Breaking News

ರಾಜಕೀಯ

ಮಕಾಡೆ ಮಲಗಿಸಿ ದೊಡ್ಡ ಕಲ್ಲಿನಿಂದ ತಲೆಯನ್ನು ಸಂಪೂರ್ಣವಾಗಿ ಜಜ್ಜಿ ಕೊಲೆ

ಬೆಂಗಳೂರು: ರಾಗಿ ಹೊಲದಲ್ಲಿ ಮಕಾಡೆ ಮಲಗಿಸಿ ತಲೆ ಜಜ್ಜಿ ರೌಡಿ ಶೀಟರ್ ನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಅತ್ತಿಬೆಲೆ ಸಮೀಪದ ಅರೆಹಳ್ಳಿಯಲ್ಲಿ ನಡೆದಿದೆ. ಮೃತ ಯುವಕನನ್ನು ಅತ್ತಿಬೆಲೆ ಪೊಲೀಸ್ ಠಾಣೆಯ ರೌಡಿ ಶೀಟರ್ ಬಳ್ಳೂರು ಗ್ರಾಮದ ಶ್ರೀಕಾಂತ್ (30) ಎಂದು ಗುರುತಿಸಲಾಗಿದೆ. ಯಾರೋ ಈತನ ಮೇಲಿನ ಹಳೆ ದ್ವೇಷಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪಾರ್ಟಿ ಮಾಡುವ ನೆಪದಲ್ಲಿ ಕರೆದುಕೊಂಡು ಹೋಗಿ ದೊಡ್ಡ …

Read More »

ನನ್ನ ಹತ್ತಿರ ಹೆಲ್ಮೆಟ್​ ಕೊಳ್ಳೋಕೂ ದುಡ್ಡಿಲ್ಲ. ಇನ್ನು ಮಾಸ್ಕ್​ಗೆ ದಂಡ ಎಲ್ಲಿಂದ ಕಟ್ಟೋದು

ಬೆಂಗಳೂರು: ನಗರದಲ್ಲಿ ಮಾಸ್ಕ್​ ಧರಿಸದವರಿಗೆ ಬಿಬಿಎಂಪಿ ಮಾರ್ಷಲ್​ಗಳು ದಂಡ ವಿಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಹಲವೆಡೆ ಮಾರ್ಷಲ್​ಗಳು ಕಾರ್ಯಾಚರಣೆಗೆ ಮುಂದಾದರು. ಈ ನಡುವೆ ಸರ್​ ನನ್ನ ಹತ್ತಿರ ಕಾಸಿಲ್ಲ. ಹಾಗಾಗಿ ಮಾಸ್ಕ್​ ಕೊಳ್ಳೋಕೆ ಆಗ್ಲಿಲ್ಲ. ಬೇಕಿದ್ರೆ ನನ್ ಬ್ಯಾಗ್​ ಚೆಕ್​ ಮಾಡಿ ಅಂತಾ ಯುವಕನೊಬ್ಬ ಮಾರ್ಷಲ್​ಗಳಿಗೆ ಹೇಳಿದ್ದಾನೆ. ಮಾರ್ಷಲ್​ಗಳು ಪ್ರಶ್ನಿಸುತ್ತಿದ್ದಂತೆ ಜೇಬಿನಲ್ಲಿ ‌ಕೈಹಾಕಿ‌ ಮಾಸ್ಕ್​ಗಾಗಿ ಹುಡುಕಾಟ ನಡೆಸಿದನು. ಬಳಿಕ ಮಾಸ್ಕ್ ಹಾಕಿಲ್ಲ, ಫೈನ್ ಕಟ್ಟಿ ಅಂತಿದ್ದ ಹಾಗೆ ಗಳಗಳನೆ ಅಳಲು …

Read More »

ಡಿಕೆಶಿ ತಾಯಿ ಗೌರಮ್ಮ ದೆಹಲಿಗೆ ಬರುವ ಅವಶ್ಯಕತೆ ಇಲ್ಲ. ನಾವೇ ಬೆಂಗಳೂರಿಗೆ ಹೋಗಿ ವಿಚಾರಣೆ ನಡೆಸುತ್ತೇವೆ

ದೆಹಲಿ: ಡಿ.ಕೆ.ಶಿವಕುಮಾರ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಬೆಂಗಳೂರಿನಲ್ಲೇ ವಿಚಾರಣೆ ನಡೆಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ಡಿಕೆಶಿ ತಾಯಿ ಗೌರಮ್ಮ ವಾಪಸ್ ಪಡೆದಿದ್ದಾರೆ. ವೃದ್ಧರಾದ ಕಾರಣ ದೆಹಲಿಯಲ್ಲಿ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ. ಬೆಂಗಳೂರಿನಲ್ಲೇ ವಿಚಾರಣೆ ನಡೆಸುವಂತೆ ಗೌರಮ್ಮ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಇಂದು ದೆಹಲಿಯ ಹೈಕೋರ್ಟ್​ನಲ್ಲಿ ವಿಚಾರಣೆ ಇತ್ತು. ವಿಚಾರಣೆ ಆರಂಭವಾಗುತ್ತಿದ್ದಂತೆ ಗೌರಮ್ಮ ಅರ್ಜಿ ವಾಪಸ್ ಪಡೆದಿದ್ದಾರೆ. ವೃದ್ಧರಾದ ಕಾರಣ ಡಿಕೆಶಿ ತಾಯಿ ಗೌರಮ್ಮ ದೆಹಲಿಗೆ ಬರುವ …

Read More »

ವಿಷ್ಣು ಅಭಿಮಾನಿ ಮೃತದೇಹ ಸಾಗಿಸುವುದಕ್ಕೂ ಲಂಚ ಕೇಳಿದ ಆಸ್ಪತ್ರೆಯ ಸಿಬ್ಬಂದಿ’

ದಾವಣಗೆರೆ: ಕೋವಿಡ್ ಹಾಗೂ ನಾನ್ ಕೋವಿಡ್ ವ್ಯಕ್ತಿಗಳು ಆಸ್ಪತ್ರೆಯಲ್ಲಿ ಮೃತರಾದರೆ, ಅವರ ಮೃತದೇಹವನ್ನು ನೀಡಲು ಸಂಬಂಧಿಕರಿಂದ ಹಣದ ಬೇಡಿಕೆ ಇಟ್ಟಿರುವ ಘಟನೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಮೃತದೇಹವನ್ನು ನೀಡಲು ಜಿಲ್ಲಾಸ್ಪತ್ರೆಯ ಸಿಬ್ಬಂದಿಗಳು ಹಾಗೂ ಕೆಲವು ಖಾಸಗಿ ವ್ಯಕ್ತಿಗಳು, ಕುಟುಂಬಸ್ಥರಿಗೆ ಹಣದ ಬೇಡಿಕೆ ಇಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜೊತೆಗೆ ನಾನ್ ಕೋವಿಡ್ ರೋಗಿಗಳು ಆಸ್ಪತ್ರೆಯಲ್ಲಿ ಮೃತರಾದರೆ ಅಥವಾ ಮನೆಯಲ್ಲಿ ಮೃತರಾದರೆ ಅವರ ಮೃತದೇಹವನ್ನು ಮನೆಯಿಂದ ಆಸ್ಪತ್ರೆಯ ಶವಾಗಾರಕ್ಕೆ ಹಾಗೂ ಶವಗಾರದಿಂದ …

Read More »

ಸಿಬಿಐ ದಾಳಿ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸಿಬಿಐನಿಂದ ಡಿಕೆಶಿಗೆ ಸಮನ್ಸ್‌

ಬೆಂಗಳೂರು: ಡಿಕೆ ಶಿವಕುಮಾರ್ ನಿವಾಸ ಸೇರಿದಂತೆ ಹಲವೆಡೆ ಸಿಬಿಐ ದಾಳಿ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸಿಬಿಐನಿಂದ ಡಿಕೆಶಿಗೆ ಸಮನ್ಸ್‌ ಜಾರಿಯಾಗಿದೆ. ನಿನ್ನೆ ದಾಳಿ ಮುಕ್ತಾಯ ಬಳಿಕ ಅಧಿಕಾರಿಗಳು ಸಮನ್ಸ್‌ ನೀಡಿದ್ದರು. ಇನ್ನೆರಡು ದಿನಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ. ಡಿಕೆ‌ ಮನೆ ಮೇಲೆ ದಾಳಿ ನಡೆಸಿದ ವೇಳೆ 57 ಲಕ್ಷ ಹಣ ಹಾಗೂ ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಈ ಬಗ್ಗೆ ಸ್ಪಷ್ಟನೆ ಕೇಳಲು ಸಮನ್ಸ್ ನೀಡಿದ್ದಾರೆ. ಹೀಗಾಗಿ …

Read More »

57 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ಪ್ರಕಟಣೆ/ಡಿಕೆಶಿ ಬೆನ್ನಿಗೆ ನಿಲ್ಲದ ಎಚ್ ಡಿಕೆ

ಬೆಂಗಳೂರು – ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮನೆಯ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ 57 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ಪ್ರಕಟಣೆ ನೀಡಿದೆ. ತಮ್ಮ ಮನೆಯಲ್ಲಿ ಯಾವುದೇ ನಗದು ಸಿಕ್ಕಿಲ್ಲ ಎಂದು ಡಿ.ಕೆ.ಶಿವಕುಮಾರ ಪತ್ರಿಕಾಗೋಷ್ಠಿಯಲ್ಲಿ ಹೇಳುತ್ತಿರುವ ಸಂದರ್ಭದಲ್ಲೇ ಸಿಬಿಐ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದೆ. 14 ಕಡೆಗಳಲ್ಲಿ ದಾಳಿ ಮಾಡಲಾಗಿದೆ. 74.93 ಕೋಟಿ ರೂ. ಅಕ್ರಮ ಆಸ್ತಿ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದಬ ಸಿಬಿಐ ತಿಳಿಸಿದೆ.

Read More »

ಬೆಳಗ್ಗೆ 6 ಗಂಟೆಯಿಂದ ಸಿಬಿಐ ನಡೆಸುತ್ತಿದ್ದ ದಾಳಿ ಅಂತ್ಯ

ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಂಬಂಧಿಕರ ನಿವಾಸಗಳ ಮೇಲೆ ಇಂದು ಬೆಳಗ್ಗೆ 6 ಗಂಟೆಯಿಂದ ಸಿಬಿಐ ನಡೆಸುತ್ತಿದ್ದ ದಾಳಿ ಅಂತ್ಯಗೊಂಡಿದೆ. ವಾಡಿಕೆಯ ಪ್ರಕಾರ ಸಿಬಿಐ,ಇಡಿ ಮುಂತಾದ ತನಿಖಾ ಸಂಸ್ಥೆಗಳು ದಾಳಿ ನಡೆಸಿದ ಬಳಿಕ, ಆರೋಪಿಗಳನ್ನು ತತ್​​ಕ್ಷಣ ಬಂಧಿಸುವುದಿಲ್ಲ. ಅಕಸ್ಮಾತ್ ಆರೋಪಿಗಳು ವಿದೇಶಕ್ಕೆ ಪರಾರಿಯಾಗುವ ಅಥವಾ ಸಾಕ್ಷ್ಯ/ದಾಖಲೆಗಳನ್ನು ನಾಶ ಪಡಿಸುತ್ತಾರೆ ಎಂಬ ಗುಮಾನಿ ಬಂದ್ರೆ ಬಂಧನಕ್ಕೆ ಮುಂದಾಗುತ್ತದೆ. ಪ್ರಸ್ತುತ, ಡಿ.ಕೆ.ಶಿವಕುಮಾರ್ ಮನೆ ಸೇರಿ ಹಲವೆಡೆ ಸಿಬಿಐ ದಾಳಿ ನಡೆಸಿದ …

Read More »

“ನದಿ ಮೂಲ, ಋಷಿ ಮೂಲದಂತೆ ಸುದ್ದಿ ಮೂಲ ಕೆದಕಿಕೊಂಡು ಹೋಗಬೇಡಿ” : C.T..ರವಿ

ಬೆಂಗಳೂರು,  ನದಿ ಮೂಲ, ಋಷಿ ಮೂಲದಂತೆ ಸುದ್ದಿ ಮೂಲವನ್ನು ಕೆದಕಿಕೊಂಡು ಹೋಗಬಾರದು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದರು. ಡ್ರಗ್ಸ್ ಪ್ರಕರಣದಲ್ಲಿ ಪ್ರಭಾವಿ ರಾಜಕಾರಣಿಯ ಹಸ್ತಕ್ಷೇಪದ ಆರೋಪದ ವಿಚಾರಕ್ಕೆ ಸಂಬಂಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹಳಷ್ಟು ಸುದ್ದಿಗಳ ಆಯಸ್ಸು ಗಂಟೆಗಳಷ್ಟೇ ಇರುತ್ತದೆ. ಅದರ ಮೂಲ ಯಾವುದೆಂದು ಹುಡುಕಿಕೊಂಡು ಹೋಗಬಾರದು. ಸುದ್ದಿ ಮೂಲ ಯಾವುದು ಎಂಬುದಕ್ಕೆ ಹಲವು ಬಾರಿ ಉತ್ತರ ಸಿಗುವುದಿಲ್ಲ. ಸುದ್ದಿಗಳಿಗೆ ಸತ್ವ ಇಲ್ಲದಿದ್ದರೆ ಬಹಳ ಕಾಲ ಉಳಿಯುವುದಿಲ್ಲ. ಜನರ …

Read More »

ಉ.ಪ್ರದೇಶದ ಹತ್ರಾಸ್ ನಲ್ಲಿ ದಲಿತ ಬಾಲಕಿ ಮೇಲೆ ನಡೆದ ಅತ್ಯಾಚಾರ, ಕೊಲೆ‌ ಪ್ರಕರಣ ಖಂಡಿಸಿ : ಗೋಕಾಕನಲ್ಲಿ ಶಾಸಕ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಪ್ರತಿಭಟನೆ

  https://www.facebook.com/105350550949710/videos/756737581723043/?sfnsn=wiwspmo   ಗೋಕಾಕ ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ಕಾಂಗ್ರೆಸ್ ಮುಖಂಡರು ದೀಪ‌ ಹಾಗೂ ಮೊಬೈಲ್ ಟಾರ್ಚ್ ಹಿಡಿದು ಪ್ರತಿಭಟನಾ ರ್ಯಾಲಿ ನಡೆಸಿದರು. ಬಳಿಕ ಮಾಧ್ಯಮದವರೊಂದಿಗೆ ಶಾಸಕ ಸತೀಶ ಜಾರಕಿಹೊಳಿ ಅವರು ಮಾತನಾಡಿ, ಬಾಲಕಿ ಮನಿಷಾ ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣ ದೇಶದಾದ್ಯಂತ ಭಾರೀ ಆಕ್ರೋಶ ಉಂಟಾಗಿದೆ. ಆದ್ರೂ ಕೂಡ ಉತ್ತರ ಪ್ರದೇಶ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ, ಸಂತ್ರಸ್ತ ಬಾಲಕಿ ಕುಟುಂಬಸ್ಥರ ಧ್ವನಿ ಅಡಗಿಸುವ ಕೆಲಸಗಳು …

Read More »

ಸಂಪುಟ ವಿಸ್ತರಣೆ ; ಮುಖ್ಯಮಂತ್ರಿ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾವು ಬದ್ಧ – ಸಚಿವ ರಮೇಶ್ ಜಾರಕಿಹೊಳಿ.

ಶಾಸಕರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಿಕೊಳ್ಳುವ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಯವರು ಹೇಳಿದ್ದಾರೆ. ಹೊಸ ಮುಖಗಳಿಗೆ ದಾರಿ ಮಾಡಿಕೊಡುವ ಸಲುವಾಗಿ ಸಂಪುಟದ ಕೆಲವು ಮಂತ್ರಿಗಳನ್ನು, ವಿಶೇಷವಾಗಿ ಬೆಳಗಾವಿ ಜಿಲ್ಲೆಯ ಸಚಿವರನ್ನು ಕೈಬಿಡಬಹುದು ಎಂಬ ವರದಿಗಳ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬೆಳಗಾವಿ ಜಿಲ್ಲೆಯ ಯಾವುದೇ ಸಚಿವರ ಕೈಬಿಟ್ಟರೂ ಕೂಡ ಇದಕ್ಕೆ ಯಾವುದೇ ಆಕ್ಷೇಪವಿಲ್ಲ ಎಂದು ಹೇಳಿದ್ದಾರೆ. ಸಂಪುಟ ವಿಸ್ತರಣೆ …

Read More »