Breaking News

ರಾಜಕೀಯ

ವರಮಹಾಲಕ್ಷ್ಮೀ ಹಬ್ಬಕ್ಕಿಲ್ಲ ಗೊರವನಹಳ್ಳಿ ಮಹಾಲಕ್ಷ್ಮಿ ದರ್ಶನ

ತುಮಕೂರು: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಜಿಲ್ಲೆಯ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ವರಮಹಾಲಕ್ಷ್ಮಿ ದರ್ಶನ ಪಡೆಯಬೇಕು ಎಂದುಕೊಂಡಿದ್ದ ಭಕ್ತರಿಗೆ ಜಿಲ್ಲಾಡಳಿತ ನಿರಾಸೆ ಮೂಡಿಸಿದ್ದು, ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಭಕ್ತರಿಗೆ ಅವಕಾಶ ನೀಡದೆ ದೇವಾಲಯ ಬಂದ್ ಮಾಡಿದೆ. ಇಂದಿನಿಂದ ನಾಲ್ಕು ದಿನಗಳ ಕಾಲ ದೇವಾಲಯ ಪ್ರವೇಶಕ್ಕೆ ಭಕ್ತರಿಗೆ ನಿರ್ಬಂಧ ವಿಧಿಸಲಾಗಿದ್ದು, ಜಿಲ್ಲಾಡಳಿತ ಸೂಚನೆ ಹಿನ್ನೆಲೆಯಲ್ಲಿ ದೇವಾಲಯ ಬಂದ್ ಮಾಡಿ ಆಡಳಿತ ಮಂಡಳಿ ಅಧಿಕೃತ ಆದೇಶ ಹೊರಡಿಸಿದೆ. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ದೇವಾಲಯದ ಅರ್ಚಕರಿಂದ …

Read More »

ಹಬ್ಬದ ಖರೀದಿಯಲ್ಲಿ ಕೊರೋನಾ ಬಗ್ಗೆ ಮೈಮರೆತ ಜನ : ಕೆಆರ್ ಮಾರುಕಟ್ಟೆಯಲ್ಲಿ ಜನವೋ ಜನ

ಬೆಂಗಳೂರು : ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮಗಳೊಂದಿಗೆ ಹಬ್ಬಗಳನ್ನು ಆಚರಿಸೋದಕ್ಕೆ ಕಠಿಣ ನಿಯಮ ಜಾರಿಗೊಳಿಸಲಾಗಿದೆ. ಅಲ್ಲದೇ ಬಿಬಿಎಂಪಿ ಕೂಡ ಮಾರುಕಟ್ಟೆಯಲ್ಲಿ ಹಬ್ಬಗಳ ಖರೀದಿ ಸಂದರ್ಭದಲ್ಲಿ ಯಾವೆಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ಖರೀದಿಸಬೇಕು ಎನ್ನುವ ಬಗ್ಗೆಯೂ ಮಾರ್ಗಸೂಚಿ ರಿಲೀಸ್ ಮಾಡಲಾಗಿದೆ. ಹೀಗಿದ್ದೂ.. ಇಂದು ಹಬ್ಬದ ದಿನದಂದು ಮಾತ್ರ, ಕೊರೋನಾಗೆ ಡೋಂಟ್ ಕೇರ್ ಎಂದಂತ ಜನರು, ಕೆ ಆರ್ ಮಾರುಕಟ್ಟೆ ಸೇರಿದಂತೆ ನಗರ ವಿವಿಧ ಮಾರುಕಟ್ಟೆಗಳಲ್ಲಿ ಖರೀದಿಗಾಗಿ ಜನರು ಮುಗಿ ಬಿದ್ದಿದ್ದಾರೆ.   ಹೌದು.. ಹಬ್ಬದ …

Read More »

ಹೊಟ್ಟೆ ಪಾಡಿಗಾಗಿ ಊರೂರು ಸುತ್ತುವ ಅಲೆಮಾರಿಗಳಿಗೆ ಸಿಕ್ಕಿಲ್ಲ ಕೊವಿಡ್ ಲಸಿಕೆ

ಒಂದು ಕಡೆ ಲಸಿಕೆ ಹಾಕಿಸಿಕೊಂಡರೆ ಜ್ವರ ಬರುತ್ತೆ, ದುಡಿಮೆ ನಿಲ್ಲುತ್ತೆ ಎನ್ನುವ ಭಯದಲ್ಲಿ ಲಸಿಕೆ ಪಡೆಯಲು ಅಲೆಮಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಮತ್ತೊಂದು ಕಡೆ ದಿನಗೂಲಿ ಬಿಟ್ಟು ನೂರಾರು ಜನರ ಮಧ್ಯೆ ನಿಂತು ಲಸಿಕೆ ಹಾಕಿಸಿಕೊಳ್ಳಲಾಗದ ಪರಿಸ್ಥಿತಿ ಇದೆ. ಮಂಡ್ಯ: ಮಹಾಮಾರಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಲಸಿಕಾ ಅಭಿಯಾನ ನಡೆಸುತ್ತಿದೆ. ರಾಜ್ಯಗಳಿಗೆ ಬೇಕಾಗುವ ಅಗತ್ಯ ಲಸಿಕೆ ಪೂರೈಕೆ ಮಾಡಿ ಪ್ರತಿಯೊಬ್ಬರಿಗೂ ಲಸಿಕೆ ಸಿಗುವ ನಿಟ್ಟಿನಲ್ಲಿ ಕಾರ್ಯ ನಡೆಸುತ್ತಿದೆ. ಆದ್ರೆ ಕೊವಿಡ್ …

Read More »

ಲಸಿಕೆ ವಾಪಸ್ ಖರೀದಿಸಿ – ಖಾಸಗಿ ಆಸ್ಪತ್ರೆಗಳಿಂದ ಮನವಿ

ಬೆಂಗಳೂರು: ಎರಡನೇ ಅಲೆಯ ಸಂದರ್ಭದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಸರ್ಕಾರಿ ಸೇರಿದಂತೆ ಖಾಸಗಿ ಆಸ್ಪತ್ರೆಗಳ ಮುಂದೆ ಉದ್ದುದ್ದ ಸಾಲುಗಳು ಸಾಮಾನ್ಯವಾಗಿತ್ತು. ಬಳಿಕ ಸರ್ಕಾರ ಎಲ್ಲರಿಗೂ ಲಸಿಕೆ ಉಚಿತ ಎಂದು ಘೋಷಿಸಿಕೊಂಡಿತೋ ಆಗ ಖಾಸಗಿ ಆಸ್ಪತ್ರೆಗಳ ಮುಂದೆ ಇದ್ದ ಕ್ಯೂ ಇದ್ದಕ್ಕಿದ್ದ ಹಾಗೆ ಮಾಯವಾಗಲು ಶುರುವಾಯ್ತು. ಎಲ್ಲರೂ ಸರ್ಕಾರಿ ಆಸ್ಪತ್ರೆಗಳಲ್ಲೇ ಉಚಿತ ಲಸಿಕೆ ಹಾಕಿಸಿಕೊಳ್ಳಲು ಮುಂದಾದರು. ಪರಿಣಾಮ ಸದ್ಯ, ಕೂಡಿಟ್ಟ ಲಸಿಕೆ ಖರ್ಚಾಗದ ಕಾರಣ ವಾಪಸ್ ಖರೀದಿಸಿ ಎಂದು ಖಾಸಗಿ ಆಸ್ಪತ್ರೆ ಮನವಿ …

Read More »

ಎಂಟು ವಾರಗಳ ಕಾಲ ಬಳ್ಳಾರಿಗೆ ತೆರಳಲು ಜನಾರ್ದನ ರೆಡ್ಡಿಗೆ ಸುಪ್ರೀಂ ಅನುಮತಿ

ನವದೆಹಲಿ: ಎಂಟು ವಾರಗಳ ಕಾಲ ಮಾಜಿ ಸಚಿವ ಜನಾರ್ದನ್ ರೆಡ್ಡಿ ಅವರಿಗೆ ಬಳ್ಳಾರಿಗೆ ತೆರಳಲು ಸುಪ್ರೀಂಕೋರ್ಟ್ ನ ನ್ಯಾ.ವಿನೀತ್ ಶರಣ್ ಪೀಠ ಅನುಮತಿ ನೀಡಿದೆ. ಎಂಟು ವಾರಗಳ ಕಾಲ ಬಳ್ಳಾರಿಗೆ ತೆರಳಲು ಸುಪ್ರೀಂಕೋರ್ಟ್ ಗೆ ಅನುಮತಿ ಕೋರಿ ಜನಾರ್ದನ ರೆಡ್ಡಿ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ವಿನೀತ್ ಶರಣ್ ಪೀಠ ಅನುಮತಿ ನೀಡಿದೆ. ಅರ್ಜಿಯ ವಿಚಾರಣೆಯಲ್ಲಿ ಸಿಬಿಐ ಪರ ವಾದ ಮಂಡಿಸಿದ ಅಡಿಷನಲ್ ಸಾಲಿಸಿಟರ್ ಜನರಲ್ ಮಾಧವಿ …

Read More »

ಚಿಕ್ಕ ವಾಹನದಲ್ಲಿ 100 ಕರುಗಳನ್ನು ಸಾಗಿಸುತ್ತಿದ್ದ ರಾಕ್ಷಸರು; ವಾಹನ ಪಲ್ಟಿಯಾಗಿ 50 ಕಂದಮ್ಮಗಳ ಸಾವು

ಹಾಸನ: ಉಸಿರಾಟ ತೊಂದರೆ ಮತ್ತು ವಾಹನ ಪಲ್ಟಿಯಾದ ಪರಿಣಾಮ 50ಕ್ಕೂ ಹೆಚ್ಚು ಕರುಗಳು ದಾರುಣವಾಗಿ ಸಾವನ್ನಪ್ಪಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಕರುಗಳ ಬಾಯಿ, ಕಾಲಿಗೆ ಹಗ್ಗ ಕಟ್ಟಿದ್ದರಿಂದ ಉಸಿರಾಟ ತೊಂದರೆಯಾಗಿ ಹಲವು ಮೂಕ ಪ್ರಾಣಿಗಳು ಸಾವನ್ನಪಿದ್ದರೆ, ಅದೇ ವಾಹನ ಮುಂದೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ಅಪಘಾತದಲ್ಲಿ ಕೂಡ ಹಲವು ಕರುಗಳು ಸಾವನ್ನಪ್ಪಿದ ಘಟನೆ ಬೇಲೂರು ತಾಲೂಕಿನ ದ್ಯಾವಪ್ಫಹಳ್ಳಿ ಬಳಿ ನಡೆದಿದೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಇರುವುದರಿಂದ ಅಕ್ರಮವಾಗಿ 100 …

Read More »

ಭಾರತದ ಮೊದಲ ಸೆಲೆಬ್ರಿಟಿ: ಬಾಲಿವುಡ್ ಸ್ಟಾರ್ ಅಮಿತಾಭ್ ಬಚ್ಚನ್‌ ವಾಯ್ಸ್‌ನಲ್ಲಿ ಅಲೆಕ್ಸಾ!

ಅಮಿತಾಭ್‌ರ ಧ್ವನಿ ಕೇಳಬೇಕೆಂದರೆ ಬಳಕೆದಾರರು, “ಅಲೆಕ್ಸಾ, ಸೇ ಹಲೋ ಟು ಮಿಸ್ಟರ್‌ ಅಮಿತಾಭ್‌ ಬಚ್ಚನ್‌’ ಎಂದು ಹೇಳಿದರೆ ಸಾಕು, ಆಗ ಹೆಣ್ಣು ಧ್ವನಿಯ ಬದಲಾಗಿ ಅಮಿತಾಭ್‌ ಮಾತು ಕೇಳಿಸುತ್ತದೆ. ಅಮೆಜಾನ್ ಅಲೆಕ್ಸಾ (Amazon Alexa) ಸ್ಮಾರ್ಟ್ ಡಿಜಿಟಲ್ ವಾಯ್ಸ್ ಅಸಿಸ್ಟೆಂಟ್‌ನಲ್ಲಿ ಇನ್ನುಮುಂದೆ ನೀವು ಬಾಲಿವುಡ್ ಮೇರುನಟ ಅಮಿತಾಬ್ ಬಚ್ಚನ್ ಧ್ವನಿಯನ್ನು ಕೇಳಬಹುದು. ದೇಶದಲ್ಲಿ ಅಮೆಜಾನ್ ಸೆಲೆಬ್ರಿಟಿ ವಾಯ್ಸ್ ಎಕ್ಸ್‌ಪೀರಿಯನ್ಸ್ ಅಡಿಯಲ್ಲಿ ಅಮಿತಾಭ್ ಬಚ್ಚನ್ (Amitabh Bachchan) ಧ್ವನಿಯನ್ನು ಅಮೆಜಾನ್ ಅಲೆಕ್ಸಾ …

Read More »

ಬಿಗ್​ ಬಾಸ್​ ಮನೆಯಲ್ಲೂ ಕರಣ್​ ಜೋಹರ್​ ನೆಪೋಟಿಸಮ್​; ಶಮಿತಾ ಶೆಟ್ಟಿಗೆ ಸಿಗುತ್ತಿದೆ ರಾಜ ಮರ್ಯಾದೆ

ಪ್ರತಿ ಬಾರಿ ಟಿವಿಯಲ್ಲಿ ಬಿಗ್​ ಬಾಸ್​ ಪ್ರಸಾರವಾಗುತ್ತಿತ್ತು. ಆದರೆ, ಈ ಬಾರಿ ಇದರ ಸ್ವರೂಪ ಬದಲಿಸಲಾಗಿದೆ. ಮೊದಲ ಆರು ವಾರಗಳ ಕಾಲ ಒಟಿಟಿಯಲ್ಲಿ ಈ ಶೋ ಪ್ರಸಾರವಾಗಲಿದೆ. ಕರಣ್​ ಜೋಹರ್​ ಅವರು ಬಾಲಿವುಡ್​ನಲ್ಲಿ ಸಾಕಷ್ಟು ಹಿಟ್​ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಆದರೆ, ಅವರು ಸ್ವಜನ ಪಕ್ಷಪಾತ ಮಾಡುತ್ತಾರೆ ಎನ್ನುವ ಆರೋಪ ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಸದ್ಯ ಕರಣ್​ ಅವರು ಬಿಗ್​ ಬಾಸ್​ ಒಟಿಟಿ ಶೋ ನಡೆಸಿಕೊಡುತ್ತಿದ್ದಾರೆ. ಇದರಲ್ಲೂ ಅವರು …

Read More »

ಇಂಡಿಯನ್ ಐಡಿಯಲ್​ ಟಾಪ್​ ಫೈನಲ್ಲಿ ಮಿಂಚಿದ ಕನ್ನಡಿಗ ನಿಹಾಲ್​ ತಾವ್ರೋ

ನಿಹಾಲ್‌ ತಾವ್ರೋ.. ನೀವೆಲ್ಲಾ ಈ ಪ್ರತಿಭೆಯನ್ನ ಸರಿಗಮಪದಲ್ಲಿ ನೋಡಿದ್ದೀರಿ. ಈ ಗಾಯಕನ ಹಾಡು ಕೇಳಿ ಮೆಚ್ಚಿದ್ದೀರಿ. ಈಗ ಕನ್ನಡದ ಈ ಪ್ರತಿಭೆ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ವಿಚಾರದ ಬಗ್ಗೆ ಈಗಾಗಲೇ ಮಾಹಿತಿ ನೀಡಿದ್ವಿ… ಈಗ ನಿಹಾಲ್ ಇಂಡಿಯನ್‌ ಐಡಲ್‌ ಸೀಸನ್‌ 12ರ ಫೈನಲಿಸ್ಟ್‌ ಆಗಿದ್ದರು. ಅಪ್ಪಟ ಕನ್ನಡದ ಪ್ರತಿಭೆ ಬಾಲಿವುಡ್‌ ಸ್ಟಾರ್​ಗಳಿಂದ ಶಹಬ್ಬಾಷ್​ಗಿರಿ ಗಳಿಸಿದ್ದು ನಿಜಕ್ಕೂ ಹೆಮ್ಮೆಯ ವಿಷಯ. ಈ ಮೊದಲು ಜ್ಹೀ ಕನ್ನಡದ ಸರಿಗಮಪ ಸಿಂಗಿಂಗ್​ ರಿಯಾಲಿಟಿ ಶೋನಲ್ಲಿ ಭಾಗವಹಿಸಿ …

Read More »

10 ದಿನ ಜಿಂದಾಲ್ ಪ್ರಕೃತಿ ಚಿಕಿತ್ಸೆಗೆ ಸಿದ್ದರಾಮಯ್ಯ

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಆಗಸ್ಟ್ 21ರಿಂದ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ತೆರಳಲಿದ್ದಾರೆ ಎನ್ನಲಾಗಿದೆ. ಈ ಮೂಲಕ ಹತ್ತು ದಿನಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ಕಳೆದ ಒಂದು ವರ್ಷದಿಂದ ಹಲವು ಬಾರಿ ಜಿಂದಾಲ್ ಪ್ರಕೃತಿ ಚಿಕಿತ್ಸೆಗೆ ಹೋಗಲು ನಿರ್ಧರಿಸಿದ್ದರೂ ನಾನಾ ಕಾರಣಗಳಿಂದ ಹೋಗಲು ಸಾಧ್ಯವಾಗಿಲ್ಲ. ಕೊರೊನಾ ಸೋಂಕು, ಚುನಾವಣಾ ಸಿದ್ಧತೆ, ಪಕ್ಷದ ಕಾರ್ಯಕ್ರಮಗಳಲ್ಲೇ ಬ್ಯುಸಿಯಾಗಿದ್ದ ಸಿದ್ದರಾಮಯ್ಯ ಈಗ ಪ್ರಕೃತಿ ಚಿಕಿತ್ಸೆ ಮೊರೆ ಹೋಗಲು ಮುಂದಾಗಿದ್ದಾರೆ. ಪೋಸ್ಟ್ ಕೋವಿಡ್ ಸಮಸ್ಯೆಯಿಂದ …

Read More »