Breaking News

ರಾಜಕೀಯ

ಡಿಸಿಎಂ ಗೋವಿಂದ ಕಾರಜೋಳಗೆ ಮತ್ತೆ ಕೋವಿಡ್‌ ಸೋಂಕು

ಮುಧೋಳ(ಬಾಗಲಕೋಟೆ ಜಿಲ್ಲೆ): ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಮತ್ತೆ ಕೊರೊನಾ ಸೋಂಕು ತಗುಲಿದ್ದು, ಅವರು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ‘ಅವರು ಗುಣಮುಖರಾಗುತ್ತಿದ್ದು ಇನ್ನೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ. ಯಾರೂ ಆತಂಕ ಪಡುವ ಅಗತ್ಯ ಇಲ್ಲ. ಅವರಿಗೆ ನಾಲ್ಕು ದಿನ ವಿಶ್ರಾಂತಿಯ ಅಗತ್ಯವಿದೆ’ ಎಂದು ಮಣಿಪಾಲ ಆಸ್ಪತ್ರೆ ಮುಖ್ಯಸ್ಥ ಡಾ.ಸುರ್ದಶನ ಬಲ್ಲಾಳ್ ತಿಳಿಸಿದ್ದಾರೆ. ಕಳೆದ ವರ್ಷವೂ ಅವರಿಗೆ ಸೋಂಕು ತಗುಲಿತ್ತು, ಚಿಕಿತ್ಸೆ ಬಳಿಕ ಗುಣಮುಖರಾಗಿದ್ದರು.

Read More »

ಸಾರಿಗೆ ನೌಕರರ ಮೂಲ ವೇತನ ಎಷ್ಟು? ಆರಂಭಿಕ ಸಂಬಳ ಎಷ್ಟು ಸಿಗುತ್ತೆ?

ಬೆಂಗಳೂರು: ಸಾರಿಗೆ ನೌಕರರು 6ನೇ ವೇತನ ಆಯೋಗ ಶಿಫಾರಸ್ಸಿನ ಪ್ರಕಾರ ಸಂಬಳ ಜಾರಿ ಮಾಡುವಂತೆ ಪಟ್ಟು ಹಿಡಿದು ಮುಷ್ಕರ ಮಾಡುತ್ತಿದ್ದಾರೆ. ಈ ನಡುವೆ ನೌಕರರ ಸಂಬಳದ ಬಗ್ಗೆ ತಪ್ಪು ವರದಿಗಳು ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಇಂದು ಯಾರಿಗೆ ಎಷ್ಟು ಆರಂಭಿಕ ವೇತನ ನೀಡಲಾಗುತ್ತದೆ ಎಂಬ ವಿವರವನ್ನು ಬಿಡುಗಡೆ ಮಾಡಿದೆ.   ಚಾಲಕರು ಮೂಲ ವೇತನ – 12,400 ರೂ. ಮೂಲ ತುಟ್ಟಿಭತ್ಯೆ – 5,611 ರೂ. ಒಟ್ಟು ಮೂಲ …

Read More »

ಸವದತ್ತಿಯಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ ,

ಬೆಳಗಾವಿ ಲೋಕಸಭಾ ಉಪಚುನಾವಣಾ ಪ್ರಚಾರದ ಅಂಗವಾಗಿ ಸವದತ್ತಿಯಲ್ಲಿ ಇಂದು ಕಾಂಗ್ರೆಸ್ ಬೃಹತ್ ಸಮಾವೇಶ ಜರುಗಿತು. “ಜನಸಾಮಾನ್ಯರಿಗೆ ಬೆಲೆ ಏರಿಕೆಯ ಮೂಲಕ ತೊಂದರೆ ನೀಡುತ್ತಿರುವ ಕೇಂದ್ರ ಸರ್ಕಾರಕ್ಕೆ ಉಪಚುನಾವಣೆಯಲ್ಲಿ ಜನರು ತಮ್ಮ ಶಕ್ತಿ ತೋರಿಸಬೇಕು” ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕರಾದ ಎಂ.ಬಿ. ಪಾಟೀಲ, ಕೆ.ಎಚ್. ಮುನಿಯಪ್ಪ, ರುದ್ರಪ್ಪ ಲಮಾನಿ, ಕುಸುಮಾವತಿ ಶಿವಳ್ಳಿ, ಎಸ್.ಬಿ. ಘಾಟಗೆ, ಬಿ.ಆರ್. ಪಾಟೀಲ, ವಿಜಯ ಕಾಶಪ್ಪನವರ, ಆಲಕೋಡ ಹನುಮಂತಪ್ಪ, ವಿನಯ …

Read More »

ಶಾಸಕ ಯತ್ನಾಳ್‌ ಶೀಘ್ರದಲ್ಲಿ ಬಿಜೆಪಿಯಿಂದ ‘ಉಚ್ಛಾಟನೆ’ : ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್

ಬೆಳಗಾವಿ : ಬಿಜೆಪಿಯಲ್ಲಿ ಇದ್ದುಕೊಂಡು ಶಾಸಕರಾಗಿ ಆಯ್ಕೆಯಾಗಿರುವ ಶಾಸಕ ಬಸನಗೌಡ ಯತ್ನಾಳ್‌ ಅವರು ತಮ್ಮದೇ ಪಕ್ಷದ ನಾಯಕರ ವಿರುದ್ದ ಕಿಡಿಕಾರುತ್ತಿರುವುದು ಈಗ ಹೈಕಮಾಂಡ್‌ಗೆ ದೊಡ್ಡ ತಲೆನೋವಾಗಿದ್ದು, ಬಹಿರಂಗವಾಗಿಯೇ ಯತ್ನಾಳು ಅವರು ಸಿಎಂ ಸೇರಿದಂತೆ ನಾನಾ ಮಂದಿಯ ವಿರುದ್ದ ಕಿಡಿಕಾರುತ್ತಿದ್ದಾರೆ. ಈ ನಡುವೆ ಶಾಸಕ ಯತ್ನಾಳ್‌ ಶೀಘ್ರದಲ್ಲಿ ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗುವುದು ಅಂತ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ. ಅವರು ಇಂದು ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡುತ್ತ ಈ …

Read More »

ಜಾತಿ, ಅನುಕಂಪ ಲೆಕ್ಕಾಚಾರಗಳೆಲ್ಲ ಬೆಳಗಾವಿ ಲೋಕಸಭೆ ಉಪ ಚುನಾವಣೆಯಲ್ಲಿ ಕೆಲಸ ಮಾಡುವುದಿಲ್ಲ 7 ಲಕ್ಷಕ್ಕೂ ಹೆಚ್ಚಿನ ಮತಗಳು ಸಿಕ್ಕಿ ಗೆಲ್ಲುತ್ತೇನೆ.: ಸತೀಶ್ ಜಾರಕಿಹೊಳಿ

ಗೋಕಾಕ್: ಹಲವು ವಿಧಾನಸಭೆ ಚುನಾವಣೆಗಳಲ್ಲಿ ತಂತ್ರಗಾರಿಕೆ ರೂಪಿಸಿ ಕಾಂಗ್ರೆಸ್ ಗೆಲುವಿಗೆ ಕಾರಣಕರ್ತರಾದ ಸತೀಶ್ ಜಾರಕಿಹೊಳಿ ಈಗ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ನಿಂತಿದ್ದಾರೆ. ಬೆಳಗಾವಿ ಕ್ಷೇತ್ರದಲ್ಲಿ ಅವರಿಗೆ ಸಾಕಷ್ಟು ಬೆಂಬಲವಿದೆ. ಇದೇ 17ರಂದು ಅಲ್ಲಿ ಚುನಾವಣೆ ನಡೆಯುತ್ತಿದೆ, ಈ ಸಂದರ್ಭದಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಜೊತೆಗೆ ಮಾತನಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ವಿರುದ್ಧ ಗೆದ್ದು 7 ಲಕ್ಷಕ್ಕೂ ಅಧಿಕ ಮತಗಳು ಸಿಗುವ ವಿಶ್ವಾಸವಿದೆ ಎಂದು …

Read More »

CBSE 10, 12 ತರಗತಿ ಬೋರ್ಡ್‌ ಪರೀಕ್ಷೆಗಳು ರದ್ದು?

ಭಾರತದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳ ಮಧ್ಯೆ ಸಿಬಿಎಸ್‌ಇ 10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಯನ್ನ ನಡೆಸಲು ಹೊರಟಿದೆ. ದಯವಿಟ್ಟು ಈ ಪರೀಕ್ಷೆಗಳನ್ನ ರದ್ದುಗೊಳಿಸಿ ಇಲ್ಲವೇ ಆನ್‌ಲೈನ್ ಮೋಡ್‌ʼನಲ್ಲಿ ನಡೆಸುವಂತೆ ಲಕ್ಷಾಂತರ ವಿದ್ಯಾರ್ಥಿಗಳು ಕೇಂದ್ರ ಸರ್ಕಾರವನ್ನ ಕೋರಿದ್ದಾರೆ.   ‘ಕ್ಯಾನ್ಸಿಲ್ಬೋರ್ಡೆಕ್ಸ್ 2021’ ಎಂಬ ಹ್ಯಾಶ್‌ಟ್ಯಾಗ್ ಕಳೆದ ಎರಡು ದಿನಗಳಿಂದ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದೆ. ಆದ್ರೆ, ಪರೀಕ್ಷೆಯ ಸಮಯದಲ್ಲಿ ಎಲ್ಲಾ ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸಲಾಗುವುದರಿಂದ ಸಿಬಿಎಸ್‌ಇ 10, 12 …

Read More »

ಸರ್ಕಾರ ನಡೆಸುವುದು ನಮಗೆ ಗೊತ್ತಿದೆ: ಮಾಧ್ಯಮದವರ ಪ್ರಶ್ನೆಗೆ ಗರಂ ಆದ ಸಿಎಂ

ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಖಾಸಗಿ ವಾಹನ ಕಾರ್ಯಾಚರಣೆ ನಡೆಸುತ್ತಿದ್ದು, ಸಾಕಷ್ಟು ಸರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಅಸುರಕ್ಷಿತ ಪ್ರಯಾಣದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಗರಂ ಆದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರ ನಡೆಸುವುದು ನಮಗೆ ಗೊತ್ತಿದೆ. ನೀವು ಅದರ ಬಗ್ಗೆ ತಲೆ ಕೆಡಿಸಕೊಳ್ಳುವುದು ಬೇಡ. ಸರ್ಕಾರ ಹೇಗೆ ನಡೆಸಬೇಕು ನಮಗೆ ಗೊತ್ತಿದೆ. ಪ್ರಯಾಣಿಕರ ಜವಾಬ್ದಾರಿ …

Read More »

6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ಮುಂಜಾನೆಯಿಂದ ಮುಷ್ಕರ ಆರಂಭ

: 6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ಮುಂಜಾನೆಯಿಂದ ಮುಷ್ಕರ ಆರಂಭಸಿದ್ದಾರೆ. ರಾಜ್ಯಾದ್ಯಂತ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಪ್ರಾಯಾಣಿಕರು ವಿದ್ಯಾರ್ಥಿಗಳು, ರೋಗಿಗಳು ಬಸ್ ಗಳಿಲ್ಲದೇ ಪರದಾಡುತ್ತಿದ್ದಾರೆ. ಮುಷ್ಕರ ನಿರ್ಧಾರ ಕೈಬಿಡುವಂತೆ ಸರ್ಕಾರ ಹಲವು ಬಾರಿ ಮನವಿ ಮಾಡಿದರೂ ಬಗ್ಗದ ಸಾರಿಗೆ ನೌಕರರು ಬೇಡಿಕೆ ಈಡೇರಿಕೆಗೆ ಪಟ್ಟು ಹಿಡಿದಿದ್ದಾರೆ. ಇದರಿಂದ ಸರ್ಕಾರ ಸಾರಿಗೆ ನೌಕರರಿಗೆ ಬಿಗ್ ಶಾಕ್ ನೀಡಿದೆ. ಸಾರಿಗೆ ನೌಕರರ ಮಾರ್ಚ್ ತಿಂಗಳ ವೇತನ ತಡೆ …

Read More »

ಇಂದಿನಿಂದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರ ಆರಂಭ

ಬೆಂಗಳೂರು: ಇಂದಿನಿಂದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನೌಕರರು ಮುಷ್ಕರ ಆರಂಭಿಸುತ್ತಿದ್ದು, ಬಸ್‍ಗಳು ರಸ್ತೆಗಿಳಿಯಲ್ಲ. ಇಂದಿನಿಂದ ಅನಿರ್ದಿಷ್ಟಾವಧಿಗೆ ಬಸ್ ಮುಷ್ಕರ ನಡೆಯುತ್ತಿದ್ದು, ಮನೆಯಿಂದ ಹೊರಡುವ ಮುನ್ನ ಎಚ್ಚರವಾಗಿರಿ. ಬಸ್ ಸಿಗಲ್ಲ, ಬಸ್ ಸಿಗದೇ ಪರದಾಡಬೇಡಿ. ರಾಜ್ಯದ ಎಲ್ಲ 31 ಜಿಲ್ಲೆಗಳಲ್ಲೂ ಸರ್ಕಾರಿ ಬಸ್‍ಗಳ ಓಡಾಟ ಇಲ್ಲ. ಇಂದು ಸುಮಾರು 24,400 ಸರ್ಕಾರಿ ಬಸ್‍ಗಳು ರಸ್ತೆಗೆ ಇಳಿಯಲ್ಲ. ಡಿಸೆಂಬರ್‍ನಲ್ಲಿ 4 ದಿನ ಸಾರಿಗೆ ನೌಕರರ ಮುಷ್ಕರ ನಡೆದಿತ್ತು. ಇದೀಗ ಮತ್ತೆ ಇಂದಿನಿಂದ ಅನಿರ್ದಿಷ್ಟಾವಧಿಗೆ ಬಸ್ …

Read More »

ಮತಗಟ್ಟೆಯಲ್ಲಿ ಅಭಿಮಾನಿಯ ಫೋನ್ ಕಿತ್ತುಕೊಂಡು ಟ್ರೋಲ್ ಗೆ ಗುರಿಯಾದ ತಮಿಳು ಸ್ಟಾರ್ ಅಜಿತ್!ವಿಡಿಯೋ

ಚೆನ್ನೈ: ಮತಗಟ್ಟೆ ಬಳಿ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದ ಮಾಸ್ಕ್ ಧರಿಸದ ಅಭಿಮಾನಿಯೊಬ್ಬರ ಫೋನ್ ನ್ನು ಕಾಲಿವುಡ್ ಸೂಪರ್ ಸ್ಟಾರ್ ಅಜಿತ್ ಕಸಿದುಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಚೆನ್ನೈ ಪಕ್ಕದಲ್ಲಿರುವ ತಿರುವಣ್ ಮಿಯೂರ್ ನ ಮತಗಟ್ಟೆಯೊಂದರ ಬಳಿ ಇಂದು ಬೆಳಗ್ಗೆ ಪತ್ನಿ ಶಾಲಿನಿ ಜೊತೆಗೆ ಮತದಾನ ಮಾಡಲು ವಿಜಯ್ ಬಂದಾಗ ಈ ಘಟನೆ ನಡೆದಿದೆ. ವಿಡಿಯೋ ದೃಶ್ಯಾವಳಿಗಳು ಇದೀಗ ವೈರಲ್ ಆಗಿವೆ. ಅಜಿತ್ ಅವರ ಒಪ್ಪಿಗೆ …

Read More »