮಾಡಿದ್ದಾರೆ. ಔಷಧಿ ಸಿಂಪಡಣೆ ಮಾಡಿದ್ರೆ ಕೆಲ ಹೊತ್ತು ಮಾತ್ರ ನೊಣಗಳ ಕಾಟ ದೂರವಾಗ್ಬಹುದು. …

Read More »

ಕಳೆದ 15 ದಿನಗಳಿಂದ ಉತ್ತಮ ಮಳೆ ಬಿತ್ತನೆ ಕಾರ್ಯ ಚುರುಕು

ಬೆಳಗಾವಿ: ಕಳೆದ 15 ದಿನಗಳಿಂದ ಉತ್ತಮ ಮಳೆಯಾಗಿರುವ ಹಿನ್ನೆಲೆ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ಬಿತ್ತನೆ ಕಾರ್ಯ ಚುರುಕುಗೊಂಡಿದ್ದು, ರೈತರು ಭೂಮಿ ಹದಗೊಳಿಸುವಲ್ಲಿ ನಿರತರಾಗಿದ್ದಾರೆ. . ಈ ಬಾರಿ ಮುಂಗಾರು ಮಳೆ ಎರಡು ತಿಂಗಳು ವಿಳಂಬವಾಗಿದ್ದರಿಂದ ಸವದತ್ತಿ ತಾಲೂಕಿನ ಕರಿಕಟ್ಟಿ ಸೇರಿ ಸುತ್ತಲಿನ ಹಲವಾರು ಗ್ರಾಮದ ರೈತರು ಬಿತ್ತನೆ ಮಾಡಿರಲಿಲ್ಲ. ಇತ್ತೀಚೆಗೆ ನಿರಂತರವಾಗಿ ಮಳೆಯಾಗಿದ್ದು, ಮಳೆರಾಯ ಈಗ ಒಂದಿಷ್ಟು ವಿರಾಮ ಕೊಟ್ಟಿದ್ದಾನೆ. ಹೀಗಾಗಿ ಬೀಜ, ಗೊಬ್ಬರ ತಂದು ಮನೆಯಲ್ಲಿ ಸಂಗ್ರಹ ಮಾಡಿದ್ದ ರೈತರು …

Read More »

ರಾಜ್ಯ ಸರ್ಕಾರ ಸಂಪೂರ್ಣವಾಗಿ ವರ್ಗಾವಣೆ ದಂಧೆಯಲ್ಲಿ ನಿರತವಾಗಿದೆ: ಬೊಮ್ಮಾಯಿ

ಬೆಳಗಾವಿ : “ರಾಜ್ಯ ಸರ್ಕಾರ ಸಂಪೂರ್ಣವಾಗಿ ವರ್ಗಾವಣೆ ದಂಧೆಯಲ್ಲಿ ನಿರತವಾಗಿದೆ. ಅಧಿಕಾರಿಗಳ ವರ್ಗಾವಣೆಗಾಗಿ ಸರ್ಕಾರದಲ್ಲಿ ಪೈಪೋಟಿ ನಡೆಯುತ್ತಿದೆ” ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಎಲ್ಲರೂ ವರ್ಗಾವಣೆ ದಂಧೆಯಲ್ಲಿದ್ದಾರೆ. ಮೊನ್ನೆ ನಡೆದ ಸಭೆ ವರ್ಗಾವಣೆಯ ಪೈಪೋಟಿ, ಭ್ರಷ್ಟಾಚಾರದ ಪೈಪೋಟಿ ಅಷ್ಟೇ. ಇದೀಗ ವರ್ಗಾವಣೆ ದಂಧೆಯಲ್ಲಿ ಚೌಕಾಸಿ ನಡೆಯುತ್ತಿದೆ” ಎಂದು ಹೇಳಿದರು. “ಲೋಕಸಭೆ ಚುನಾವಣೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ …

Read More »

ಲಂಚ: ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಸೇರಿ ನಾಲ್ವರ ಬಂಧಿಸಿದ ಸಿಬಿಐ

ನವದೆಹಲಿ: ಲಂಚ ಪಡೆದ ಗಂಭೀರ ಆರೋಪದಡಿ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಇಬ್ಬರು ಜಂಟಿ ನಿರ್ದೇಶಕ ಶ್ರೇಣಿಯ ಅಧಿಕಾರಿಗಳು, ಹಿರಿಯ ತಾಂತ್ರಿಕ ಸಹಾಯಕ ಮತ್ತು ಅಲೋಕ್ ಇಂಡಸ್ಟ್ರೀಸ್‌ನ ಸಹವರ್ತಿ ಸೇರಿದಂತೆ ಒಟ್ಟು ನಾಲ್ವರನ್ನು ಶನಿವಾರ ಕೇಂದ್ರ ತನಿಖಾ ದಳ (ಸಿಬಿಐ) ಬಂಧಿಸಿದೆ. ತನಿಖೆಯ ವೇಳೆ ಅಧಿಕಾರಿಗಳಿಂದ ಸುಮಾರು 59.80 ಲಕ್ಷ ರೂಪಾಯಿ ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಬಿಐ ಪ್ರಕಟಣೆ ತಿಳಿಸಿದೆ. ನವದೆಹಲಿಯಲ್ಲಿರುವ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಜಂಟಿ ನಿರ್ದೇಶಕ, ಹಿರಿಯ …

Read More »

ಖಾನಾಪೂರ- ಗೋವಾ ರಾಜ್ಯ ಹೆದ್ದಾರಿಯ ರುಮೇವಾಡಿ ಕ್ರಾಸ್ ಬಳಿ ಈ ಸರ್ಕಸ್ ನಲ್ಲಿ ಇತ್ತೀಚೆಗೆ ಒಂದು ಜೀವಹಾನಿ ಕೂಡಾವಾಗಿದೆ.

ನೋಡಿ, ನೋಡಿ ಸರ್ಕಸ್ ನೋಡಿ ಅದು ಎಲ್ಲಿ ಅಂತೀರಾ ಅಲ್ಲೇ ರೀ ನಮ್ಮ ಖಾನಾಪೂರ- ಗೋವಾ ರಾಜ್ಯ ಹೆದ್ದಾರಿಯ ರುಮೇವಾಡಿ ಕ್ರಾಸ್ ಬಳಿ ಈ ಸರ್ಕಸ್ ನಲ್ಲಿ ಇತ್ತೀಚೆಗೆ ಒಂದು ಜೀವಹಾನಿ ಕೂಡಾವಾಗಿದೆ. ಗೋವಾ ದಿಂದ ಬೆಳಗಾವಿ, ಹಳಿಯಾಳ ದಿಂದ ಬೆಳಗಾವಿಗೆ ಸಂಪರ್ಕಿಸುವ ಈ ಮುಖ್ಯ ರಸ್ತೆ ಯು ಸುಮಾರು ಹತ್ತಾರು ಗ್ರಾಮಗಳಿಗೆ ಸಂಪರ್ಕದ ರಸ್ತೆ ಈ ರಸ್ತೆಯಲ್ಲಿ ಪ್ರತಿದಿನ, ಪ್ರತಿಕ್ಷಣವೂ ಸರ್ಕಸ್ ಮಾಡಿಯೇ ಮುಂದೆ ಹೋಗಬೇಕಾದ ಪರಿಸ್ಥಿತಿ. ಇದಕ್ಕೆ …

Read More »

ಇಬ್ಬರು ಕೈದಿಗಳ ನಡುವೆ ಮಾರಾಮಾರಿ ನಡೆದಿದ್ದು, ಸ್ಕ್ರೂಡ್ರೈವರ್​ನಿಂದ ಚುಚ್ಚಿ ಕೊಲೆ ಮಾಡಲು ಯತ್ನಿಸಿರುವ ಘಟನೆ ಬೆಳಗಾವಿ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.

ಇಬ್ಬರು ಕೈದಿಗಳ ನಡುವೆ ಮಾರಾಮಾರಿ ನಡೆದಿದ್ದು, ಸ್ಕ್ರೂಡ್ರೈವರ್​ನಿಂದ ಚುಚ್ಚಿ ಕೊಲೆ ಮಾಡಲು ಯತ್ನಿಸಿರುವ ಘಟನೆ ಬೆಳಗಾವಿ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ. ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಇಬ್ಬರು ಕೈದಿಗಳ ನಡುವೆ ಮಾರಾಮಾರಿ ನಡೆದಿದೆ. ಗಲಾಟೆಯಲ್ಲಿ ಓರ್ವ ಕೈದಿ ಸ್ಕ್ರೂಡ್ರೈವರ್​ನಿಂದ ಮತ್ತೊಬ್ಬ ಕೈದಿಗೆ ಐದು ಬಾರಿ ಇರಿದು ಕೊಲೆ ಮಾಡಲು ಯತ್ನಿಸಿದ್ದಾನೆ. ಶಂಕರ ಭಜಂತ್ರಿ ಕೊಲೆ ಮಾಡಲು ಯತ್ನಿಸಿದ ಕೈದಿ. ಮಂಡ್ಯ ಮೂಲದ ಸಾಯಿಕುಮಾರ್​ ಗಾಯಗೊಂಡ ವಿಚಾರಣಾಧೀನ ಕೈದಿ. ಸಾಯಿಕುಮಾರ್​ ಅವರಿಗೆ …

Read More »

ರಾಮತೀರ್ಥ ನಗರ ಕಾಲೋನಿಗೆಪಾಲಿಕೆ ಆಯುಕ್ತರ ಭೇಟಿ,

ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತ ಅಶೋಕ ದುಡಗುಂಟಿ ಅವರು ಇಂದು ವಾರ್ಡ್ ನಂ. 46ರಲ್ಲಿ ರಾಮತೀರ್ಥ ನಗರ ಕಾಲೋನಿಗೆ ಎಲ್ ಅಂಡ್ ಟಿ ಅಧಿಕಾರಿ ಹಾರ್ದಿಕ್ ದೇಸಾಯಿ ಹಾಗೂ ಕರ್ನಾಟಕ ನಾಗರಿಕ ನೀರು ಸರಬರಾಜು ಕಂಪನಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ರಾಮತೀರ್ಥ ನಗರದಲ್ಲಿ ಪಾಲಿಕೆಯ ಆಯುಕ್ತ ಅಶೋಕ ದುಡಗುಂಟಿ ನೇತೃತ್ವದಲ್ಲಿ ಎಲ್ಲ ಇಲಾಖೆ ಸಿಬ್ಬಂದಿಯೊಂದಿಗೆ ಸಮೀಕ್ಷೆ ನಡೆಸಲಾಯಿತು. ಈ ಭಾಗದಲ್ಲಿ 24/7 ನೀರಿನ ಯೋಜನೆಗಾಗಿ ಎಲ್ ಆ್ಯಂಡ್ ಟಿ …

Read More »

1,38,000 ಮೌಲ್ಯದ 12 ಕದ್ದ ಬ್ಯಾಟರಿಗಳನ್ನು ವಶಪಡಿಸಿಕೊಂಡ ಹಾರೂಗೇರಿ ಪೊಲೀಸರು

ಬೆಳಗಾವಿ ಜಿಲ್ಲೆಯ ಹಾರೂಗೇರಿ ಪೊಲೀಸರು ವಾಹನ ತಪಾಸಣೆ ನಡೆಸಿ 1,38,000 ಮೌಲ್ಯದ 12 ಕದ್ದ ಬ್ಯಾಟರಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ರಾಯಬಾಗ ತಾಲೂಕಿನ ಹಾರೂಗೇರಿ ಪೊಲೀಸರು ಹಾರೂಗೇರಿ ಕ್ರಾಸನಲ್ಲಿ ಮಹಾರಾಷ್ಟ್ರದ ಟಾಟಾ ಎಸ್ ವಾಹನವನ್ನು (ಸಂಖ್ಯೆ ಎಂಎಚ್13ಎಎನ್ 5310) ಅಡ್ಡಗಟ್ಟಿ ಆ ವಾಹನದಲ್ಲಿ 12 ಬ್ಯಾಟರಿಗಳು ಪತ್ತೆಯಾಗಿವೆ. ವಾಹನದಲ್ಲಿದ್ದ ಇಬ್ಬರನ್ನು ವಿಚಾರಣೆಗೆ ಒಳಪಡಿಸಿದಾಗ ಅವರು ಇತರ ಮೂವರೊಂದಿಗೆ ಸೇರಿ ಬ್ಯಾಟರಿ ಕದ್ದಿರುವುದಾಗಿ ಒಪ್ಪಿಕೊಂಡಿದ್ದಾರೆ. ಹಾಗಾಗಿ ಅವರನ್ನು ಬಂಧಿಸಿ …

Read More »

ಮುಂಬೈ ಛಾಬ್ರಾ ಹೌಸ್ ಮತ್ತೊಮ್ಮೆ ಉಗ್ರರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ

ಮುಂಬೈ(ಮಹಾರಾಷ್ಟ್ರ): ಮುಂಬೈನ ಕೊಲಾಬಾದಲ್ಲಿರುವ ಛಾಬ್ರಾ ಹೌಸ್ ಮತ್ತೊಮ್ಮೆ ಉಗ್ರರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ. ಏಕೆಂದರೆ ತನಿಖಾಧಿಕಾರಿಗಳು ಪುಣೆಯಲ್ಲಿ ಬಂಧಿತ ಉಗ್ರರೊಂದಿಗೆ ಕೊಲಾಬಾದಲ್ಲಿರುವ ತಾಜ್ ಹೋಟೆಲ್ ಬಳಿಯ ಛಾಬ್ರಾ ಹೌಸ್ ಫೋಟೋಗಳನ್ನು ಪತ್ತೆ ಮಾಡಿದ್ದಾರೆ. ಬಂಧಿತ ಉಗ್ರರು ಮುಂಬೈಗೆ ಬಂದು ಛಾಬ್ರಾ ಹೌಸ್ ಮೇಲೆ ದಾಳಿ ನಡೆಸಬಹುದು ಎಂದು ಶಂಕಿಸಲಾಗಿದೆ. ಹೀಗಾಗಿ ಮುಂಬೈ ಪೊಲೀಸರು ಕೊಲಾಬಾದಲ್ಲಿರುವ ಛಾಬ್ರಾ ಹೌಸ್ ಸುತ್ತಮುತ್ತಲಿನ ಪ್ರದೇಶದಲ್ಲಿ ಭಯೋತ್ಪಾದನಾ ನಿಗ್ರಹ ದಳದ ನೆರವಿನೊಂದಿಗೆ ಭದ್ರತೆ ಹೆಚ್ಚಿಸಿದ್ದಾರೆ. ಛಾಬ್ರಾ …

Read More »