Breaking News

ರಾಜ್ಯ

ಕನ್ನಡದ ಬಿಗ್​ ಬಾಸ್​ ಸೀಸನ್​ 10ಕ್ಕೆ ‘ಚಾರ್ಲಿ’ ಶ್ವಾನ ಸೇರಿದಂತೆ 17 ಸ್ಪರ್ಧಿಗಳು ಎಂಟ್ರಿಯಾಗಲಿದ್ದಾರೆ.

ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ‘ಬಿಗ್​ ಬಾಸ್’​ ಕೂಡ ಒಂದು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ನಡೆಸಿಕೊಡುವ ಈ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಈವರೆಗೆ ಒಂಬತ್ತು ಸೀಸನ್​ಗಳನ್ನು ಯಶಸ್ವಿಯಾಗಿ ಮುಗಿಸಿರುವ ಬಿಗ್​ ಬಾಸ್​ ಇದೀಗ ಮತ್ತೆ ಬಂದಿದೆ. ಬಿಗ್​ ಬಾಸ್​ 10ನೇ ಸೀಸನ್​ ಇನ್ನೇನು ಕೆಲವೇ ದಿನಗಳಲ್ಲಿ ಪ್ರಾರಂಭಗೊಳ್ಳಲಿದೆ. ಈ ಹಿಂದಿನ ಎಲ್ಲಾ ಸೀಸನ್​ಗಿಂತ ಈ ಬಾರಿಯ ಬಿಗ್​ ಬಾಸ್​ ಸಂಥಿಂಗ್​ ಸ್ಪೆಷಲ್​ ಆಗಿರಲಿದೆ. ಸದ್ಯ ಪ್ರೋಮೋದಿಂದಲೇ ಕುತೂಹಲ …

Read More »

ಪಂಚಾಯಿತಿಗೊಂದು ಮದ್ಯದಂಗಡಿ: ತಮ್ಮದೇ ಸರ್ಕಾರದ ಈ ನಡೆಗೆ ಸಿಡಿದೆದ್ದ ಕಾಂಗ್ರೆಸ್ ಶಾಸಕ

ಕಲಬುರಗಿ, (ಅಕ್ಟೋಬರ್ 03): ಗ್ಯಾರಂಟಿ ಯೋಜನೆಗಳ ಆರ್ಥಿಕ ಭಾರದಿಂದ ನಲುಗುತ್ತಿರುವ ಸಿದ್ದರಾಮಯ್ಯನವರ (Siddaramaiah)  ಕಾಂಗ್ರೆಸ್ ಸರ್ಕಾರ, ಅಬಕಾರಿ ಇಲಾಖೆ ಮೂಲದಿಂದ ಹೆಚ್ಚಿನ ಆದಾಯ ಗಳಿಸಲು ರಾಜ್ಯಾದ್ಯಂತ ಗ್ರಾಮ ಪಂಚಾಯಿತಿ, ಮಾಲ್‌ ಹಾಗೂ ಸೂಪರ್‌ ಮಾರ್ಕೆಟ್‌ಗಳಲ್ಲಿ ಚಿಲ್ಲರೆ ಮದ್ಯ ಮಾರಾಟ ಮಳಿಗೆಗಳಿಗೆ(liquor shops)  ಪರವಾನಗಿ ನೀಡಲು ಚಿಂತನೆ ನಡೆಸಿದೆ. ಆದ್ರೆ, ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖುದ್ದು ಮಹಿಳೆಯರೇ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಇದೀಗ ಖುದ್ದು ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್, …

Read More »

ನಾಂದೇಡ್ ಸರ್ಕಾರಿ ಆಸ್ಪತ್ರೆಯಲ್ಲಿ ಮತ್ತೆ 7 ರೋಗಿಗಳು ಸಾವು

ನಾಂದೇಡ್ (ಮಹಾರಾಷ್ಟ್ರ): ಅಕ್ಟೋಬರ್ 1 ರಂದು ನಾಂದೇಡ್‌ನಲ್ಲಿರುವ ಡಾ. ಶಂಕರರಾವ್ ಚವಾಣ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 24 ಗಂಟೆಗಳಲ್ಲಿ 24 ರೋಗಿಗಳು ಸಾವನ್ನಪ್ಪಿದ್ದರು. ಮತ್ತೆ ಅಕ್ಟೋಬರ್ 2 ರಂದು ಇದೇ ಆಸ್ಪತ್ರೆಯಲ್ಲಿ 7 ರೋಗಿಗಳು ಮೃತಪಟ್ಟಿದ್ದಾರೆ. ಪ್ರಸ್ತುತ ಸಾವಿನ ಸಂಖ್ಯೆ 31ಕ್ಕೆ ಏರಿಕೆಯಾಗಿದೆ. ನಾಂದೇಡ್‌ನ ಡಾ. ಶಂಕರರಾವ್ ಚವಾಣ್ ಸರ್ಕಾರಿ ಆಸ್ಪತ್ರೆಯಲ್ಲಿ ಎರಡು ದಿನದಲ್ಲಿ ರೋಗಿಗಳ ಹೆಚ್ಚಳವಾಗಿದೆ. ಆಸ್ಪತ್ರೆಯಲ್ಲಿ 76 ರೋಗಿಗಳ ಸ್ಥಿತಿ ಗಂಭೀರ: ಸರ್ಕಾರಿ ಅಧಿಕಾರಿಯೊಬ್ಬರ ಪ್ರಕಾರ, ಪ್ರಸ್ತುತ …

Read More »

ಈರುಳ್ಳಿ ವ್ಯಾಪಾರಿಗಳ 13 ದಿನಗಳ ಮುಷ್ಕರ ಅಂತ್ಯ: ಹರಾಜು ಪುನಾರಂಭ

ನಾಸಿಕ್ (ಮಹಾರಾಷ್ಟ್ರ) : ಕಳೆದ 13 ದಿನಗಳಿಂದ ನಡೆಸುತ್ತಿದ್ದ ಮುಷ್ಕರವನ್ನು ಇಲ್ಲಿನ ಈರುಳ್ಳಿ ಸಗಟು ವ್ಯಾಪಾರಿಗಳು ಸೋಮವಾರ ತಡರಾತ್ರಿ ಕೊನೆಗೂ ಹಿಂಪಡೆದಿದ್ದಾರೆ. ನವರಾತ್ರಿ ಮತ್ತು ದೀಪಾವಳಿ ಹಬ್ಬಗಳು ಹತ್ತಿರವಿರುವ ಈ ಸಮಯದಲ್ಲಿ ಮುಷ್ಕರ ಕೊನೆಗೊಂಡಿದ್ದು ಸಮಾಧಾನದ ವಿಷಯವಾಗಿದೆ. ಮಂಗಳವಾರ ಬೆಳಗ್ಗೆ ಈರುಳ್ಳಿ ತುಂಬಿದ ಲಾರಿಗಳು ಇಲ್ಲಿನ ಎಪಿಎಂಸಿಗೆ ಆಗಮಿಸಿದ್ದು, ಹರಾಜು ಪುನಾರಂಭಗೊಂಡಿದೆ. ಮುಷ್ಕರ ಹಿಂತೆಗೆದುಕೊಂಡ ಸುದ್ದಿ ಹರಡುತ್ತಿದ್ದಂತೆಯೇ ಏಷ್ಯಾದ ಅತಿದೊಡ್ಡ ಈರುಳ್ಳಿ ಮಾರುಕಟ್ಟೆ ಯಾರ್ಡ್ ಲಾಸಲ್ಗಾಂವ್ ಸೇರಿದಂತೆ ಇತರ ಮಂಡಿಗಳಿಗೆ ಈರುಳ್ಳಿ …

Read More »

ನಮ್ಮ ಅಣ್ಣನ ಸಿನಿಮಾ ನೋಡಿ ಅಂತ ಎಲ್ಲ ತಾಯಂದಿರಲ್ಲಿ ಮನವಿ ಮಾಡ್ತೀನಿ’: ಧ್ರುವ ಸರ್ಜಾ

ನಟ ಚಿರಂಜೀವಿ ಸರ್ಜಾ (Chiranjeevi Sarja) ಅವರು ಅಭಿನಯಿಸಿದ ಕೊನೇ ಸಿನಿಮಾ ‘ರಾಜಮಾರ್ತಾಂಡ’ ಈಗ ಬಿಡುಗಡೆ ಆಗುತ್ತಿದೆ. ಅಕ್ಟೋಬರ್​ 6ರಂದು ಈ ಚಿತ್ರ ತೆರೆಕಾಣಲಿದೆ. ಆ ಪ್ರಯುಕ್ತ ಸುದ್ದಿಗೋಷ್ಠಿ ನಡೆಸಲಾಗಿದ್ದು, ಅದರಲ್ಲಿ ಧ್ರುವ ಸರ್ಜಾ ಭಾಗಿ ಆಗಿದ್ದಾರೆ. ಚಿರು ನಿಧನದ ಬಳಿಕ ಈ ಸಿನಿಮಾಗೆ ಧ್ರುವ ಅವರೇ ಡಬ್ಬಿಂಗ್​ ಮಾಡಿಕೊಟ್ಟರು. ಈಗ ‘ರಾಜಮಾರ್ತಾಂಡ’ (Rajamarthanda) ಸಿನಿಮಾದ ಕೆಲಸಗಳು ಪೂರ್ಣಗೊಂಡಿವೆ. ಪ್ರೇಕ್ಷಕರ ಎದುರು ಬರುತ್ತಿರುವ ಈ ಸಂದರ್ಭದಲ್ಲಿ ಎಲ್ಲ ಪ್ರೇಕ್ಷಕರಿಗೂ ಧ್ರುವ ಸರ್ಜಾ ಒಂದು ಮನವಿ ಮಾಡಿಕೊಂಡಿದ್ದಾರೆ. …

Read More »

ದನ ಮೇಯಿಸುತ್ತಿದ್ದಾಗಲೇ ಹುಲಿ ದಾಳಿ, ರೈತ ಸ್ಥಳದಲ್ಲೇ ಸಾವು

ಮೈಸೂರು, ಅ.02: ಮೈಸೂರು ಜಿಲ್ಲೆಯಲ್ಲಿ ಹುಲಿ ದಾಳಿ ಮುಂದುವರಿದಿದೆ (Tiger Attack). ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಉಡವೇಪುರ ಗ್ರಾಮದ ಬಳಿ ಹುಲಿ ದಾಳಿಯಿಂದ ರೈತನೋರ್ವ ಬಲಿಯಾಗಿದ್ದಾನೆ (Death). ರೈತ ಗಣೇಶ(55) ಮೃತ ದುರ್ದೈವಿ. ದನ ಮೇಯಿಸುತ್ತಿದ್ದಾಗಲೇ ರೈತ ಗಣೇಶನ ಮೇಲೆ ಹುಲಿ ದಾಳಿ ಮಾಡಿದೆ. ದಾಳಿಯಿಂದಾಗಿ ರೈತ ಸ್ಥಳದಲ್ಲೇ ಮೃತಪಟ್ಟಿದ್ದು ರೈತನ ಮೃತದೇಹವನ್ನು ಅರ್ಧ ತಿಂದು ಹುಲಿ ಬಿಟ್ಟುಹೋಗಿದೆ. ಕೂಡಲೇ ಹುಲಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಸ್ಥಳೀಯ …

Read More »

ಪತ್ನಿ ಅಗಲಿಕೆಯಿಂದ ಮನನೊಂದು ಹೆಡ್​ಕಾನ್​ಸ್ಟೇಬಲ್ ಆತ್ಮಹತ್ಯೆ

ಶಿವಮೊಗ್ಗ: ಇಲ್ಲಿನ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಹೆಡ್​ ಕಾನ್​ಸ್ಟೇಬಲ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿನೋಬನಗರದಲ್ಲಿ ನಡೆದಿದೆ. ಜಯಪ್ಪ ಆತ್ಮಹತ್ಯೆಗೆ ಶರಣಾದ ಹೆಡ್​ ಕಾನ್​ಸ್ಟೇಬಲ್​.   ಜಯಪ್ಪ ಅವರು ಮೂಲತಃ ಹಾವೇರಿ ಜಿಲ್ಲೆಯ ಸಾತನೂರು ಗ್ರಾಮದವರಾಗಿದ್ದಾರೆ. ಐದು ದಿನಗಳ ಹಿಂದಷ್ಟೇ ಜಯಪ್ಪ ಅವರ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಪತ್ನಿಯ ಅಗಲಿಕೆಯಿಂದ ತೀವ್ರವಾಗಿ ಮನನೊಂದಿದ್ದ ಜಯಪ್ಪ ಇಂದು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇವರಿಗೆ ವಯಸ್ಸಾದ ತಾಯಿ ಮತ್ತು ಇಬ್ಬರು ಮಕ್ಕಳಿದ್ದಾರೆ. …

Read More »

ಮದ್ಯ ಕುಡಿಯಲು ಹಣ ನೀಡದ್ದಕ್ಕೆ ತಾಯಿಯನ್ನೇ ಕೊಂದ ಪಾಪಿ ಪುತ್ರ..

ಚಿಕ್ಕಮಗಳೂರು: ಕ್ಷುಲ್ಲಕ ಕಾರಣಕ್ಕೆ ತಾಯಿಯನ್ನೇ ಮಗ ಹತ್ಯೆ ಮಾಡಿರುವ ಘಟನೆಜಿಲ್ಲೆಯ ಕಡೂರು ತಾಲೂಕಿನ ಕೆ ಬಿದರೆ ಗ್ರಾಮದಲ್ಲಿ ನಡೆದಿದೆ. ಕಮಲಮ್ಮ (50) ಕೊಲೆಗೀಡಾದ ತಾಯಿ, ಸಂತೋಷ್ (30) ಕೊಲೆ ಆರೋಪಿ.   ಹತ್ಯೆ ಮಾಡಿದ ಬಳಿಕ ಗ್ರಾಮದ ತೆಂಗಿನ ನಾರಿನ ಮಿಲ್​ನಲ್ಲಿ ಕೆಲಸ ಮಾಡುತ್ತಿದ್ದ ತಂದೆ ಕಲ್ಲೇಶಪ್ಪ ಬಳಿಗೆ ಬಂದು ಆತನೇ ವಿಷಯ ತಿಳಿಸಿದ್ದಾನೆ. ಕುಡಿತದ ಚಟಕ್ಕೆ ದಾಸನಾಗಿದ್ದ ಸಂತೋಷ್ ಹಲವು ದಿನಗಳಿಂದ ಮದ್ಯ ಸೇವಿಸಿ ತಾಯಿಯೊಂದಿಗೆ ಜಗಳವಾಡುತ್ತಿದ್ದ. ಇಂದು ಸಹ …

Read More »

ಡೋಲಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮಗುವಿಗೆ ಜನ್ಮ ನೀಡಿದ ಮಹಿಳೆ; ಮುಖ್ಯಮಂತ್ರಿ ದತ್ತು ಪಡೆದ ಗ್ರಾಮದಲ್ಲಿ ಘಟನೆ!

ಥಾಣೆ (ಮಹಾರಾಷ್ಟ್ರ) : ಬುಡಕಟ್ಟು ಮಹಿಳೆಯೊಬ್ಬರನ್ನು ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಹೆರಿಗೆ ಆಗಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ. ಶಾಹಾಪುರ್ ತಾಲೂಕಿನ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ಕರೆತರಲಾಗುತ್ತಿತ್ತು. ಆದರೆ, ಮಹಿಳೆ ಮಾರ್ಗಮಧ್ಯೆ ಮಗುವಿಗೆ ಜನ್ಮ ನೀಡಿದ್ದಾರೆ. ಗ್ರಾಮಕ್ಕೆ ರಸ್ತೆ ಸೌಲಭ್ಯವಿಲ್ಲ: ಕಳೆದ ಬಾನುವಾರ ಪಾಟಿಕಚಾ ಪಾಡ ಗ್ರಾಮದ ಪ್ರಣಾಲಿ ಗುರುನಾಥ್​ ವಾಜೆ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಗ್ರಾಮದಲ್ಲಿ ಸರಿಯಾದ …

Read More »

3,000 ಮೀ ಸ್ಟೀಪಲ್‌ಚೇಸ್‌ನಲ್ಲಿ ಭಾರತಕ್ಕೆ ಬೆಳ್ಳಿ, ಕಂಚು; ಆರ್ಚರಿ, ಸ್ಕ್ವಾಷ್‌​ನಲ್ಲಿ ಕ್ವಾರ್ಟರ್​ ಫೈನಲ್​ಗೆ ಲಗ್ಗೆ

ಹ್ಯಾಂಗ್‌ಝೌ (ಚೀನಾ): ಶೂಟಿಂಗ್​ ವಿಭಾಗದ ನಂತರ ಭಾರತ ಅಥ್ಲೆಟಿಕ್ಸ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಏಷ್ಯಾಡ್​ನ 9ನೇ ದಿನವಾದ ಇಂದು (ಸೋಮವಾರ) 3,000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಬೆಳ್ಳಿ ಹಾಗು ಕಂಚಿನ ಪದಕ ಗೌರವ ಸಿಕ್ಕಿದೆ. ಪಾರುಲ್ ಚೌಧರಿ 9:27.63 ಸೆಕೆಂಡ್​ಗಳ ಸಮಯದಲ್ಲಿ ಗುರಿ ಮುಟ್ಟಿ ಎರಡನೇ ಸ್ಥಾನ ಪಡೆದರು. ಚೊಚ್ಚಲ ಏಷ್ಯನ್​ ಗೇಮ್ಸ್​ ಆಡುತ್ತಿರುವ ಪ್ರೀತಿ 9:43.32 ಸೆಕೆಂಡ್‌ನಿಂದ ಮೂರನೇ ಸ್ಥಾನ ಅಲಂಕರಿಸಿದರು. ಇದು ಅವರ ವೈಯಕ್ತಿಕ ಅತ್ಯುತ್ತಮ ಸಮಯವಾಗಿದೆ. ಹಾಲಿ ವಿಶ್ವ …

Read More »