Breaking News

ರಾಜ್ಯ

ರಾಜ್ಯಾದ್ಯಂತ ವಿವಿಧ ಅಧಿಕಾರಿಗಳಿಗೆ ಲೋಕಾ ಶಾಕ್​: ಬೆಂಗಳೂರು ಸೇರಿ 90 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ತೀವ್ರ ಶೋಧ ಕಾರ್ಯ..

ಬೆಂಗಳೂರು: ವಿವಿಧ ಇಲಾಖೆಗಳ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಇಂದು (ಸೋಮವಾರ) ಬೆಳ್ಳಂ ಬೆಳಗ್ಗೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ಬರೋಬ್ಬರಿ 90 ಕಡೆಗಳಲ್ಲಿ ವಿವಿಧ ಸರ್ಕಾರಿ ಅಧಿಕಾರಿಗಳ ನಿವಾಸ, ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಂಗಳೂರು, ಚಿತ್ರದುರ್ಗ, ಕಲಬುರಗಿ, ರಾಯಚೂರು, ಹಾಸನ, ಬೀದರ್, ದೇವದುರ್ಗ ಸೇರಿದಂತೆ ಹಲವು ಜಿಲ್ಲೆಗಳ ಅಧಿಕಾರಿಗಳ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. …

Read More »

2025 ರ ಮಹಾಕುಂಭಕ್ಕೂ ಮೊದಲು ತ್ರಿವೇಣಿ ಪುಷ್ಪದಲ್ಲಿ 108 ಅಡಿ ಎತ್ತರದ ಹನುಮನ ವಿಗ್ರಹ ಪ್ರತಿಷ್ಠಾಪನೆ

ಪ್ರಯಾಗರಾಜ್ (ಉತ್ತರ ಪ್ರದೇಶ): ಪ್ರಯಾಗ್​ರಾಜ್​ನಲ್ಲಿ ‘ನಾಗರ್ ಕೊತ್ವಾಲ್’ ಎಂದು ಆರಾಧಿಸಲ್ಪಡುವ ಹನುಮಂತನ 108 ಅಡಿ ಎತ್ತರದ ವಿಗ್ರಹವು ಯಮುನಾ ತೀರದಲ್ಲಿರುವ ತ್ರಿವೇಣಿ ಪುಷ್ಪ ಪ್ರದೇಶದಲ್ಲಿ 2025ರ ಮಹಾಕುಂಭಕ್ಕೂ ಮುನ್ನ ನೆಲೆಸಲಿದೆ.   ಈ ತ್ರಿವೇಣಿ ಪುಷ್ಪ ಪ್ರದೇಶವನ್ನು ಹರಿದ್ವಾರದ ಪರಮಾರ್ಥ ನಿಕೇತನಕ್ಕೆ 30 ವರ್ಷಗಳ ಗುತ್ತಿಗೆಗೆ ಈಗಾಗಲೇ ಹಸ್ತಾಂತರಿಸಲಾಗಿದೆ. ಈ ಗುತ್ತಿಗೆದಾರರು ಈ ಪ್ರತಿಮೆಯ ನಿರ್ಮಾಣ ಮತ್ತು ವಿಗ್ರಹ ಕಟ್ಟಡಗಳ ರಚನೆಗಳು ಮತ್ತು ಬೇಕಾಗಿರುವ ಸೌಕರ್ಯಗಳ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ತ್ರಿವೇಣಿ ಪುಷ್ಪ …

Read More »

ನವೆಂಬರ್​ 3ರಂದು ‘ಇಂಡಿಯನ್​ 2’ ಸಿನಿಮಾದ ಗ್ಲಿಂಪ್ಸ್​ ಬಿಡುಗಡೆಯಾಗಲಿದೆ ಎಂದು ಚಿತ್ರ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ತಿಳಿಸಿದೆ.

  ‘ಇಂಡಿಯನ್​ 2’ ಎಸ್​ ಶಂಕರ್​ ನಿರ್ದೇಶನದ ಮುಂಬರುವ ತಮಿಳು ಸಿನಿಮಾ ಸಿನಿ ಪ್ರೇಮಿಗಳಲ್ಲಿ ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದೆ. ಕಮಲ್​ ಹಾಸನ್​ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಈ ಚಿತ್ರದ ಅಪ್​ಡೇಟ್​ ಹೊರಬಿದ್ದಿದೆ. ನವೆಂಬರ್​ 3ರಂದು ಸಿನಿಮಾದ ಒಂದು ನೋಟವನ್ನು (ಗ್ಲಿಂಪ್ಸ್​) ಚಿತ್ರತಂಡ ಹಂಚಿಕೊಳ್ಳಲಿದೆ ಎಂದು ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ತಿಳಿಸಿದೆ. ಈ ವಿಚಾರವನ್ನು ಹಂಚಿಕೊಳ್ಳಲು ‘ಇಂಡಿಯನ್ 2’ನ ಹೊಸ ಲುಕ್​ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಲೈಕಾ ಪ್ರೊಡಕ್ಷನ್ಸ್ ಮತ್ತು …

Read More »

‘ಶೀ ಈಸ್​ ಇನ್​ ಲವ್​’ ಹಾಡಿಗೆ ಯಶ ಶಿವಕುಮಾರ್ ಜೊತೆ ಪ್ರಜ್ವಲ್ ದೇವರಾಜ್ ರೋಮ್ಯಾನ್ಸ್

ಪ್ರಜ್ವಲ್​ ದೇವರಾಜ್​ ನಟನೆಯ ‘ಗಣ’ ಸಿನಿಮಾದ ‘ಶೀ ಈಸ್​ ಇನ್​ ಲವ್​’ ಎಂಬ ರೊಮ್ಯಾಂಟಿಕ್​ ಹಾಡು ಬಿಡುಗಡೆಯಾಗಿದೆ. ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ನಟ ಪ್ರಜ್ವಲ್ ದೇವರಾಜ್, ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಾ ಬ್ಯುಸಿಯಾಗಿದ್ದಾರೆ. ಅದರಲ್ಲಿ ಬಹುನಿರೀಕ್ಷಿತ ‘ಗಣ’ ಸಿನಿಮಾ ಕೂಡ ಒಂದು. ಇದೀಗ ಈ ಚಿತ್ರದ ರೊಮ್ಯಾಂಟಿಕ್​ ಹಾಡೊಂದು ರಿಲೀಸ್​ ಆಗಿದೆ. ‘ಶೀ ಈಸ್​ ಇನ್​ ಲವ್​’ ಎಂಬ ಸುಮಧುರ ಹಾಡಿಗೆ ಜನರು …

Read More »

‘ಟಗರು ಪಲ್ಯ’ ಬ್ಲಾಕ್​ಬಸ್ಟರ್​; ಹ್ಯಾಟ್ರಿಕ್​ ಗೆಲುವಿನಲ್ಲಿ ಡಾಲಿ ಧನಂಜಯ್​

‘ಟಗರು ಪಲ್ಯ’ ಬ್ಲಾಕ್​ಬಸ್ಟರ್​ ಹಿಟ್ ಆಗುವುದರೊಂದಿಗೆ​ ಡಾಲಿ ಧನಂಜಯ್​ ಹ್ಯಾಟ್ರಿಕ್​ ಗೆಲುವಿನ ಸಂತಸದಲ್ಲಿದ್ದಾರೆ. ಕನ್ನಡ ಚಿತ್ರರಂಗದ ನಟರಾಕ್ಷಸ ಡಾಲಿ ಧನಂಜಯ್​ ನಟನೆಯ ಜೊತೆಗೆ ಚಿತ್ರ ನಿರ್ಮಾಣದಲ್ಲೂ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುವ ಜೊತೆ ತಮ್ಮದೇ ಡಾಲಿ ಪಿಕ್ಚರ್ಸ್​ ಸಂಸ್ಥೆಯಡಿ ಚಿತ್ರ ನಿರ್ಮಿಸುತ್ತಿದ್ದಾರೆ. ಈಗಾಗಲೇ ಎರಡು ಸಿನಿಮಾಗಳಿಗೆ ನಿರ್ಮಾಪಕರಾಗಿ ಸಕ್ಸಸ್​ ಕಂಡಿದ್ದ ಧನಂಜಯ್​ ಇದೀಗ ಮತ್ತೊಂದು ಚಿತ್ರವು ಬ್ಲಾಕ್​ಬಸ್ಟರ್​ ಹಿಟ್​ ಆಗಿದೆ. ಈ ಮೂಲಕ ನಿರ್ಮಾಣದಲ್ಲಿ ದಾಖಲೆ ಬರೆದಿರುವ ಡಾಲಿ …

Read More »

ಶಾಸಕರನ್ನು ಖರೀದಿ ಮಾಡುವುದೇ ಬಿಜೆಪಿಯವರ ಡಿಎನ್‌ಎ ಆಗಿದೆ:ಕೃಷ್ಣ ಬೈರೇಗೌಡ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್​​​ ಶಾಸಕರನ್ನು ಬಿಜೆಪಿಯು ಹಣದ ಆಮಿಷವೊಡ್ಡಿ ಸೆಳೆಯುವ ಪ್ರಯತ್ನ ನಡೆಸುತ್ತಿದೆ ಎಂಬ ಆರೋಪ ಬೆನ್ನಲ್ಲೇ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಪ್ರತಿಕ್ರಿಯಿಸಿದ್ದಾರೆ. ಪ್ರಜಾಪ್ರಭುತ್ವ ದಮನ ಮಾಡುವುದೇ ಬಿಜೆಪಿ ಸಿದ್ಧಾಂತವಾಗಿದೆ. ವಾಮಮಾರ್ಗದ ಮೂಲಕ ಅಧಿಕಾರ ಚುಕ್ಕಾಣಿ ಹಿಡಿಯುವುದು ಹೊಸದೇನಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಸೆಳೆಯುತ್ತಿದೆ ಎಂಬ ಆರೋಪ ಕುರಿತು ಮಾತನಾಡಿದ ಸಚಿವರು, ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಶಾಸಕರನ್ನು ಖರೀದಿ ಮಾಡುತ್ತಿಲ್ಲ. 2008 ಹಾಗೂ 2019 …

Read More »

ಬೆಂಗಳೂರಿನಲ್ಲಿ ಕಮಾಂಡ್ ಸೆಂಟರ್ ನಿರ್ಮಾಣ: ಗೃಹ ಸಚಿವ ಜಿ ಪರಮೇಶ್ವರ್

ಮಂಗಳೂರು: ಬೆಂಗಳೂರಿನಲ್ಲಿ ಕಮಾಂಡ್ ಸೆಂಟರ್​ನ್ನು ನಿರ್ಮಿಸಲಾಗುತ್ತಿದೆ. ಈ ಮೂಲಕ ರಾಜ್ಯದ ಎಲ್ಲಾ ಠಾಣೆಗಳಲ್ಲಿ ನಡೆಯುವ ಕೆಲಸವನ್ನು ಕಮಾಂಡ್ ಸೆಂಟರ್ ಮೂಲಕ ವೀಕ್ಷಿಸುವ ಕಾರ್ಯ ಆಗಲಿದೆ ಎಂದು ಗೃಹಸಚಿವ ಡಾ‌. ಜಿ ಪರಮೇಶ್ವರ್ ಹೇಳಿದರು. ನಗರದ ವಾಮಂಜೂರಿನಲ್ಲಿ‌ ಮಂಗಳೂರು ಗ್ರಾಮಾಂತರ ಠಾಣೆಯನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, “ಪೊಲೀಸ್ ಠಾಣೆಗೆ ಬಂದು ಹೋದವರು ಯಾರು, ಪ್ರತೀ ದೂರುಗಳು ಎಫ್‌ಐಆರ್ ಆಗಿದೆಯೇ?, ಇಲ್ಲವೋ?, ದೂರು ನೀಡಲು ಬಂದವರಿಗೆ ಸರಿಯಾದ ಸ್ಪಂದನೆ ದೊರಕಿದೆಯೇ ಎಂಬಿತ್ಯಾದಿ ವಿಚಾರಗಳನ್ನು …

Read More »

ಛತ್ತೀಸ್​ಗಢದಲ್ಲಿ ರೈತರೊಂದಿಗೆ ಭತ್ತ ಕಟಾವು ಮಾಡಿದ ರಾಹುಲ್​ ಗಾಂಧಿ!

ರಾಯ್‌ಪುರ (ಛತ್ತೀಸ್‌ಗಢ): ವಿಧಾನಸಭೆ, ಲೋಕಸಭೆ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ಜನರೊಂದಿಗೆ ಬೆರೆಯುವುದನ್ನು ಮುಂದುವರಿಸಿದ್ದಾರೆ. ಚುನಾವಣಾ ರಾಜ್ಯವಾದ ಛತ್ತೀಸ್​ಗಢದಲ್ಲಿ ಪ್ರಚಾರ ನಡೆಸುತ್ತಿರುವ ಸಂಸದ, ಅಲ್ಲಿನ ರೈತರೊಂದಿಗೆ ಬೆಳೆ ಕಟಾವು ಮಾಡುವ ಮೂಲಕ ಗಮನ ಸೆಳೆದರು. ರಾಜಧಾನಿ ರಾಯ್​ಪುರದ ಸಮೀಪದಲ್ಲಿರುವ ಕಥಿಯಾ ಗ್ರಾಮಕ್ಕೆ ಭೇಟಿ ನೀಡಿದ ಅವರು, ಭತ್ತದ ಗದ್ದೆಗಳಲ್ಲಿ ಬೆಳೆ ಕೊಯ್ಲು ಮಾಡುತ್ತಿದ್ದ ರೈತರ ಜೊತೆ ಸೇರಿಕೊಂಡ ಬೆಳೆ ಕಟಾವು ಮಾಡಿದರು. ಬಳಿಕ ಅವರ ಜೊತೆ …

Read More »

S.B.I. ಬ್ರಾಂಡ್ ಅಂಬಾಸಿಡರ್​ ಆದ ಕ್ರಿಕೆಟರ್ ಎಂಎಸ್ ಧೋನಿ

ಮುಂಬೈ : ಭಾರತದ ಅತಿದೊಡ್ಡ ವಾಣಿಜ್ಯ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಕ್ರಿಕೆಟ್ ಲೆಜೆಂಡ್​ ಮಹೇಂದ್ರ ಸಿಂಗ್ ಧೋನಿ ಅವರನ್ನು ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಂಡಿರುವುದಾಗಿ ಘೋಷಿಸಿದೆ.   ಈ ಕುರಿತು ಮಾಹಿತಿ ನೀಡಿದ ಎಸ್​ಬಿಐ ಅಧ್ಯಕ್ಷ ದಿನೇಶ್ ಖರಾ, “ಎಂಎಸ್ ಧೋನಿ ಅವರನ್ನು ಎಸ್​ಬಿಐನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಂಡಿರುವುದನ್ನು ತಿಳಿಸಲು ನಮಗೆ ಸಂತೋಷವಾಗುತ್ತಿದೆ. ಎಸ್​ಬಿಐನ ಸಂತೃಪ್ತ ಗ್ರಾಹಕರಾಗಿ ಬ್ಯಾಂಕ್​ನೊಂದಿಗೆ ಧೋನಿ ಒಡನಾಟ ಹೊಂದಿದ್ದು, …

Read More »

ನ.9 ರಿಂದ ಮೈಸೂರಿನಲ್ಲಿ ಮುಖ್ಯಮಂತ್ರಿ ನಿವಾಸದ‌ ಮುಂದೆ ರೈತರಿಂದ ಧರಣಿ ಸತ್ಯಾಗ್ರಹ: ಕುರುಬೂರು ಶಾಂತಕುಮಾರ್​

ಮೈಸೂರು : ಇನ್ನು ಹತ್ತು ದಿನದಲ್ಲಿ ರೈತರಿಗೆ ಕಬ್ಬಿನ ಹೆಚ್ಚುವರಿ ದರ ಕೊಡಿಸದಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ‌ ಅವರ ಮೈಸೂರಿನ‌ ಮನೆಯ ಎದುರು ನ.9 ರಿಂದ ಬೃಹತ್ ಧರಣಿ ಸತ್ಯಾಗ್ರಹ ನಡೆಸಲು ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರ ಸಂಘ ತೀರ್ಮಾನಿಸಿದೆ.   ನಗರದ ಪಿಡಿಡಬ್ಲ್ಯೂ ಅತಿಥಿ ಗೃಹದಲ್ಲಿ ನಡೆದ ಸಭೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್​ ಮಾತನಾಡಿ, ರಾಜ್ಯ ಸರ್ಕಾರ ಹಿಂದಿನ ಸಾಲಿನಲ್ಲಿ ನಿಗದಿ ಮಾಡಿದ್ದ ಕಬ್ಬಿನ ಹೆಚ್ಚುವರಿ …

Read More »