Breaking News

ರಾಜಕೀಯ

ವಿದ್ಯುತ್ ದರ ಏರಿಕೆ ಖಂಡಿಸಿ ಒಂಟಿ ಕಾಲಿನಲ್ಲಿ ನಿಂತು ಪ್ರತಿಭಟನೆ

ಚಾಮರಾಜನಗರ: ವಿದ್ಯುತ್ ದರವನ್ನು ಪ್ರತಿ ಯೂನಿಟ್‌ಗೆ 30 ಪೈಸೆ ಏರಿಸಿರುವುದನ್ನು ಖಂಡಿಸಿ ಕನ್ನಡಪರ ಸಂಘಟನೆ ಮುಖಂಡರು ಒಂಟಿ ಕಾಲಿನಲ್ಲಿ ನಿಂತು ನಗರದಲ್ಲಿ ಪ್ರತಿಭಟನೆ ನಡೆಸಿದರು. ಮುಖಂಡರಾದ ಚಾ.ರಂ.ಶ್ರೀನಿವಾಸಗೌಡ, ಚಾ.ಗು.ನಾಗರಾಜು, ನಿಜಧ್ವನಿ ಗೋವಿಂದರಾಜು ಅವರು ನಗರದ ಸೆಸ್ಕಾಂ ಕಚೇರಿ ಮುಂದೆ ಒಂಟಿ ಕಾಲಿನಲ್ಲಿ ನಿಂತು ವಿದ್ಯುತ್ ದರ ಹೆಚ್ಚಳ ವಿರೋಧಿದರು. ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಕೋವಿಡ್‌ನಿಂದ ಜನ ತತ್ತರಿಸಿ ತುಂಬಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಅರಿವಿದ್ದು ಇದ್ದೂ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ …

Read More »

ಹೆತ್ತ ಕಂದಮ್ಮಗಳ ಮೇಲೆ ತಾಯಿಯ ಕ್ರೂರತನ..!

ಬೆಂಗಳೂರು: ಹೆತ್ತ ಕಂದಮ್ಮಗಳ ಮೇಲೆ ಕ್ರೂರಿ ತಾಯಿಯೊಬ್ಬಳು ಭೀಕರ ಹಲ್ಲೆ ನಡೆಸಿರುವ ಘಟನೆಯೊಂದು ನಗರದಲ್ಲಿ ನಡೆದಿದೆ. ತಾಯಿ ಹಾಗು ಆಕೆಯ ಸ್ನೇಹಿತ ಸೇರಿ 6 ವರ್ಷ ಹಾಗೂ 7 ವರ್ಷದ ಮಕ್ಕಳ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದಾರೆ. ಮಕ್ಕಳನ್ನು ಹೊಡೆದು, ಕಚ್ಚಿ, ಸುಟ್ಟ ಗಾಯಗಳನ್ನು ಮಾಡಿದ್ದಾರೆ. ಆಸ್ಪತ್ರೆಯೊಂದರಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುವ ಜಯಮ್ಮ ಈ ಪಾಪಿ ತಾಯಿ. ಪ್ರಕರಣಯೊಂದರಲ್ಲಿ ಜಯಮ್ಮನ ಪತಿ ಕಿರಣ್ ಹಾಸನದ ಜೈಲ್ ಸೇರಿದ್ದರಿಂದ ತನ್ನ …

Read More »

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ನವರು ಟೀಕೆ ಮಾಡಲು ವಿಫಲರು.:ಅವರಿಗೆ ಬುದ್ದಿಯಿಲ್ಲ: ಈಶ್ವರಪ್ಪ

ಶಿವಮೊಗ್ಗ: ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ನವರು ಟೀಕೆ ಮಾಡಲು ವಿಫಲರು. ವಿರೋಧ ಪಕ್ಷದ ನಾಯಕರಾಗಿ ಸಿದ್ದರಾಮಯ್ಯನವರು ವಿಫಲರಾಗಿದ್ದಾರೆ. ಅವರಿಗೆ ಬುದ್ದಿ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಪಂಚದಲ್ಲಿ ಆಗದಿರುವಷ್ಟು ಒಳ್ಳೆಯ ಕೆಲಸವನ್ನು ಪ್ರಧಾನಿ ಮೋದಿ ಮಾಡಿದ್ದಾರೆ. ಜಗತ್ತಿನಲ್ಲಿ ಅತಿ ಹೆಚ್ಚು ಮಂದಿಗೆ ಲಸಿಕೆ ಕೊಟ್ಟಿರುವ ದೇಶ ಭಾರತ. ಕರ್ನಾಟಕದಲ್ಲೂ ಗರಿಷ್ಠ ಪ್ರಮಾಣದಲ್ಲಿ ಲಸಿಕೆ ನೀಡಲಾಗಿದೆ. ಕಾಂಗ್ರೆಸ್ ನವರು ಆರಂಭದಲ್ಲಿ ಲಸಿಕೆ ಹಾಕಿಸಿಕೊಳ್ಳಬೇಡಿ …

Read More »

ಶ್ರೀ ಲಖನ ಜಾರಕಿಹೊಳಿ ಹುಟ್ಟು ಹಬ್ಬ ಶುಭ ಕೋರಿ ಅನ್ನ ಸಂತರ್ಪಣೆ ಮಾಡಿದ ಅಭಿಮಾನಿ ಬಳಗ

ಗೋಕಾಕ: ಇಂದು ಗೋಕಾಕ ನಗರದಲ್ಲಿ ಸಂಭ್ರಮದ ದಿನ ಸಡಗರದ ದಿನ ಯಾಕಂದ್ರೆ ಇವತ್ತು ಛೋಟಾ ಸಾಹುಕಾರರ ಹುಟ್ಟು ಹಬ್ಬದ ದಿನ ಸದಾ ಸಮಾಜಮುಖಿ ಕಾರ್ಯ ಗಳಲ್ಲಿ ತೊಡಗಿಕೊಂಡ ಶ್ರೀ ಲಖನ ಜಾರಕಿಹೊಳಿ ಅವರ ಹುಟ್ಟು ಹಬ್ಬ ರಾಜ್ಯ ದೇಶ ಈ ಒಂದು ಕೋವಿದ್ ಕಾರಣ ದಿಂದಾಗಿ ತತ್ತರಿಸಿ ಹೋಗಿದೆ ಇಂತ ಒಂದು ಸಂಧರ್ಭದಲ್ಲಿ ಸಂಭ್ರ ಮಾಚರಣೆ ಬೇಡ ಎಂದು ಛೋಟಾ ಸಾಹುಕಾರರು ಅಭಿಮಾನಿ ವೃಂದಕ್ಕೆ ತಿಳಿಸಿದ್ದರು ಅದರ ಪ್ರೇರಣೆ ಯಾಗಿ …

Read More »

ಅಕ್ರಮ ಮರಳು ಅಡ್ಡೆಯ ಮೇಲೆ ದಾಳಿ ನಡೆಸಿದ ಅಧಿಕಾರಿ:ಅಧಿಕಾರಿಗಳ ಮೇಲೆ ಕಲ್ಲು ತೂರಾಟ

ಬೆಳಗಾವಿ: ಅಕ್ರಮ ಮರಳು ಅಡ್ಡೆಯ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ಮೇಲೆ 20ಕ್ಕೂ ಹೆಚ್ಚು ದಂಧೆಕೋರರು ಕಲ್ಲುತೂರಾಟ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆ ಯಮಕನಮರಡಿಯಲ್ಲಿ ನಡೆದಿದೆ. ಅಕ್ರಮವಾಗಿ ಮರಳು ದಂಧೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಗಣಿ ಮತ್ತು ಭೂ ವಿಜ್ನಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಅಧಿಕಾರಿಗಳ ಮೇಲೆಯೇ ಮುಗಿಬಿದ್ದ ದಂಧೆಕೋರರು ಕಲ್ಲುತೂರಾಟ ನಡೆಸಿ, ಇಲಾಖೆ ವಾಹನಗಳ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ. ಘಟನೆಯಲ್ಲಿ ಚಾಲಕ …

Read More »

ಸರ್ಕಸ್ ಕಲಾವಿದರಿಗೆ ದಿನಸಿ ಸಾಮಗ್ರಿ ವಿತರಿಸಿದ ಶಾಸಕ ಗಣೇಶ ಹುಕ್ಕೇರಿ

ಚಿಕ್ಕೋಡಿ: ಲಾಕ್‍ಡೌನ್ ಆಗುವ ಮೊದಲು ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದಲ್ಲಿ ಸರ್ಕಸ್ ಪ್ರದರ್ಶಿಸಲು ಸರ್ಕಸ್ ಕಲಾವಿದರು ಆಗಮಿಸಿದ್ದರು. ಲಾಕ್‍ಡೌನ್ ಹಿನ್ನೆಲೆಯಲ್ಲಿ ಪ್ರದರ್ಶನ ಇಲ್ಲದೆ ಹಣ, ಊಟವಿಲ್ಲದೆ ಕೊರಗುತ್ತಿದ್ದ ಸರ್ಕಸ್ ಕಲಾವಿದರಿಗೆ ಶಾಸಕ ಗಣೆಶ್ ಹುಕ್ಕೇರಿ ದಿನಸಿ ಸಾಮಾಗ್ರಿ ವಿತರಿಸಿದ್ದಾರೆ. ಸರ್ಕಸ್ ಕಂಪನಿಯ ಕಲಾವಿದರು ಸಂಕಷ್ಟದಲ್ಲಿ ಇರುವುದನ್ನು ಮನಗಂಡು, ಚಿಕ್ಕೋಡಿ-ಸದಲಗಾ ಕ್ಷೇತ್ರದ ಶಾಸಕ ಗಣೇಶ ಹುಕ್ಕೇರಿ ಸುಮಾರು ಆರವತ್ತಕ್ಕೂ ಹೆಚ್ಚು ಕಲಾವಿದರಿಗೆ ಒಂದು ತಿಂಗಳಿಗೆ ಸಾಕಾಗುವಷ್ಟು ರೇಶನ್ ಹಾಗೂ ಗೃಹಪಯೋಗಿ ಸಾಮಗ್ರಿಗಳನ್ನು …

Read More »

ನಮ್ಮೊಂದಿಗೆ ದೇವರಿದ್ದಾನೆ, ನಮಗೆ ಲಸಿಕೆ ಬೇಡ: ಕೊರೋನಾ ಲಸಿಕೆ ಪಡೆಯಲು ಗದಗದ ಜನರ ವಿರೋಧ

ಗದಗ: ಗಾಢ ನಂಬಿಕೆಗಳು ಕೂಡ ಕೆಲವೊಮ್ಮೆ ಜನರನ್ನು ಅಪಾಯಕ್ಕೆ ಸಿಲುಕಿಸಿಬಿಡುತ್ತವೆ. ದೇವರ ಮೇಲೆ ಗಾಢ ನಂಬಿಕೆ ಇಟ್ಟಿರುವ ಗದಗ ಜಿಲ್ಲೆಯ ದಾವಲ್ ಮಲ್ಲಿಕ್ ಗ್ರಾಮಸ್ಥರು ಕೊರೋನಾ ಲಸಿಕೆ ಪಡೆಯಲು ವಿರೋಧ ವ್ಯಕ್ತಪಡಿಸಿದ್ದಾರೆ. ಲಸಿಕೆ ಬಗ್ಗೆ ಅನುಮಾನ ಬೇಡ. ಧೈರ್ಯವಾಗಿ ಲಸಿಕೆಯನ್ನು ಪಡೆಯಬಹುದು ಎಂದು ವೈದ್ಯರು ಈ ಬಗ್ಗೆ ಸ್ಪಷ್ಟಪಡಿಸಿದ್ದರೂ ಗ್ರಾಮಸ್ಥರು ಈ ಬಗ್ಗೆ ನಂಬಿಕೆ ಇಲ್ಲದಂತೆ ವರ್ತಿಸುತ್ತಿದ್ದಾರೆ. ಗದಗ ತಾಲೂಕಿನ ಮುಳಗುಂದದ ದಾವಲ್ ಮಲ್ಲಿಕ್ ದರ್ಗಾ ಬಳಿಯ ವ್ಯಾಪಾರಿಗಳು ಲಸಿಕೆ …

Read More »

ಪೆಟ್ರೋಲ್, ಡಿಸೇಲ್ ದರ ಹೆಚ್ಚಿಸಲು ಬಿಜೆಪಿ ನಾಯಕರಿಗೆ ನಾಚಿಕೆಯಾಗಲ್ವೇ : ಸಿದ್ದು ಕಿಡಿ

ಬೆಂಗಳೂರು : ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ವಿರುದ್ಧವೇ ಪ್ರತಿಭಟನೆ ಮಾಡಿ ಅಧಿಕಾರಕ್ಕೆ ಬಂದ ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಪೆಟ್ರೋಲ್ ಡೀಸೆಲ್ ದರ 100 ರೂ. ಗಡಿ ದಾಟಿದರೂ ತುಟಿಕ್ ಪಿಟಿಕ್ ಎನ್ನುತ್ತಿಲ್ಲ ಎಂಬ ಜನ ಸಾಮಾನ್ಯರ ಆಕ್ರೊಶದ ಬೆನ್ನಿಗೆ ಈಗ ಕಾಂಗ್ರೆಸ್ ಕೂಡ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದು, ಪ್ರತಿಭಟನೆಯ ಎಚ್ಚರಿಕೆಯನ್ನು ಕೂಡ ನೀಡಿದೆ. ಈ ಬಗ್ಗೆ ಟ್ವೀಟರ್ ಖಾತೆಯ ಮೂಲಕ …

Read More »

ನಾನು ಸಹಿ ಹಾಕಿಲ್ಲ, ಯಾವುದೇ ಊಹಾ ಪೋಹಗಳಿಗೆ ಕಿವಿಗೊಡುವ ಅಗತ್ಯವಿಲ್ಲ .: –ಶಶಿಕಲಾ ಜೊಲ್ಲೆ ,

ಗದಗ: ಕೋವಿಡ್‌ 2ನೇ ಅಲೆಯ ಸೋಂಕಿನಿಂದ ಹೆತ್ತವರನ್ನು ಕಳೆದುಕೊಂಡ ಗದಗ ಜಿಲ್ಲೆಯ ಇಬ್ಬರು ಸಹಿತ ರಾಜ್ಯದಲ್ಲಿ 32 ಮಕ್ಕಳು ಅನಾಥರಾಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ಜಿಲ್ಲೆಯಲ್ಲಿ ಒಬ್ಬ ಆಶಾ ಕಾರ್ಯಕರ್ತೆ ಮರಣ ಹೊಂದಿದ್ದು, ಅವರ ಕುಟುಂಬಕ್ಕೆ 30 ಲ.ರೂ. ಪರಿಹಾರ ನೀಡಲಾಗಿದೆ. ಕೋವಿಡ್‌ ಸೋಂಕಿನಿಂದ ಹೆತ್ತವರನ್ನು ಕಳೆದುಕೊಂಡ ಮಕ್ಕಳಿಗೆ ರಾಜ್ಯ ಸರಕಾರ ದಿಂದ ಬಾಲ ಸೇವಾ ಯೋಜನೆಯನ್ನು ಜಾರಿಗೆ ತರಲಾಗಿದೆ. …

Read More »

ಬೆಳಗಾವಿ,ದಕ್ಷಿಣ ಕನ್ನಡ ಸೇರಿದಂತೆ 11 ಜಿಲ್ಲೆಗಳಲ್ಲಿ ಜೂನ್ 21ರವರೆಗೆ ಲಾಕ್‌ಡೌನ್ ವಿಸ್ತರಣೆ

  ದಕ್ಷಿಣ ಕನ್ನಡ ಸೇರಿದಂತೆ 11 ಜಿಲ್ಲೆಗಳನ್ನು ಹೊರತುಪಡಿಸಿ, ಉಳಿದ ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರವು ಜೂನ್ 14 ರ ಬೆಳಿಗ್ಗೆ 6 ರಿಂದ ಪ್ರಸ್ತುತ ಲಾಕ್‌ಡೌನ್ ಕೊನೆಗೊಳಿಸಲು ನಿರ್ಧರಿಸಿದೆ. ‌ ದಕ್ಷಿಣ ಕನ್ನಡ, ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ, ಮಂಡ್ಯ ಬೆಳಗಾವಿ ಮತ್ತು ಬೆಂಗಳೂರು ಗ್ರಾಮೀಣ ಜಿಲ್ಲೆಗಳು, 5% ಕ್ಕಿಂತ ಹೆಚ್ಚಿನ ಸಕಾರಾತ್ಮಕ ದರವನ್ನು ಹೊಂದಿರುವ ಹಿನ್ನೆಲೆಯಲ್ಲಿ, ಪ್ರಸ್ತುತ ಸಂಪೂರ್ಣ ಲಾಕ್‌ಡೌನ್ ಮತ್ತೊಂದು ವಾರ ಮುಂದುವರಿಯುತ್ತದೆ. …

Read More »