Breaking News

ರಾಜಕೀಯ

ಲೇಡಿ ಪೊಲೀಸ್​ನಿಂದ ರೇಪ್ ಬೆದರಿಕೆ; ಜನತಾ ದರ್ಶನ ವೇಳೆ ಸಿಎಂ ಮುಂದೆ ಮಹಿಳೆ ಅಳಲು

ಬೆಂಗಳೂರು, ಆ. 19: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಜನತಾ ದರ್ಶನ ನಡೆಸಿದ ವೇಳೆ ಮಹಿಳೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಗಮನ ಸೆಳೆಯಿತು. ಆರ್ ಟಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಬೊಮ್ಮಾಯಿ ಅವರು ಜನತಾ ದರ್ಶನ ನಡೆಸಿ ಸಾರ್ವುಜನಿಕರಿಂದ ಅಹವಾಲು ಸ್ವೀಕರಿಸಿದರು. ಈ ವೇಳೆ ಮಹಿಳೆಯೊಬ್ಬರು ಸಿಎಂಗೆ ಅಹವಾಲು ಸಲ್ಲಿಸಲು ಸಾಕಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಸಿಎಂ ತಮ್ಮ ಕಾರಿನಲ್ಲಿ ಅಲ್ಲಿಂದ ಹೊರಡತೊಡಗಿದಾಗ ಆ ಮಹಿಳೆ ಆಕ್ರೋಶ ವ್ಯಕ್ತಪಡಿಸಿದರು. ಮುಖ …

Read More »

ಜೈಲಿನಿಂದ ಬಿಡುಗಡೆ ಆದವನಿಗೆ ಯುದ್ದ ಗೆದ್ದು ಬಂದವರ ರೀತಿ ಅದ್ಧೂರಿ ಸ್ವಾಗತ, ಸನ್ಮಾನ; ವಿಡಿಯೋ ವೈರಲ್

ಜೈಲಿನಿಂದ ಬಿಡುಗಡೆ ಆದವನಿಗೆ ಅದ್ಧೂರಿ ಸ್ವಾಗತ ಮಾಡಿ ಕರೆಸಿಕೊಂಡಿರುವ ಘಟನೆ ತೇರದಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜೈಲಿನಿಂದ ಬಿಡುಗಡೆಯಾದ ರಾಜು ದೇಸಾಯಿಗೆ ಅದ್ಧೂರಿ ಸ್ವಾಗತ ಮಾಡಿ ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲೂಕಿನ ಗ್ರಾಮಕ್ಕೆ ಕರೆಸಿಕೊಳ್ಳಲಾಗಿದೆ. ಬಾಗಲಕೋಟೆ: ಜೈಲಿನಿಂದ ಬಿಡುಗಡೆ ಆದವನಿಗೆ ಅದ್ಧೂರಿ ಸ್ವಾಗತ ಮಾಡಿ ಕರೆಸಿಕೊಂಡಿರುವ ಘಟನೆ ತೇರದಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜೈಲಿನಿಂದ ಬಿಡುಗಡೆಯಾದ ರಾಜು ದೇಸಾಯಿಗೆ ಅದ್ಧೂರಿ ಸ್ವಾಗತ ಮಾಡಿ ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ …

Read More »

ಮನೆಯ ಮಂಚದ ಕೆಳಗಿತ್ತು ಮೃತದೇಹ, ಶಂಕೆ ಮೂಡಿಸಿದ ಅನುಮಾನಾಸ್ಪದ ಸಾವು

ಮೈಸೂರು: ಬಂಚಳ್ಳಿ ಹುಂಡಿ ಗ್ರಾಮದಲ್ಲಿ ಮನೆಯಲ್ಲೇ ವೃದ್ಧೆ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. 65 ವರ್ಷದ ದೇವಮ್ಮ ಮೃತಪಟ್ಟವರು ಎಂದು ಹೇಳಲಾಗಿದೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಬಂಚಳ್ಳಿ ಹುಂಡಿ ಗ್ರಾಮದಲ್ಲಿ ದೇವಮ್ಮ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಅವರ ಮೃತದೇಹ ಮನೆಯ ಮಂಚದ ಕೆಳಗೆ ಪತ್ತೆಯಾಗಿದೆ. ಆಸ್ತಿಗಾಗಿ ಅವರನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ನಂಜನಗೂಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Read More »

ED ದಾಳಿ ಕೇಸ್; ಶಾಸಕ ಜಮೀರ್ ವಿರುದ್ಧ ಮಹತ್ವ ಮಾಹಿತಿ ಕಲೆ ಹಾಕಿದ ಅಧಿಕಾರಿಗಳು

ಬೆಂಗಳೂರು: ಶಾಸಕ ಜಮೀರ್ ಅಹ್ಮದ್ ಖಾನ್ ನಿವಾಸದ ಮೇಲೆ ಇಡಿ ಅಧಿಕಾರಿಗಳು ನಡೆಸಿದ ದಾಳಿ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಶ್ರೀಲಂಕಾ ಕ್ಯಾಸಿನೋ ನಂಟು ಹಾಗೂ ಐಎಂಎ ವ್ಯವಹಾರದ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ. ಜಮೀರ್ ಅಹ್ಮದ್ ತನ್ನ ಶಿಷ್ಯ ಶೇಖ್ ಫಾಸಿಲ್ ಜೊತೆ ಶ್ರೀಲಂಕಾದಲ್ಲಿ ಕ್ಯಾಸಿನೋ ವ್ಯವಹಾರ ನಡೆಸಿದ್ದರು ಎನ್ನಲಾಗಿದೆ. ಇಬ್ಬರೂ ಪಾರ್ಟನರ್ ಶಿಪ್ ವ್ಯವಹಾರದಲ್ಲಿ ಹೂಡಿಕೆ ಮಾಡಿದ್ದಾರೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಕಲೆ ಹಾಕಿದ್ದಾರೆ. …

Read More »

ಗೋವಾ ಗಡಿ ತೆರೆಯಲು ಆತುರು ಬೇಡ : ಕಾಂಗ್ರೆಸ್

ಪಣಜಿ : ಗೋವಾದಲ್ಲಿ ಕೋವಿಡ್ ಸೋಂಕಿತರು ಕಡಿಮೆಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗೋವಾ ಗಡಿಗಳನ್ನು ಓಪನ್ ಮಾಡಿ ಹೊರ ರಾಜ್ಯಗಳಿಂದ ಗೋವಾಕ್ಕೆ ಪ್ರವಾಸಿಗರು ಬರಮಾಡಿಕೊಳ್ಳಲು ಸರ್ಕಾರ ನೋಡುತ್ತಿದೆ. ಆದರೆ ಇದಕ್ಕೂ ಮುನ್ನ ಸರ್ಕಾರ ಗೋವಾದ ಎಲ್ಲಾ ಗಡಿಗಳಲ್ಲಿ ಸುಸಜ್ಜಿತ ಕೋವಿಡ್ ತಪಾಸಣಾ ಕೇಂದ್ರವನ್ನು ಸ್ಥಾಪನೆ ಮಾಡಬೇಕು, ನಂತರ ಗಡಿಗಳನ್ನು ತೆರೆಯಬೇಕು ಎಂದು ಗೋವಾ ಕಾಂಗ್ರೇಸ್ ಪಕ್ಷವು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಗೆ ಮನವಿ ಮಾಡಿದೆ. ಕಾಂಗ್ರೇಸ್ ಪ್ರದೇಶ ಸಮೀತಿಯ ಉಪಾಧ್ಯಕ್ಷ ಹಾಗೂ …

Read More »

ರಾಹುಲ್‌ರನ್ನು ಮೊದಲು ನೋಡಿದ್ದು ನಾನೇ

ವಯನಾಡ್‌/ನವದೆಹಲಿ:ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿಯವರಿಗೆ ಜನ್ಮ ನೀಡುವಾಗ ಹೆರಿಗೆ ಮಾಡಿಸಿದ್ದ ನರ್ಸ್‌ ರಾಜಮ್ಮ ವವಾತಿಲ್‌ ಎಂಬುವರು ಅವರನ್ನು ಭೇಟಿಯಾಗಿದ್ದಾರೆ. ಜತೆಗೆ ಅವರಿಗೆ ಸಿಹಿ ಇರುವ ಬಾಕ್ಸ್‌ ನೀಡಿ, ತಾಯಿ ಸೋನಿಯಾ ಮತ್ತು ಕುಟುಂಬದ ಇತರ ಸದಸ್ಯರ ಆರೋಗ್ಯ ವಿಚಾರಿಸಿದ್ದಾರೆ.   ವಯನಾಡ್‌ ಸಂಸದರಾಗಿರುವ ರಾಹುಲ್‌ ಕ್ಷೇತ್ರ ಪ್ರವಾಸ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. “1970ರಲ್ಲಿ ನವದೆಹಲಿಯ ಹೋಲಿಸ್‌ ಫ್ಯಾಮಿಲಿ ಆಸ್ಪತ್ರೆಯಲ್ಲಿ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದೆ. …

Read More »

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಸಂಸದೆ ಸುಮಲತಾ ಅಂಬರೀಶ್ ಅಪಸ್ವರ

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿ ನ ಕೋಡಿಹಳ್ಳಿ ಗ್ರಾಮದಲ್ಲಿ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್, ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೈಜ್ಞಾನಿಕವಾಗಿ ನಡೆಯುತ್ತಿಲ್ಲ. ಈ ಹಿಂದೆ ಸ್ಥಳ ವೀಕ್ಷಣೆ ಮಾಡಿ ಬಳಿಕ ನಿತಿನ್ ಗಡ್ಕರಿ ಅವರ ಗಮನಕ್ಕೂ ತರಲಾಗಿದೆ. ಮಂಡ್ಯ: ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಸಂಸದೆ ಸುಮಲತಾ ಅಂಬರೀಶ್ ಅಸಮಾಧಾನ ವ್ಯಕ್ತಪಡಿಸಿದ್ದು, ಸೈಂಟಿಫಿಕ್ ಆಗಿ ಹೆದ್ದಾರಿ ಕಾಮಗಾರಿ ಆಗ್ತಿಲ್ಲ. ಇದನ್ನು ಈ ಹಿಂದೆ ಸ್ಥಳ …

Read More »

ಅಫ್ಘಾನ್ ಪ್ರಜೆಗಳಿಗೆ ಭಯ ಬೇಡ: ಅರಗ ಜ್ಞಾನೇಂದ್ರ

ಬೆಂಗಳೂರು: ರಾಜ್ಯದಲ್ಲಿ 339 ಮಂದಿ ಅಫ್ಘಾನಿಸ್ತಾನದ ಪ್ರಜೆಗಳಿದ್ದಾರೆ. ಈ ಪೈಕಿ 192 ಮಂದಿ ವಿದ್ಯಾರ್ಥಿಗಳಿದ್ದಾರೆ. ಅಫ್ಘಾನ್ ಘಟನೆ ಸಂಬಂಧ ಯಾರು ಭಯ ಪಡುವ ಅಗತ್ಯವಿಲ್ಲ. ಮಾನವೀಯ ನೆಲೆಯಲ್ಲಿ ರಾಜ್ಯ ಸರ್ಕಾರ ನೆರವಿಗೆ ಬರಲಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು. ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಸಿಎಆರ್‌ ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ನಗರ ಪೊಲೀಸರು ಪತ್ತೆ ಮಾಡಿದ 36 ಕೋಟಿ ರೂ. ಮೌಲ್ಯದ ಕಳವು ಮಾಲುಗಳ ಪ್ರದರ್ಶನ ಮತ್ತು ಮಾಲೀಕರಿಗೆ …

Read More »

86ನೇ ವಯಸ್ಸಿನಲ್ಲಿ 10ನೇ ತರಗತಿ ಪರೀಕ್ಷೆ ಬರೆದ ಮಾಜಿ ಸಿಎಂ

ಹರ್ಯಾಣದ ಮಾಜಿ ಸಿಎಂ ಮತ್ತು ಐಎನ್‌ಎಲ್‌ಡಿ ಮುಖ್ಯಸ್ಥ ಓಂ ಪ್ರಕಾಶ್ ಚೌಟಾಲಾ ಎಲ್ಲರ ಗಮನ ಸೆಳೆದಿದ್ದಾರೆ. ಅಪೂರ್ಣವಾಗಿದ್ದ 10 ನೇ ತರಗತಿಯನ್ನು ಪೂರ್ಣಗೊಳಿಸಲು ಮುಂದಾಗಿದ್ದಾರೆ. ಬುಧವಾರ ಹತ್ತನೇ ಇಂಗ್ಲಿಷ್ ಪರೀಕ್ಷೆಗೆ ಹಾಜರಾಗಿದ್ದರು. ಹರಿಯಾಣದ ಸಿರ್ಸಾದ ಆರ್ಯ ಕನ್ಯಾ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಲಾಗಿತ್ತು. ಹರ್ಯಾಣ ಶಾಲಾ ಶಿಕ್ಷಣ ಮಂಡಳಿಯ ಹತ್ತನೇ ತರಗತಿ ಮರು ಪರೀಕ್ಷೆ ನಡೆಯುತ್ತಿದೆ. ಮಾಜಿ ಸಿಎಂ ಓಂ ಪ್ರಕಾಶ್ ಚೌಟಾಲಾ, ಬುಧವಾರ ಪರೀಕ್ಷಾ ಕೇಂದ್ರಕ್ಕೆ …

Read More »

ನೆಗೆಟಿವ್‌ ವರದಿಯೊಂದಿಗೆ ಬಂದಿದ್ದ 228 ವಿದ್ಯಾರ್ಥಿಗಳಿಗೆ ಪಾಸಿಟಿವ್‌ !

ಮಂಗಳೂರು, : ಕೇರಳ ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ಇದೀಗ ದ.ಕ.ಜಿಲ್ಲೆಗೆ ಕೋವಿಡ್ ನೆಗೆಟಿವ್ ವರದಿಯೊಂದಿಗೆ ಬಂದಿದ್ದ ಕೇರಳದ 228 ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದಿರುವುದು ಭೀತಿಗೆ ಕಾರಣವಾಗಿದೆ. ದ.ಕ.ಜಿಲ್ಲೆಯಲ್ಲಿನ ವಿವಿಧ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ 228 ಮಂದಿ ಕೇರಳದ ವಿದ್ಯಾರ್ಥಿಗಳಿಗೆ ಕಳೆದ 10 ದಿನಗಳ ಒಳಗೆ ಸೋಂಕು ಕಾಣಿಸಿಕೊಂಡಿದೆ. ಪರೀಕ್ಷೆ ನಿಮಿತ್ತ ನೆಗೆಟಿವ್ ವರದಿಯೊಂದಿಗೆ ಜಿಲ್ಲೆಗೆ ವಿದ್ಯಾರ್ಥಿಗಳು ಆಗಮಿಸಿದ್ದರು. …

Read More »