Breaking News

ರಾಜಕೀಯ

ಸ್ವತಃ ಲಾಕ್ ಡೌನ್ ಹೇರಿಕೊಂಡ ಗ್ರಾಮಸ್ಥರು

ಬೀದರ್ : ಕೊರೊನಾ ಅಟ್ಟಹಾಸಕ್ಕೆ ಗಡಿ ಜಿಲ್ಲೆ ನಲುಗಿ ಹೋಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರವು ಸಾಕಷ್ಟು ರೂಲ್ಸ್ ಜಾರಿಗೊಳಿಸುತ್ತಿದೆ. ಸದ್ಯ ಗ್ರಾಮಸ್ಥರೇ ಇಲ್ಲಿ ಸ್ವಯಂ ಲಾಕ್ ಡೌನ್ ಘೋಷಿಸಿಕೊಳ್ಳುತ್ತಿದ್ದಾರೆ. ಹೌದು! ಜಿಲ್ಲೆಯಲ್ಲಿ ಪ್ರತಿ ದಿನ 400ರ ಆಸುಪಾಸಿನಲ್ಲಿ ಕೇಸ್ ಗಳು ದಾಖಲಾಗುತ್ತಿವೆ. ಇದರಿಂದ ಭಯಗೊಂಡ ಗ್ರಾಮಸ್ಥರು ಸ್ವಯಂ ಲಾಕ್ ಡೌನ್ ಹೇರಿಕೊಳ್ಳುತ್ತಿರುವ ಘಟನೆ ಬೀದರ್ ನಲ್ಲಿ ನಡೆದಿದೆ. ಗ್ರಾಮದ ಹಿರಿಯರು, ಜನಪ್ರತಿನಿಧಿಗಳು ಸೇರಿಕೊಂಡು ಮಹಾಮಾರಿಗೆ ಕಡಿವಾಣ ಹಾಕಲು ಈ ನಿರ್ಧಾರ …

Read More »

ಲಾಕ್‍ಡೌನ್ ಮಾಡಿದ್ರೆ ಜನ ಸಾಯ್ತಾರೆ, ಸೆಕ್ಷನ್ 144 ತನ್ನಿ: ಸಿ.ಎಂ.ಇಬ್ರಾಹಿಂ

ಬೆಂಗಳೂರು: ಲಾಕ್‍ಡೌನ್ ಮಾಡಿದ್ರೆ ಜನರು ಸಾಯ್ತಾರೆ. ಅದರ ಬದಲಾಗಿ ಬೆಂಗಳೂರಿನಲ್ಲಿ ಸೆಕ್ಷನ್ 144 ಜಾರಿಗೆ ತರಬೇಕು. ಎಲ್ಲದಕ್ಕೂ ಲಾಕ್‍ಡೌನ್ ಪರಿಹಾರ ಅಲ್ಲ ಎಂದು ಕಾಂಗ್ರೆಸ್ ಎಂಎಲ್‍ಸಿ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ. ಸಿಎಂ, ಸಚಿವರು, ಬೆಂಗಳೂರಿನ ಶಾಸಕರ ಜೊತೆಗಿನ ಸಭೆ ಬಳಿಕ ಸಿಎಂ ಇಬ್ರಾಹಿಂ ಮಾಧ್ಯಮಗಳ ಜೊತೆ ಮಾತನಾಡಿದರು. ಸರ್ಕಾರ ಸಂಪೂರ್ಣವಾಗಿ ಗೊಂದಲದಲ್ಲಿದ್ದು, ಗಂಟು ಹಾಕಿ ಹೊಳೆಯಲ್ಲಿ ಬಿಟ್ಟಂತಾಗಿದೆ. ರಾಜ್ಯದಲ್ಲಿ ಬೆಡ್, ಆಕ್ಸಿಜನ್, ಇಂಜೆಕ್ಷನ್, ಲಸಿಕೆ ಮತ್ತು ಔಷಧಿಗಳ ಕೊರತೆ ಇದೆ. ಈ …

Read More »

ನಿಷ್ಠಾವಂತ ಸಿಬ್ಬಂದಿಗಳ ರಕ್ಷಣೆಗೆ ಬದ್ಧ: ಕೆಎಸ್‌ಆರ್‌ಟಿಸಿ

ಬೆಂಗಳೂರು, ಏ.19-ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗಳ ಮೇಲೆ ಹಲ್ಲೆ ಹಾಗೂ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸುವ ದುಷ್ಕರ್ಮಿಗಳು ಕಠಿಣ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ. ಕರ್ತವ್ಯಕ್ಕೆ ಹಾಜರಾಗುವ ನಮ್ಮ ನಿಷ್ಠಾವಂತ ಸಿಬ್ಬಂದಿಗಳಿಗೆ ಸೂಕ್ತ ರಕ್ಷಣೆ ನೀಡಲಾಗುವುದುಎಂದು ಕೆಎಸ್‌ಆರ್‌ಟಿಸಿ ಅಧಿಕೃತ ಪ್ರಕಟಣೆ ತಿಳಿಸಿದೆ. ಬಸ್ಸುಗಳ ಕಾರ್ಯಾಚರಣೆಯಲ್ಲಿನ ಏರಿಕೆಯಿಂದಾಗಿ ಮುಷ್ಕರ ನಿರತರು ವಿಚಲಿತರಾಗಿದ್ದಾರೆ. ನಿಷ್ಠಾವಂತ ಸಿಬ್ಬಂದಿಗಳ ಮೇಲೆ ಹಲ್ಲೇ , ಬಸ್ಸುಗಳಿಗೆ ಕಲ್ಲು ಹೊಡೆಯುವುದನ್ನು ಹೆಚ್ಚು ಮಾಡುತ್ತಿದ್ದಾರೆ ಎಂದು ಆರೋಪಿಸಿದೆ. ಈ …

Read More »

ಕೇಂದ್ರ ಸರ್ಕಾರದಿಂದ ಆರೋಗ್ಯ ಕಾರ್ಯಕರ್ತರಿಗೆ ಬಿಗ್ ಶಾಕ್ : 50 ಲಕ್ಷ ರೂ. ವಿಮೆ ಸೌಲಭ್ಯ ರದ್ದು!

ನವದೆಹಲಿ : ಕೇಂದ್ರ ಸರ್ಕಾರವು ಆರೋಗ್ಯ ಕಾರ್ಯಕರ್ತರಿಗೆ ಬಿಗ್ ಶಾಕ್ ನೀಡಿದ್ದು, ಕೊರೊನಾ ಸೋಂಕಿತರ ಆರೈಕೆ ಸಂದರ್ಭದಲ್ಲಿ ಮೃತಪಟ್ಟ ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ 50 ಲಕ್ಷ ರೂ. ವಿಮೆ ಸೌಲಭ್ಯವನ್ನು ಕೇಂದ್ರ ಸರ್ಕಾರ ಹಿಂಪಡೆದುಕೊಂಡಿದೆ. ಈ ಕುರಿತು ಎಲ್ಲಾ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣೆ ಪತ್ರ ಬರೆದಿದ್ದು, 2020 ರ ಮಾರ್ಚ್ 20 ರಂದು ಘೋಷಣೆಯಾಗಿದ್ದ ಕೊರೊನಾ ಸೋಂಕಿತರ ಆರೈಕೆ ಸಂದರ್ಭದಲ್ಲಿ ಮೃತಪಟ್ಟ ಮುಂಚೂಣಿ ಆರೋಗ್ಯ …

Read More »

ಐಸಿಯು ಬೆಡ್ ಗಾಗಿ ಆಕ್ಸಿಜನ್ ಸಿಲಿಂಡರ್ ನೊಂದಿಗೆ ಆಟೋದಲ್ಲಿ ಆಸ್ಪತ್ರೆಗೆ ಅಲೆದಾಡಿದ ಮಹಿಳೆ

ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಹೆಚ್ಚುತ್ತಿರುವ ನಡುವೆಯೇ ಸಾಮಾನ್ಯ ರೋಗಿಗಳು ಸಹ ಚಿಕಿತ್ಸೆಗಾಗಿ ಪರದಾಡುವಂತೆ ಆಗಿದೆ. ಮಹಿಳೆಯೊಬ್ಬರು ಐಸಿಯು ಬೆಡ್ ಸಿಗದ ಕಾರಣ ಆಕ್ಸಿಜನ್ ಸಿಲಿಂಡರ್‌ನೊಂದಿಗೆ ಆಟೋದಲ್ಲಿ ಐದಾರು ಗಂಟೆಗಳ ಕಾಲ ಆಸ್ಪತ್ರೆಯಿಂದ ಆಸ್ಪತ್ರೆಗೆ ತಿರುಗಾಡಿದ ಮನಕಲುವ ಘಟನೆ ರವಿವಾರ ನಡೆದಿದೆ. ಇಲ್ಲಿನ ಬಸವ ನಗರದ 55 ವರ್ಷದ ಮಹಿಳೆಯೊಬ್ಬರು ಕೆಮ್ಮು ಮತ್ತು ಉಸಿರಾಟದ ಸಮಸ್ಯೆಯಿಂದ ಬೆಳಗ್ಗೆ ಅಸ್ವಸ್ಥಗೊಂಡಿದ್ದರು. ಹೀಗಾಗಿ ಖಾಸಗಿ ಆಸ್ಪತ್ರೆಯೊಂದಕ್ಕೆ ಕುಟುಂಬದವರು ಕರೆದುಕೊಂಡು ಹೋಗಿದ್ದರು. ಆಗ ಐಸಿಯು …

Read More »

ಬೆಣ್ಣೆ ನಗರಿಗೆ ತಟ್ಟಿದ ಕೊರೊನಾ ಬಿಸಿ : ನಾಳೆ ನಡೆಯಬೇಕಿದ್ದ ದಾವಣಗೆರೆ ವಿವಿಯ ‘ಬಿ.ಎಡ್’ ಪರೀಕ್ಷೆ ಮುಂದೂಡಿಕೆ

ದಾವಣಗೆರೆ : ಬೆಣ್ಣೆ ನಗರಿ ದಾವಣಗೆರೆಗೂ ಕೊರೊನಾ ಬಿಸಿ ತಟ್ಟಿದ್ದು, ಕೊರೊನಾ ಭೀತಿ ಹಿನ್ನೆಲೆ ನಾಳೆ ನಡೆಯಬೇಕಿದ್ದ ದಾವಣಗೆರೆ ವಿವಿಯ ‘ಬಿ.ಎಡ್’ ಪರೀಕ್ಷೆ ಮುಂದೂಡಿಕೆಯಾಗಿದೆ. ಈ ಬಗ್ಗೆ ದಾವಣಗೆರೆ ವಿಶ್ವವಿದ್ಯಾಲಯ ಪರೀಕ್ಷಾಂಗ ವಿಭಾಗದ ಕುಲಸಚಿವೆ ಡಾ ಹೆಚ್ ಎಸ್ ಅನಿತಾ ಮಾಹಿತಿ ನೀಡಿದ್ದು, ಕೊರೊನಾ ಭೀತಿ ಹಾಗೂ ಸಾರಿಗೆ ಮುಷ್ಕರದ ಹಿನ್ನೆಲೆ ನಾಳೆ ನಡೆಯಬೇಕಿದ್ದ ದಾವಣಗೆರೆ ವಿವಿಯ ‘ಬಿ.ಎಡ್’ ಪರೀಕ್ಷೆ ಮುಂದೂಡಲಾಗಿದೆ. ಅಲ್ಲದೇ ಏಪ್ರಿಲ್ 20 ರಿಂದ ಆರಂಭವಾಗಲಿರುವ ಸ್ನಾತಕೋತ್ತರ …

Read More »

ವಿಮೆ ಪರಿಹಾರ ಕುರಿತಂತೆ ಹೈಕೋರ್ಟ್ ಮಹತ್ವದ ತೀರ್ಪು: ಮಾನಸಿಕ ಅನಾರೋಗ್ಯಕ್ಕೂ ಪರಿಹಾರ

ನವದೆಹಲಿ: ಮಾನಸಿಕ ಅನಾರೋಗ್ಯಕ್ಕೆ ಕೂಡ ನ್ಯಾಯಬದ್ಧವಾಗಿ ವಿಮೆ ಪರಿಹಾರ ದೊರಕಿಸಿಕೊಡಬೇಕು ಎಂದು ದೆಹಲಿ ಹೈಕೋರ್ಟ್ ಹೇಳಿದೆ. ವಿಮೆ ಕಂಪನಿಗಳು ವಿಮೆ ಪರಿಹಾರ ನೀಡುವ ಸಂದರ್ಭದಲ್ಲಿ ಸಂತ್ರಸ್ತರ ದೈಹಿಕ ಮತ್ತು ಮಾನಸಿಕ ಆರೋಗ್ಯದ ವಿಷಯದಲ್ಲಿ ತಾರತಮ್ಯ ಮಾಡುವಂತಿಲ್ಲ ಎಂದು ಹೇಳಲಾಗಿದೆ. ಮಾನಸಿಕ ಅನಾರೋಗ್ಯಕ್ಕೆ ನ್ಯಾಯಬದ್ಧವಾದ ವಿಮೆ ಪರಿಹಾರ ನೀಡಬೇಕು ಎಂದು ದೆಹಲಿ ಹೈಕೋರ್ಟ್ ತಿಳಿಸಿದೆ. ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ದೆಹಲಿ ಹೈಕೋರ್ಟ್ ನಿಂದ ವಿಮೆ ನಿಯಂತ್ರಕ ಸಂಸ್ಥೆ IRDAI ಗೆ ಈ …

Read More »

Bengaluru City ‘ನಿಮಗೆ ಕೃಜ್ಞರಾಗಿರಬೇಕು’ – ಕೆ.ಎಲ್ ರಾಹುಲ್‍ಗೆ ಹುಟ್ಟುಹಬ್ಬದ ಶುಭಕೋರಿದ ಅಥಿಯಾ ಶೆಟ್ಟಿ

ಬೆಂಗಳೂರು: ಭಾರತದ ಕ್ರಿಕೆಟ್ ಆಟಗಾರ, ಕನ್ನಡಿಗ ಕೆ.ಎಲ್ ರಾಹುಲ್ ಅವರಿಗೆ ಅವರ ಸ್ನೇಹಿತೆ ಸಿನಿಮಾ ನಟಿ ಅಥಿಯಾ ಶೆಟ್ಟಿ, ನಿಮಗೆ ಕೃತಜ್ಞರಾಗಿರಬೇಕು ಎಂದು ಬರೆದುಕೊಂಡು ಫೋಟೋ ಒಂದನ್ನು ಪೋಸ್ಟ್ ಮಾಡುವ ಮೂಲಕ ಹುಟ್ಟುಹಬ್ಬದ ಶುಭಕೋರಿದ್ದಾರೆ. ಕೆ.ಎಲ್ ರಾಹುಲ್ ಇಂದು 29ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ಅಥಿಯಾ ಶೆಟ್ಟಿ, ರಾಹುಲ್ ಜೊತೆಗಿರುವ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಖ್ಯಾತ ಬಹುಭಾಷಾ ನಟ ಸುನೀಲ್ ಶೆಟ್ಟಿಯ ಮಗಳಾಗಿರುವ ಆಥಿಯಾ ಮತ್ತು ರಾಹುಲ್ …

Read More »

ರೇಣುಕಾಚಾರ್ಯ ಸಿಎಂ ಜೊತೆ ಸಂಪರ್ಕ, ಶಾಸಕ ರೇಣುಕಾಚಾರ್ಯಗೆ ಕೊರೊನಾ ಪಾಸಿಟಿವ್

ಬೆಂಗಳೂರು: ಹೊನ್ನಾಳಿ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಕುರಿತು ಸ್ವತಃ ರೇಣುಕಾಚಾರ್ಯ ಟ್ವೀಟ್ ಮಾಡುವ ಮೂಲಕ ಖಚಿತಪಡಿಸಿದ್ದು, ನನಗೆ ಕೋವಿಡ್ ಸೋಂಕು ಪತ್ತೆಯಾಗಿದ್ದು, ಯಾವುದೇ ರೋಗ ಲಕ್ಷಣಗಳಿಲ್ಲದಿದ್ದರೂ ವೈದ್ಯರ ಸಲಹೆಯಂತೆ ಐಸೋಲೇಶನ್‍ಗೆ ಒಳಗಾಗಿದ್ದೇನೆ. ಇತ್ತೀಚೆಗೆ ನನ್ನ ಜೊತೆ ಸಂಪರ್ಕದಲ್ಲಿದ್ದ ಎಲ್ಲರೂ ಆದಷ್ಟು ಬೇಗ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ವಿನಂತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ರೇಣುಕಾಚಾರ್ಯ ಸಿಎಂ ಜೊತೆ ಸಂಪರ್ಕದಲ್ಲಿದ್ದರು. ಎರಡು ದಿನಗಳ ಹಿಂದೆ ಕೋವಿಡ್ …

Read More »

ಬೆಂಗಳೂರಿಗೆ ಪ್ರತ್ಯೇಕ ಟಫ್ ರೂಲ್ಸ್ – ಪ್ಲಾನ್ ಏನು? ರಿಲೀಫ್ ಪ್ಲಾನ್ ಏನು?

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ನಿಯಂತ್ರಣ ತಪ್ಪಿರುವುದು ಗೊತ್ತಿದ್ದರೂ ಕೂಡ ಚುನಾವಣೆ ನೆಪದಲ್ಲಿ ಇಷ್ಟು ದಿನ ನಾನಾ ನೆಪ ಹೇಳ್ತಾ, ನಾಮ್ ಕಾ ವಾಸ್ತೆಗೆ ಎಂಬಂತೆ ಕೆಲವೊಂದಿಷ್ಟು ನಿಯಮಗಳನ್ನು ಪ್ರಕಟಿಸಿದ್ದ ಸರ್ಕಾರ ಈಗ ಇದಕ್ಕೆ ತಕ್ಕ ಬೆಲೆ ತೆರುತ್ತಿರುವಂತಿದೆ. ದಿನೇ ದಿನೇ ಕೊರೊನಾ ಸಾವು ನೋವುಗಳು ಹೆಚ್ಚುತ್ತಿವೆ. ಅದ್ರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಪರಿಸ್ಥಿತಿ ಘನಘೋರವಾಗಿದೆ. ಹೀಗಾಗಿ ರಾಜ್ಯಸರ್ಕಾರ ನಿದ್ದೆಯಿಂದ ಎಚ್ಚೆತ್ತಂತೆ ತರಾತುರಿಯಲ್ಲಿ ಸಭೆ ಮೇಲೆ ಸಭೆ ಮಾಡುತ್ತಿದೆ. ಬೆಂಗಳೂರಿಗೆ ಅನ್ವಯ ಆಗುವಂತೆ …

Read More »