Breaking News

ರಾಜಕೀಯ

ಉತ್ತರ ಕರ್ನಾಟಕ ಭಾಗದಲ್ಲಿ ಮಳೆ : ಹವಾಮಾನ ತಜ್ಞರ ಮಾಹಿತಿ

ಧಾರವಾಡ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಸದ್ಯ ಉತ್ತರ ಕರ್ನಾಟಕಕ್ಕೆ ಮಳೆ ಆತಂಕ ಇಲ್ಲ ಎಂದು ಹವಾಮಾನ ತಜ್ಞ ಡಾ.‌ಆರ್.ಹೆಚ್. ಪಾಟೀಲ‌ ಮಾಹಿತಿ ನೀಡಿದ್ದಾರೆ. ಈ‌ ಕುರಿತು ಮಾತನಾಡಿರುವ ಅವರು, ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಆಗಿತ್ತು. ಅದರ ಮಾರುತಗಳು ಉತ್ತರಮುಖ ಚಲನೆ ಹೊಂದಿದ್ದವು. ಅದರಿಂದ ರಾತ್ರಿ ಮತ್ತು ಬೆಳಗ್ಗೆ ಮಳೆಯಾಗಿತ್ತು. ಆದರೆ ನಾಳೆ (ಶುಕ್ರವಾರ) ಯಾವುದೇ ಮಳೆ ಲಕ್ಷಣ ಇಲ್ಲ. ಇಂದು ಮತ್ತು ನಾಳೆ ಮೋಡ ಕವಿದ ವಾತಾವರಣ …

Read More »

ಹಂಸಲೇಖ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ತಡೆ ನೀಡಿರುವುದು ನ್ಯಾಯಕ್ಕೆ ಸಂದ ಜಯ: ನಟ ಚೇತನ್

ಮೈಸೂರು: ಉಡುಪಿಯ ಪೇಜಾವರ ಶ್ರೀಗಳ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆಂಬ ಆರೋಪ ಸಂಬಂಧ ಬಸವನಗುಡಿ ಠಾಣೆಯಲ್ಲಿ ನಾದಬ್ರಹ್ಮ ಹಂಸಲೇಖ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್‌ ತಡೆ ನೀಡಿರುವುದು ನ್ಯಾಯಕ್ಕೆ ಸಂದ ಜಯ ಎಂದು ನಟ ಚೇತನ್ ಹೇಳಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಕ್ಕೆ ಬಲವಿದೆ. ಪೊಲೀಸರು ನ್ಯಾಯದ ಪರವಾಗಿದ್ದಾರೆ. ಹಂಸಲೇಖ ಹೇಳಿಕೆ ಸಂವಿಧಾನ ಬದ್ಧವಾಗಿದೆ. ಕೋರ್ಟ್ ಅದಕ್ಕೆ ತಡೆಯಾಜ್ಞೆ ನೀಡಿದೆ ಎಂದರು. ಪಿರಿಯಾಪಟ್ಟಣ …

Read More »

ಮಮತಾ ಬ್ಯಾನರ್ಜಿ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂಬ ಆರೋಪದಡಿ ದೂರು ದಾಖಲು

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂಬ ಆರೋಪ ಎಲ್ಲೆಡೆ ಕೇಳಿಬರುತ್ತಿದೆ. ಸಿಎಂ ಮಮತಾ ಬ್ಯಾನರ್ಜಿ ಅವರು ಮುಂಬೈ ನಲ್ಲಿ ನಡೆಸಿದ ಸುದ್ದಿಗೋಷ್ಠಿಯ ಮಧ್ಯದಲ್ಲಿ ರಾಷ್ಟ್ರಗೀತೆ ಹಾಡಲು ಪ್ರಾರಂಭಿಸಿದ್ದಾರೆ. ಆದರೆ ಅದನ್ನು ಪೂರ್ತಿಯಾಗಿಯೂ ಹಾಡಿಲ್ಲ, ಅರ್ಧದಲ್ಲೇ ನಿಲ್ಲಿಸಿ ಕುಳಿತುಕೊಂಡಿದ್ದಾರೆ. ಇದು ರಾಷ್ಟ್ರಗೀತೆಗೆ ಮಾಡಿದ ಅವಮಾನ ಎಂದು ಜನ ಕಿಡಿಕಾರುತ್ತಿದ್ದಾರೆ. ಮಮತಾ ಬ್ಯಾನರ್ಜಿ ಅವರ ಸುದ್ದಿಗೋಷ್ಠಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಭಾರತೀಯ ಜನತಾ …

Read More »

ಪುತ್ರ‌ನ ಮದುವೆಗೆ ಆಮಂತ್ರಿಸಲು ಹೋದ ದಂಪತಿ ದುರ್ಮರಣ

ಭಾಲ್ಕಿ : ಮದುವೆಯ ಸಂಭ್ರಮದ ಖುಷಿಯಲ್ಲಿದ್ದ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ. ಪುತ್ರ‌ನ ಮದುವೆಯ ಆಮಂತ್ರಣ ಪತ್ರಿಕೆ ನೀಡಲು ಹೋದ ದಂಪತಿಗಳು ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾದ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ಧನ್ನೂರ್ ತಾಂಡಾ ಬಳಿ ಬುಧವಾರ ತಡರಾತ್ರಿ ನಡೆದಿದೆ.   ಸೂರ್ಯಕಾಂತ ಪಾಟೀಲ ಅವರ ಮಗ ಸಾಯಿನಾಥ ಅವರ ಮದುವೆ ಡಿ. 26ಕ್ಕೆ ನಿಶ್ಚಯವಾಗಿದ್ದು, ಬೀದರ ನಗರದಲ್ಲಿ ಸಂಬಂಧಿಕರಿಗೆ ಮದುವೆಯ ಆಮಂತ್ರಣ ಪತ್ರಿಕೆ ನೀಡಿ ಭಾಲ್ಕಿಗೆ ವಾಪಸ್‌ ಆಗುವಾಗ …

Read More »

23 ರಾಷ್ಟ್ರಗಳಲ್ಲಿ `ಒಮಿಕ್ರಾನ್’ ಸೋಂಕು ಪತ್ತೆ

ನವದೆಹಲಿ : ಕಳೆದ ಒಂದು ವಾರದಲ್ಲಿಯೇ ದಕ್ಷಿಣ ಆಫ್ರಿಕಾದಿಂದ ಒಮಿಕ್ರಾನ್ ವೈರಸ್ 23 ದೇಶಗಳನ್ನು ತಲುಪಿದೆ. ವಿಶ್ವದಾದ್ಯಂತ ಕೊರನಾ ರೂಪಾಂತರಿ ಒಮಿಕ್ರಾನ್ ವೈರಸ್ ಸೋಂಕಿನ ಆತಂಕ ಹೆಚ್ಚಳವಾಗಿದ್ದು, 23 ರಾಷ್ಟ್ರಗಳಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾಗಿದೆ.ಕೊರೊನಾ ವೈರಸ್ ಒಮಿಕ್ರಾನ್​ನ ಹೊಸ ರೂಪಾಂತರವು ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ.   ದಕ್ಷಿಣ ಆಫ್ರಿಕಾ-77, ಯುಕೆ-22, ಬೋಟ್ಸ್ ವಾನದಲ್ಲಿ 19, ನೆದರ್ ಲ್ಯಾಂಡ್ ನಲ್ಲಿ 16, ಪೋರ್ಚಗಲ್ ನಲ್ಲಿ 13, ಜರ್ಮನಿಯಲ್ಲಿ 9, ಇಟಲಿ 9, ಆಸ್ಟ್ರೇಲಿಯಾ …

Read More »

ಸರ್ಕಾರಿ ಕೆಲಸದ ಅವಧಿಯಲ್ಲಿ ನಿರ್ಜನ ಸ್ಥಳಕ್ಕೆ ತೆರಳಿ ಪಾರ್ಟಿ ಮಾಡುವ ಸರ್ಕಾರಿ ಅಧಿಕಾರಿಗಳು,

ಖಾನಾಪುರ: ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯ್ತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂವರು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ಓರ್ವ ಮಹಿಳಾ ಕಾರ್ಯದರ್ಶಿ,  ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕಿ ಇತ್ತೀಚೆಗೆ ಸರ್ಕಾರಿ ಕೆಲಸದ ಅವಧಿಯಲ್ಲಿ ನಿರ್ಜನ ಸ್ಥಳಕ್ಕೆ ತೆರಳಿ ಪಾರ್ಟಿ ಮಾಡುವ ಮೂಲಕ ಕರ್ತವ್ಯಲೋಪ ಎಸಗಿದ್ದಾರೆ. ಇವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಬೀಡಿ ಗ್ರಾಮ ಪಂಚಾಯ್ತಿ ಸದಸ್ಯರಾದ ಸುನೀಲ ಕದಮ್, ಸಂತೋಷ ಕಾಶೀಲಕರ, ವಿಠ್ಠಲ ಪತ್ರಿ, ಫ್ರಾನ್ಸಿಸ್ ಶೇರಾಂವ ಮಂಗಳವಾರ ತಹಸೀಲ್ದಾರ್ ಮತ್ತು …

Read More »

ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲ ಅಧಿವೇಶನಕ್ಕೂ ಒಮಿಕ್ರಾನ್ ಕರಿ ನೆರಳು

ವಿದೇಶಗಳಲ್ಲಿ ಹೊಸ ತಳಿ ಕೊರೊನಾ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇಡೀ ವಿಶ್ವದಾಧ್ಯಂತ ಮತ್ತೆ ಆತಂಕ ಸೃಷ್ಟಿಯಾಗಿದೆ. ಅಲ್ಲದೇ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲ ಅಧಿವೇಶನಕ್ಕೂ ಒಮಿಕ್ರಾನ್ ಕರಿ ನೆರಳು ಬಿದ್ದಿದೆ. ಹೌದು ಡಿಸೆಂಬರ್ 13ರಿಂದ 10 ದಿನಗಳ ಕಾಲ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲ ಅಧಿವೇಶನ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈಗಾಗಲೇ ಎಲ್ಲ ರೀತಿಯ ಸಿದ್ಧತೆ ಕೂಡ ಆರಂಭವಾಗಿದೆ. ಆದರೆ ಇದೀಗ ವಿದೇಶಗಳಲ್ಲಿ ಒಮಿಕ್ರಾನ್ ಮತ್ತೆ ಹಾಗೂ ರಾಜ್ಯದಲ್ಲಿ ಅಲ್ಲಲ್ಲಿ ಕೊರೊನಾ ಸೋಂಕು …

Read More »

ಖಾನಾಪುರ ತಾಲ್ಲೂಕಿನ ನಂದಗಡದ ವಾರದ ಸಂತೆಯಲ್ಲಿ ಬುಧವಾರ ಒಂದು ಸುತ್ತು ಸುತ್ತಾಡಿದ ಸ್ಥಳೀಯ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್

ಖಾನಾಪುರ:  ಸ್ಥಳೀಯ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಬುಧವಾರ ತಾಲ್ಲೂಕಿನ ನಂದಗಡ ನಡೆಯುತ್ತಿದ್ದ ವಾರದ ಸಂತೆಯಲ್ಲಿ ಸಾಮಾನ್ಯ ಜನರಂತೆ ಸುತ್ತಾಡಿ ತರಕಾರಿ ಖರೀದಿಸುವುದರ ಜೊತೆಗೆ ಬೀದಿಬದಿ ವ್ಯಾಪಾರಸ್ಥರ ಕುಂದುಕೊರತೆ ಆಲಿಸಿದರು. ವಿಧಾನ ಪರಿಷತ್ ಚುನಾವಣೆಯ ಪ್ರಚಾರಾರ್ಥ ನಂದಗಡಕ್ಕೆ ಭೇಟಿ ನೀಡಿದ್ದ ಅವರು ನಂದಗದ ಸಂತೆಯನ್ನು ಒಂದು ಪೂರ್ಣ ಸುತ್ತು ಹಾಕಿ ಸಂತೆಯಲ್ಲಿ ತಮ್ಮ ಮನೆಬಳಕೆಗೆ ಬೇಕಾದ ಗಜ್ಜರಿ, ಬೀಟರೂಟ್, ಪಾಲಕ್, ಬೀನ್ಸ್ ಸೌತೆಕಾಯಿ ಮತ್ತಿತರ ತರಕಾರಿಗಳನ್ನು ಖರೀದಿಸಿದರು. ಬಳಿಕ ಬೀದಿಬದಿ ವ್ಯಾಪಾರಸ್ಥರೊಂದಿಗೆ ಸಂವಾದ …

Read More »

ಬೆಳಗಾವಿ ವಿಧಾನಪರಿಷತ್‌ ಕ್ಷೇತ್ರ: ಬಿಜೆಪಿ, ಕಾಂಗ್ರೆಸ್‌ಗೆ ‘ಒಳೇಟಿನ’ ಭೀತಿ,ಪಕ್ಷೇತರ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಬಹಳ..?

ಬೆಳಗಾವಿ: ವಿಧಾನಪರಿಷತ್‌ ದ್ವಿಸದಸ್ಯ ಸ್ಥಾನಗಳಿಗೆ ಡಿ.10ರಂದು ನಡೆಯಲಿರುವ ಚುನಾವಣೆಯು, ಇಲ್ಲಿನ ಪ್ರಭಾವಿಗಳಾದ ಜಾರಕಿಹೊಳಿ ಸಹೋದರರ ನಡುವಿನ ಸವಾಲ್‌ನಿಂದಾಗಿ ಇಡೀ ರಾಜ್ಯದ ಗಮನಸೆಳೆದಿದೆ ಮತ್ತು ತೀವ್ರ ಕುತೂಹಲವನ್ನೂ ಹುಟ್ಟು ಹಾಕಿದೆ.   ಬಿಜೆಪಿಯ ಮಹಾಂತೇಶ ಕವಟಗಿಮಠ ಸತತ 3ನೇ ಬಾರಿಗೆ ಆಯ್ಕೆ ಬಯಸಿದ್ದಾರೆ. ಕಾಂಗ್ರೆಸ್‌ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದ್ದು, ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರ ತಮ್ಮ ಚನ್ನರಾಜ ಹಟ್ಟಿಹೊಳಿ ಅವರಿಗೆ ಟಿಕೆಟ್ ಕೊಟ್ಟಿದೆ. ಆಮ್ ಆದ್ಮಿ ಪಕ್ಷದಿಂದ ಶೇಖರ ಹೆಗಡೆ ಸ್ಪರ್ಧಿಸಿದ್ದಾರೆ. …

Read More »

ರೋಬೋ ಪಾಪಣ್ಣನ ವರದಿಗೆ ಅಮಾಯಕ BMTC ನೌಕರರು ಸೇವೆಯಿಂದ ವಜಾ!

ಬೆಂಗಳೂರು, ಡಿ. 01: ವೇತನ ಪರಿಷ್ಕರಣೆ ಮಾಡುವಂತೆ ಕೋರಿ ಸಾರಿಗೆ ನೌಕರರು ನಡೆಸಿದ ಮುಷ್ಕರ ನೌಕರರನ್ನೇ ಸಾರಿಗೆ ಇಲಾಖೆ ಬೀದಿ ಪಾಲು ಮಾಡಿದೆ. ಬಿಡಿಗಾಸು ಹೆಚ್ಚಳ ಮಾಡಿಸಿಕೊಳ್ಳಲು ಹೋಗಿ ಕೆಲಸವೇ ಕಳೆದುಕೊಂಡಿದ್ದಾರೆ. ಹತ್ತು ದಿನದಲ್ಲಿ ನಿಮ್ಮ ಬೇಡಿಕೆ ಈಡೇರಿಸುತ್ತೇವೆ ಎಂದ ಸರ್ಕಾರ ಬರೋಬ್ಬರಿ 2500 ಸಾರಿಗೆ ನೌಕರರನ್ನು ಸೇವೆಯಿಂದ ವಜಾ ಮಾಡಿ ಸಿಟ್ಟು ತೀರಿಸಿಕೊಂಡಿದೆ. ವೇತನ ಹೆಚ್ಚಳಕ್ಕಾಗಿ ಹೋರಾಟ ಮಾಡಿದವರು ಎಂಟು ತಿಂಗಳಿನಿಂದ ಕೆಲಸವೇ ಇಲ್ಲದೇ ‘ಮರು ನೇಮಿಸಿಕೊಳ್ಳಿ ಸ್ವಾಮಿ” …

Read More »