Breaking News

ರಾಜಕೀಯ

ಬಿಎಸ್​ವೈ ಬ್ಲೂಪ್ರಿಂಟ್​ಗೆ ವಿರೋಧಿ ಬಣ ತತ್ತರ; ವಿರೋಧಿಗಳಿಗೆ ರಾಜಾಹುಲಿ ಕೊಟ್ಟ ಏಟು ಹೇಗಿದೆ?

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ನೂತನವಾಗಿ ರಾಜ್ಯ ಸಚಿವ ಸಂಪುಟ ರಚನೆ ಹಾಗೂ ಹೊಸ ಕ್ಯಾಬಿನೆಟ್ ಗಮನಿಸಿದರೆ ಪ್ರಮುಖವಾಗಿ ಒಂದು ವಿಚಾರ ಎದ್ದು ಕಾಣುತ್ತದೆ. ಅದೇನೆಂದರೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರು ಅಡಿರುವ ಗೇಮ್​ನಿಂದ ಬಿಎಸ್​ವೈ ವಿರೋಧಿ ಬಣ ಸದ್ಯಕ್ಕೆ ಪುಲ್ ಸೈಡ್ ಲೈನ್ ಆಗಿದೆ. ರಾಜಾಹುಲಿಯ ಬ್ಲೂಪ್ರಿಂಟ್​ಗೆ ಕಕ್ಕಾಬಿಕ್ಕಿಯಾಗಿ ಅಡ್ರೆಸ್ ಕಳೆದುಕೊಂಡು ಆಫೋಸಿಟ್ ಗ್ಯಾಂಗ್​ನವರು ಈಗ ಎಲ್ಲಿ ಇದ್ದಾರೆ ಅನ್ನೋದೇ ಗೊತ್ತಾಗ್ತಾ ಇಲ್ಲ. ರಾಜ್ಯ ಬಿಜೆಪಿಯ …

Read More »

ನೂತನ ಸಚಿವರಿಗೆ ಖಾತೆ ಹಂಚಿಕೆ ಬಗ್ಗೆ ಸಿಎಂ ಮಾಹಿತಿ, ಪ್ರಮುಖ ಖಾತೆಗೆ ಹೆಚ್ಚಿದ ಪೈಪೋಟಿ

ಬೆಂಗಳೂರು: ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಸುಳಿವು ನೀಡಿದ್ದಾರೆ. ಶುಕ್ರವಾರವೇ ನೂತನ ಸಚಿವರಿಗೆ ಬಹುತೇಕ ಖಾತೆ ಹಂಚಿಕೆ ಆಗಲಿದೆ. ಪ್ರಮುಖ ಖಾತೆಗಾಗಿ ಒತ್ತಡವಿದ್ದು, ಹೆಚ್ಚುವರಿ ಹೊಣೆಗಾರಿಕೆ ಮೇಲೆಯೂ ನೂತನ ಸಚಿವರು ಕಣ್ಣಿಟ್ಟಿದ್ದಾರೆ. ಇದರಿಂದಾಗಿ ಖಾತೆ ಹಂಚಿಕೆ ವಿಳಂಬವಾಗುತ್ತಿದೆ ಎಂದು ಹೇಳಲಾಗಿದೆ. ನೂತನ ಸಚಿವರಿಗೆ ಜಿಲ್ಲಾ ಉಸ್ತುವಾರಿ ನೀಡಿ, ಕೊಠಡಿಗಳನ್ನು ಕೂಡ ಹಂಚಿಕೆ ಮಾಡಲಾಗಿದೆ. ಬಿಎಸ್ವೈ ಸಂಪುಟದಲ್ಲಿದ್ದ ಸಚಿವರೇ ಬಹುತೇಕ ಮುಂದುವರೆದಿದ್ದಾರೆ. ಈ ಮೊದಲು ನಿರ್ವಹಿಸುತ್ತಿದ್ದ …

Read More »

ಅತಿಥಿ ಉಪನ್ಯಾಸಕರಿಗೆ ಸರ್ಕಾರದಿಂದ ಗುಡ್ ನ್ಯೂಸ್

ಬೆಂಗಳೂರು: ಕಾಲೇಜು ಶಿಕ್ಷಣ ಇಲಾಖೆಯಿಂದ ಅತಿಥಿ ಉಪನ್ಯಾಸಕರಿಗೆ ಗೌರವಧನ ಬಿಡುಗಡೆಮಾಡಲಾಗಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದವರಿಗೆ ಗೌರವಧನವಾಗಿ 25.07 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. 2, 4 ಮತ್ತು 6 ನೇ ಸೆಮಿಸ್ಟರ್ ಪಾಠ ಮಾಡಲು ನೇಮಕ ಮಾಡಿಕೊಳ್ಳಲಾಗಿದ್ದ ಅತಿಥಿ ಉಪನ್ಯಾಸಕರ ಗೌರವಧನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಲಾಗಿದ್ದು, ಅಂತೆಯೇ ಕಾಲೇಜು ಶಿಕ್ಷಣ ಇಲಾಖೆ ಪ್ರಸ್ತಾವನೆ ಸ್ವೀಕರಿಸಿ 25.07 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. …

Read More »

ಶಿವಸೇನ ಪುಂಡರಿಗೆ ಖಡಕ ಎಚ್ಚರಿಕೆ ನೀಡಿದ ಕರ್ನಾಟಕ ಪೊಲೀಸ್

ಬೆಳಗಾವಿ : ಗಡಿ ಭಾಗ ಬೆಳಗಾವಿಯಲ್ಲಿ ಒಂದಿಲ್ಲೊಂದು ಖ್ಯಾತೆ ತೆಗೆಯುತ್ತಲೆ ಬಂದಿರುವ ಶಿವಸೇನೆ ಪುಂಡರು ಗಡಿಯಲ್ಲಿ ಮತ್ತೆ ಪುಂಡಾಟೀಕೆ ಮುಂದುವರೆಸಿದ್ದಾರೆ. ರಾಜ್ಯಕ್ಕೆ ಕೋವಿಡ್ ಮೂರನೆ ಅಲೆಯ ಭೀತಿ ಇರುವ ಹಿನ್ನೆಲೆಯಲ್ಲಿ ಬೆಳಗಾವಿ ಗಡಿಯಲ್ಲಿ ಮಹಾರಾಷ್ಟ್ರದಿಂದ ಬರುವ ವಾಹನಗಳ ತಪಾಸಣೆಯನ್ನು ರಾಜ್ಯದ ಪೊಲೀಸರಿಂದ ಮಾಡಲಾಗುತ್ತಿದೆ.‌ಹಾಗಾಗಿ ವಾಹನ ತಪಾಸಣೆ ನಿಲ್ಲಿಸುವಂತೆ ಶಿವಸೇನೆಯ ಪುಂಡರು ಖ್ಯಾತೆ ತೆಗೆದಿದ್ದಾರೆ. ‌ ಮಹಾರಾಷ್ಟ್ರ ಕೆಲ ಹಳ್ಳಿಗಳಿಗೆ ಕರ್ನಾಟಕದ ಎನ್ ಎಚ್4 ರಾಷ್ಟ್ರೀಯ ಹೆದ್ದಾರಿ ಮೂಲಕ ಹಾದು ಹೋಗಬೇಕು. …

Read More »

ರಾಜಕೀಯಕ್ಕೆ ಮತ್ತೊಬ್ಬ ಐಪಿಎಸ್ ಅಧಿಕಾರಿ: ಬಿಜೆಪಿ ಸೇರಲಿದ್ದಾರಾ ರವಿ ಚನ್ನಣ್ಣನವರ್?

ಬೆಂಗಳೂರು, ಆಗಸ್ಟ್ : ಇತ್ತೀಚೆಗೆ ಐಎಎಸ್, ಐಪಿಎಸ್ ಅಧಿಕಾರಿಗಳು ಅವಧಿ ಮುನ್ನವೇ ಸ್ವಯಂ ನಿವೃತ್ತಿ ಪಡೆದು ರಾಜಕಾರಣಕ್ಕೆ ಸೇರುತ್ತಿದ್ದಾರೆ. ಇದಕ್ಕೆ ಇತ್ತೀಚಿಗೆ ಬಿಜೆಪಿ ಸೇರಿದ ಕೆ.ಅಣ್ಣಾಮಲೈ ತಾಜಾ ಉದಾಹರಣೆಯಾಗಿದ್ದಾರೆ. ಕರ್ನಾಟಕ ಕೇಡರ್​​ ಐಪಿಎಸ್ ಅಧಿಕಾರಿಯಾಗಿದ್ದ ಕೆ. ಅಣ್ಣಾಮಲೈ ತಮ್ಮ ಕೆಲಸಕ್ಕೆ ರಾಜೀನಾಮೆ‌ ನೀಡಿ ಭಾರತೀಯ ಜನತಾ ಪಕ್ಷ ಸೇರಿದ್ದರು. ಕಳೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಸೋತು ಈಗ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದಾರೆ. ಈಗ ಅಣ್ಣಾಮಲೈ ತುಳಿದ ಹಾದಿಯನ್ನೇ …

Read More »

ಶಾಸಕ ಜಮೀರ್ ಅಹ್ಮದ್ ಖಾನ್ ಮನೆ ಮೇಲೆ `ED’ ದಾಳಿ ಅಂತ್ಯ : ದಾಳಿ ಬಗ್ಗೆ ಕೈ ಶಾಸಕ ಹೇಳಿದ್ದೇನು?

ಬೆಂಗಳೂರು : ಮಾಜಿ ಸಚಿವ, ಶಾಸಕ ಜಮೀರ್ ಅಹ್ಮದ್ ಖಾನ್ ಮನೆ ಮೇಲೆ ಇಡಿ ಅಧಿಕಾರಿಗಳ ದಾಳಿ ಅಂತ್ಯವಾಗಿದ್ದು, ಇಡಿ ದಾಳಿ ಕುರಿತಂತೆ ಶಾಸಕ ಜಮೀರ್ ಅಹ್ಮದ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ.   ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್ ಅಹ್ಮದ್ ಖಾನ್, ನನ್ನ ಮನೆ ವಿಚಾರವಾಗಿ ಯಾರೋ ದೂರು ಕೊಟ್ಟಿದ್ದಾರಂತೆ ಹೀಗಾಗಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಾನು ನೀಡಿದ ದಾಖಲೆಗಳು ಸರಿಯಿದ್ದ ಕಾರಣ ನನ್ನ ಮನೆಯಿಂದ ಇಡಿ ಅಧಿಕಾರಿಗಳು ವಾಪಸ್ …

Read More »

ಎಲ್ಲವನ್ನೂ ಸಹಿಸಿಕೊಳ್ಳುತ್ತೇನೆ, ನನ್ನ ಸಮಯ ಬಂದೇ ಬರುತ್ತೆ: ಸಚಿವ ಸ್ಥಾನವೂ ಸಿಗದಿದ್ದಕ್ಕೆ ಬೆಲ್ಲದ್ ಬೇಸರ

ಮುಖ್ಯಮಂತ್ರಿ ರೇಸ್​ನಲ್ಲಿ ಅತ್ಯಂತ ಪ್ರಬಲವಾಗಿ ಕೇಳಿ ಬಂದ ಹೆಸರು ಅರವಿಂದ್​ ಬೆಲ್ಲದ್​​. ಧಾರವಾಡ ಕ್ಷೇತ್ರದ ಶಾಸಕ ಬೆಲ್ಲದ್​​​ ಸಿಎಂ ಆಯ್ಕೆ ವೇಳೆ ಹಲವು ಬಾರಿ ದೆಹಲಿಗೆ ಹಾರಿದ್ದು ಎಲ್ಲರ ಗಮನ ಸೆಳೆದಿತ್ತು. ಆದರೆ ಅಂತಿಮವಾಗಿ ಮುಖ್ಯಮಂತ್ರಿ ಸ್ಥಾನ ಬಸವರಾಜ ಬೊಮ್ಮಾಯಿಯವರ ಪಾಲಾಯಿತು. ನಂತರ ಬೆಲ್ಲದ್​ ಅವರನ್ನು ಡಿಸಿಎಂ ಮಾಡಲಾಗುತ್ತೆ, ಇಲ್ಲವೇ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎಂಬೆಲ್ಲಾ ನಿರೀಕ್ಷೆಗಳು ಗರಿ ಬಿಚ್ಚಿ ಹಾರಾಡಿದ್ದವು. ಆದರೆ ಕ್ಯಾಬಿನೆಟ್​ ಪಟ್ಟಿಯಲ್ಲೂ ಅರವಿಂದ್​ ಬೆಲ್ಲದ್​ ಹೆಸರು …

Read More »

ಳಿನ್‌ ಕುಮಾರ್‌ ಕಟೀಲ್‌ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ

ಬೆಂಗಳೂರು: ನೂತನ ಸಚಿವ ಸಂಪುಟ ರಚನೆ ಬೆನ್ನಲ್ಲೆ ಬಿಜೆಪಿ ಕಚೇರಿಗೆ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಭೇಟಿ ನೀಡಿ, ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ಜೊತೆ ಚರ್ಚೆ ನಡೆಸಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಅನೌಪಚಾರಿಕವಾಗಿ ಮಾತನಾಡುತ್ತ ನನಗೂ ಒಳ್ಳೆಯ ಕಾಲ ಬರುತ್ತದೆ ಎಂದು ಹೇಳಿಕೊಂಡಿದ್ದಾರೆ. ಮಲ್ಲೇಶ್ವರಂ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುಮಾರು 15 ನಿಮಿಷಗಳ ಕಾಲ ನಳಿನಕುಮಾರ್‌ ಕಟೀಲ್‌ ಅವರ ಜೊತೆಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. …

Read More »

ಮೈಸೂರು: ಪ್ರಾಧ್ಯಾಪಕನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ?

ಮೈಸೂರು: ಸಂಶೋಧನ ವಿದ್ಯಾರ್ಥಿನಿಯನ್ನು ಮನೆಗೆ ಕರೆಸಿಕೊಂಡು ಪ್ರಾಧ್ಯಾಪಕನೋರ್ವ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಸಂತ್ರಸ್ತೆ ಹಾಗೂ ಆರೋಪಿಯ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ| ರಾಮಚಂದ್ರಪ್ಪ ವಿರುದ್ಧ ಇಂಥದ್ದೊಂದು ಆರೋಪ ಕೇಳಿ ಬಂದಿದೆ. ಇವರ ಪತ್ನಿ ಇದೇ ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕಿ. ಸಂತ್ರಸ್ತೆಯು ರಾಮಚಂದ್ರಪ್ಪರ ಮಾರ್ಗದರ್ಶನದಲ್ಲಿ ಪಿಎಚ್‌ಡಿ ಮಾಡುತ್ತಿದ್ದು, ಗುರುವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ …

Read More »

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಸಾರ್ವಕಾಲಿಕ 54,717ಕ್ಕೆ ಏರಿಕೆ, ನಿಫ್ಟಿ ಜಿಗಿತ

ಮುಂಬಯಿ: ಮುಂಬಯಿ ಷೇರುಪೇಟೆಯ ವಹಿವಾಟು ಸತತ ಎರಡನೇ ದಿನವಾದ ಗುರುವಾರ(ಆಗಸ್ಟ್ 05) ಕೂಡಾ 123.07 ಅಂಕಗಳಷ್ಟು ಏರಿಕೆಯೊಂದಿಗೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಅಲ್ಲದೇ ರಿಲಯನ್ಸ್ ಇಂಡಸ್ಟ್ರೀಸ್, ಎಚ್ ಡಿಎಫ್ ಸಿ ಬ್ಯಾಂಕ್ ಷೇರುಗಳು ಲಾಭಗಳಿಸಿದೆ.   ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 123.07 ಅಂಕಗಳ ಏರಿಕೆಯೊಂದಿಗೆ ಸಾರ್ವಕಾಲಿಕ ದಾಖಲೆಯ 54,717.24 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 35.80 ಅಂಕ …

Read More »