ವಿಜಯಪುರ: ಮೇಕೆದಾಟು ಯೋಜನೆಯಡಿ ನಮ್ಮ ನೀರನ್ನು ನಾವು ಬಳಸಿಕೊಳ್ಳುವುದಕ್ಕೆ ತಮಿಳುನಾಡು ಸರ್ಕಾರ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಮಾಜಿ ನೀರಾವರಿ ಸಚಿವ ಎಂ.ಬಿ.ಪಾಟೀಲ ಹೇಳಿದರು. ನಗರದಲ್ಲಿ ಮಂಗಳವಾರ ಮಾತನಾಡಿದ ಅವರು, ಈ ಯೋಜನೆಯಿಂದ ಬೆಂಗಳೂರಿಗೆ ಕುಡಿಯುವ ನೀರಿನ ಪೂರೈಕೆ ಸಹಾಯವಾಗಲಿದೆ. ಅದಕ್ಕಾಗಿ ರಾಜ್ಯ ಸರ್ಕಾರ ಸರ್ವಪಕ್ಷ ಸಭೆ ಕರೆದು ಅಭಿಪ್ರಾಯ ಪಡೆದು ನಂತರ ಕೇಂದ್ರದ ಮೇಲೆ ಒತ್ತಡ ಹಾಕಬೇಕು ಎಂದು ಆಗ್ರಹಿಸಿದರು. ನಮ್ಮ ನೀರನ್ನು ನಾವು ಬಳಕೆ ಮಾಡಿಕೊಳ್ಳುತ್ತಿದ್ದೇವೆ. ತಮಿಳುನಾಡು …
Read More »ಲಕ್ಕಿ ಸ್ಕೀಮ್ ಹೆಸರಿನಲ್ಲಿ ಹಳ್ಳಿ ಜನರಿಗೆ ಪಂಗನಾಮ ಹಾಕಿ ಆರೋಪಿಗಳು ಪರಾರಿ
ಯಾದಗಿರಿ: ಲಕ್ಕಿ ಸ್ಕೀಮ್ ಹೆಸರಿನಲ್ಲಿ ಹಳ್ಳಿ ಜನರಿಗೆ ಪಂಗನಾಮ ಹಾಕಿ ಆರೋಪಿಗಳು ಪರಾರಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಯಾದಗಿರಿಯ ಕೆಎಎಸ್ಎಸ್ ಎಂಟರ್ಪ್ರೈಸಸ್ ಹೆಸರಿನ ಗುಂಪೊಂದು ನಿಮಗೆ ಕಾರು ,ಬೈಕ್ ಸಿಗುತ್ತದೆ ಎಂದು ಹೇಳಿ ಹಳ್ಳಿ ಜನರನ್ನು ನಂಬಿಸಿ ಲಕ್ಕಿ ಸ್ಕೀಮ್ ಹೆಸರಲ್ಲಿ ಲಕ್ಷಾಂತರ ರೂಪಾಯಿ ಹಣ ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಳೆದ ಜನವರಿ ತಿಂಗಳಲ್ಲಿ ಯಾದಗಿರಿ ನಗರದಲ್ಲಿ ಕೆಎಸ್‌ಎಸ್ ಎಂಟರ್ಪ್ರೈಸಸ್ ಆರಂಭ ಮಾಡಿಲಾಗಿತ್ತು. 8 ಕಂತುಗಳಲ್ಲಿ ಪ್ರತಿ …
Read More »ಈ ಗ್ರಾಮದ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಮನೆಯಲ್ಲಿ ರಾಶಿ ರಾಶಿ ಅನ್ನಭಾಗ್ಯ ಅಕ್ಕಿ ಮೂಟೆ!
ಗದಗ: ಬಡ ಜನರಿಗೆ ಅನುಕೂಲವಾಗಲಿ ಎಂದು ಸರ್ಕಾರ ಅನ್ನಭಾಗ್ಯ ಯೋಜನೆ ಮೂಲಕ ಪಡಿತರ ಚೀಟಿಯುಳ್ಳವರಿಗೆ ನೀಡುತ್ತಿದ್ದ ಅಕ್ಕಿ ದಾರಿ ತಪ್ಪಿ ಖದೀಮರ ಪಾಲಾಗುತ್ತಿರೋದು ಬೆಳಕಿಗೆ ಬಂದಿದೆ. ಜಿಲ್ಲೆಯ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದಲ್ಲಿ ಸೈಬರ್ ಠಾಣೆಯ ಇನ್ಸ್‌ಪೆಕ್ಟರ್ ಟಿ.ಮಹಾಂತೇಶ್ ಮತ್ತು ಅವರ ತಂಡ ಕಾರ್ಯಾಚರಣೆ ನಡೆಸಿತ್ತು. ಗ್ರಾಮದ ಬಿಜೆಪಿ ಮುಖಂಡ ಮತ್ತು ಗುತ್ತಿಗೆದಾರ ಆನಂದ್ ನಾಗರಳ್ಳಿ, ಕಾಂಗ್ರೆಸ್ ಮುಖಂಡ ಮಹಬೂಬಸಾಬ್ ಮುಂಡರಗಿ ಹಾಗೂ ಷಣ್ಮುಖಪ್ಪ ಎಂಬುವವರು ಮನೆ …
Read More »1983 ವಿಶ್ವಕಪ್ ಹೀರೋ ಯಶಪಾಲ್ ಶರ್ಮಾ ನಿಧನ
ಹೊಸದಿಲ್ಲಿ: ಟೀಂ ಇಂಡಿಯಾ ಮಾಜಿ ಆಟಗಾರ, 1983 ವಿಶ್ವಕಪ್ ವಿಜೇತ ತಂಡದ ಸದಸ್ಯ ಯಶಪಾಲ್ ಶರ್ಮಾ ಇಂದು ಹೃದಯಾಘಾತದಿಂದ ನಿಧನರಾದರು. 66 ವರ್ಷದ ಯಶಪಾಲ್ ಶರ್ಮಾ ಅವರು ನೋಯ್ಡಾದಲ್ಲಿ ವಾಸವಿದ್ದರು. ಮಂಗಳವಾರ ಬೆಳಗ್ಗೆ ತೀವ್ರ ಹೃದಯಾಘಾತದಿಂದ ಮನೆಯಲ್ಲಿಯೇ ಶರ್ಮಾ ನಿಧನರಾದರು ಎಂದು ಮೂಲಗಳು ತಿಳಿಸಿದೆ. ಯಶಪಾಲ್ ಶರ್ಮಾ 1978ರಿಂದ 1983ರವರೆಗೆ ಭಾರತದ ತಂಡದ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿದ್ದರು. 37 ಟೆಸ್ಟ್ ಪಂದ್ಯಗಳನ್ನು ಆಡಿರುವ ಶರ್ಮಾ 1,606 ರನ್‌ಗಳನ್ನು ಗಳಿಸಿದ್ದಾರೆ. …
Read More »ಮಾಸ್ಕ್ ಧರಿಸದೇ ಜನರು ಗುಂಪುಗೂಡುವುದು ಕಳವಳಕಾರಿ: ಸಿಎಂಗಳ ಸಭೆಯಲ್ಲಿ ಪ್ರಧಾನಿ
ನವದೆಹಲಿ: ಎಂಟು ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ(ಜುಲೈ 13) ಕೋವಿಡ್ 19 ಪರಿಸ್ಥಿತಿ ಪುನರಾವಲೋಕನ ಮಾತುಕತೆ ನಡೆಸಿದ್ದು, ಈ ಸಂದರ್ಭದಲ್ಲಿ ಜನರು ಮುಖಕ್ಕೆ ಮಾಸ್ಕ್ ಧರಿಸದೇ ಗುಂಪುಗೂಡುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ವರದಿ ತಿಳಿಸಿದೆ. ಕೆಲವು ಜಿಲ್ಲೆಗಳಲ್ಲಿ ಕೋವಿಡ್ 19 ಸೋಂಕು ಪ್ರಕರಣ ಹೆಚ್ಚಳ ಆತಂಕಕಾರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಗಳ ವರ್ಚುವಲ್ ಸಭೆಯಲ್ಲಿ ತಿಳಿಸಿದ್ದು, ಕೋವಿಡ್ ಮತ್ತಷ್ಟು …
Read More »ಕರ್ನಾಟಕದಲ್ಲೂ ಜನಸಂಖ್ಯೆ ನಿಯಂತ್ರಣ ನೀತಿ ಜಾರಿಗೊಳಿಸಲು ಇದು ಸಕಾಲ: ಸಿ.ಟಿ.ರವಿ
ಬೆಂಗಳೂರು: ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಲು ಕರ್ನಾಟಕವು ಅಸ್ಸಾಂ ಮತ್ತು ಉತ್ತರ ಪ್ರದೇಶದ ಮಾದರಿಯಲ್ಲಿ ಹೊಸ ಜನಸಂಖ್ಯಾ ನೀತಿಯನ್ನು ತರಲು ಇದು ಸೂಕ್ತ ಸಮಯ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಉತ್ತರ ಪ್ರದೇಶದ ಜನಸಂಖ್ಯಾ ನಿಯಂತ್ರಣ ನೀತಿಯ ಬಗ್ಗೆ ಚರ್ಚೆ ಆಗುತ್ತಿರುವ ಸಮಯದಲ್ಲೇ ಸಿ.ಟಿ.ರವಿ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಸೀಮಿತ ನೈಸರ್ಗಿಕ ಸಂಪನ್ಮೂಲಗಳು ಲಭ್ಯವಿರುವುದರಿಂದ, ಜನಸಂಖ್ಯೆಯ ಸ್ಫೋಟ ಸಂಭವಿಸಿದಲ್ಲಿ ಪ್ರತಿಯೊಬ್ಬ ನಾಗರಿಕನ ಅಗತ್ಯಗಳನ್ನು ಪೂರೈಸುವುದು ಕಷ್ಟವಾಗುತ್ತದೆ. …
Read More »ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಜೊತೆಗಿನ ಫೋಟೋ ವೈರಲ್ ಬಗ್ಗೆ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದೇನು?
ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಮತ್ತು ರಾಕ್ಲೈನ್ ವೆಂಕಟೇಶ್ ಜೊತೆಗಿರುವ ಫೋಟೋ ವೈರಲ್ ವಿಚಾರಕ್ಕೆ ಸಂಬಂಧಿಸಿ ಈ ಹಿಂದೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರು ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ತಮ್ಮ ಮತ್ತು ಸುಮಲತಾ ಅಂಬರೀಷ್ ಬಗ್ಗೆ ಸಂಬಂಧ ಕಲ್ಪಿಸಲು ಕುಮಾರಸ್ವಾಮಿ ಯತ್ನಿಸಿದ್ದರು ಎಂದೂ ರಾಕ್‌ಲೈನ್ ವೆಂಕಟೇಶ್ ಗಂಭೀರ ಆರೋಪ ಮಾಡಿದ್ದರು. ಈಗ ಇದೇ ವಿಚಾರಕ್ಕೆ ಸಂಬಂಧಿಸಿ ಸುಮಲತಾ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಸಾರ್ವಜನಿಕ ಜೀವನದಲ್ಲಿ 40 ವರ್ಷದಿಂದ …
Read More »ಪ್ರಭಾವಿ ಜೆಡಿಎಸ್ನ ನಾಯಕ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬಿಜೆಪಿ, ಆರ್ಎಸ್ಎಸ್ ನಾಯಕರ ಜೊತೆ
ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಭಾವಿ ಜೆಡಿಎಸ್ನ ನಾಯಕ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನಿನ್ನೆ ಸಂಜೆ ಬಿಜೆಪಿ ನಾಯಕರ ಜೊತೆ ಕಾಣಿಸಿಕೊಂಡಿದ್ದಾರೆ.. ಕೇವಲ ಕಾಣಿಸಿಕೊಂಡಿದ್ದು ಮಾತ್ರವಲ್ಲ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಆರ್ಎಸ್ಎಸ್ ನ ಕೇಂದ್ರ ಕಚೇರಿ ಕೇಶವ ಕುಂಜಕ್ಕೆ ಭೇಟಿ ನೀಡುವ ಮೂಲಕ ತೀವ್ರ ಕುತೂಹಲ ಕೆರಳಿಸಿದ್ದಾರೆ. ಕೇವಲ ಬಿಜೆಪಿ ನಾಯಕರಲ್ಲದೆ ಆರ್ಎಸ್ಎಸ್ನ ಕೆಲ ಮುಖಂಡರು ಜೊತೆ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿರುವ ಪರಿಷತ್ ಸಭಾಪತಿಗಳ …
Read More »ಪ್ರವಾಹ, ಕೋವಿಡ್ ಮೂರನೇ ಅಲೆ ತಡೆಗೆ ಸಜ್ಜು: ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್.
ಯಾದಗಿರಿ: ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರೊಂದಿಗೆ ‘ಪ್ರಜಾವಾಣಿ’ ಸೋಮವಾರ ಹಮ್ಮಿಕೊಂಡಿದ್ದ ಫೋನ್ ಇನ್ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರಕಿತು. ಕೋವಿಡ್ ಮೂರನೇ ಅಲೆಗೆ ಸಿದ್ಧತೆ, ಸಂಭವನೀಯ ಪ್ರವಾಹ ಎದುರಿಸಲು ಕೈಗೊಂಡ ಕ್ರಮಗಳು, ಕೋವಿಡ್ ಲಸಿಕೆಯ ಮಾಹಿತಿ ಸೇರಿದಂತೆ ಜಮೀನು ಸರ್ವೆ, ಗ್ರಾಮ ಪಂಚಾಯಿತಿ ಸ್ವಚ್ಛತೆ, ಪಿಎಂ ಕಿಸಾನ್ ಸಮ್ಮಾನ್ ಸೇರಿದಂತೆ ವಿವಿಧ ಯೋಜನೆಗಳ ಬಗ್ಗೆ ಜಿಲ್ಲಾಧಿಕಾರಿಗೆ ಓದುಗರು ಪ್ರಶ್ನೆಗಳನ್ನು ಕೇಳಿದರು. ಓದುಗರ ಎಲ್ಲ ಪ್ರಶ್ನೆಗಳಿಗೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್ ಅವರು …
Read More »ಪಶುಸಂಗೋಪನೆ ಇಲಾಖೆಯಿಂದ ಅನ್ಯ ಇಲಾಖೆಗಳಿಗೆ ನಿಯೋಜನೆಗೆ ನಿರ್ಬಂಧ: ಪ್ರಭು ಚವ್ಹಾಣ
ಬೆಂಗಳೂರು: ಅನ್ಯ ಇಲಾಖೆಗಳಿಗೆ ನಿಯೋಜನೆಗೊಂಡಿರುವ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳ ಸೇವೆಯನ್ನು ಇದೇ 31 ರೊಳಗೆ ವಾಪಸ್ ಪಡೆಯಲು ನಿರ್ಧರಿಸಲಾಗಿದೆ ಎಂದು ಇಲಾಖಾ ಸಚಿವ ಪ್ರಭು ಚವ್ಹಾಣ ತಿಳಿಸಿದ್ದಾರೆ. ಇನ್ನು ಮುಂದೆ ಪಶುಸಂಗೋಪನೆ ಇಲಾಖೆಯಿಂದ ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿಯನ್ನು ಅನ್ಯ ಇಲಾಖೆಗಳಿಗೆ ನಿಯೋಜನೆ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಅನ್ಯ ಇಲಾಖೆಗಳಿಗೆ ನಿಯೋಜನೆ ಮೇಲೆ ಹೋಗಿರುವುದರಿಂದ ಸಿಬ್ಬಂದಿ ಕೊರತೆ ಉಂಟಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಬರುತ್ತಿರುವ ರೈತರ ಕರೆಗಳನ್ನು …
Read More »
Laxmi News 24×7