Breaking News

ರಾಜಕೀಯ

ಸಿಎಂ-ಡಿಸಿಎಂಗೆ ಹೈಕಮಾಂಡ್ ಬುಲಾವ್,ಸತೀಶ್ ಜಾರಕಿಹೊಳಿ ಕೂಡ ದೆಹಲಿ ಪ್ರಯಾಣ

ಸಿಎಂ-ಡಿಸಿಎಂಗೆ ಹೈಕಮಾಂಡ್ ಬುಲಾವ್ ಬೆನ್ನಲ್ಲೆ… ಆರ್ಸಿಬಿ ಸಂಭ್ರಮಾಚರಣೆ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಮತ್ತು 11 ಜನರ ಸಾವಿನ ಬಗ್ಗೆ ಕೇಳಲು ಹೈಕಮಾಂಡಗೆ ಹಕ್ಕಿದೆ… ಸಚಿವ ಸತೀಶ್ ಜಾರಕಿಹೊಳಿ ಕೂಡ ದೆಹಲಿ ಪ್ರಯಾಣ…ಹಲವು ಅನುಮಾನಗಳಿಗೆ ಎಡೆ… ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೆಹಲಿ ತಲುಪಿದ್ದಾರೆ ಮತ್ತು ನಿನ್ನೆ ಬೆಂಗಳೂರಲ್ಲಿದ್ದ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಸಹ ದೆಹಲಿಗೆ ತೆರಳಿದ್ದು, ಚರ್ಚಾಗ್ರಾಸವಾಗಿದೆ. ದೆಹಲಿಯಲ್ಲಿ ಮಾಧ್ಯಮಗಾರರೊಂದಿಗೆ ಮಾತನಾಡಿದ ಸಚಿವ …

Read More »

ರೇಷನ್ ಕಾರ್ಡ್​​ನಿಂದ ಏನೆಲ್ಲಾ ಪ್ರಯೋಜನ?:

ಬೆಂಗಳೂರು: ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲ ಕಲ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಅದರಲ್ಲಿ ಪ್ರಮುಖವಾಗಿ ಪಡಿತರ ಚೀಟಿಯೂ ಒಂದು. ರೇಷನ್ ಕಾರ್ಡ್ ಇದ್ದರೆ ಆಯಾ ಕಾರ್ಡ್​​ಗಳನ್ನು ಅನುಸರಿಸಿ ಬಡ ಮತ್ತು ಮಧ್ಯಮ ವರ್ಗದವರಿಗೆ ಕಡಿಮೆ ದರದಲ್ಲಿ ಅಕ್ಕಿ, ಬೇಳೆ, ಗೋಧಿ, ಸಕ್ಕರೆ ಸೇರಿ ಹಲವು ಆಹಾರ ಪದಾರ್ಥಗಳು ದೊರೆಯುತ್ತದೆ. ಬಿಪಿಎಲ್ ಕಾರ್ಡ್​ದಾರರ ಕುಟುಂಬಕ್ಕೆ ಅಕ್ಕಿ, ಗೋಧಿ, ಸಕ್ಕರೆ ಮತ್ತಿತರ ಆಹಾರ ಪದಾರ್ಥಿಗಳು …

Read More »

ಕಾಲ್ತುಳಿತ ಘಟನೆ ಸರ್ಕಾರಕ್ಕೆ ಕೆಟ್ಟ ಹೆಸರು ತಂದಿದೆ,: ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು: ಸರ್ಕಾರಕ್ಕೆ ಕಾಲ್ತುಳಿತ ಘಟನೆಯಿಂದ ಕೆಟ್ಟ ಹೆಸರು ಬಂದಿದೆ. ಯಾರು ಮುಂದೆ ಮಾಡೋಕೆ‌ ಹೋದರೋ ಗೊತ್ತಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದರು. ಸೋಮವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಘಟನೆಯಲ್ಲಿ ಲೋಪಗಳು ಹೇಗಾಯ್ತು ಎಂಬುದು ತನಿಖೆಯಿಂದ ಹೊರ ಬರಬೇಕು. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮ್ಯಾಜಿಸ್ಟ್ರೇಟ್ ತನಿಖೆ ಆಗ್ತಿದೆ. ಕಾಲ್ತುಳಿತ ಪ್ರಕರಣ ಉದ್ದೇಶಪೂರ್ವಕವಲ್ಲ. ಸಿಐಡಿ ತನಿಖೆಯೂ ನಡೆಯುತ್ತಿದೆ. ಘಟನೆಯ ಬಗ್ಗೆ ವಿಸ್ತಾರವಾದ ವರದಿ ಕೊಡಬೇಕಲ್ಲ. ಹಿಂದಿನ ರಾತ್ರಿಯಿಂದ …

Read More »

ರಾಜ್ಯದಿಂದ ಮಹಾರಾಷ್ಟ್ರಕ್ಕೆ ಕ್ಷೀರಭಾಗ್ಯ ಹಾಲಿನಪುಡಿ & ರಾಗಿ ಮಾಲ್ಟ್ ಮಾರಾಟ ಗೋಲಮಾಲ್ ಪ್ರಕರಣ…

ಬಾಗಲಕೋಟೆ : ರಾಜ್ಯದಿಂದ ಮಹಾರಾಷ್ಟ್ರಕ್ಕೆ ಕ್ಷೀರಭಾಗ್ಯ ಹಾಲಿನಪುಡಿ & ರಾಗಿ ಮಾಲ್ಟ್ ಮಾರಾಟ ಗೋಲಮಾಲ್ ಪ್ರಕರಣ… ವಿಚಾರಣಾ ವರದಿಗೆ 2 ತಿಂಗಳ ಗಡುವು ನೀಡಿದ ಶಿಕ್ಷಣ ಇಲಾಖೆ… ರಾಜ್ಯದಿಂದ ಮಹಾರಾಷ್ಟ್ರಕ್ಕೆ ಕ್ಷೀರ ಭಾಗ್ಯ ಹಾಲಿನಪುಡಿ ಮತ್ತು ರಾಗಿ ಮಾಲ್ಟ್ ಮಾರಾಟ ಗೋಲಮಾಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಜಿಲ್ಲೆ ಶಿಕ್ಷಣ ಇಲಾಖೆ ವಿಚಾರಣಾ ವರದಿಗೆ ಎರಡು ತಿಂಗಳ ಗಡುವು ನೀಡಿದೆ ಬಾಗಲಕೋಟೆ ಜಿಲ್ಲೆಯಲ್ಲಿ ನೋಟಿಸ್ ಪಡೆದ ಶಿಕ್ಷಕ ಸಮುದಾಯದಲ್ಲಿ ಶುರುವಾಯ್ತು ಆತಂಕ …

Read More »

ಬೇಗಾನೇ ಶ್ಯಾದಿ ಮೇ ಅಬ್ದುಲ ದಿವಾನಾ” ರಾಜ್ಯ ಸರ್ಕಾರದ ಪರಿಸ್ಥಿತಿ ಇದು; ಕೇಂದ್ರ ಸಚಿವ ಜೋಶಿ

ಬೇಗಾನೇ ಶ್ಯಾದಿ ಮೇ ಅಬ್ದುಲ ದಿವಾನಾ” ರಾಜ್ಯ ಸರ್ಕಾರದ ಪರಿಸ್ಥಿತಿ ಇದು; ಕೇಂದ್ರ ಸಚಿವ ಜೋಶಿ ಬೇಗಾನೇ ಶ್ಯಾದಿ ಮೇ ಅಬ್ದುಲ ದಿವಾನಾ” ಶಹರಿ ಹೇಳುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ವಾಗ್ದಾಳಿ ಮಾಡಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಆರ್‌ಸಿಬಿ ದೇಶ ಹಾಗೂ ರಾಜ್ಯದ ಟೀಮ್ ಅಲ್ಲ, ಘಟನೆ ನಡೆದಾಗ ಮಕ್ಕಳು ಮೊಮ್ಮಕ್ಕಳು ಜೊತೆಗೆ ಸೆಲ್ಪಿ ತೆಗೆದುಕೊಳ್ಳಲು ಇವರೆಲ್ಲರೂ ಬ್ಯೂಸಿ ಆಗಿದ್ದರು. ಪೊಲೀಸ್ …

Read More »

ಬರೋಬ್ಬರಿ 5 ಲಕ್ಷ ಹನ್ನೊಂದು ಸಾವಿರ ರೂಪಾಯಿ ದಾಖಲೆ ಬೆಲೆಗೆ ಎತ್ತು ಮಾರಾಟ!!

ಬರೋಬ್ಬರಿ 5 ಲಕ್ಷ ಹನ್ನೊಂದು ಸಾವಿರ ರೂಪಾಯಿ ದಾಖಲೆ ಬೆಲೆಗೆ ಎತ್ತು ಮಾರಾಟ!! ಎತ್ತು ಮಾರಾಟದ ವಿಷಯದಲ್ಲಿ ಈಗ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಬುದ್ನಿ ಗ್ರಾಮ ರಾಜ್ಯದಾದ್ಯಂತ ಗಮನ ಸೆಳೆದಿದೆ. ಇಲ್ಲೊಂದು ಎತ್ತು ಬರೋಬ್ಬರಿ 5 ಲಕ್ಷಕ್ಕೆ ಮಾರಾಟವಾಗಿದೆ. ಇಲ್ಲಿನ ಮಹಾದೇವಪ್ಪ ಕೊಲೂರ ಎಂಬುವವರಿಗೆ ಸೇರಿದ ಒಂದು ಶಕ್ತಿಶಾಲಿ ಎತ್ತು ಬರೋಬ್ಬರಿ ₹5,11,000ಕ್ಕೆ ಮಾರಾಟವಾಗಿದೆ! ಇದು ಈವರೆಗೆ ಆ ಭಾಗದಲ್ಲಿ ದಾಖಲೆ ಬೆಲೆ ಎತ್ತಿಗೆ ಲಭಿಸಿದ ಅಪರೂಪದ ಸಂದರ್ಭವಾಗಿದೆ. …

Read More »

ಎರಡುವರೆ ವರ್ಷಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಹೆಸರು ದಾಖಲಿಸಿಕೊಂಡ ಕುಡಚಿಯ ಪುಟ್ಟ ಪೋರ ವಿಹಾನ್….

ಎರಡುವರೆ ವರ್ಷಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಹೆಸರು ದಾಖಲಿಸಿಕೊಂಡ ಕುಡಚಿಯ ಪುಟ್ಟ ಪೋರ ವಿಹಾನ್…. ಪ್ರಪಂಚದ ಬಗ್ಗೆ ಏನೊಂದೂ ಅರಿಯದ ಪುಟಾಣಿಯೊಬ್ಬ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಳ್ಳುವುದು ಸಾಮಾನ್ಯ ಸಾಧನೆಯಲ್ಲ ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ…. ರಾಯಬಾಗ ತಾಲೂಕಿನ ಕುಡಚಿ ಗ್ರಾಮೀಣ ಭಾಗದ ಟಿಕನಾಳ ತೋಟದ ನಿವಾಸಿ ಡಾ. ಅಜೀತ ಕೋಳಿಗುಡ್ಡ ಹಾಗೂ ಡಾ. ವಂದನಾ ಅಜೀತ್ ಕೋಳಿಗುಡ್ಡ …

Read More »

ರಾಜ್ಯಾದ್ಯಂತ ಮುಂದಿನ ನಾಲ್ಕು ದಿನ ಅಬ್ಬರಿಸಲಿದೆ ಮಳೆ

ರಾಜ್ಯದಲ್ಲಿ ಈಗಾಗಲೇ ಮುಂಗಾರು ಮಳೆ ಆರಂಭವಾಗಿದೆ. ಒಂದೆರೆಡು ದಿನಗಳಿಂದ ಅಲ್ಲಲ್ಲಿ ಮಳೆ ಆಗಿದ್ದು, ಇಂದಿನಿಂದ ನಾಲ್ಕು ದಿನ ಎಲ್ಲೆಡೆ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹವಾಮಾನ ಇಲಾಖೆಯ ಪ್ರಕಾರ ರಾಜ್ಯದ  ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ. ಹಾಗಾಗಿ 28 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮಂಡ್ಯ ರಾಮನಗರ, ಚಿತ್ರದುರ್ಗ, ದಾವಣಗೆರೆ, ತುಮಕೂರು, ಶಿವಮೊಗ್ಗ ಚಿಕ್ಕಮಗಳೂರು, …

Read More »

ಒಬ್ಬನನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ 6 ಬಾಲಕರೂ ನೀರುಪಾಲು

ಮದುವೆಗೆಂದು ಬಂದಿದ್ದ ಒಂದೇ ಕುಟುಂಬದ ಬಾಲಕರು, ನದಿಯಲ್ಲಿ ಈಜಲು ಹೋಗಿ ದುರಂತಕ್ಕೀಡಾಗಿದ್ದಾರೆ. ನೀರಿನಲ್ಲಿ ಮುಳುಗುತ್ತಿದ್ದ ಓರ್ವನನ್ನು ರಕ್ಷಿಸಲು ಹೋಗಿ ಆರು ಬಾಲಕರೂ ನೀರು ಪಾಲಾಗಿರುವ ಘಟನೆ ನಡೆದಿದೆ. ತೆಲಂಗಾಣದ ಭೂಪಾಲಪಲ್ಲಿಯ ಮಹದೇವಪುರ ಮಂಡಲದಲ್ಲಿ ಈ ದುರಂತ ಸಂಭವಿಸಿದೆ. ಮದುವೆ ಸಮಾರಂಭಕ್ಕೆಂದು ಬಂದಿದ್ದ ಆರು ಜನ ಅಪ್ರಾಪ್ತ ಬಾಲಕರು ತಮಗೆ ಈಜಲು ಬಾರದಿದ್ದರೂ, ಗೋದಾವರಿನದಿಯಲ್ಲಿ ಈಜಲು ಹೋಗಿದ್ದಾರೆ. ಈ ವೇಳೆ ಏಕಾಏಕಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಓರ್ವ ಬಾಲಕ ನೀರಿನ …

Read More »

ಜೂನ್ 15ಕ್ಕೆ ಪ್ರತಿಭಾ ಪುರಸ್ಕಾರ

2024-25ನೇ ಸಾಲಿನ ಎಸ್ಎಸ್ಎಲ್ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಶೇಕಡಾ 80ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರುವ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ವಿದ್ಯಾರ್ಥಿಗಳನ್ನು ಜೂನ್ 15 (ಭಾನುವಾರ) ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಅಭಿನಂದಿಸಲಿದ್ದಾರೆ. ಕುವೆಂಪುನಗರದ ಸಚಿವರ‌ ಗೃಹ ಕಚೇರಿಯಲ್ಲಿ ಭಾನುವಾರ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಅಭಿನಂದನಾ ಪತ್ರಗಳನ್ನು ಸಚಿವರು ವಿತರಿಸಲಿದ್ದಾರೆ. 600ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಸಚಿವರು ‌ಅಭಿನಂದಿಸಿ, …

Read More »