Breaking News

ರಾಜಕೀಯ

ರಾಹುಲ್ ಇನ್ ಸ್ಟಾಗ್ರಾಂ ಖಾತೆಯೂ ಬ್ಲಾಕ್..? ಕ್ರಮ ಕೈಗೊಳ್ಳುವಂತೆ ಫೇಸ್ ಬುಕ್ ಗೆ NCPCR ಪತ್ರ

ನವ ದೆಹಲಿ : ಟ್ವೀಟರ್ ಖಾತೆಯ ಬ್ಲಾಕ್ ಗೆ ಸಂಬಂಧಿಸಿದಂತೆ ಕಾಂಗ್ರೆಸ್, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಬೆನ್ನಿಗೆ, ನ್ಯಾಶನಲ್ ಕಮಿಷನ್ ಫಾರ್ ಪ್ರೊಟೆಕ್ಶನ್ ಆಫ್ ಚೈಲ್ಡ್ ರೈಟ್ಸ್ (ಎನ್ ಸಿ ಪಿ ಸಿ ಆರ್) ಫೇಸ್ ಬುಕ್ ಸಂಸ್ಥೆ ರಾಹುಲ್ ಗಾಂಧಿ ಅವರ ಿನ್ ಸ್ಟಾಗ್ರಾಂ ಖಾತೆಯನ್ನು ಬ್ಲಾಕ್ ಮಾಡುವಂತೆ ಒತ್ತಾಯಿಸಿದೆ. ಆಗಸ್ಟ್ 4 ರಂದು ಎನ್ ಸಿ ಪಿ ಸಿ ಆರ್, ದೆಹಲಿಯ ದಲಿತ ಅಪ್ರಾಪ್ತೆಯ …

Read More »

ಪಂಚಮಸಾಲಿ ಸಮಾಜ ಮಾತ್ರವಲ್ಲ ಇತರೆ ಸಮಾಜದ ಮೀಸಲು ಬೇಡಿಕೆ‌ಯೂ ಈಡೇರಲಿ: ಯತ್ನಾಳ್

ವಿಜಯಪುರ: ಶೋಷಿತ ಸಮುದಾಯಗಳಿಗೆ ಮೀಸಲು ಸೌಲಭ್ಯ ಕಲ್ಪಿಸುವ ಅಧಿಕಾರವನ್ನು ಪ್ರಧಾನಿ ಮೋದಿ ಅವರು ಕೇಂದ್ರದ ಬದಲಾಗಿ ರಾಜ್ಯ ಸರ್ಕಾರಕ್ಕೆ ನೀಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೆಪಗಳನ್ನು ಹೇಳದೇ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲು ಮಾತ್ರವಲ್ಲ ಮೀಸಲು ಬೇಡಿಕೆ ಇರುವ ಎಲ್ಲ ಸಮುದಾಯಗಳಿಗೆ ಮೀಸಲು ಬೇಡಿಕೆ ಈಡೇರಿಸಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆಗ್ರಹಿಸಿದ್ದಾರೆ. ಶುಕ್ರವಾರ ನಗರದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ …

Read More »

ಆಟೋ-ಬಸ್ ಚಾಲಕರು, ತಾಂತ್ರಿಕ ಸಿಬ್ಬಂದಿ ಮೃತಪಟ್ಟರೆ ಸರ್ಕಾರದಿಂದ 5 ಲಕ್ಷ ಪರಿಹಾರ..!

ಬೆಂಗಳೂರು,ಆ.13- ಆಟೋ ರಿಕ್ಷಾ, ಬಸ್ ಚಾಲಕರು ಹಾಗೂ ತಾಂತ್ರಿಕ ಸಿಬ್ಬಂದಿ ಮೃತಪಟ್ಟರೆ ಸರ್ಕಾರದಿಂದ ಐದು ಲಕ್ಷ ಪರಿಹಾರ ನೀಡುವ ಮಸೂದೆಯನ್ನು ಮುಂಬರುವ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಕಾಲಕ್ಕೆ ನಾನೇ ಚಾಲಕನಾಗಿ ಕೆಲಸ ಮಾಡಿದ್ದೆ. ಕಾರ್ಮಿಕರ ಕಷ್ಟಗಳು ಏನೆಂಬುದು ನನಗೆ ಗೊತ್ತು. ಹೀಗಾಗಿ ಕಾರ್ಮಿಕರು ಮೃತಪಟ್ಟರೆ ಐದು ಲಕ್ಷ ಪರಿಹಾರ ಕೊಡುವ ಹೊಸ ಮಸೂದೆಯನ್ನು ಬರುವ ಅಧಿವೇಶನದಲ್ಲಿ ಮಂಡಿಸಲಾಗುವುದು …

Read More »

2 ಡೋಸ್ ಕೊರೊನಾ ಲಸಿಕೆ ಪಡೆದ ಪ್ರವಾಸಿಗರಿಗೆ `RTP-CR’ ವರದಿ ಕಡ್ಡಾಯವಲ್ಲ : ಕೇಂದ್ರದಿಂದ ರಾಜ್ಯಗಳಿಗೆ ಮಹತ್ವದ ಸೂಚನೆ

ನವದೆಹಲಿ : ಕೇಂದ್ರ ಸರ್ಕಾರವು ರಾಝ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಹತ್ವದ ಸೂಚನೆಯೊಂದನ್ನು ನೀಡಿದ್ದು, ಕೋವಿಡ್ ಲಸಿಕೆ 2 ಡೋಸ್ ಪಡೆದ ಪ್ರವಾಸಿಗರಿಗೆ ಆರ್ ಟಿಪಿ-ಸಿಆರ್ ವರದಿ ಕಡ್ಡಾಯಗೊಳಿಸಬಾರದು ಎಂದು ಸೂಚನೆ ನೀಡಿದೆ.   ಪ್ರವಾಸಿಗರಿಗೆ ಆರ್ ಟಿಪಿಸಿಆರ್ ವರದಿ ಕಡ್ಡಾಯಮಾಡಬಾರದು ಎಂದು ರಾಜ್ಯ ಸರಕಾರಗಳಿಗೆ ಕೇಂದ್ರ ಸರ್ಕಾರ ಪತ್ರ ಬರೆದಿದ್ದು, ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಪ್ರವಾಸೋದ್ಯಮ ಇಲಾಖೆಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಭಾರತೀಯ ಪ್ರವಾಸೋದ್ಯಮ ಹಾಗೂ ಆತಿಥ್ಯ ಸಂಘಟನೆಗಳ …

Read More »

ರಾಜ್ಯದಲ್ಲಿ ಶಾಲೆ ಆರಂಭಕ್ಕೂ ಮುನ್ನವೇ ಪೋಷಕರಿಗೆ ಬಿಗ್ ಶಾಕ್ : ಬೆಂಗಳೂರಿನಲ್ಲಿ 500 ಕ್ಕೂ ಹೆಚ್ಚು ಮಕ್ಕಳಲ್ಲಿ ಕೊರೊನಾ ಸೋಂಕು

ಬೆಂಗಳೂರು : ಶಾಲಾ ಆರಂಭದ ನಿರೀಕ್ಷೆಯಲ್ಲಿ ಶಾಲಾ ಮಕ್ಕಳ ಪೋಷಕರಿಗೆ ಬಿಗ್ ಶಾಕ್ ವೊಂದು ಎದುರಾಗಿದ್ದು, ಬೆಂಗಳೂರಿನಲ್ಲಿ ಮಕ್ಕಳಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಆಗಸ್ಟ್ ಮೊದಲ ಎರಡು ವಾರಗಳಲ್ಲಿ ಸುಮಾರು 500 ಮಕ್ಕಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.   ಆಗಸ್ಟ್ 23 ರಿಂದ 9-12 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ಮತ್ತೆ ತೆರೆಯಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ.ಈ ಹೊತ್ತಲ್ಲೇ ಮಕ್ಕಳಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಪತ್ತೆಯಾಗುತ್ತಿರುವುದು ಆತಂಕ …

Read More »

ತಮ್ಮ ಹಾಟ್ ಫೋಟೋಗಳನ್ನು ಹಂಚಿಕೊಂಡ ನಟಿ ಶುಭ್ರ ಅಯ್ಯಪ್ಪ

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ನಟಿ ಶುಭ್ರ ಅಯ್ಯಪ್ಪ ಹಾಟ್ ಆಯಂಡ್ ಸ್ಪೈಸಿ ಲುಕ್ ನಲ್ಲಿ ಪೋಟೋಗೇ ಫೋಸ್ ನೀಡಿದ್ದಾರೆ. ಇತ್ತೀಚೆಗೆ ಫೋಟೋಶೂಟ್ ಮಾಡಿಸಿರುವ ಈ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳುವ ಮೂಲಕ ಯುವಕರ ನಿದ್ದೆಗೆಡಸಿದ್ದಾರೆ. ಈ ಫೋಟೋಗಳಿಗೆ ಸಾಕಷ್ಟು ಲೈಕ್ಸ್ ಗಳು ಹಾಗೂ ಕಮೆಂಟ್ಸ್ ಗಳು ಬಂದಿವೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ವಜ್ರಕಾಯ’ ಚಿತ್ರದಲ್ಲಿ ಅಭಿನಯಿಸಿದ್ದ ಶುಭ್ರ ಅಯ್ಯಪ್ಪ ನಂತರ ಯಾವ ಸಿನಿಮಾಗಳಲ್ಲೂ ಕಾಣಿಸಿಕೊಂಡಿಲ್ಲ, …

Read More »

ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಭೇಟಿ ಮಾಡಿದ ಸಲ್ಮಾನ್ ಖಾನ್

ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ವೇಟ್‌ಲಿಫ್ಟರ್‌ ಮೀರಾಬಾಯ್ ಚಾನುರನ್ನು ಭೇಟಿ ಮಾಡಿದ ನಟ ಆಕೆಯೊಂದಿಗೆ ಫೋಟೋ ತೆಗೆದುಕೊಂಡು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ವೇಟ್‌ಲಿಫ್ಟಿಂಗ್ ಶಿಸ್ತಿನ ಮಹಿಳೆಯರ ವಿಭಾಗದ 49 ಕೆಜಿ ಕೆಟಗರಿಯಲ್ಲಿ ಮೀರಾಬಾಯ್ ಬೆಳ್ಳಿ ಪದಕ ಜಯಿಸಿದ್ದರು. “ಬೆಳ್ಳಿ ಪದಕ ವಿಜೇತೆ ನಿಮ್ಮನ್ನು ಭೇಟಿಯಾಗಿದ್ದು ಬಹಳ ಸಂತಸವಾಗಿದೆ.. ನನ್ನ ಹಾರೈಕೆಗಳು ನಿಮ್ಮಂದಿಗೆ ಸದಾ ಇರಲಿವೆ!” ಎಂದು ಸಲ್ಮಾನ್ ಪೋಸ್ಟ್‌ ಮಾಡಿದ್ದಾರೆ.

Read More »

ಪ್ರವಾಸಿಗರ ಫೇವರೇಟ್ ಗೋವಾ | ಭೇಟಿಗೆ ಷರತ್ತುಗಳು ಅನ್ವಯ

ಪಣಜಿ : ಕೋವಿಡ್ ಎರಡನೇಯ ಅಲೆಯಿಂದಾಗಿ ಸಂಪೂರ್ಣ ಲಾಕ್ ಆಗಿದ್ದ ಪ್ರಸಿದ್ಧ ಪ್ರವಾಸಿ ತಾಣ ಗೋವಾ ಇದೀಗ ಹಂತ ಹಂತವಾಗಿ ಅನ್ ಲಾಕ್ ಆಗುತ್ತಿದೆ. ಪ್ರವಾಸಿರ ಅಚ್ಚುಮೆಚ್ಚಿನ ತಾಣ ಗೋವಾ ಇದೀಗ ಪ್ರವಾಸಿಗರಿಗೆ ಅನ್‍ಲ ಲಾಕ್ ಗೊಳಿಸಲಾಗಿದೆ. ಕೆಲವು ಷರತ್ತುಗಳ ಮೂಲಕ ಪ್ರವಾಸಿಗರು(ಕೇರಳ ಮತ್ತು ಮಹಾರಾಷ್ಟ್ರ ಪ್ರವಾಸಿಗರು ಹೊರತುಪಡಿಸಿ) ಗೋವಾಕ್ಕೆ ಆಗಮಿಸಲು ಸರ್ಕಾರ ಅನುಮತಿ ನೀಡಿದೆ.   ಗೋವಾದಲ್ಲಿನ ಹಲವು ಪ್ರವಾಸಿ ತಾಣಗಳು, ಬೀಚ್‍ ಗಳಲ್ಲಿ ಪ್ರವಾಸಿಗರ ಆಗಮನಕ್ಕೆ ಅವಕಾಶ …

Read More »

ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಮತ್ತೆ ಗಡಿ ಕ್ಯಾತೆ

ಬೆಳಗಾವಿ: ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಮತ್ತೆ ಗಡಿ ಕ್ಯಾತೆ ತೆಗೆದಿದ್ದು, ಉಭಯ ರಾಜ್ಯಗಳ ಗಡಿ ವಿವಾದ ಇತ್ಯರ್ಥಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮಧ್ಯಪ್ರವೇಶಿಸ ಬೇಕೆಂದು ಒತ್ತಾಯ ಮಾಡಿದ್ದಾರೆ. ಈ ಹಿಂದೆ ಗಡಿ ತಕರಾರು ಕುರಿತು ಎಂಇಎಸ್​ ಪುಂಡರು ಪ್ರಧಾನಿಗೆ ಪತ್ರ ಅಭಿಯಾನ ನಡೆಸಿದ ಬೆನ್ನಲ್ಲೇ ಮಹಾರಾಷ್ಟ್ರ ಡಿಸಿಎಂ ಮತ್ತೆ ಗಡಿ ತಾಕರಾರೆತ್ತಿದ್ದಾರೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ವಿವಾದವನ್ನ ಇತ್ಯರ್ಥ ಪಡಿಸಬೇಕು, ಮತ್ತು ಈ ಗಡಿ ವಿವಾದದಲ್ಲಿ ನರೇಂದ್ರ …

Read More »

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಧೂಳಿಪಟ, ಬಹುಮತದೊಂದಿಗೆ ಕೈ ಅಧಿಕಾರಕ್ಕೆ: ಎಸ್.ಆರ್. ಪಾಟೀಲ

ಬೀದರ್: ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಜನಾದೇಶದಿಂದ ಬಂದ ಸರ್ಕಾರ ಇಲ್ಲ. ಹಣದ ಹೊಳೆ ಹರಿಸಿ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಧೂಳಿಪಟವಾಗಲಿದ್ದು, ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ ಭವಿಷ್ಯ ನುಡಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಉತ್ತರ ಕರ್ನಾಟಕ ಭಾಗದವರು. ಅಭಿವೃದ್ಧಿ ಕೆಲಸಗಳು ನಡೆಯಬೇಕಾದರೆ ಸ್ಥಿರ ಸರ್ಕಾರ ಇರಬೇಕು ಎನ್ನುವದು ನಮ್ಮ …

Read More »