Breaking News

ರಾಜಕೀಯ

ಸ್ಥಳೀಯ ವ್ಯಾಪಾರಿಗಳ ಬೇಡಿಕೆಗೆ ಪಟ್ಟಣದ ವಿವಿಧ ಸಂಘಟನೆಗಳು ಸ್ವಯಂಪ್ರೇರಿತವಾಗಿ ಬೆಂಬಲ ನೀಡಿದ್ದರಿಂದ ಬಂದ್ ಶಾಂತಿಯುತವಾಗಿ ಸಂಪನ್ನಗೊಂಡಿತು.

ಖಾನಾಪುರ: ಪರಜಿಲ್ಲೆ, ಪರರಾಜ್ಯಗಳಿಂದ ಬಂದು ಪಟ್ಟಣದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವವರಿಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಖಾನಾಪುರ ಶಹರ ವ್ಯಾಪಾರಸ್ಥರ ಒಕ್ಕೂಟ ಶುಕ್ರವಾರ ಕರೆ ನೀಡಿದ್ದ ಖಾನಾಪುರ ಬಂದ್ ಸಂಪೂರ್ಣ ಯಶಸ್ವಿಯಾಗಿ ಸಂಪನ್ನಗೊಂಡಿತು. ಸ್ಥಳೀಯ ವ್ಯಾಪಾರಿಗಳ ಬೇಡಿಕೆಗೆ ಪಟ್ಟಣದ ವಿವಿಧ ಸಂಘಟನೆಗಳು ಸ್ವಯಂಪ್ರೇರಿತವಾಗಿ ಬೆಂಬಲ ನೀಡಿದ್ದರಿಂದ ಬಂದ್ ಶಾಂತಿಯುತವಾಗಿ ಸಂಪನ್ನಗೊಂಡಿತು. ಬಂದ್ ಅಂಗವಾಗಿ ಔಷಧ ಅಂಗಡಿಗಳು, ಪೆಟ್ರೋಲ್ ಬಂಕ್ ಹೊರತುಪಡಿಸಿ ಉಳಿದ ಎಲ್ಲ ಬಗೆಯ ವ್ಯಾಪಾರ ವಹಿವಾಟುಗಳು ನಡೆಯಲಿಲ್ಲ. ಹಣ್ಣು, ತರಕಾರಿ …

Read More »

ಛೋಟಾ ಸಾಹುಕಾರರ ಪ್ರಚಾರ ಇಂದಿನಿಂದ ಪ್ರಾರಂಭ ,ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ಕೂಡ ಭೇಟಿ ನೀಡಿದ ಲಖನ ಜಾರಕಿಹೊಳಿ

ಬೆಳಗಾವಿ: ಬೆಳಗಾವಿ ಲೋಕಸಭೆ ಚುನಾವಣೆ ಫುಲ್ ಜೋರಾಗಿ ಪ್ರಚಾರ ನಡೆಸಿದ್ದಾರೆ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ನಿನ್ನೆ ವರೆಗೂ ಸುಮ್ಮನಿದ್ದ ಛೋಟಾ ಸಾಹುಕಾರ ಇಂದಿನಿಂದ ಪ್ರಚಾರ ಪ್ರಾರಂಭ ಮಾಡಿದ್ದಾರೆ ಯರಗಟ್ಟಿ ಯಲ್ಲಿ ಕಾರ್ಯಕರ್ತರಿಗೆ ಭೇಟಿಯಾದಲಖನ ಜಾರಕಿಹೊಳಿ ಅವರು ಎಲ್ಲ ಕಾರ್ಯ ಕರ್ತರನ್ನು ಒಗ್ಗೂಡಿಸಿ ಮಾತ ಯಾಚನೆ ಮಾಡಿದ್ದಾರೆ . ಬಹುಶಃ ಲಖನ ಜಾರಕಿಹೊಳಿ ಅವರ ನಾಮ ನಿರ್ದೇಶನ ಮಾಡಲು ಬಂದ ದಿನವೇ ಅವರು ಗೆದ್ದ ಹಾಗೆ ಎಂದು ಎಲ್ಲ ಅಭಿಮಾನಿ …

Read More »

ಸುಳ್ಳು ಹೇಳುವುದರಲ್ಲಿ ಬಿಜೆಪಿ ನಂಬರ್ 1: ಸತೀಶ್ ಜಾರಕಿಹೊಳಿ

ಬೈಲಹೊಂಗಲ : “ಬಿಜೆಪಿ ಸರ್ಕಾರ ಮೂರು ವರ್ಷದಲ್ಲಿ ಒಂದೇ ಒಂದು ಮನೆ ನಿರ್ಮಾಣ ಮಾಡಲಿಕ್ಕೆ ಆಗಿಲ್ಲ. ಆದರೆ ಚುನಾವಣೆ ಸಂದರ್ಭದಲ್ಲಿ ಸಾವಿರಾರು ಮನೆಗಳನ್ನು ನೀಡಿದ್ದೇವೆಂದು ಸುಳ್ಳಿನ ಸರಮಾಲೆಯನ್ನೇ ಕಟ್ಟುತ್ತಿದ್ದಾರೆ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು. ವಿಧಾನಪರಿಷತ್ ಚುನಾವಣೆಯ ಪ್ರಚಾರಾರ್ಥವಾಗಿ ಬೈಲಹೊಂಗಲ ಮತಕ್ಷೇತ್ರದ ಗ್ರಾಮ ಪಂಚಾಯ್ತಿ ಚುನಾಯಿತ ಜನಪ್ರತಿನಿಧಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿ, ” ಈಗಿರುವ ರಸ್ತೆಗಳು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಗಿದ್ದವು. ಬಿಜೆಪಿ ಸರ್ಕಾರ …

Read More »

ಹೆಬ್ಬಾಳ್ಕರ್-ಜಾರಕಿಹೊಳಿ ಕುಟುಂಬಕ್ಕೆ ಪ್ರತಿಷ್ಠೆಯಾದ ಪರಿಷತ್ ಚುನಾವಣೆ

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿ ಜಿಲ್ಲಾ ರಾಜಕಾರಣದ ಕಡು ವೈರಿಗಳೆಂದೇ ಬಿಂಬಿತರಾಗಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ಮತ್ತೊಂದು ಸೆಣಸಾಟಕ್ಕೆ ಪರಿಷತ್ ಚುನಾವಣೆ ಕಣ ವೇದಿಕೆಯಾಗಿದೆ. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ ಕಾಂಗ್ರೆಸ್ ‌ಅಭ್ಯರ್ಥಿ ಆಗಿ ಕಣಕ್ಕಿಳಿದಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ಸಹೋದರ ಲಖನ್ ಜಾರಕಿಹೊಳಿ‌ ಪಕ್ಷೇತರ ಅಭ್ಯರ್ಥಿ ಆಗಿ ಕಣದಲ್ಲಿದ್ದಾರೆ. ತಮ್ಮ ಸಹೋದರರನ್ನು ಗೆಲ್ಲಿಸಲೇಬೇಕು ಎಂದು ಪಣತೊಟ್ಟಿರುವ …

Read More »

ರಸ್ತೆಯಲ್ಲೇ, ಆ್ಯಂಬ್ಯುಲೆನ್ಸ್ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಸುಸೂತ್ರ ಹೆರಿಗೆ; ‌ತಾಯಿ-ಮಗು ಸುರಕ್ಷಿತ

ಗದಗ: ಗರ್ಭಿಣಿಯೊಬ್ಬರು ಆಸ್ಪತ್ರೆಗೆ ದಾಖಲಾಗುವ ವೇಳೆ ಆ್ಯಂಬ್ಯುಲೆನ್ಸ್​ನಲ್ಲಿಯೇ ಹೆರಿಗೆಯಾಗಿ ಮಗುವಿಗೆ ಜನ್ಮವಿತ್ತ ವಿರಳ ಘಟನೆ ನಡೆದಿದೆ. ತಾಯಿ ಮತ್ತು ಮಗು ಸುರಕ್ಷಿತವಾಗಿದ್ದಾರೆ. ಗದಗ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಿಂದ ಹುಬ್ಬಳ್ಳಿ ಆಸ್ಪತ್ರಗೆ ಸದರಿ ಗರ್ಭಿಣಿಯನ್ನು ಚಿಕಿತ್ಸೆಗಾಗಿ ರೆಫರ್ ಮಾಡಲಾಗಿತ್ತು. ಅದರಂತೆ ಆಸ್ಪತ್ರೆಗೆ ತೆರಳುವಾಗ ಮಾರ್ಗ ಮಧ್ಯೆಯೇ ಆ್ಯಂಬ್ಯುಲೆನ್ಸ್​ನಲ್ಲಿ ಹೆರಿಗೆಯಾಗಿದೆ. ಆ್ಯಂಬ್ಯುಲೆನ್ಸ್​ನಲ್ಲಿದ್ದ 108 ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಸುಸೂತ್ರ ಹೆರಿಗೆ‌ಯಾಗಿದೆ. ಗಜೇಂದ್ರಗಡ ತಾಲೂಕಿನ ನಿಡಗುಂದಿಕೊಪ್ಪ ಗ್ರಾಮದ ಕವಿತಾ ಪೂಜಾರಿಗೆ ನಗರದ ಖಾಸಗಿ ಆಸ್ಪತ್ರೆಯಿಂದ …

Read More »

ಕೋವಿಡ್ ಎರಡನೇ ಡೋಸ್ ನೀಡಿಕೆ ಹೆಚ್ಚಿಸಲು ಸಿ.ಎಂ ತಾಕೀತು

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಲಸಿಕೆ ಎರಡನೇ ಡೋಸ್‌ ನೀಡಿಕೆಯ ಸರಾಸರಿ ಪ್ರಮಾಣ ಹೆಚ್ಚಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಕೋವಿಡ್‌ ಲಸಿಕೆ ಅಭಿಯಾನದ ಪ್ರಗತಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಜತೆ ಗುರುವಾರ ವಿಡಿಯೊ ಸಂವಾದ ನಡೆಸಿದ ಅವರು, ಮೊದಲ ಡೋಸ್‌ ನೀಡಿಕೆ ಸರಾಸರಿ ಶೇ 90 ರಷ್ಟು ಇದೆ. ಎರಡನೇ ಡೋಸ್‌ ಶೇ 57 ರಷ್ಟಿದೆ. ಡಿಸೆಂಬರ್‌ ಕೊನೆಯೊಳಗೆ ಎರಡನೇ ಡೋಸ್‌ ಶೇ 70 ಕ್ಕೆ ತಲುಪಬೇಕು ಎಂದು ಹೇಳಿದರು. …

Read More »

ಎಸಿಬಿ ದಾಳಿ ವೇಳೆ ಯಾರ ಮನೆಯಲ್ಲಿ ಎಷ್ಟು ಸಂಪತ್ತು ಪತ್ತೆಯಾಯ್ತು? ಇಲ್ಲಿದೆ ವಿವರ

ಕೋಟಿ ವೀರರ ಧನಕನಕ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ 15 ಸರ್ಕಾರಿ ಅಧಿಕಾರಿಗಳ ಮೇಲೆ ನಡೆದ ದಾಳಿಯಲ್ಲಿ ಒಟ್ಟು 72.52 ಕೋಟಿ ರುಪಾಯಿಗಳ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿರುವುದಾಗಿ ಭ್ರಷ್ಟಾಚಾರ ನಿಗ್ರಹ ದಳ ತಿಳಿಸಿದೆ. ಎಸಿಬಿ ಬುಧವಾರ 68 ಸ್ಥಳಗಳಲ್ಲಿ ದಾಳಿ ನಡೆಸಿತ್ತು. 503 ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಒಳಗೊಂಡ ಎಸಿಬಿಯ 68 ತಂಡಗಳು ಈ ಸಂಘಟಿತ ಶೋಧ ನಡೆಸಿವೆ. ಈ ತಂಡಗಳು ಅಪಾರ ಪ್ರಮಾಣದ ನಗದು, ಚಿನ್ನಾಭರಣ, ಹೂಡಿಕೆ …

Read More »

ಆರ್ಕಿಟೆಕ್ಚರಲ್ ವಿದ್ಯಾರ್ಥಿನಿಯೊಬ್ಬಳ ವಿದ್ಯಾಭ್ಯಾಸಕ್ಕಾಗಿ ಲ್ಯಾಪ್‌ಟಾಪ್‌ ನೀಡುವ ಮೂಲಕ ಸಹಾಯ ಮಾಡಿದ:ಡಾ ಸೋನಾಲಿಮತ್ತು ಡಾ ಸಮೀರ್ ಸರ್ನೋಬತ್

ನಿಯತಿ ಫೌಂಡೇಶನ್‌ನಿಂದ ಡಾ ಸೋನಾಲಿ ಸರ್ನೋಬತ್ ಮತ್ತು ಡಾ ಸಮೀರ್ ಸರ್ನೋಬತ್ ಆರ್ಕಿಟೆಕ್ಚರಲ್ ವಿದ್ಯಾರ್ಥಿನಿಯೊಬ್ಬಳ ವಿದ್ಯಾಭ್ಯಾಸಕ್ಕಾಗಿ ಲ್ಯಾಪ್‌ಟಾಪ್‌ ನೀಡುವ ಮೂಲಕ ಸಹಾಯ ಮಾಡಿದ್ದಾರೆ. ಅವಳು ವಿನಮ್ರ ಹಿನ್ನೆಲೆಯಿಂದ ಬಂದಿದ್ದಾಳೆ ಮತ್ತು ಅವಳ ಅಂತಿಮ ವರ್ಷಕ್ಕೆ ವಿದ್ಯಾರ್ಥಿವೇತನದ ಅಗತ್ಯವಿದೆ. ಅವಳು ಯಾವಾಗಲೂ ತನ್ನ ತರಗತಿಯಲ್ಲಿ ಮೊದಲಿಗಳು. ಮಿಸ್ ವೈಷ್ಣವಿ ಬಸುರ್ತೆಕರ್ ಅವರು ಬೆಳಗಾವಿಯ ವಸಂತರಾವ್ ಪೋತದಾರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆರ್ಕಿಟೆಕ್ಚರ್ ಡಿಪ್ಲೋಮಾ ಅಂತಿಮ ವರ್ಷದಲ್ಲಿ ಓದುತ್ತಿದ್ದಾರೆ. ಅಂತಿಮ ವರ್ಷಕ್ಕೆ ಆಕೆಯ ಶುಲ್ಕಕ್ಕೆ …

Read More »

ವಿಧಾನ ಪರಿಷತ್ತ ಚುನಾವಣೆ ಕವಟಗಿಮಠ ನಾಮತ್ರ ವಾಪಸ್ ಪಡೆದಿದ್ದಾರೆ.

ಸ್ಥಳೀಯ ಸಂಘ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಗೆ ಬೆಳಗಾವಿಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದ. ಜಗದೀಶ್ ಕವಟಗಿಮಠ ಅವರು ಇವತ್ತು ನಾಮಪತ್ರ ವಾಪಸ್ ಪಡೆದಿದ್ದಾರೆ. ಜಗದೀಶ್ ಕವಟಗಿಮಠ ಅವರು ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಅವರ ಸಹೋದರರಾಗಿದ್ದು ಅವರು ಇಂದು ನಾಮತ್ರ ವಾಪಸ್ ಪಡೆದಿದ್ದಾರೆ. ನಾಮಪತ್ರ ವಾಪಸ್ ಪಡೆಯಲು ನಾಳೆ ಅಂತಿಮ ದಿನವಾಗಿದ್ದು ನಾಳೆ ಎಷ್ಟು ಜನ ನಾಮಪತ್ರ ವಾಪಸ್ ಪಡೆಯುತ್ತಾರೆ ಅನ್ನೋದನ್ನು ಕಾಯ್ದು ನೋಡಬೇಕಾಗಿದೆ.  

Read More »

ಮೈಸೂರು ಮಹಾರಾಜರ ವಂಶಸ್ಥರ ಸ್ವತ್ತು; ರಾಜ್ಯದ ಮೇಲ್ಮನವಿ ವಜಾಗೊಳಿಸಿದ ‘ಸುಪ್ರೀಂ’

ನವದೆಹಲಿ: 1,561.31 ಎಕರೆ ಜಮೀನಿನ ಒಡೆತನ ಮೈಸೂರಿನ ಮಹಾರಾಜರ ವಂಶಸ್ಥರಿಗೆ ಸೇರಿದ್ದು ಎಂದು ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ, ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಈ ಹಿಂದೆ ತಿರಸ್ಕರಿಸಿದ್ದ ಜುಲೈ 26ರ ತನ್ನ ಆದೇಶವನ್ನು ಮರು ಪರಿಶೀಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಯು.ಯು. ಲಲಿತ್ ಮತ್ತು ಅಜಯ್ ರಸ್ತೋಗಿ ಅವರ ಪೀಠ ತಿರಸ್ಕರಿಸಿದೆ. ‘ಮೇಲ್ಮನವಿಯಲ್ಲಿ ಸರ್ಕಾರ ಪ್ರಸ್ತಾಪಿಸಿರುವ ಅಂಶಗಳನ್ನು ಗಮನಿಸಿದ್ದೇವೆ. ಇದರಲ್ಲಿ ಮಧ್ಯಪ್ರವೇಶಿಸುವಂತಹ ಯಾವುದೇ …

Read More »