Breaking News

ರಾಜಕೀಯ

ಮೇರಿ ಕೋಮ್ ಎಂಬ ‘ಫೈಟಿಂಗ್ ಸ್ಪಿರಿಟ್’ಗೆ ವಿದಾಯ

ಇಂದು ನೂರಾರು ರಾಜಕೀಯ ಸುದ್ದಿಗಳ ನಡುವೆ ಇದೊಂದು ಸುದ್ದಿ ಪ್ರಾಮುಖ್ಯತೆ ಪಡೆಯಲೇ ಇಲ್ಲ! ಬಾಕ್ಸಿಂಗ್ ಲೆಜೆಂಡ್ ಮೇರಿ ಕೋಮ್ ಒಲಿಂಪಿಕ್ಸ್ ಕೂಟದ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂದು ಕೊಲಂಬಿಯಾದ ವೇಲೆಂಶಿಯ ಎಂಬ ಬಾಕ್ಸರ್ ಗೆ ಭಾರೀ ಫೈಟ್ ಕೊಟ್ಟು 3-2 ಅಂಕಗಳಿಂದ ಸೋತು ರಿಂಗ್ಸ್ ನಿಂದ ನಿರ್ಗಮಿಸುವಾಗ ಆಕೆಯ ಕಣ್ಣಂಚಿನಲ್ಲಿ ಜಿನುಗಿದ ಕಣ್ಣೀರು ಯಾವುದೇ ಮಾಧ್ಯಮಕ್ಕೆ ಕೂಡ TRP ಕಂಟೆಂಟ್ ಆಗಿಲ್ಲ. ಇನ್ನು ಮುಂದೆ ಮೇರಿ ಕೋಮ್ ಬಾಕ್ಸಿಂಗ್ …

Read More »

ಆಧಾರ್‌ ಕಾರ್ಡ್‌ ಸಿಕ್ಕಿಲ್ಲ: ಅಂಗವಿಕಲ ವೇತನವೂ ಇಲ್ಲ: ಅಂಗವಿಕಲ ಯುವತಿಯ ಅಳಲು

ಬಜಪೆ: ಎಷ್ಟು ಪ್ರಯತ್ನ ಪಟ್ಟರೂ ಆಧಾರ್‌ ಕಾರ್ಡ್‌ ಪಡೆಯಲು ಸಾಧ್ಯವಾಗದೆ ಇಲ್ಲೊಬ್ಬ ವಿಶೇಷ ಚೇತನ ಯುವತಿ ಸರಕಾರದ ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಮಂಗಳೂರು ತಾಲೂಕು ಎಕ್ಕಾರು ಗ್ರಾಮ ಪಂಚಾಯತ್‌ನ ತೆಂಕ ಎಕ್ಕಾರು ಪಲ್ಲದ ಕೋಡಿ ಮುರ ಮನೆಯ ಪದ್ಮನಾಭ ಗೌಡ – ಮೀನಾಕ್ಷಿ ದಂಪತಿಯ ಪುತ್ರಿ ಧನ್ಯಶ್ರೀ (23) ಸಂತ್ರಸ್ತ ಯುವತಿ. ಕೂಲಿ ಕಾರ್ಮಿಕ ದಂಪತಿಗೆ ನಾಲ್ವರು ಮಕ್ಕಳು. ಧನ್ಯಶ್ರೀ ಹುಟ್ಟಿನಿಂದ ಅಂಗವೈಕಲ್ಯ ಮತ್ತು ಮಧ್ಯಮ ಬುದ್ಧಿ ಮಾಂದ್ಯತೆಯಿಂದ ಬಳಲುತ್ತಿದ್ದಾರೆ. ದಿನಗೂಲಿ …

Read More »

ಮತ್ತೆ ಏರುಗತಿಯಲ್ಲಿ ಕೋವಿಡ್ ಪ್ರಕರಣಗಳು: ಸ್ವಯಂ ರಕ್ಷಣೆ ಅನಿವಾರ್ಯ

ನಮ್ಮ ನೆರೆ ರಾಜ್ಯಗಳಾದ ಕೇರಳ, ಮಹಾರಾಷ್ಟ್ರ ಸಹಿತ ದೇಶದ ಹಲವೆಡೆ ಕೊರೊನಾ ಪ್ರಕರಣಗಳು ಕಳೆದ ಕೆಲವು ದಿನಗಳಿಂದೀಚೆಗೆ ಹೆಚ್ಚುತ್ತಲೇ ಸಾಗಿದೆ. ಕೊರೊನಾ ಮೊದಲನೇ ಅಲೆ ವೇಳೆ ಸಾಂಕ್ರಾಮಿಕದ ನಿಯಂತ್ರ ಣದಲ್ಲಿ ದೇಶ ಮಾತ್ರವಲ್ಲದೆ ವಿಶ್ವ ಆರೋಗ್ಯ ಸಂಸ್ಥೆಯ ಗಮನ ಸೆಳೆದಿದ್ದ ಕೇರಳ ಎರಡನೇ ಅಲೆಯನ್ನು ನಿಭಾಯಿಸುವಲ್ಲಿ ಸಂಪೂರ್ಣವಾಗಿ ವಿಫ‌ಲ ವಾಗಿರುವುದು ತೀವ್ರ ಅಚ್ಚರಿಯುಂಟು ಮಾಡಿದೆ. ದೇಶಾದ್ಯಂತ ಕೊರೊನಾ ಎರಡನೇ ಅಲೆ ವ್ಯಾಪಿಸಲಾರಂಭಿಸಿದಾಗಿನಿಂದಲೂ ಕೇರಳದಲ್ಲಿ ಸೋಂಕಿನ ಹರಡುವಿಕೆ ತೀವ್ರಗತಿಯಲ್ಲಿತ್ತು. ಸೋಂಕಿನ ಪ್ರಸರಣಕ್ಕೆ …

Read More »

ಭ್ರಷ್ಟಾಚಾರವೇ ಸರಕಾರದ ಸಾಧನೆ: ಸಿದ್ದು

“ಆಪರೇಷನ್‌ ಕಮಲ’ ಎಂಬ ಅನೈತಿಕ ಮಾರ್ಗದಿಂದ ಅಧಿಕಾರಕ್ಕೇರಿದ ರಾಜ್ಯ ಬಿಜೆಪಿ ಸರಕಾರವು ಭ್ರಷ್ಟಾಚಾರ, ದುರಾಡಳಿತಗಳಿಂದಲೇ ಎರಡು ವರ್ಷಗಳನ್ನು ಪೂರೈಸಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಸರಕಾರಕ್ಕೆ ಎರಡು ವರ್ಷ ತುಂಬಿದ ಹಿನ್ನೆಲೆಯಲ್ಲಿ “ಜನಪೀಡಕ ಸರಕಾರ’ ಕಿರುಹೊತ್ತಿಗೆ ಬಿಡುಗಡೆ ಮಾಡಿದ ಅವರು, ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಬಿಜೆಪಿ ಸರಕಾರ ಇದ್ದರೆ ಸ್ವರ್ಗವನ್ನೇ ಸೃಷ್ಟಿಸುತ್ತೇವೆ ಎಂದು ಜನರನ್ನು ನಂಬಿಸಿ ರಾಜ್ಯವನ್ನು ಲೂಟಿ ಮಾಡಿದ್ದಾರೆ ಎಂದು ಟೀಕಿಸಿದರು. ಕೊರೊನಾ ಸಂಬಂಧಿ ಸಲಕರಣೆ …

Read More »

ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಹೊಸ ಮುಖಗಳಿಗೆ ಮನ್ನಣೆ-

ಬೆಂಗಳೂರು: ರಾಜ್ಯಸರ್ಕಾರದಲ್ಲಿ ಮುಖ್ಯಮಂತ್ರಿ ನಾಯಕತ್ವ ಬದಲಾವಣೆ ಡ್ರಾಮಾ ಕೊನೆಯಾಗುತ್ತಿದ್ದಂತೆ ವಿಧಾನ ಸೌಧದ ಪಡಸಾಲೆಯಲ್ಲಿ ಈಗ ಕೇಳಿಬರುತ್ತಿರುವ ಸುದ್ದಿಯೊಂದೇ ಬಸವರಾಜ ಬೊಮ್ಮಾಯಿಯವರ ನೂತನ ಸಂಪುಟದಲ್ಲಿ ಯಾರ್ಯಾರು ಸೇರ್ಪಡೆಯಾಗುತ್ತಾರೆ, ಯಾರ್ಯಾರಿಗೆ ಈ ಬಾರಿ ಸಚಿವ ಸ್ಥಾನ ಒಲಿಯುತ್ತದೆ ಎಂದು. ಜಾತಿ, ಪ್ರದೇಶವಾರು ಪ್ರಾತಿನಿಧ್ಯವನ್ನು ನೋಡಿಕೊಂಡು ಶಾಸಕರಿಗೆ ಹಿಂದಿನ ಬಿ ಎಸ್ ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಮಣೆ ಹಾಕಲಾಗಿದ್ದು, ಅವರಲ್ಲಿ ಹಲವರಿಗೆ ಈ ಬಾರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ಸಿಗುವುದು ಸಂಶಯವಾಗಿದೆ. …

Read More »

ಹೈಕಮಾಂಡ್​ ಭೇಟಿಗೆ ದೆಹಲಿಗೆ ತೆರಳಿದ ಸಿಎಂ ಬೊಮ್ಮಾಯಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ವರಿಷ್ಠರಿಗೆ ಸಚಿವ ಸಂಪುಟ ರಚನೆಯ ತಲೆನೋವು ಆರಂಭವಾಗಿದೆ. ಪ್ರಮುಖ ಸ್ವಾಮೀಜಿಗಳು ತಮ್ಮ ಸಮುದಾಯಗಳ ನಾಯಕರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಒತ್ತಡ ಹೇರುತ್ತಿರುವುದು ಇದಕ್ಕೆ ಕಾರಣ. ಮುಖ್ಯಮಂತ್ರಿ ಬೊಮ್ಮಾಯಿ ತತ್‌ಕ್ಷಣ ಸಚಿವ ಸಂಪುಟ ರಚಿಸುವ ಲೆಕ್ಕಾಚಾರದಲ್ಲಿ ಇದ್ದಂತೆ ಕಾಣಿಸುತ್ತಿಲ್ಲ. ಆಷಾಢ ಮುಗಿ ಯುವವರೆಗೂ ಆಕಾಂಕ್ಷಿಗಳು ಕಾಯ ಬೇಕಾಗ ಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರ ವಾರ ದಿಲ್ಲಿಗೆ ತೆರಳಲಿದ್ದು, ಪ್ರಧಾನಿ ಮೋದಿ, …

Read More »

‘ಮಂತ್ರಿಗಿರಿ’ಗಾಗಿ ಹೈಕಮಾಂಡ್​ ಮುಂದೆ ಸೋಮಶೇಖರ್ ರೆಡ್ಡಿ ಲಾಬಿ

ಬಳ್ಳಾರಿ: ಬಿ.ಎಸ್​​ ಯಡಿಯೂರಪ್ಪ ರಾಜೀನಾಮೆ ಬೆನ್ನಲ್ಲೇ ಬಸವರಾಜ್​​ ಬೊಮ್ಮಾಯಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಸದ್ಯದಲ್ಲೇ ಬಸವರಾಜ್​​ ಬೊಮ್ಮಾಯಿ ಹೈಕಮಾಂಡ್​​ ಆದೇಶದ ಮೇರೆಗೆ ಹೊಸ ಸಚಿವ ಸಂಪುಟ ರಚನೆ ಮಾಡಲಿದ್ದಾರೆ. ಹೀಗಾಗಿ ಹಲವರು ಸಚಿವ ಸ್ಥಾನಕ್ಕೆ ಭಾರೀ ಲಾಬಿ ನಡೆಸುತ್ತಿದ್ದಾರೆ. ಈ ಸಾಲಿಗೆ ಈಗ ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಸೇರ್ಪಡೆಗೊಂಡಿದ್ದಾರೆ. ಹೌದು, ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ತನಗೂ ಮಂತ್ರಿ ಸ್ಥಾನಕ್ಕೆ ನೀಡುವಂತೆ ಹೈಕಮಾಂಡ್​​ …

Read More »

ಪಂಚಮಸಾಲಿ ಶ್ರೀ ರಾಜ್ಯಾದ್ಯಂತ ಅಭಿಯಾನ, ಸತ್ಯಾಗ್ರಹದ ಎಚ್ಚರಿಕೆ

ಬೆಂಗಳೂರು: ನೂತನ ಸಿಎಂ ಆಗಿ ಬಸವರಾಜ್ ಬೊಮ್ಮಾಯಿ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆಯೇ ಲಿಂಗಾಯಿತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ವಿಚಾರವಾಗಿ ನೀಡಿದ್ದ ಭರವಸೆಗಳ ಬಗ್ಗೆ ಮತ್ತೆ ನೆನಪಿಸಿರುವ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಸರ್ಕಾರಕ್ಕೆ ಅಂತಿಮ ಗಡುವಿನ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಂಚಮಸಾಲಿ ಶ್ರೀಗಳು, 2ಎ ಮೀಸಲಾತಿಗಾಗಿ ಆಗ್ರಹಿಸಿ ಆಗಸ್ಟ್ 15ರಿಂದ ಸೆ.30ರವರೆಗೆ ರಾಜ್ಯಾದ್ಯಂತ ಅಭಿಯಾನ ನಡೆಸಲಾಗುತ್ತದೆ. ಚಾಮರಾಜನಗರ ಜಿಲ್ಲೆ ಮಲೈಮಹದೇಶ್ವರ ಬೆಟ್ಟದಿಂದ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದ್ದು, …

Read More »

ಪಾಶ್ಚಾಪುರ ಜಿಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರವಾಹದಿಂದಾದ ಹಾನಿ ಪರಿಶೀಲನೆ ಮಾಡಿದ ಪ್ರಿಯಾಂಕಾ ಜಾರಕಿಹೊಳಿ

    ಬೆಳಗಾವಿ: ಕಾಂಗ್ರೆಸ್ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಅವರು ಯಮಕನಮರಡಿ ಮತಕ್ಷೇತ್ರದ ಪಾಶ್ಚಾಪುರ ಜಿಲ್ಲಾ ಪಂಚಾಯತ ವ್ಯಾಪ್ತಿಯ ಪಾಶ್ಚಾಪುರ, ಮಾವನೂರ, ಪರಕನಟ್ಟಿ, ಗುಮಚಿನಮರಡಿ, ಕಣವಿನಹಟ್ಟಿ ಗ್ರಾಮಗಳಿಗೆ ಇಂದು ಭೇಟಿ ನೀಡಿ, ಮಳೆ ಹಾಗೂ ಪ್ರವಾಹದಿಂದಾದ ಹಾನಿಯನ್ನು ಪರಿಶೀಲಿಸಿದರು. ಪ್ರಿಯಾಂಕಾ ಅವರು ಹಾನಿಗೀಡಾಗಿರುವ ಮನೆಗಳನ್ನು ಪರಿಶೀಲಿಸಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಬೆಳೆ ಹಾನಿಯನ್ನು ಪರಿಶೀಲಿಸಿ ರೈತರಿಗೆ ಧೈರ್ಯ ತುಂಬಿದರು. ಹದಗೆಟ್ಟಿರುವ ರಸ್ತೆ ಹಾಗೂ ಸೇತುವೆಗಳನ್ನು ವೀಕ್ಷಿಸಿದರು.   ಹಾನಿಯ …

Read More »

ಕಡೋಲಿ, ಕಾಕತಿ ಜಿಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರವಾಹ ಹಾನಿ ಪರಿಶೀಲಿಸಿದ ರಾಹುಲ್ ಜಾರಕಿಹೊಳಿ

    ಬೆಳಗಾವಿ: ತಾಲೂಕಿನ ಯಮಕನಮರಡಿ ಮತಕ್ಷೇತ್ರದ ಕಡೋಲಿ ಜಿಲ್ಲಾ ಪಂಚಾಯತ ವ್ಯಾಪ್ತಿಯ ಜಾಪರವಾಡಿ, ಕಡೋಲಿ, ದೇವಗಿರಿ ಹಾಗೂ ಕಾಕತಿ ಜಿಲ್ಲಾ ಪಂಚಾಯತ ವ್ಯಾಪ್ತಿಯ ಕಾಕತಿ, ಹೊನಗಾ, ಜಮನಾಳ, ಕೆಂಚನಟ್ಟಿ, ಬೈಲೂರ, ಮಳವಳ್ಳಿ, ಹೊಸವಂಟಮುರಿ ಗ್ರಾಮಗಳಿಗೆ ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಇಂದು ಭೇಟಿ ನೀಡಿ ಪ್ರವಾಹದಿಂದಾದ ಹಾನಿ ಪರಿಶೀಲನೆ ಮಾಡಿದರು. ಈ ಗ್ರಾಮಗಳಲ್ಲಿ ಪ್ರವಾಹ ಹಾಗೂ ಮಳೆಯಿಂದಾಗಿ ಮನೆ, ಬೆಳೆ, ರಸ್ತೆ ಹಾಗೂ ಸೇತುವೆಗಳಿಗೆ ಹಾನಿಯಾಗಿದ್ದು, ಇವುಗಳನ್ನು …

Read More »