Breaking News

ರಾಜಕೀಯ

ಹುಬ್ಬಳ್ಳಿಯಲ್ಲಿ ಏಷ್ಯಾದಲ್ಲಿಯೇ ಅತಿದೊಡ್ಡ ಭಗವದ್ಗೀತಾ ಜ್ಞಾನ ದಿವ್ಯಕಲಾಲೋಕ ಅನಾವರಣ

ಧಾರವಾಡ : ಮುಗಿಲೆತ್ತರಕ್ಕೆ ತಲೆಯೆತ್ತಿರುವ ಕಟ್ಟಡ. ಒಳಗೆ ಹೋದಂತೆ ನಿಸರ್ಗ ಸೌಂದರ್ಯ ಉಣಬಡಿಸುವ ಪರಿಸರ. ಮುಂದೆ ಹೆಜ್ಜೆ ಹಾಕುತ್ತಿದ್ದಂತೆ ಆಧ್ಯಾತ್ಮಿಕ ಜೀವನಕ್ಕೆ ಅಗತ್ಯವಾದ ಚಿತ್ರಣಗಳು. ಇದೆಲ್ಲದಕ್ಕೂ ಸಾಕ್ಷಿಯಾಗಿರುವುದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ನಿರ್ಮಾಣ ಮಾಡಿರುವ ಜ್ಞಾನಲೋಕ ಮ್ಯೂಸಿಯಂ/ಭಗವದ್ಗೀತಾ ಜ್ಞಾನ ದಿವ್ಯಕಲಾಲೋಕ. ಇಷ್ಟು ದಿನ ವಾಣಿಜ್ಯನಗರಿಯಾಗಿ ಬಿಂಬಿತವಾಗಿದ್ದ ಹುಬ್ಬಳ್ಳಿ ಇನ್ಮುಂದೆ ಧಾರ್ಮಿಕ ಹಾಗೂ ಆಧ್ಯಾತ್ಮಿಕ ನಗರವಾಗಿ ಹೊರಹೊಮ್ಮಲಿದೆ. ಇಲ್ಲಿನ ಬೈರಿದೇವರಕೊಪ್ಪದ ಗಾಮನಗಟ್ಟಿ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಈ ಮ್ಯೂಸಿಯಂ ಏಷ್ಯಾದಲ್ಲಿಯೇ ಅತಿದೊಡ್ಡ ಮ್ಯೂಸಿಯಂ …

Read More »

ಮಿಷನ್ 150 ಕಷ್ಟ!; ಬಿಜೆಪಿ ನಿದ್ದೆಗೆಡಿಸಿದ ಆಂತರಿಕ ಸಮೀಕ್ಷೆ?

ಹುಬ್ಬಳ್ಳಿ: ರಾಜ್ಯದಲ್ಲಿ ಮತ್ತೂಮ್ಮೆ ಅಧಿಕಾರಕ್ಕೇರುವ ಹುಮ್ಮಸ್ಸಿನಲ್ಲಿರುವ ಬಿಜೆಪಿ ವಿಧಾನಸಭೆ ಚುನಾವಣೆ ತಯಾರಿಯಲ್ಲಿ ತೊಡಗಿದ್ದರೂ, ಪಕ್ಷ ನಡೆಸಿದ ಆಂತರಿಕ ಸಮೀಕ್ಷೆ ನಾಯಕರ ನಿದ್ದೆಗೆಡಿಸಿದೆ ಎಂದು ಹೇಳಲಾಗಿದೆ. ಬಿಜೆಪಿ ಮಿಷನ್‌-150 ಗುರಿ ತಲುಪುವುದು ಕಷ್ಟ. ಮುಖಂಡರ ವಿವಾದಾತ್ಮಕ ಹೇಳಿಕೆ, ನಾಯಕತ್ವ ಪ್ರಶ್ನಿಸುವ ರೀತಿಯ ಅನಿಸಿಕೆ, ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆ ಕಸರತ್ತು, ವಲಸಿಗರ ಮೇಲೆ ಮೂಡದ ಪೂರ್ಣ ಪ್ರಮಾಣದ ವಿಶ್ವಾಸ, ಗುತ್ತಿಗೆದಾರನ ಆತ್ಮಹತ್ಯೆ, ಪಿಎಸ್‌ಐ ನೇಮಕ ಹಗರಣ, ಧಾರ್ಮಿಕ ಸೂಕ್ಷ್ಮ ವಿಚಾರದಲ್ಲಿ ಎದ್ದ …

Read More »

ಕಾಮುಕ ಪ್ರಿಯಕರನಿಗಾಗಿ ಅಪ್ರಾಪ್ತ ಮಗಳನ್ನೇ ಮಂಚಕ್ಕೆ ಕಳಿಸಿದ ಪಾಪಿ ತಾಯಿ: ಮಗುವನ್ನು ಹೆತ್ತ ಬಾಲಕಿ!

ಚೆನ್ನೈ: ಕೆಟ್ಟ ಮಕ್ಕಳು ಇರಬಹುದು, ಆದರೆ ಕೆಟ್ಟ ತಾಯಿ ಇರುವುದಿಲ್ಲ ಎನ್ನುವ ನಾಣ್ಣುಡಿ ಇದೆ. ಆದರೆ ಇಲ್ಲೊಂದು ಭಯಾನಕ ಹಾಗೂ ಮಾನವ ಕುಲವೇ ತಲೆತಗ್ಗಿಸುವ ಘಟನೆಯೊಂದು ವರದಿಯಾಗಿದೆ. ಹೆತ್ತಾಕೆಯೇ ತನ್ನ ಮಗಳನ್ನು ಪ್ರಿಯಕರನಿಗೆ ಒಪ್ಪಿಸಿ, ಅತ್ಯಾಚಾರ ಮಾಡಲು ಅವಕಾಶ ಕೊಟ್ಟಿದ್ದಾಳೆ! ಇದೀಗ ಆ ಬಾಲಕಿ ತಾಯಿಯ ಪ್ರಿಯಕರನಿಂದ ಗರ್ಭ ಧರಿಸಿ ಮಗು ಹೆತ್ತಿದ್ದಾಳೆ! ತಮಿಳುನಾಡಿನಲ್ಲಿ ಈ ಘಟನೆ ನಡೆದಿದೆ. ಚೆನ್ನೈನ ಒಟ್ಟೇರಿ ಪ್ರದೇಶದ 40 ವರ್ಷದ ಮಹಿಳೆ ವಿಕೃತಿ ಮೆರೆದವಳು. ಈಕೆ …

Read More »

ನಾಳೆಯಿಂದ ಶಾಲೆಗಳು ಆರಂಭ : ವಿದ್ಯಾರ್ಥಿ ಬಸ್ ಪಾಸ್ ಅವಧಿ ಜೂ.30ರವರೆಗೆ ವಿಸ್ತರಣೆ

ಬೆಂಗಳೂರು : ರಾಜ್ಯಾದ್ಯಂತ ನಾಳೆಯಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಆರಂಭವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ವಿದ್ಯಾರ್ಥಿಗಳ ಬಸ್ ಪಾಸ್ ನ ಅವಧಿಯನ್ನು ಜೂ. 30 ರವರೆಗೆ ವಿಸ್ತರಣೆ ಮಾಡಿವೆ. ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದಿನಾಂಕ 16-05-2022ರಿಂದ 2022-23ನೇ ಸಾಲಿನ ಭೌತಿಕ ತರಗತಿಗಳು ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಆರಂಭಗೊಳ್ಳುತ್ತಿವೆ. ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಿ, ಬಸ್ ಪಾಸ್ ( Bus Pass ) …

Read More »

ಶಾಸಕ ಜಿ.ಟಿ. ದೇವೇಗೌಡರ ಮುದ್ದು ಮೊಮ್ಮಗಳು; ಪುಟ್ಟ ಕಂದಮ್ಮ ವಿಧಿವಶ

ಮೈಸೂರು: ಜೆಡಿಎಸ್ ಹಿರಿಯ ಶಾಸಕ ಜಿ.ಟಿ. ದೇವೇಗೌಡರ ಪುಟ್ಟ ಮೊಮ್ಮಗಳು ಅನಾರೋಗ್ಯದಿಂದ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜಿ.ಟಿ. ದೇವೇಗೌಡರ ಮಗ ಜಿ.ಡಿ. ಹರೀಶ್ ಗೌಡ ಅವರ ಮಗಳು 3 ವರ್ಷದ ಗೌರಿ ಮೃತ ಕಂದಮ್ಮ. ಎಲ್ಲ ಮಕ್ಕಳೊಂದಿಗೆ ಆಟವಾಡುತ್ತಾ, ಖುಷಿ ಖುಷಿಯಿಂದ ಮನೆತುಂಬಾ ಪುಟ್ಟಪುಟ್ಟ ಹೆಜ್ಜೆಯಿಟ್ಟು ಓಡಾಡುತ್ತಿದ್ದ ಪುಟಾಣಿ ಗೌರಿ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದಳು.   ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ತಡರಾತ್ರಿ ಕೊನೆಯುಸಿರೆಳೆದಿದ್ದಾಳೆ. …

Read More »

ಸಿಗಂದೂರು ದೇವಾಲಯಕ್ಕೆ ಆಗಮಿಸುತ್ತಿದ್ದ ವೇಳೆಯೇ ಟಿಟಿ ವಾಹನ ಪಲ್ಟಿ

ಶಿವಮೊಗ್ಗ: ಸಿಗಂದೂರು ಸಮೀಪ ಟಿಟಿ ವಾಹನ ಪಲ್ಟಿಯಾಗಿ ಐವರು ಗಾಯಗೊಂಡಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಶಿವಮೊಗ್ಗದ ಸಾಗರ ತಾಲೂಕಿನ ಸಿಗಂದೂರು ಸಮೀಪದ ಕಳಸವಳ್ಳಿ ಗ್ರಾಮದ ಬಳಿ ಟಿಟಿ ಪಲ್ಟಿಯಾಗಿದೆ. ಬೆಂಗಳೂರಿನ ಬಿಡದಿಯವರಾಗಿದ್ದ ಈ ಕುಟುಂಬ ಸಿಗಂದೂರು ದೇವಿ ದರ್ಶನಕ್ಕೆ ತೆರಳಿದ್ದಾರೆ.ಶಿವಮೊಗ್ಗಕ್ಕೆ ಬರುತ್ತಿದ್ದಂತೆ ಚಾಲಕನಿಗೆ ಪಿಡ್ಸ್​ ಬಂದಿದೆ.   ಚಲಿಸುವಾಗ ಡ್ರೈವರ್ ಗೆ ಪಿಡ್ಸ್ ಬಂದಿದ್ದರಿಂದ ರಸ್ತೆ ಪಕ್ಕದ ದಿಬ್ಬಕ್ಕೆ ಡಿಕ್ಕಿಯಾಗಿ ಟಿಟಿ ವಾಹನ ಪಲ್ಟಿಯಾಗುತ್ತಲೇ ತಗ್ಗು ಪ್ರದೇಶದ ಮನೆ ಮುಂಭಾಗ ಬಿದ್ದಿದ್ದು, …

Read More »

ಇಂದಿರಾ, ಸೋನಿಯಾ ಬಳಿಕ ರಾಜ್ಯಕ್ಕೆ ಪ್ರಿಯಾಂಕಾ?

ಬೆಂಗಳೂರು: ರಾಜಸ್ಥಾನದಲ್ಲಿ ನಡೆದಿರುವ ಕಾಂಗ್ರೆಸ್ ಚಿಂತನಾ ಶಿಬಿರದಲ್ಲಿ ಕರ್ನಾಟಕವನ್ನು ಗೆಲ್ಲುವ ಬಗ್ಗೆ ಚಿಂತನ ಮಂಥನ ಕೂಡ ನಡೆದಿದೆ. ಈ ವರ್ಷದ ನವೆಂಬರ್​ನಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆ ಹಾಗೂ 2023ರ ಮಾರ್ಚ್-ಏಪ್ರಿಲ್​ನಲ್ಲಿ ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆ ಬಗ್ಗೆ ಕಾಂಗ್ರೆಸ್ ಗಂಭೀರವಾಗಿದ್ದು, 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಈ ಎರಡು ರಾಜ್ಯಗಳನ್ನು ಕೈ ವಶಮಾಡಿಕೊಳ್ಳಲೇಬೇಕೆಂದು ಪಕ್ಷದ ನಾಯಕರು ಸಂಕಲ್ಪ ಮಾಡಿದ್ದಾರೆ. ಈ ಎರಡು ರಾಜ್ಯಗಳ ಕುರಿತಂತೆ ಪ್ರಮುಖ ಅಜೆಂಡವಾಗಿ ಸಭೆಯಲ್ಲಿ …

Read More »

ಅಪಘಾತದಲ್ಲಿ ಜೀವಕಳೆದುಕೊಂಡ ದಂತಕಥೆ ಸೈಮಂಡ್ಸ್‌

ಆಸ್ಟ್ರೇಲಿಯಾ: ಕ್ರಿಕೆಟ್‌ ಲೋಕದ ದಂತಥೆ ಎಂದೇ ಬಿಂಬಿತವಾಗಿದ್ದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರ ಆಂಡ್ರ್ಯೋ ಸೈಮಂಡ್ಸ್ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇವರಿಗೆ 46 ವರ್ಷ ವಯಸ್ಸಾಗಿತ್ತು. ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ ಟೌನ್ಸ್‌ವಿಲ್ಲೆ ಬಳಿ ಈ ಅಪಘಾತ ನಡೆದಿದೆ.   ಆಸ್ಟ್ರೇಲಿಯಾ ಕ್ರಿಕೆಟ್ ಕಂಡ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿದ್ದ ಸೈಮಂಡ್ಸ್ 26 ಟೆಸ್ಟ್, 198 ಏಕದಿನ ಹಾಗೂ 14 ಟಿ20 ಪಂದ್ಯಗಳಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದಾರೆ. ಕ್ವೀನ್ಸ್‌ಲ್ಯಾಂಡ್ ಪೊಲೀಸರು ಶನಿವಾರ ಸಂಜೆ ನಗರದಿಂದ ಸುಮಾರು …

Read More »

ರಾಜ್ಯಸಭೆಗೆ ನಿರ್ಮಲಾ ಸೀತಾರಾಮನ್‌, ಪರಿಷತ್‌ಗೆ ವಿಜಯೇಂದ್ರ ಆಯ್ಕೆಗೆ ಸಮ್ಮತಿ

ಬೆಂಗಳೂರು: ರಾಜ್ಯಸಭೆಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸೇರಿದಂತೆ ಐವರು ಹಾಗೂ ವಿಧಾನ ಪರಿಷತ್‌ಗೆ ಶಾಸಕ ಬಿ.ಎಸ್. ಯಡಿಯೂರಪ್ಪ ಮಗ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಇಪ್ಪತ್ತು ಸಂಭ್ಯಾವರ ಹೆಸರುಗಳನ್ನು ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿಗೆ ಶಿಫಾರಸು ಮಾಡಲು ಶನಿವಾರ ನಡೆದ ಬಿಜೆಪಿ ರಾಜ್ಯ ಘಟಕದ ಪ್ರಮುಖರ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.   ವಿಧಾನಸಭೆಯಿಂದ ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ನಡೆಯುವ ಚುನಾವಣೆ ಹಾಗೂ …

Read More »

ವಾರದಲ್ಲಿ ಒಂದು ದಿನ ತಾಲೂಕು ಆಫೀಸ್ ನಲ್ಲಿ ಜಿಲ್ಲಾಧಿಕಾರಿ ಕೆಲಸ,: ಆರ್. ಅಶೋಕ

ದಾವಣಗೆರೆ: ವಾರದಲ್ಲಿ ಒಂದು ದಿನ ಜಿಲ್ಲಾಧಿಕಾರಿಗಳು ತಾಲೂಕು ಕಚೇರಿಗಳಲ್ಲಿ ಕೆಲಸ ಮಾಡಬೇಕು ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದ್ದಾರೆ. ದಾವಣಗೆರೆಯಲ್ಲಿ ರಾಜ್ಯಮಟ್ಟದ ಗ್ರಾಮಲೆಕ್ಕಾಧಿಕಾರಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ವಾರದಲ್ಲಿ ಒಂದು ದಿನ ಜಿಲ್ಲಾಧಿಕಾರಿಗಳು ತಾಲೂಕು ಕಚೇರಿಯಲ್ಲಿ ಕೆಲಸ ಮಾಡುವ ಬಗ್ಗೆ ಒಂದು ವಾರದಲ್ಲಿ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ.   ಗ್ರಾಮ ಲೆಕ್ಕಾಧಿಕಾರಿಗಳನ್ನು ಗ್ರಾಮ ಕಾರ್ಯನಿರ್ವಹಣಾಧಿಕಾರಿ ಎಂದು ಹುದ್ದೆಯ ಹೆಸರು ಬದಲಾವಣೆ ಮಾಡಲು ಬೇಡಿಕೆಯಿದ್ದು, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ …

Read More »